ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2021ರಲ್ಲಿ ಭಾರತದ ಆರ್ಥಿಕತೆ ಶೇ. 11.5ರಷ್ಟು ಏರಿಕೆಯಾಗಲಿದೆ: ಐಎಂಎಫ್‌

|
Google Oneindia Kannada News

ನವದೆಹಲಿ, ಜನವರಿ 27: ಕೋವಿಡ್-19 ಸಾಂಕ್ರಾಮಿಕದ ನಡುವೆ ಕಳೆದ ವರ್ಷ ಭಾರೀ ಹಾನಿಗೊಳಗಾಗಿದ್ದ ಭಾರತದ ಆರ್ಥಿಕ ಬೆಳವಣಿಗೆಯು 2021ರಲ್ಲಿ ಶೇಕಡಾ 11.5ಕ್ಕೆ ಚೇತರಿಸಿಕೊಳ್ಳಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್‌) ಹೇಳಿದೆ.

ಕೋವಿಡ್-19 ಬಿಕ್ಕಟ್ಟಿನ ಬಳಿಕ ಈ ವರ್ಷ ಜಾಗತಿಕ ಆರ್ಥಿಕ ಬೆಳವಣಿಗೆಯು ಚೇತರಿಸಿಕೊಳ್ಳುತ್ತಿದ್ದು, 2021ರಲ್ಲಿ ಭಾರತದ ಜಿಡಿಪಿ ದರ ಚೇತರಿಕೆ ಕಾಣಲಿದೆ ಎಂದು ಐಎಂಎಫ್‌ ಹೇಳಿದೆ.

2020ರಲ್ಲಿ ಚೀನಾ ಜಿಡಿಪಿ ಬೆಳವಣಿಗೆ 4 ದಶಕಗಳಲ್ಲೇ ಅತ್ಯಂತ ಕಡಿಮೆ2020ರಲ್ಲಿ ಚೀನಾ ಜಿಡಿಪಿ ಬೆಳವಣಿಗೆ 4 ದಶಕಗಳಲ್ಲೇ ಅತ್ಯಂತ ಕಡಿಮೆ

ಸರಕಾರದ ನೀತಿಗಳ ಬೆಂಬಲ, ಲಸಿಕೆ ವಿತರಣೆ ಆರ್ಥಿಕತೆಯನ್ನು ಮೇಲಕ್ಕೆತ್ತಲಿದೆ ಎಂದು ಐಎಂಎಫ್‌ನ ವರದಿ ತಿಳಿಸಿದೆ. ಜಾಗತಿಕ ಆರ್ಥಿಕ ಬೆಳವಣಿಗೆ 2021ರಲ್ಲಿ ಶೇ.5.5, 2022ರಲ್ಲಿ ಶೇ. 4.2ರಷ್ಟು ಇರಲಿದೆ ಎಂದು ತಿಳಿಸಿದೆ.

IMF Projects 11.5% Growth Rate For India In 2021

ಇನ್ನು ವಿಶ್ವಸಂಸ್ಥೆಯ ಇತ್ತೀಚಿನ ವರದಿ ಪ್ರಕಾರ 2021 ರಲ್ಲಿ ದೇಶದ ಆರ್ಥಿಕತೆಯು ಶೇಕಡಾ 7.3ರಷ್ಟು ಬೆಳವಣಿಗೆಯೊಂದಿಗೆ ಚೇತರಿಸಿಕೊಳ್ಳಲಿದ್ದು, 2022 ರಲ್ಲಿ ಶೇಕಡಾ 5.9 ರಷ್ಟು ನಿಧಾನವಾಗಲಿದೆ ಎಂದು ವರದಿ ಹೇಳಿದೆ. 2021ರಲ್ಲಿ ನಿರೀಕ್ಷಿಸಿದ ಪ್ರಮಾಣಕ್ಕಿಂತ ಚೇತರಿಕೆ ಕಂಡು 2020ರ ನಷ್ಟವನ್ನು ಸರಿದೂಗಿಸಬಹುದು ಎಂದು ವರದಿ ತಿಳಿಸಿದೆ.

ದೇಶದ ಆರ್ಥಿಕ ಬೆಳವಣಿಗೆ ಕುರಿತಂತೆ ಕಳೆದ ಅಕ್ಟೋಬರ್‌ನಲ್ಲಿಯೇ ಐಎಂಎಫ್‌ ಭವಿಷ್ಯ ನುಡಿದಿತ್ತು. 2021ರಲ್ಲಿ ಭಾರತದ ಆರ್ಥಿಕತೆ ಪುಟಿದೇಳಲಿದ್ದು ಶೇ. 8.8ರ ದರದಲ್ಲಿ ಬೆಳವಣಿಗೆ ಕಾಣಲಿದೆ ಎಂದು ಐಎಂಎಫ್‌ ವಿಶ್ವಾಸ ವ್ಯಕ್ತಪಡಿಸಿತ್ತು. ಆದರೆ ತನ್ನ ಅಂದಾಜನ್ನು ಪರಿಷ್ಕರಿಸಿರುವ ಐಎಂಎಫ್ 2021ರಲ್ಲಿ ಶೇಕಡಾ 11.5ಕ್ಕೆ ಚೇತರಿಸಿಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿದೆ.

English summary
The International Monetary Fund (IMF) on Tuesday projected an 11.5 per cent growth rate for India in 2021
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X