ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರಿಂದಂ ಚೌಧರಿಗೆ ದೆಹಲಿ ಹೈಕೋರ್ಟ್‌ ಚಾಟಿ

|
Google Oneindia Kannada News

ನವದೆಹಲಿ, ಸೆ. 29 : ಇಂಡಿಯನ್‌ ಇನ್ಸಿಟ್ಯೂಟ್‌ ಆಫ್ ಪ್ಲ್ಯಾನಿಂಗ್ ಮತ್ತು ಮ್ಯಾನೆಜ್‌ಮೆಂಟ್‌ (ಐಐಪಿಎಂ)ಮತ್ತು ಅದರ ಡೀನ್‌ ಅರಿಂದಂ ಚೌಧರಿಗೆ ಆತಂಕ ಎದುರಾಗಿದೆ. ಸಂಸ್ಥೆ ಎಲ್ಲಯೂ ತಾನು ಎಂಬಿಎ, ಬಿಬಿಎ, ಮತ್ತಿತರ ಮ್ಯಾನೇಜ್ ಮೆಂಟ್ ಕೋರ್ಸ್‌ಗಳ ಬಗ್ಗೆ ಪ್ರಚಾರ ಮತ್ತು ಜಾಹೀರಾತು ನೀಡದಂತೆ ಸ್ಪಷ್ಟ ಆದೇಶ ನೀಡಿದೆ.

ನಾಗರಿಕರಿಗೆ ತಪ್ಪು ಮಾಹಿತಿ ನೀಡುವಂತಹ ಜಾಹೀರಾತು ಪ್ರಕಟಿಸಿದ್ದಕ್ಕೆ ಐಐಪಿಎಂಗೆ 25 ಸಾವಿರ ದಂಡ ವಿಧಿಸಲಾಗಿದೆ. ಅಲ್ಲದೇ ಇದೆಕ್ಕೆಲ್ಲ ಜವಾಬ್ದಾರರಾಗಿರುವ ಅರಿಂದಂ ಚೌಧರಿಗೆ ಎಂಬಿಎ, ಬಿಬಿಎಂ, ಮ್ಯಾನೆಜ್‌ಮೆಂಟ್‌ ಕೋರ್ಸ್‌ ಎಂಬ ಶಬ್ದ ಬಳಕೆ ತಕ್ಷಣ ನಿಲ್ಲಿಸಲು ತಿಳಿಸಿದೆ. ಇಂಥ ಕೋರ್ಸ್‌ ನಡೆಸಲು ಐಐಪಿಎಂಗೆ ಯಾವ ಅಧಿಕಾರವಿಲ್ಲ ಎಂದು ಸ್ಷಷ್ಟವಾಗಿ ಹೇಳಿದೆ.(ಚಿಂದಿ ಆಯುವವರ ಮಗಳು ಎಂಬಿಎ ಪದವೀಧರೆ!)

celhi court

ನ್ಯಾಯಮೂರ್ತಿಗಳಾದ ರೋಹಿಣಿ, ಆರ್‌ಎಸ್‌ ಎಂಡ್ಲಾವ್‌ 20 ಪುಟಗಳ ತೀರ್ಮಾನ ನೀಡಿದ್ದಾರೆ. ಜನರ ಹಾದಿ ತಪ್ಪಿಸುವ ಜಾಹೀರಾತನ್ನು ಐಐಪಿಎಂಗೆ ಬಿಡುಗಡೆ ಮಾಡಿದೆ. ಇದು ಯುಜಿಸಿ ಮಾನ್ಯತೆ ಪಡೆದಿಲ್ಲ. ಬೆಲ್ಜಿಯಂನಲ್ಲಿರುವ ಐಐಪಿಎಂ ವಿದ್ಯಾಸಂಸ್ಥೆಗಳಿಗೂ ಈ ಕಾನೂನು ಅನ್ವಯಿಸುತ್ತದೆ ಎಂದು ತೀರ್ಮಾನದಲ್ಲಿ ಉಲ್ಲೇಖಿಸಿದ್ದಾರೆ.(ಬೆಂಗಳೂರು ವಿದ್ಯಾರ್ಥಿಗಳಿಗೆ 1 ಕೋಟಿ ವೇತನ ಆಫರ್)

ಯಾವುದೆ ಮ್ಯಾನೇಜ್ ಮೆಂಟ್ ಸಂಸ್ಥೆಯಾದರೂ ಮೊದಲು ತಾಂತ್ರಿಕ ಶಿಕ್ಷಣ ಬೋರ್ಡ್‌ ನಿಂದ (ಎಐಸಿಟಿಇ) ಯಿಂದ ಅನುಮತಿ ಪಡೆದುಕೊಂಡಿರಬೇಕು. ವಿದ್ಯಾರ್ಥಿಗಳು ಮತ್ತು ನಾಗರಿಕರಿಗೆ ಅನಾನುಕೂಲವಾಗುವ ರೀತಿಯಲ್ಲಿ ನಡೆದುಕೊಳ್ಳುವ ಅಧಿಕಾರ ಯಾರಿಗೂ ಇಲ್ಲ ಎಂದು ದೆಹಲಿ ನ್ಯಾಯಾಲಯ ಸ್ಪಷ್ಟವಾಗಿ ಹೇಳಿದೆ.

English summary
Indian Institute of Planning and Management (IIPM) and its Dean Arindam Chaudhuri have been restrained by the Delhi High Court from describing courses conducted by it as 'MBA, BBA, Management Course, Management School, Business School or B-School' as they are not recognized.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X