ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ವರ್ಷ ಭಾರತದ ಅಭಿವೃದ್ಧಿ ಶೇ. 8.2: ಐಎಂಎಫ್ ಹೊಸ ಅಂದಾಜು

|
Google Oneindia Kannada News

ನವದೆಹಲಿ, ಏ. 19: ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ನಿರೀಕ್ಷೆಮೀರಿ ದೀರ್ಘವಾಗುತ್ತಿರುವ ಹಿನ್ನೆಲೆಯಲ್ಲಿ ವಿಶ್ವಾದ್ಯಂತ ಆರ್ಥಿಕ ಪರಿಸ್ಥಿತಿಯ ಮೇಲೆ ವ್ಯತಿರಿಕ್ತ ಪರಿಣಾಮ ಆಗುತ್ತಿದೆ. ಇದರ ಪರಿಣಾಮ ಭಾರತದ ಆರ್ಥಿಕತೆಯ ಮೇಲೂ ಬೀಳುತ್ತಿದ್ದು, ಇದರ ಅಭಿವೃದ್ಧಿ ದರ ನಿರೀಕ್ಷಿತ ಮಟ್ಟಕ್ಕೆ ಏರದಿರುವ ಸಾಧ್ಯತೆ ಇದೆ. 2022-23ರ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ದರ ಶೇ. 9 ಇರಬಹುದು ಎಂದು ಈ ಹಿಂದೆ ಅಂದಾಜು ಮಾಡಿದ್ದ ಅಂತಾರಾಷ್ಟ್ರೀಯ ಹಣಕಾಸು ನಿಧಿ ಇದೀಗ ತನ್ನ ಅಂದಾಜು ಪರಿಷ್ಕರಣೆ ಮಾಡಿದೆ. ಈ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆ ಪ್ರಗತಿ ಶೇ. 8.2 ಕ್ಕೆ ಸೀಮಿತವಾಗಬಹುದು ಎಂದು ಐಎಂಎಫ್ ಅಭಿಪ್ರಾಯಪಟ್ಟಿದೆ.

ಐಎಂಎಫ್ ಇಂದು ಬಿಡುಗಡೆ ಮಾಡಿದ ತನ್ನ ವಿಶ್ವ ಆರ್ಥಿಕ ವರದಿಯಲ್ಲಿ ಭಾರತದ ಅಭಿವೃದ್ಧಿ ಅಂದಾಜು ಮಾಡಿ ವಿವರ ಪ್ರಕಟಿಸಿದೆ. ತೈಲ ಬೆಲೆ ಹೆಚ್ಚಳದಿಂದಾಗಿ ಖಾಸಗಿ ಅನುಭೋಗ ಮತ್ತು ಹೂಡಿಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ನಿರೀಕ್ಷೆ ಇದೆ. ಇದು ಭಾರತಕ್ಕೆ ನಿರೀಕ್ಷಿತ ಆರ್ಥಿಕ ವೇಗ ಸಿಗಲು ತಡೆಯಾಗಬಹುದು ಎಂಬುದು ಐಎಂಎಫ್ ಅನಿಸಿಕೆ.

ಅಮೆರಿಕವೇ ಅತಿಹೆಚ್ಚು ಸಾಲಗಾರ; ಭಾರತ, ರಷ್ಯಾ ಸೇರಿ ಪ್ರಮುಖ ದೇಶಗಳ ಸಾಲ ಎಷ್ಟೆಷ್ಟು? ಅಮೆರಿಕವೇ ಅತಿಹೆಚ್ಚು ಸಾಲಗಾರ; ಭಾರತ, ರಷ್ಯಾ ಸೇರಿ ಪ್ರಮುಖ ದೇಶಗಳ ಸಾಲ ಎಷ್ಟೆಷ್ಟು?

ಇತ್ತೀಚೆಗೆ ಆರ್‌ಬಿಐ ಕೂಡ ಭಾರತದ ಜಿಡಿಪಿ ಪ್ರಗತಿ ಅಂದಾಜನ್ನು ಪರಿಷ್ಕರಿಸಿತ್ತು. ಮೊದಲಿಗೆ ಶೇ. 7.8ರಷ್ಟು ಜಿಡಿಪಿ ವೃದ್ಧಿ ಆಗಬಹುದು ಎಂದು ಹೇಳಿದ್ದ ಆರ್‌ಬಿಐ ಇದೀಗ ಶೇ. 7.2ಕ್ಕೆ ಬಂದು ನಿಲ್ಲಬಹುದು ಎಂದು ತನ್ನ ಅನಿಸಿಕೆ ಬದಲಾಯಿಸಿತ್ತು.

 Interesting Economics: ಮರಡೋನಾ ಥಿಯರಿ: ಹಣದುಬ್ಬರ ಇಟ್ಟುಕೊಂಡು ಆರ್‌ಬಿಐ ಜಾಣ್ಮೆ ಆಟ Interesting Economics: ಮರಡೋನಾ ಥಿಯರಿ: ಹಣದುಬ್ಬರ ಇಟ್ಟುಕೊಂಡು ಆರ್‌ಬಿಐ ಜಾಣ್ಮೆ ಆಟ

 ಜಾಗತಿಕವಾಗಿ ಎಷ್ಟಿರಲಿದೆ ವೃದ್ಧಿ ?

ಜಾಗತಿಕವಾಗಿ ಎಷ್ಟಿರಲಿದೆ ವೃದ್ಧಿ ?

ಐಎಂಎಫ್ ಅಂದಾಜು ಪ್ರಕಾರ ರಷ್ಯಾ ಉಕ್ರೇನ್ ಯುದ್ಧದ ಪರಿಣಾಮ ಜಾಗತಿಕವಾಗಿ ಆರ್ಥಿಕ ಹಿಂಜರಿತಕ್ಕೆ ಕಾರಣವಾಗಲಿದೆ. ೨೦೨೨ರ ವರ್ಷದಲ್ಲಿ ಜಾಗತಿಕ ಸರಾಸರಿ ಆರ್ಥಿಕ ವೃದ್ಧಿ ಶೇ. 4.4ರಿಂದ ಶೇ. 3.6ಕ್ಕೆ ಇಳಿಯುವ ಸಾಧ್ಯತೆ ಇದೆ. ೨೦೨೩ರ ವರ್ಷದಲ್ಲಿ ಆರ್ಥಿಕ ವೃದ್ಧಿ ಶೇ. 3.8ರಿಂದ ಶೇ. 3.6ಕ್ಕೆ ಇಳಿಯಬಹುದು ಎನ್ನಲಾಗಿದೆ.

 ಕರೆಂಟ್ ಅಕೌಂಟ್ ಕೊರತೆ:

ಕರೆಂಟ್ ಅಕೌಂಟ್ ಕೊರತೆ:

ಇನ್ನು, ಕರೆಂಟ್ ಅಕೌಂಟ್ ಕೊರತೆ ಎಷ್ಟಿರಬಹುದು ಎಂದು ಮಾಡಲಾಗಿದ್ದ ಅಂದಾಜಿನಲ್ಲೂ ವ್ಯತ್ಯಯವಾಗಿದೆ. ಈ ಹಣಕಾಸು ವರ್ಷದಲ್ಲಿ ಭಾರತದಲ್ಲಿ ಚಾಲ್ತಿ ಖಾತೆ ಕೊರತೆ ಶೇ. 3.1 ಇರಬಹುದು ಎಂದು ಐಎಂಎಫ್ ಹೇಳಿದೆ. 2021-22ರ ವರ್ಷದಲ್ಲಿ ಭಾರತದಲ್ಲಿ ಕರೆಂಟ್ ಅಕೌಟ್ ಡೆಫಿಸಿಟ್ ಶೇ. 1.5 ಮಾತ್ರ ಇತ್ತು.

 ಏನಿದು ಕರೆಂಟ್ ಅಕೌಂಟ್?

ಏನಿದು ಕರೆಂಟ್ ಅಕೌಂಟ್?

ಒಂದು ದೇಶ ರಫ್ತು ಮಾಡುವ ಸರಕು ಮತ್ತು ಸೇವೆಗಳ ಒಟ್ಟು ಮೌಲ್ಯ ಹಾಗು ಅದು ಆಮದು ಮಾಡಿಕೊಳ್ಳುವ ಸರಕು ಮತ್ತು ಸೇವೆಗಳ ಒಟ್ಟು ಮೌಲ್ಯವನ್ನು ತುಲನೆ ಮಾಡಿ ಕರೆಂಟ್ ಅಕೌಂಟ್ ಲೆಕ್ಕ ಮಾಡಲಾಗುತ್ತದೆ. ರಫ್ತಿಗಿಂತ ಆಮದು ಸರಕುಗಳ ಮೌಲ್ಯ ಹೆಚ್ಚಾಗಿದ್ದರೆ ಆಗ ಕರೆಂಟ್ ಅಕೌಂಟ್ ಕೊರತೆ ಎದುರಾಗುತ್ತದೆ.

 ಶೇ. 2.3ರಷ್ಟು ಆರ್ಥಿಕ ಕುಸಿತವಾಗಲಿದೆ

ಶೇ. 2.3ರಷ್ಟು ಆರ್ಥಿಕ ಕುಸಿತವಾಗಲಿದೆ

ಯುದ್ಧದಲ್ಲಿ ನಿರತವಾಗಿರುವ ರಷ್ಯಾ ಮತ್ತು ಉಕ್ರೇನ್ ದೇಶಗಳ ಆರ್ಥಿಕತೆ ಸಹಜವಾಗಿಯೇ ಕುಂಠಿತಗೊಳ್ಳಲಿವೆ. 2022ರ ವರ್ಷದಲ್ಲಿ ರಷ್ಯಾದ ಆರ್ಥಿಕತೆ ಶೇ. 8.5ರಷ್ಟು ಕುಸಿತ ಕಾಣಲಿದೆ. 2023ರಲ್ಲಿ ಇನ್ನೂ ಶೇ. 2.3ರಷ್ಟು ಆರ್ಥಿಕ ಕುಸಿತವಾಗಲಿದೆ ಎಂದು ಐಎಂಎಫ್ ಅಂದಾಜು ಮಾಡಿದೆ.

ರಷ್ಯಾಕ್ಕಿಂತ ಉಕ್ರೇನ್ ಹೆಚ್ಚು ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ. 2022ರಲ್ಲಿ ಉಕ್ರೇನ್ ದೇಶದ ಆರ್ಥಿಕತೆ ಶೇ. 35ರಷ್ಟು ಕುಸಿಯಬಹುದು ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ ಅಭಿಪ್ರಾಯಪಟ್ಟಿದೆ. ಆದರೆ, ರಷ್ಯಾ ಆಕ್ರಮಣದಿಂದ ಉಕ್ರೇನ್ ದೇಶಕ್ಕೆ ಎಷ್ಟರಮಟ್ಟಿಗೆ ಹಾನಿಯಾಗಿದೆ ಎಂಬ ವಾಸ್ತವ ಚಿತ್ರ ಸಿಕ್ಕ ಬಳಿಕ ಉಕ್ರೇನ್ ದೇಶದ ಆರ್ಥಿಕತೆಯ ಭವಿಷ್ಯ ಹೇಗಿರಬಹುದು ಎಂಬ ಅಂದಾಜಿಗೆ ಐಎಂಎಫ್ ಬರಲು ಸಾಧ್ಯವಾಗಬಹುದು.

(ಒನ್ಇಂಡಿಯಾ ಸುದ್ದಿ)

Recommended Video

Golden Duck Out ಆದ Virat Kohli ಹಿಂಗ್ಯಾಕೆ ಮಾಡಿದ್ರು? ನೆಟ್ಟಿಗರಿಂದ ಫುಲ್ ತರಾಟೆ | Oneindia Kannada

English summary
International Monetary Fund has slashed its India's growth forecast to 8.2% in 2022-23 year due to Russia and Ukraine War. It has earlier predicted growth of India in this period to 9%.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X