ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಹಸ್ರಮಾನದ ಗ್ರಾಹಕರಿಗೆ ಒನಿಡಾದ ಐಜಿಓದಿಂದ ಸ್ಮಾರ್ಟ್ ಟಿವಿ

|
Google Oneindia Kannada News

ಬೆಂಗಳೂರು, ಸೆ. 25: ಭಾರತೀಯ ಎಲೆಕ್ಟ್ರಾನಿಕ್ಸ್ ಗ್ರಾಹಕ ವಸ್ತುಗಳ ಮಾರುಕಟ್ಟೆಯಲ್ಲಿ ಕಳೆದ 38 ವರ್ಷಗಳಿಂದ ನಿರಂತರಾಗಿ ಬೆಳೆದು ಬಂದಿರುವ ಒನಿಡಾ ಬ್ರಾಂಡ್, ತನ್ನ ಉಪ ಬ್ರಾಂಡ್ ಐಜಿಓ ಅಡಿಯಲ್ಲಿ ವಿಶೇಷ ಉತ್ಪನ್ನವನ್ನು ಬಿಡುಗಡೆ ಮಾಡಿದೆ. ಆರಂಭಿಕವಾಗಿ, ಸ್ಮಾರ್ಟ್ ಎಲ್‍ಇಡಿ ಟಿವಿ ಶ್ರೇಣಿಯನ್ನು ಪರಿಚಯಿಸಿದ್ದು, ಇದು ಇ-ಕಾಮರ್ಸ್ ಪ್ಲಾಟ್‍ಫಾರಂಗಳಲ್ಲಿ ಆನ್‍ಲೈನ್ ಮೂಲಕ ಲಭ್ಯವಾಗಲಿದೆ.

ಹೊಸ ಸಹಸ್ರಮಾನದ ಜನತೆ(millennials) ಇಂದು, ಸಾಂಪ್ರದಾಯಿಕವಲ್ಲದ ವಿಶಿಷ್ಟ ಹಾಗೂ ದಿಟ್ಟ, ಅತ್ಯುತ್ತಮ ಗುಣಮಟ್ಟದ ಸಂವಾದಾತ್ಮಕ ತಂತ್ರಜ್ಞಾನವನ್ನು ಅಪೇಕ್ಷಿಸಿದೆ. ಈ ತಂತ್ರಜ್ಞಾನವು ಈ ಪೀಳಿಗೆಯ ಜನತೆಯ ಅಭಿವ್ಯಕ್ತಿಯ ಪ್ರತಿಬಿಂಬವಾಗಿದ್ದು, ತಮ್ಮ ಅಭಿಪ್ರಾಯಗಳು ಕೂಡಾ ಮನ್ನಣೆ ಪಡೆಯುವಂತೆ ಮಾಡುತ್ತವೆ. ಐಜಿಓ, ಯಾವುದೇ ಗಡಿ ಇಲ್ಲದ ಬ್ರಾಂಡ್ ಎನಿಸಿದ್ದು, ತಂತ್ರಜ್ಞಾನ ಹಾಗೂ ಅನುಶೋಧನೆಯ ಎಲ್ಲೆಗಳನ್ನು ವಿಸ್ತರಿಸುತ್ತಾ ಸಾಗಿದೆ.

ಫ್ಲಿಪ್‍ಕಾರ್ಟ್‍ನಿಂದ ಹಬ್ಬದ ಸೀಸನ್‍ನಲ್ಲಿ 50 ಸಾವಿರ ನೇರ ಉದ್ಯೋಗಫ್ಲಿಪ್‍ಕಾರ್ಟ್‍ನಿಂದ ಹಬ್ಬದ ಸೀಸನ್‍ನಲ್ಲಿ 50 ಸಾವಿರ ನೇರ ಉದ್ಯೋಗ

ಈ ಬಗ್ಗೆ ಮಾತನಾಡಿದ ಎಂಐಆರ್‍ಸಿ ಎಲೆಕ್ಟ್ರಾನಿಕ್ಸ್ ನ ವ್ಯವಸ್ಥಾಪಕ ನಿರ್ದೇಶಕ ವಿಜಯ್ ಮನಸ್ಕಾನಿ, "ನಮ್ಮ ಉತ್ಪನ್ನಗಳು ನಿರಂತರವಾಗಿ ಮರು ಶೋಧನೆಗೊಳ್ಳುತ್ತವೆ. ವಿನೂತನ ವಿನ್ಯಾಸ, ವಿಶೇಷ ಗುಣಲಕ್ಷಣಗಳು ಮತ್ತು ಕ್ಷಮತೆಯ ಮೂಲಕ ನಮ್ಮ ಗ್ರಾಹಕರಿಗೆ ಸಂತಸ ತರಲು ಶಕ್ತಿಮೀರಿ ಶ್ರಮಿಸುತ್ತೇವ.ಎ ಈ ಉತ್ಪನ್ನಗಳು ಅತ್ಯಂತ ಬಳಕೆಯೋಗ್ಯ, ಸ್ವಯಂ ಮಾರ್ಗದರ್ಶಕ, ಅಡೆತಡೆ ಇಲ್ಲದ, ದಕ್ಷ ಬಳಕೆದಾರರ ಅನುಭವಕ್ಕೆ ಕಾರಣವಾಗಲಿವೆ. ಐಜಿಓ, ಹೊಸ ಸಹಸ್ರಮಾನದ ಪೀಳಿಗೆಯ ನಿರೀಕ್ಷೆಗೆ ಅನುಗೂನವಾಗಿ ರೂಪುಗೊಂಡಿದೆ" ಎಂದರು

ಒನಿಡಾದ ಐಜಿಓದಿಂದ ಸ್ಮಾರ್ಟ್ ಟಿವಿ

ಒನಿಡಾದ ಐಜಿಓದಿಂದ ಸ್ಮಾರ್ಟ್ ಟಿವಿ

"ಬಾಹ್ಯ ಜಗತ್ತಿನ ಜತೆ ಸದಾ ಎಲ್ಲಿದ್ದರೂ, ಯಾವಾಗಲಾದರೂ, ಸಂಪರ್ಕದಲ್ಲಿ ಇರಲು ಬಯಸುವ ಗ್ರಾಹಕರಿಗಾಗಿ ಈ ಉತ್ಪನ್ನಗಳನ್ನು ವಿನ್ಯಾಸಗೊಳಿಸಲಾಗಿದೆ. ಐಜಿಓ ಭಿನ್ನ ಹಾಗೂ ಪ್ರವೃತ್ತಿಯ ಲಕ್ಷಣಗಳ ಅನುರೂಪವಾಗಿದೆ. ನೀವು ಬಯಸುವ ಮತ್ತು ಮಾಲೀಕರಾಗಬಯಸುವ ನಿರೀಕೆಯ ಉತ್ಪನ್ನಗಳನ್ನು ನಾವು ವಿನ್ಯಾಸಗೊಳಿಸಯತ್ತೇವೆ. ಬದಲಾವಣೆಯ ಅಗತ್ಯತೆಯನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುವ ಕಾರಣದಿಂದ ನಮ್ಮ ಉತ್ಪನ್ನಗಳನ್ನು ಕಲ್ಪನಾತೀತವನ್ನಾಗಿಸುತ್ತವೆ" ಎಂದು ಎಂಐಆರ್‍ಸಿ ಎಲೆಕ್ಟ್ರಾನಿಕ್ಸ್ ನ ವ್ಯವಸ್ಥಾಪಕ ನಿರ್ದೇಶಕ ವಿಜಯ್ ಮನಸ್ಕಾನಿ ಹೇಳಿದರು.

 ಹೊಸ ಎಲ್‍ಇಡಿ ಉತ್ಪನ್ನ ಶ್ರೇಣಿಯು, ಮೂರು ಅವತರಣಿಕೆ

ಹೊಸ ಎಲ್‍ಇಡಿ ಉತ್ಪನ್ನ ಶ್ರೇಣಿಯು, ಮೂರು ಅವತರಣಿಕೆ

ಹೊಸ ಎಲ್‍ಇಡಿ ಉತ್ಪನ್ನ ಶ್ರೇಣಿಯು, ಮೂರು ಅವತರಣಿಕೆಗಳಲ್ಲಿ ಲಭ್ಯವಿದ್ದು, 32 ಇಂಚು ಎಚ್‍ಡಿ ಸುಸಜ್ಜಿತ ಸ್ಮಾಟ್, 40 ಎಫ್‍ಎಚ್‍ಡಿ ಸ್ಮಾರ್ಟ್ ಅವತರಣಿಕೆಗಳು 2019ರ ಸೆಪ್ಟೆಂಬರ್ 24ರಂದು ಬಿಡುಗಡೆಯಾಗಿದ್ದು, ವಿಶಷ ಮಾಡೆಲ್ 50 4ಕೆ ಯುಎಚ್‍ಡಿ ಸ್ಮಾರ್ಟ್, 2019ರ ಸೆಪ್ಟೆಂಬರ್ 29ರಂದು ಫ್ಲಿಫ್‍ಕಾರ್ಟ್‍ನ ಬಿಗ್ ಬಿಲಿಯನ್ ಡೇಸ್‍ನಲ್ಲಿ ಲಭ್ಯ. ಎಲ್ಲ ಮಾಡೆಲ್‍ಗಳು ಫ್ಲಿಫ್‍ಕಾರ್ಟ್‍ನಲ್ಲಿ ಮಾರಾಟಕ್ಕಿವೆ.

ದಿ ಬಿಗ್ ಬಿಲಿಯನ್ ಡೇಸ್: ಟಾಪ್ 100+ ಫ್ಯಾಷನ್ ಬ್ರಾಂಡ್ ಜತೆ ಫ್ಲಿಪ್ ಕಾರ್ಟ್ ಒಪ್ಪಂದದಿ ಬಿಗ್ ಬಿಲಿಯನ್ ಡೇಸ್: ಟಾಪ್ 100+ ಫ್ಯಾಷನ್ ಬ್ರಾಂಡ್ ಜತೆ ಫ್ಲಿಪ್ ಕಾರ್ಟ್ ಒಪ್ಪಂದ

 ಪ್ರಮಾಣೀಕೃತ ನೆಟ್‍ಫ್ಲಿಕ್ಸ್ ಟಿವಿ

ಪ್ರಮಾಣೀಕೃತ ನೆಟ್‍ಫ್ಲಿಕ್ಸ್ ಟಿವಿ

50 4ಕೆ ಯುಎಚ್‍ಡಿ ಸ್ಮಾರ್ಟ್, ಪ್ರಮಾಣೀಕೃತ ನೆಟ್‍ಫ್ಲಿಕ್ಸ್ ಟಿವಿಯಾಗಿದ್ದು, ಇದು ಅಮೆಝಾನ್ ಪ್ರೈಮ್ ವಿಡಿಯೊ, ಯೂಟ್ಯೂಬ್ ಮತ್ತು ಇತರ ವಿಡಿಯೊಗಳನ್ನು ಸುಲಲಿತವಾಗಿ ಪ್ರಸಾರ ಮಾಡುತ್ತವೆ. ಈ ಮಾದರಿಯಲ್ಲಿ ಇದರ ಪ್ರದರ್ಶಕ ವ್ಯವಸ್ಥೆಯು 1.07 ಶತಕೋಟಿ ಬಣ್ಣಗಳನ್ನು ಪ್ರದರ್ಶಿಸುತ್ತದೆ. 4ಕೆ ಯುಎಚ್‍ಡಿ ಅವತರಣಿಕೆಯು, 3840/ 2160 ಪಿಕ್ಸೆಲ್‍ನಲ್ಲಿ ಬರುತ್ತದೆ ಹಾಗೂ ಎಚ್‍ಡಿ ಗುಣಮಟ್ಟಕ್ಕಿಂತ ನಾಲ್ಕು ಪಟ್ಟು ಅಧಿಕ ಗುಣಮಟ್ಟವನ್ನು ಇದು ನೀಡುತ್ತದೆ.

 ಗೂಗಲ್ ಅಸಿಸ್ಟೆಂಟ್ ವ್ಯವಸ್ಥೆ ಹೊಂದಿದೆ

ಗೂಗಲ್ ಅಸಿಸ್ಟೆಂಟ್ ವ್ಯವಸ್ಥೆ ಹೊಂದಿದೆ

ಇದರಿಂದಾಗಿ ಟಿವಿಯಲ್ಲಿ ಚಲಿಸುವ ಚಿತ್ರಗಳು ನಿಜ ಜೀವನಕ್ಕೆ ಬರಲಿವೆ. 40 ಎಫ್‍ಎಚ್‍ಡಿ ಸ್ಮಾರ್ಟ್ ಮಾದರಿಯು, ವಿಶೇಷ ಪ್ಯಾಕೇಜ್‍ನಲ್ಲಿ 500 ಡಬ್ಲ್ಯು ಪಿಎಂಪಿಓ ಬೀಟ್ ಬಾಕ್ಸ್ ಅಂತರ್ಗತ ಸ್ಪೀಕರ್ ಗಳನ್ನು ಹೊಂದಿದೆ. 40 ಎಫ್‍ಎಚ್‍ಡಿ ಸ್ಮಾರ್ಟ್ ಹಾಗೂ 32 ಎಫ್‍ಎಚ್‍ಡಿ ಸ್ಮಾರ್ಟ್‍ಗಳು ಮಲ್ಟಿ ಕೋರ್ ಪ್ರೊಸೆಸರ್ ಗಳನ್ನು ಹೊಂದಿದ್ದು, ಇದು ವೆಬ್ ಬ್ರೌಸಿಂಗ್, ಮೀರಾಕಾಸ್ಟ್ ಆಯ್ಕೆ, 16.7 ದಶಲಕ್ಷ ಬಣ್ಣಗಳ ಅವಕಾಶವನ್ನು ಹೊಂದಿದೆ. ಇದರಿಂದಾಗಿ ಆ್ಯಂಡ್ರಾಯ್ಡ್ ಆಧರಿತ ಓಎಸ್ ಅನುಭದಕ್ಕೆ ಸಮಾನವಾದ ದೃಶ್ಯ ಅನುಭವವನ್ನು ಆಸ್ವಾದಿಸಬಹುದಾಗಿದೆ. ಇದು ಅಂತರ್ಗತವಾದ ಕ್ರೋಮ್ ಕಾಸ್ಟ್ ಮತ್ತು ಗೂಗಲ್ ಅಸಿಸ್ಟೆಂಟ್ ವ್ಯವಸ್ಥೆಯನ್ನು ಹೊಂದಿರುತ್ತದೆ.

English summary
ONIDA has announced the launch of their sub-brand IGO (pronounced as “E-go”). Initially, it would launch smart LED TV range, exclusively on e-commerce platform.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X