• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಿತ್ರಗಳಲ್ಲಿ: ಭಾರತದ ಬೃಹತ್ ಗ್ರಾಹಕ ಟೆಕ್ ಎಕ್ಸ್ ಪೋ

By Mahesh
|

ಬೆಂಗಳೂರು, ಅಕ್ಟೋಬರ್ 17: ಇಂಡಿಯಾ ಗ್ಯಾಜೆಟ್ ಎಕ್ಸ್‍ಪೊ(ಐಜಿಇ) ಭಾರತದ ಅತಿದೊಡ್ಡ ಗ್ರಾಹಕ ಟೆಕ್ ಕಾರ್ಯಕ್ರಮ ಬೆಂಗಳೂರಿನಲ್ಲಿ ಯಶಸ್ವಿಯಾಗಿ ಮುಕ್ತಾಯ ಕಂಡಿದೆ. ಭವಿಷ್ಯದ ತಂತ್ರಜ್ಞಾನ ಮತ್ತು ಸಂಶೋಧನೆಯನ್ನು ಉತ್ತೇಜಿಸಲು ಆರಂಭಗೊಂಡ ಕಾರ್ಯಕ್ರಮ ಐಜಿಇ ಇಂದು ಭಾರತದ ಪ್ರಮುಖ ಗ್ರಾಹಕ ಟೆಕ್ ಕಾರ್ಯಕ್ರಮವಾಗಿದೆ.

ಇದರಲ್ಲಿ ಭಾರತ ಹಾಗೂ ಜಾಗತಿಕ ಬ್ರ್ಯಾಂಡ್ ಗಳು, ಸ್ಟಾರ್ಟಪ್ ಗಳು ಭಾಗವಹಿಸುತ್ತವೆ. ಇದೀಗ ಐಜಿಇ ಮೂರನೇ ಆವೃತ್ತಿಯೊಂದಿಗೆ ಮರಳಿ ಬಂದಿದ್ದು, ಬೆಂಗಳೂರಿನ ವೈಟ್ ಫೀಲ್ಡ್ ನ ಕೆಟಿಪಿಒ ಪ್ರದರ್ಶನ ಕೇಂದ್ರದಲ್ಲಿ ಅ.14ರಿಂದ 16, 2016ರವರೆಗೆ ಕಾರ್ಯಕ್ರಮ ನಡೆಯಿತು.

ಉದ್ಯಮ ನಾಯಕರು, ಕರ್ನಾಟಕ ಸರ್ಕಾರ ಬೆಂಬಲಿತ ಹಾರ್ಡ್ ವೇರ್ ಸ್ಟಾರ್ಟಪ್ ಗಳು, ಸಾಮಾನ್ಯ ಜನರು ಈ ಎಕ್ಸ್‍ಪೊದಲ್ಲಿ ಭಾಗವಹಿಸಿದ್ದರು. ಈ ವರ್ಷದ ಪ್ರದರ್ಶನದ ಧ್ಯೇಯ "ಭವಿಷ್ಯ ಇಲ್ಲಿದೆ" ಎಂಬುದಾಗಿದೆ.

ಕರ್ನಾಟಕ ರಾಜ್ಯ ಸರ್ಕಾರದ ಕಾರ್ಮಿಕ ಸಚಿವ ಸಂತೋಷ್ ಲಾಡ್, ಕಾಂಗ್ರೆಸ್ ಶಾಸಕ ಅನಿಲ್ ಲಾಡ್, ಕಿಯೋನಿಕ್ಸ್ ವ್ಯವಸ್ಥಾಪಕ ನಿರ್ದೇಶಕ ಆರ್.ಕೆ.ಶ್ರೀವಾಸ್ತವ್ ಉದ್ಘಾಟನೆ ಸಮಾರಂಭದಲ್ಲಿ ಹಾಜರಿದ್ದರು. ಸಚಿವ ಸಂತೋಷ್ ಲಾಡ್ ತಂತ್ರಜ್ಞಾನ ಸಂಶೋಧನೆ ಮತ್ತು ತಂತ್ರಜ್ಞಾನ ಸ್ಟಾರ್ಟಪ್ ಬೆಳವಣಿಗೆಗಳ ಮಹತ್ವದ ಕುರಿತು ಹಾಗೂ ಆರ್ಥಿಕ ಬೆಳವಣಿಗೆಯಲ್ಲಿ ಇವುಗಳ ಪಾತ್ರದ ಬಗ್ಗೆ ಮಾತನಾಡಿದರು.

ಭಾರತದ ಸಿಲಿಕಾನ್ ವ್ಯಾಲಿಯಲ್ಲಿ ಎಕ್ಸ್ ಪೋ

ಭಾರತದ ಸಿಲಿಕಾನ್ ವ್ಯಾಲಿಯಲ್ಲಿ ಎಕ್ಸ್ ಪೋ

"ಈ ವರ್ಷ ಐಜಿಇ ಭಾರತದ ಸಿಲಿಕಾನ್ ವ್ಯಾಲಿಯಲ್ಲಿ ನಡೆಯುತ್ತಿರುವುದು ನಮಗೆ ಅತ್ಯಂತ ಸಂತಸದ ಸಂಗತಿ. ಬೆಂಗಳೂರು ಬಹಳ ಹಿಂದೆ ತಂತ್ರಜ್ಞಾನದ ತಾಣವಾಗಿ ಗುರುತಿಸಿಕೊಂಡಿದ್ದು, ತಂತ್ರಜ್ಞಾನದ ಸಕಾರಾತ್ಮಕ ಬೆಳವಣಿಗೆ ನೋಡಲು ಬೆಂಗಳೂರು ಪರಿಪೂರ್ಣ ನಗರ. ನಮ್ಮ ಸರ್ಕಾರ ಸ್ಟಾರ್ಟಪ್ ಮತ್ತು ತಾಂತ್ರಿಕ ತಜ್ಞತೆಯನ್ನು ಪ್ರಬಲವಾಗಿ ಉತ್ತೇಜಿಸುತ್ತದೆ. ಐಜಿಇಯಂಥ ಕಾರ್ಯಕ್ರಮ ಉದ್ಯಮ ಪ್ರವರ್ತಕರು ಭೇಟಿಯಾಗಲು ಸೂಕ್ತ ವೇದಿಕೆ. ಭವಿಷ್ಯದ ಸಂಶೋಧನೆಗೆ, ಉದ್ಯಮ ಹೂಡಿಕೆಗೆ ಇದೊಂದು ಉತ್ತಮ ವೇದಿಕೆ ಕಲ್ಪಿಸುತ್ತದೆ ಎಂದರು.

ಇಂಡಿಯಾ ಗ್ಯಾಜೆಟ್ ಎಕ್ಸ್ ಪೋ 2016

ಇಂಡಿಯಾ ಗ್ಯಾಜೆಟ್ ಎಕ್ಸ್ ಪೋ 2016

ಈ ವರ್ಷ ಐಜಿಇನಲ್ಲಿ 200ಕ್ಕು ಅಧಿಕ ಬ್ರ್ಯಾಂಡ್ ಗಳು ಭಾಗವಹಿಸಿದ್ದು. 'ಭವಿಷ್ಯ ಇಲ್ಲಿದೆ' ಎಂಬ ಧ್ಯೇಯ ಗಮನದಲ್ಲಿಟ್ಟುಕೊಂಡು ಅತ್ಯಾಧುನಿಕ ತಾಂತ್ರಿಕ ಸಂಶೋಧನೆ ಪ್ರದರ್ಶಿಸಲಿವೆ. ತಮ್ಮ ಹೊಸ ಉತ್ಪನ್ನಗಳ ಬಿಡುಗಡೆ, ಗ್ರಾಹಕ ಟೆಕ್ ಕ್ಷೇತ್ರದಲ್ಲಿ ಅವರ ಭಾಗವಹಿಸುವಿಕೆ ಕುರಿತು ಮಾತುಕತೆ ನಡೆಸಲಾಯಿತು.

85ಕ್ಕೂ ಅಧಿಕ ಪ್ರದರ್ಶನ ಮಳಿಗೆ

85ಕ್ಕೂ ಅಧಿಕ ಪ್ರದರ್ಶನ ಮಳಿಗೆ

85ಕ್ಕೂ ಅಧಿಕ ಪ್ರದರ್ಶನ ಮಳಿಗೆಗಳೊಂದಿಗೆ ಟೆಕ್ ವರ್ಲ್ಡ್ ನಲ್ಲಿ ಎಂಗೇಜ್ ಆಗುವ ಅವಕಾಶವಿತ್ತು. ಜಿಯೋನಿ, ಆಪಲ್, ಟೈಮೆಕ್ಸ್, ಒಪ್ಪೊ, ಇಂಟೆಕ್ಸ್, ಲೆನೆವೊ, ಎಪ್ಸಾನ್, ಬಿಎಸ್‍ಎನ್‍ಎಲ್, ರಿಲಯನ್ಸ್ ಜಿಯೊ, ಕ್ರಿಯೇಟಿವ್ ಮತ್ತಿತರ ಪ್ರಮುಖ ಬ್ರ್ಯಾಂಡ್ ಗಳು ಈ ಎಕ್ಸ್ ಪೋದಲ್ಲಿ ಭಾಗವಹಿಸಿದ್ದವು.

60ಕ್ಕೂ ಅಧಿಕ ಹಾರ್ಡ್ ವೇರ್ ಸ್ಟಾರ್ಟಪ್ ಗಳು

60ಕ್ಕೂ ಅಧಿಕ ಹಾರ್ಡ್ ವೇರ್ ಸ್ಟಾರ್ಟಪ್ ಗಳು

ಜೊತೆಗೆ 60ಕ್ಕೂ ಅಧಿಕ ಹಾರ್ಡ್ ವೇರ್ ಸ್ಟಾರ್ಟಪ್ ಗಳು ಭಾಗವಹಿಸಿ ಕರ್ನಾಟಕ ಸರ್ಕಾರದ ಬೆಂಬಲದೊಂದಿಗೆ ತಮ್ಮ ಸಂಶೋಧನೆ, ಉತ್ಪನ್ನ/ಸೇವೆಯನ್ನು ಪ್ರದರ್ಶಿಸಿದವು. ಹಾರ್ಡ್ ವೇರ್ ಸ್ಟಾರ್ಟಪ್ ಗಳನ್ನು ರೆವಕ್ಸ್ ಹಾರ್ಡ್ ವೇರ್ ಆಕ್ಸಲೇಟರ್ ಆಯ್ಕೆ ಮಾಡಿತ್ತು.

ರೋಬೊಟಿಕ್, ಆಟೊಮೋಷನ್

ರೋಬೊಟಿಕ್, ಆಟೊಮೋಷನ್

ರೋಬೊಟಿಕ್, ಆಟೊಮೋಷನ್, ಎಲೆಕ್ಟ್ರಿಕ್, ವಾಹನ, ಡ್ರೋನ್, ಉತ್ಪಾದನೆ ಸೇರಿದಂತೆ ವಿವಿಧ ಉದ್ಯಮಗಳ ಹಾರ್ಡ್ ವೇರ್ ಸ್ಟಾರ್ಟ್ ಅಪ್ ಗಳು ಹೆಚ್ಚಿನ ಆಕರ್ಷಣೆ ಪಡೆದುಕೊಂಡಿದ್ದು ವಿಶೇಷ.

ಐಜಿಇ ಸಂಸ್ಥಾಪಕ ಸಂಜೀವ್ ಕುಮಾರ್

ಐಜಿಇ ಸಂಸ್ಥಾಪಕ ಸಂಜೀವ್ ಕುಮಾರ್

ಐಜಿಇ ಸಂಸ್ಥಾಪಕ ಸಂಜೀವ್ ಕುಮಾರ್ ಮಾತನಾಡಿ, 3ನೇ ಆವೃತಿ ಐಜಿಇ ಭಾರತದ ಬೃಹತ್ ಗ್ರಾಹಕ ಟೆಕ್ ಸ್ಪೆಸ್‍ನ ಭರವಸೆ ನೀಡಿದೆ. ಸಾಕಷ್ಟು ಬ್ರ್ಯಾಂಡ್ ಗಳ ಆಸಕ್ತಿ, ಉತ್ಸಾಹ, ಸ್ಟಾರ್ಟಪ್ ಗಳು ಹಾಗೂ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಧನ್ಯವಾದಗಳು. ಎಲ್ಲ ಒಟ್ಟಾಗಿ ಒಂದು ಬೃಹತ್ ಪ್ರದರ್ಶನ ವೇದಿಕೆ, ಸಮೂಹ ಚರ್ಚೆ ಮೊದಲಾದವುಗಳನ್ನು ಸೃಷ್ಟಿಸುತ್ತೇವೆ ಎಂದರು.

ಪ್ರತಿಯೊಬ್ಬರಿಗೂ ಏನಾದರೂ ಒಂದು ಇದೆ

ಪ್ರತಿಯೊಬ್ಬರಿಗೂ ಏನಾದರೂ ಒಂದು ಇದೆ

ಐಜಿಇ 2016ರಲ್ಲಿ ಪ್ರತಿಯೊಬ್ಬರಿಗೂ ಏನಾದರೂ ಒಂದು ಇದೆ. ವರ್ಚ್ಯುಯಲ್ ರಿಯಾಲಿಟಿಯಿಂದ ಎಲೆಕ್ಟ್ರಿಕ್ ವಾಹನದವರೆಗೆ ಎಲ್ಲವೂ ಪ್ರದರ್ಶನ ಕಂಡಿತು.

 3 ದಿನಗಳಲ್ಲಿ 11 ಸಮೂಹ ಚರ್ಚೆ

3 ದಿನಗಳಲ್ಲಿ 11 ಸಮೂಹ ಚರ್ಚೆ

3 ದಿನಗಳಲ್ಲಿ 11 ಸಮೂಹ ಚರ್ಚೆ ನಡೆಯಿತು, 50ಕ್ಕೂ ಅಧಿಕ ಉದ್ಯಮ ತಜ್ಞರು ಭಾಗವಹಿಸಿ ತಮ್ಮ ಅನುಭವ ಹಂಚಿಕೊಂಡರು. ವಾಹನ ತಂತ್ರಜ್ಞಾನ, ತಂತ್ರಜ್ಞಾನದಲ್ಲಿ ಮಹಿಳೆಯರ ನಾಯಕತ್ವ, ಸ್ಮಾರ್ಟ್ ಸಿಟಿ, ಹ್ಯಾಂಕಿಂಗ್ ಹೆಚ್ಚುತ್ತಿರುವುದು ಇತ್ಯಾದಿ ವಿಷಯಗಳ ಮೇಲೆ ಸಮೂಹ ಚರ್ಚೆ ನಡೆಯಿತು

36 ಗಂಟೆಗಳ ಹ್ಯಾಕ್‍ಥಾನ್

36 ಗಂಟೆಗಳ ಹ್ಯಾಕ್‍ಥಾನ್

ಜೊತೆಗೆ 36 ಗಂಟೆಗಳ ಹ್ಯಾಕ್‍ಥಾನ್ ಕೂಡ ಇರುತ್ತದೆ. ಹ್ಯಾಕ್‍ಮೆನಿಯಾ ಆಯೋಜಿತ ಈ ಕಾರ್ಯಕ್ರಮಕ್ಕೆ 500 ನೋಂದಣಿ ಬಂದಿದ್ದು 300 ಅತ್ಯುತ್ತಮ ನೋಂದಣಿಯನ್ನು ಹಿಂದಿನ ಅನುಭವದ ಆಧಾರದಲ್ಲಿ ಆಯ್ಕೆ ಮಾಡಲಾಯಿತು. ಸಾಮಾಜಿಕ ಸಂಶೋಧನೆ ಹ್ಯಾಕ್‍ಥಾನ್ ಧ್ಯೇಯ.

ತಂತ್ರಜ್ಞಾನ ಕ್ಷೇತ್ರದ ಸಾಧಕರನ್ನು ಗೌರವಿಸಲಾಯಿತು

ತಂತ್ರಜ್ಞಾನ ಕ್ಷೇತ್ರದ ಸಾಧಕರನ್ನು ಗೌರವಿಸಲಾಯಿತು

Inspiring ಇಂಡಿಯನ್ ಇನ್ನೋವೇಷನ್ ಪ್ರಶಸ್ತಿಯನ್ನು ಈ ಕಾರ್ಯಕ್ರಮ ಹೊಂದಿದ್ದು, ತಂತ್ರಜ್ಞಾನ ಕ್ಷೇತ್ರದ ಸಾಧಕರನ್ನು ಗೌರವಿಸಲಾಯಿತು. ಇಲ್ಲಿ ಬೇರೆ ಬೇರೆ ಕ್ಷೇತ್ರದ ಸಂಶೋಧಕರನ್ನು ಗೌರವಿಸಲಾಗುತ್ತದೆ. ಹೆಚ್ಚಿನ ಮಾಹಿತಿಯನ್ನು ಇಲಿ ಪಡೆಯಬಹುದು,http://www.indiagadgetzexpo.com

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In Pictures: Highlights from India Gadgetz Expo 2016 inaugurated by Santosh Lad, Labor minister of Karnataka.Over 200 brands participated along with 80 startups. A 36–hour Hackathon organised by HackMania with the theme Social Innovation

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more