ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಫೋಸಿಸ್ ಬಿಟ್ಟ ಅಶೋಕ್ ಈಗ ಐಗೇಟ್ ಸಿಇಒ

By Mahesh
|
Google Oneindia Kannada News

ಬೆಂಗಳೂರು, ಸೆ.12: ಇನ್ಫೋಸಿಸ್ ತೊರೆದ ಅಶೋಕ್ ವೆಮೂರಿ ಅವರು ಈಗ ಐಗೇಟ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಸೆ.16ರಿಂದ ಐಗೇಟ್ ನಲ್ಲಿ ಅಶೋಕ್ ಆಡಳಿತ ಆರಂಭವಾಗಲಿದೆ.

ಇತ್ತೀಚೆಗೆ ಐಗೇಟ್ ಉದ್ಯೋಗಿ ಅರಸೆಲಿ ರೊಯಿಜ್ ಅವರೊಡನೆ ಅನುಚಿತವಾಗಿ ವರ್ತಿಸಿ ಲೈಂಗಿಕ ಕಿರುಕುಳ ಆರೋಪದ ಮೇಲೆ ಸಿಇಒ ಆಗಿದ್ದ ಫಣೀಶ್ ಮೂರ್ತಿ ಅವರು ಐಗೇಟ್ ತೊರೆಯಬೇಕಾಯಿತು. ಫಣೀಶ್ ಕೂಡಾ ಇನ್ಪೋಸಿಸ್ ನಿಂದ ಐಗೇಟ್ ಗೆ ಹಾರಿದವರು ಎಂಬುದು ಗಮನಾರ್ಹ.

ಐಗೇಟ್ ಸಂಸ್ಥೆ ಮುನ್ನಡೆಸಲು ಸಾಕಷ್ಟು ವೃತ್ತಿಪರ ಅಧಿಕಾರಿಗಳನ್ನು ಹುಡುಕಾಟ ನಡೆಸಿದೆವು ಅಶೋಕ್ ಅವರು ಸಮರ್ಥರಾಗಿದ್ದು, ಐಗೇಟ್ ಏಳಿಗೆ ಅವರ ಕೈಲಿದೆ ಎಂದು ಸಂಸ್ಥೆಯ ಸಹ ಸ್ಥಾಪಕ ಹಾಗೂ ಸಹ ಚೇರ್ಮನ್ ಸುನಿಲ್ ವಾಧ್ವಾನಿ ಹೇಳಿದ್ದಾರೆ.

iGate appoints former Infosys man Ashok Vemuri as CEO and president

ಅಶೋಕ್ ವೆಮೂರಿ ಅವರು ಐಗೇಟ್ ನ ಬೋರ್ಡ್ ಆಫ್ ಡೈರೆಕ್ಟರ್ಸ್ ಕೂಡಾ ಸೇರಲಿದ್ದಾರೆ. ಫಣೀಶ್ ಮೂರ್ತಿ ಸಂಸ್ಥೆ ತೊರೆದ ನಂತರ ಗೆರ್ಹಾಡ್ ವಾಜಿಂಗರ್ ಅವರು ಮಧ್ಯಂತರ ಅಧ್ಯಕ್ಷ ಹಾಗೂ ಸಿಇಒ ಆಗಿ ಕಳೆದ ಮೇ ತಿಂಗಳಿನಿಂದ ಕಾರ್ಯನಿರ್ವಹಿಸುತ್ತಿದ್ದರು. ಈಗ ಗೆರ್ಹಾಡ್ ಅವರಿಗೆ ವೆಮೂರಿ ಅವರ ಸಹಾಯಕರಾಗಿ ಕಾರ್ಯ ನಿರ್ವಹಿಸಲು ಸೂಚಿಸಲಾಗಿದೆ.

ಇನ್ಫೋಸಿಸ್ ನ ಅಮೆರಿಕ ಹಾಗೂ ಜಾಗತಿಕ ಉತ್ಪಾದನಾ ಮತ್ತು ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾಗಿದ್ದ ಅಶೋಕ್ ವೆಮೂರಿ ಅವರು ಇತ್ತೀಚೆಗಷ್ಟೇ ಇನ್ಫೋಸಿಸ್ ತೊರೆದಿದ್ದರು. ಇನ್ಫೋಸಿಸ್ ಸಿಇಒ ಎಸ್ ಡಿ ಶಿಬುಲಾಲ್ ಸ್ಥಾನದಲ್ಲಿ ವೆಮೂರಿ ಕೂರಲಿದ್ದಾರೆ ಎಂಬ ಸುದ್ದಿಯೂ ಹಬ್ಬಿತ್ತು.

ಅಮೆರಿಕದಲ್ಲಿ ಇನ್ಪೋಸಿಸ್ ಗಟ್ಟಿಯಾಗಿ ನೆಲೆಗೊಳ್ಳಲು ಹಾಗೂ ಸಂಸ್ಥೆ ಅಭಿವೃದ್ಧಿಗೊಳ್ಳಲು ವೆಮೂರಿ ಕಾರಣರಾಗಿದ್ದರು ಎಂದರೆ ತಪ್ಪಾಗಲಾರದು. ಅಮೆರಿಕದಿಂದ ಸಾಕಷ್ಟು ಲಾಭ ಬರುವಂತೆ ಮಾಡುವಲ್ಲಿ ಅಶೋಕ್ ಯಶಸ್ವಿಯಾಗಿದ್ದರು. ಸುಮಾರು 4.7 ಬಿಲಿಯನ್ ಡಾಲರ್ ಆದಾಯ ಇನ್ಫಿ ಪಾಲಾಗಿತ್ತು. ಸುಮಾರು 15 ವರ್ಷಗಳ ಕಾಲ ಇನ್ಫೋಸಿಸ್ ನಲ್ಲಿದ್ದ ಅಶೋಕ್ ಅವರು ಈಗ ಐಗೇಟ್ ಸಿಇಒ ಆಗಿ ಹೊಸ ಜವಾಬ್ದಾರಿವಹಿಸಿಕೊಂಡಿದ್ದಾರೆ. (ಪಿಟಿಐ)

English summary
Outsourcing firm iGate has appointed Ashok Vemuri as President and Chief Executive Officer with effect from September 16. Vemuri will join iGate's Board of Directors, iGate said in a statement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X