ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

IMPS ವರ್ಗಾವಣೆ ಮಿತಿ ಏರಿಕೆ ಮಾಡಿದ ಭಾರತೀಯ ರಿಸರ್ವ್ ಬ್ಯಾಂಕ್

|
Google Oneindia Kannada News

ನವದೆಹಲಿ, ಅಕ್ಟೋಬರ್ 8: ಆನ್ಲೈನ್ ಮೂಲಕ ಹಣ ವರ್ಗಾವಣೆ ಮಾಡುವ ಗ್ರಾಹಕರಿಗೆ ಶುಕ್ರವಾರದಂದು ಭಾರತೀಯ ರಿಸರ್ವ್ ಬ್ಯಾಂಕ್ (RBI) ಶುಭ ಸುದ್ದಿ ಕೊಟ್ಟಿದೆ. ಆನ್ ಲೈನ್ ಮೂಲಕ ಹಣ ವರ್ಗಾವಣೆ ಮಾಡುವಾಗ ಐಎಂಪಿಎಸ್ ಬಳಸುವ ಗ್ರಾಹಕರಿಗೆ ವರ್ಗಾವಣೆ ಮಿತಿ ತೊಂದರೆಯಾಗುತ್ತಿತ್ತು. ಈಗ IMPS ವರ್ಗಾವಣೆ ಮಿತಿ ಏರಿಕೆ ಮಾಡಲಾಗಿದೆ.

ಇಂದಿನಿಂದ, ಬ್ಯಾಂಕ್ ಗ್ರಾಹಕರು IMPS ಮೂಲಕ 5 ಲಕ್ಷ ರೂ ವರ್ಗಾವಣೆ ಮಾಡಬಹುದಾಗಿದೆ, ಈ ಹಿಂದೆ IMPS ವರ್ಗಾವಣೆಯ ಮಿತಿಯನ್ನು 2 ಲಕ್ಷಕ್ಕೆ ನಿರ್ಬಂಧಿಸಲಾಗಿತ್ತು. ಈ ಸೌಲಭ್ಯದಲ್ಲಿ ಕನಿಷ್ಠ ಒಂದು ರೂಪಾಯಿಯಿಂದ 2 ಲಕ್ಷದವರೆಗೆ ಹಣ ವರ್ಗಾವಣೆ ಮಾಡಬಹುದಾಗಿತ್ತು, ಈಗ ಮಿತಿ 5 ಲಕ್ಷಕ್ಕೇರಿಕೆಯಾಗಿದೆ. ರಜಾ ದಿನಗಳಲ್ಲಿ ಕೂಡ ನೀವು ಹಣ ವರ್ಗಾವಣೆ ಮಾಡಬಹುದಾಗಿದೆ.

ಇನ್ನು ಸರ್ಕಾರಿ ಸ್ವಾಮ್ಯದ ದೊಡ್ಡ ಹಣಕಾಸು ಸಂಸ್ಥೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ ಬಿಐ) ಗ್ರಾಹಕರು ಐಎಂಪಿಎಸ್ ಮೂಲಕ 1001 ರೂಪಾಯಿ ಇಂದ 10 ಸಾವಿರ ರೂಪಾಯಿಯವರೆಗೆ ಹಣ ವರ್ಗಾವಣೆ ಮಾಡಿದಲ್ಲಿ 1 ರೂಪಾಯಿಯನ್ನು ಬ್ಯಾಂಕಿಗೆ ಶುಲ್ಕ ರೂಪದಲ್ಲಿ ನೀಡಬೇಕಾಗುತ್ತದೆ. 10 ಸಾವಿರದಿಂದ 1 ಲಕ್ಷದವರೆಗೆ ಹಣ ವರ್ಗಾವಣೆ ಮಾಡಲು 2 ರೂಪಾಯಿ ಕಡಿತವಾಗಲಿದೆ.

IMPS transaction limit upped to Rs 5 lakh from Rs 2 lakh

2010ರಲ್ಲಿ ರಾಷ್ಟ್ರೀಯ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ(NPCI) ಜಾರಿಗೆ ತಂದ ಐಎಂಪಿಎಸ್ ಅಥವಾ ತ್ವರಿತ ಪೇಮೆಂಟ್ ಸೇವೆ ಸುರಕ್ಷಿತವಾಗಿದ್ದು, ಸುಲಭವಾಗಿ ಭಾರತದೆಲ್ಲೆಡೆ ಬಳಕೆಯಲ್ಲಿದೆ. ಮೊಬೈಲ್ ಬ್ಯಾಂಕಿಂಗ್, ಡಿಜಿಟಲ್ ಪೇಮೆಂಟ್ ವ್ಯವಸ್ತೆಹ್ ಬಲಗೊಳಿಸಲು ಇದು ಪ್ರಮುಖ ವಿಧಾನವಾಗಿದೆ.

ಇದಲ್ಲದೆ, ಸರ್ಕಾರಿ ಸ್ವಾಮ್ಯದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಖಾಸಗಿ ವಲಯದ ಐಸಿಐಸಿಐ ಬ್ಯಾಂಕ್, ಎಚ್ ಡಿ ಎಫ್ ಸಿ ಬ್ಯಾಂಕ್ ಗಳು NEFT ಸೌಲಭ್ಯದಿಂದ ಹಣ ವರ್ಗಾವಣೆಗಾಗಿ ಯಾವುದೇ ಶುಲ್ಕ ವಿಧಿಸುವುದಿಲ್ಲ.

NEFT ಮೂಲಕ ಹಣ ವರ್ಗಾವಣೆಗೆ ಯಾವುದೇ ಮಿತಿ ಇಲ್ಲ. ಸಾಮಾನ್ಯವಾಗಿ 2 ಲಕ್ಷ ರು ತನಕದ ಹಣ ವರ್ಗಾವಣೆಗೆ ಬಳಸಲಾಗುತ್ತದೆ. ಇನ್ನೂ ಹೆಚ್ಚಿನ ಮೊತ್ತದ ಹಣ ವರ್ಗಾವಣೆಗೆ ಆರ್ ಟಿ ಜಿಎಸ್ ಬಳಸಬಹುದು.

ಕೆಲವು ಬ್ಯಾಂಕ್ ಗಳಲ್ಲಿ ಗ್ರಾಹಕರಿಗೆ ಮಿತಿಯನ್ನು ಸೂಚಿಸಲಾಗಿದೆ. ಐಸಿಐಸಿಸಿಯಲ್ಲಿ 10ಲಕ್ಷರು ಹಾಗೂ ಎಚ್ ಡಿ ಎಫ್ ಸಿಯಲ್ಲಿ25 ಲಕ್ಷ ರು ತನಕ ನೆಫ್ಟ್ ಬಳಸಬಹುದು. ಎಸ್ಬಿಐ 10 ಲಕ್ಷ ಮಿತಿ ಹೊಂದಿದೆ.

ಡಿಜಿಟಲ್ ವ್ಯವಹಾರಕ್ಕೆ ಪ್ರೋತ್ಸಾಹ ನೀಡಲು, ಆರ್‌ಟಿಜಿಎಸ್‌ ಮೂಲಕ ಡಿಜಿಟಲ್ ವಹಿವಾಟುಗಳಿಗಾಗಿ ಆರ್‌ಬಿಐ ಬ್ಯಾಂಕುಗಳಿಗೆ ವಿಧಿಸುವ ಸಂಸ್ಕರಣಾ ಶುಲ್ಕಗಳು ಮತ್ತು ಸಮಯ-ಬದಲಾಗುವ ಶುಲ್ಕಗಳನ್ನು ತೆಗೆದುಹಾಕಲು ನಿರ್ಧರಿಸಿದ್ದನ್ನು ಗ್ರಾಹಕರು ಸ್ವಾಗತಿಸಿದ್ದಾರೆ. ಈಗ ನೆಫ್ಟ್ ಮೇಲಿನ ಶುಲ್ಕ ರದ್ದು, ಅವಧಿ ವಿಸ್ತರಣೆಯಿಂದ ಡಿಜಿಟಲ್ ವ್ಯವಹಾರ ಹೆಚ್ಚಾಗುವ ಸಾಧ್ಯತೆಯಿದೆ.

English summary
From now on, bank customers can transfer Rs 5 lakh via IMPS. Earlier the limit for IMPS transfer was restricted at Rs 2 lakh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X