ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇಕ್ ಇನ್ ಇಂಡಿಯಾಕ್ಕೆ ಒತ್ತು, ಆಮದು ಆಟಿಕೆ ದುಬಾರಿ

|
Google Oneindia Kannada News

ನವದೆಹಲಿ, ಜನವರಿ 17: ಈ ಬಾರಿಯ ಕೇಂದ್ರ ಬಜೆಟ್ ನಲ್ಲಿ ಮೇಕ್ ಇನ್ ಇಂಡಿಯಾ ಯೋಜನೆಗೆ ಹೆಚ್ಚಿನ ಒತ್ತು ನೀಡಲು ಸರ್ಕಾರ ಮುಂದಾಗಿದೆ. ಹೀಗಾಗಿ ಸುಮಾರು 300ಕ್ಕೂ ಅಧಿಕ ಆಮದು ವಸ್ತುಗಳ ಸುಂಕ ಹೆಚ್ಚಾಗುವ ಸಾಧ್ಯತೆ ಕಂಡುಬಂದಿದೆ.

ವಾಣಿಜ್ಯ ಹಾಗೂ ಕೈಗಾರಿಕಾ ಸಚಿವಾಲಯವು ಕೇಂದ್ರ ವಿತ್ತ ಸಚಿವಾಲಯಕ್ಕೆ ನೀಡಿರುವ ಶಿಫಾರಸ್ಸಿನ ಅನ್ವಯ 300 ವಸ್ತುಗಳ ಮೇಲಿನ ಸುಂಕದಲ್ಲಿ ವ್ಯತ್ಯಾಸ ಕಂಡು ಬರಲಿದ್ದು, ಪೀಠೋಪಕರಣ, ರಾಸಾಯನಿಕ, ರಬ್ಬರ್, ಕೋಟೆಡ್ ಕಾಗದ, ಕಾಗದ ಬೋರ್ಡ್ ಮುಂತಾದವು ಸೇರಿವೆ.

ಫೆಬ್ರವರಿ 01ರಂದು 2020-21ನೇ ಸಾಲಿನ ಕೇಂದ್ರ ಬಜೆಟ್ ಮಂಡನೆಫೆಬ್ರವರಿ 01ರಂದು 2020-21ನೇ ಸಾಲಿನ ಕೇಂದ್ರ ಬಜೆಟ್ ಮಂಡನೆ

ಹೊಸ ನ್ಯೂಮೆಟಿಕ್ ಟೈರ್ ಗಳ ಅಬಕಾರಿ ಸುಂಕವನ್ನು ಈಗಿನ ಶೇ 10 ರಿಂದ ಶೇ 15 ರಿಂದ 40ಕ್ಕೆ ಏರಿಸಲು ಶಿಫಾರಸು ಮಾಡಲಾಗಿದೆ. ಪಾದರಕ್ಷೆ ಹಾಗೂ ಸಂಬಂಧಿಸಿದ ಉತ್ಪನ್ನಗಳ ಮೇಲಿನ ಸುಂಕವನ್ನು 25% ರಿಂದ 35%ಕ್ಕೇರಿಸುವ ಸಾಧ್ಯತೆಯಿದೆ.

Imported footwear, toys may get costlier in Budget 2020

ಆಸಿಯಾನ್ ರಾಷ್ಟ್ರದಿಂದ ಕಡಿಮೆ ವೆಚ್ಚದಲ್ಲಿ ಪಾದರಕ್ಷೆ ಆಮದು ಮಾಡಿಕೊಳ್ಳಲಾಗುತ್ತಿತ್ತು. ಚೀನಾದ ಉತ್ಪನ್ನಗಳು ಈ ಮೂಲಕ ಭಾರತದಲ್ಲಿ ಮಾರುಕಟ್ಟೆ ಪಡೆದುಕೊಂಡಿದ್ದವು, ಈಗ ಇದರ ಮೇಲೆ ನಿರ್ಬಂಧ ಬೀಳಲಿದೆ.

ಕೇಂದ್ರ ಬಜೆಟ್‌ಗೆ ಸಲಹೆ ಕೊಡಿ: ಜನರಲ್ಲಿ ಮನವಿ ಮಾಡಿದ ಮೋದಿಕೇಂದ್ರ ಬಜೆಟ್‌ಗೆ ಸಲಹೆ ಕೊಡಿ: ಜನರಲ್ಲಿ ಮನವಿ ಮಾಡಿದ ಮೋದಿ

ಕಾಗದ, ಗುಡಿ ಕೈಗಾರಿಕೆಯಿಂದ ಉತ್ಪನ್ನವಾದ ಕಾಗದಗಳ ಮೇಲಿನ ಸುಂಕ ಶೇ 20ಕ್ಕೇರಲಿದೆ. ಮರ, ಲೋಹ, ಪ್ಲಾಸ್ಟಿಕ್ ಆಟಿಕೆಗಳ ಮೇಲಿನ ಆಮದು ಸುಂಕವನ್ನು ಶೇ 100ರಷ್ಟು ಏರಿಸಿ 20%ಕ್ಕೇರಿಸಲಾಗಿದೆ. 2017-18ರಲ್ಲಿ 281.82 ಮಿಲಿಯನ್ ಯುಎಸ್ ಡಾಲರ್ ನಷ್ಟಿದ್ದ ಆಮದು ಆಟದ ಸಾಮಾಗ್ರಿಗಳು 2018-19ರಲ್ಲಿ304 ಮಿಲಿಯನ್ ಡಾಲರ್ ಮೊತ್ತಕ್ಕೇರಿದೆ. ಚೀನಾ, ಹಾಂಗ್ ಕಾಂಗ್ ನಿಂದ ಹೆಚ್ಚಿನ ಪ್ರಮಾಣದಲ್ಲಿ ಆಟಿಕೆಗಳು ಭಾರತಕ್ಕೆ ಲಗ್ಗೆ ಇಟ್ಟಿವೆ.

English summary
The government may increase customs duty on several products like paper, footwear, rubber items and toys in the forthcoming Budget with a view to promote 'Make in India' and boost manufacturing growth, sources said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X