ಐಡಿಯಾದಿಂದ ಪ್ರೀಪೇಯ್ಡ್ ಗ್ರಾಹಕರಿಗೆ ಭರ್ಜರಿ ಆಫರ್

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 12: ರಿಲಯನ್ಸ್ ಜಿಯೋ ಜನಪ್ರಿಯತೆ ಹೆಚ್ಚಾಗುತ್ತಿದ್ದಂತೆ, ದೇಶದಲ್ಲಿ ಟೆಲಿಕಾಂ ಕಂಪನಿಗಳು ಪೈಪೋಟಿಗೆ ಬಿದ್ದು ಆಫರ್ ಗಳ ಮೇಲೆ ಆಫರ್ ನೀಡುತ್ತಿವೆ. ಏರ್ ಟೆಲ್ ನಂತರ ಐಡಿಯಾ ಸೆಲ್ಯುಲಾರ್ ತನ್ನ ಪ್ರೀಪೇಯ್ಡ್ ಗ್ರಾಹಕರಿಗೆ ಕೊಡುಗೆ ನೀಡುತ್ತಿದೆ.

ಏರ್ಟೆಲ್ ಪ್ರೀಪೇಯ್ಡ್ ಗ್ರಾಹಕರಿಗೆ ಮತ್ತೊಮ್ಮೆ ಭರ್ಜರಿ ಕೊಡುಗೆ

357ರು ಗಳ ರೀಚಾರ್ಜ್ ಯೋಜನೆ ಪ್ರಕಟಿಸಿದ್ದ ಐಡಿಯಾ ಈಗ ಅದೇ ಯೋಜನೆಯನ್ನು 309ರು ಗಳಿಗೆ ತನ್ನ ಪ್ರಿಪೇಯ್ಡ್ ಗ್ರಾಹಕರಿಗೆ ಒದಗಿಸಲು ಮುಂದಾಗಿದೆ.

ವೊಡಾಫೋನ್‍ನಿಂದ ಅನಿಯಮಿತ ಕರೆ ಆಫರ್!

ಪ್ರಮುಖ ಟೆಲಿಕಾಂ ಕಂಪನಿಯಾಗಿರುವ ಐಡಿಯಾ ಸೆಲ್ಯುಲಾರ್ 509 ರೂ. ಪ್ರೀಪೇಯ್ಡ್ ರೀಚಾರ್ಜ್ ಪ್ಲಾನ್ ಪರಿಚಯಿಸಿದೆ. ಇದರಲ್ಲಿ 84 ದಿನಗಳ ವ್ಯಾಲಿಡಿಟಿಯೊಂದಿಗೆ ಪ್ರತಿದಿನ 1 ಜಿ.ಬಿ. 3 ಜಿ ಡೇಟಾ, 100 ನ್ಯಾಷನಲ್ ಮೆಸೇಜ್, ಉಚಿತ ಕರೆ ಸೌಲಭ್ಯ ನೀಡಲಾಗಿದೆ.

ರಿಲಯನ್ಸ್ ಜಿಯೋಫೋನ್ ಗ್ರಾಹಕರಿಗೊಂದು ಸುದ್ದಿ

ಇದರ ಜೊತೆಗೆ ಐಡಿಯಾದಿಂದ ಹೆಚ್ಚುವರಿ 1 ಜಿ.ಬಿ. ಡೇಟಾವನ್ನು 28 ದಿನಗಳವರೆಗೆ ಉಚಿತವಾಗಿ ನೀಡಲಿದೆ. ಮೈ ಐಡಿಯಾ ಅಪ್ಲಿಕೇಷನ್ ಅಥವಾ ಐಡಿಯಾ ವೆಬ್ ಸೈಟ್ ಮೂಲಕ 509 ರೂ. ರೀಚಾರ್ಜ್ ಮಾಡಿಕೊಂಡರೆ ಮಾತ್ರ ಈ ಸೌಲಭ್ಯ ಪಡೆಯಬಹುದಾಗಿದೆ.

ಇದರೊಂದಿಗೆ ಐಡಿಯಾ 300 ರೂ.ಗಿಂತ ಹೆಚ್ಚಿನ ಮೊತ್ತದ ರೀಚಾರ್ಜ್ ಗಳಿಗೆ ಶೇ. 100 ರಷ್ಟು ಕ್ಯಾಶ್ ಬ್ಯಾಕ್ ಆಫರ್ ಕೂಡಾ ಇದೆ. ಮಿಕ್ಕಂತೆ ಐಡಿಯಾ ನೀಡಿರುವ ಎಲ್ಲಾ ಆಫರ್ ಗಳ ವಿವರ ಮುಂದಿದೆ...

ಐಡಿಯಾ 309 ಪ್ಲಾನ್

ಐಡಿಯಾ 309 ಪ್ಲಾನ್

1ಜಿಬಿ 3ಜಿ ಡೇಟಾ ಪ್ರತಿದಿನ, ಅನಿಯಮಿತ ಸ್ಥಳೀಯ ಹಾಗೂ ಎಸ್ಟಿಡಿ ಕರೆಗಳು, ರೋಮಿಂಗ್ ಹೊರ ಹೋಗುವ ಕರೆಗಳು, 100 ಎಸ್ಎಂಎಸ್ ಪ್ರತಿದಿನ ಉಚಿತ. ವ್ಯಾಲಿಡಿಟಿ ಅವಧಿಯಲ್ಲಿ ಅಧಿಕೃತ ವೆಬ್ ಸೈಟ್ ಅಥವಾ ಆಪ್ ಮೂಲಕ ರೀಚಾರ್ಜ್ ಮಾಡಿದರೆ ಹೆಚ್ಚುವರಿಯಾಗಿ 1ಜಿಬಿ ಡೇಟಾ ಲಭಿಸಲಿದೆ. ಈ ಪ್ಲಾನ್ ಮಿತಿ 28 ದಿನ.

357 ರು ಪ್ಲಾನ್

357 ರು ಪ್ಲಾನ್

100 ರಷ್ಟು ಕ್ಯಾಶ್ ಬ್ಯಾಕ್, ಇಂಟರ್ನೆಟ್ 1 ಜಿಬಿ ಪ್ರತಿದಿನ, ಉಚಿತ ಎಸ್ಟಿಡಿ/ರೋಮಿಂಗ್ ಕರೆ, 28 ದಿನಗಳ ವ್ಯಾಲಿಡಿಟಿ.100 ಎಸ್ಎಂಎಸ್ ಪ್ರತಿದಿನ ಉಚಿತ.

449 ಪ್ಲಾನ್

449 ಪ್ಲಾನ್

100 ರಷ್ಟು ಕ್ಯಾಶ್ ಬ್ಯಾಕ್, ಇಂಟರ್ನೆಟ್ 1 ಜಿಬಿ ಪ್ರತಿದಿನ, ಉಚಿತ ಎಸ್ಟಿಡಿ/ರೋಮಿಂಗ್ ಕರೆ, 70 ದಿನಗಳ ವ್ಯಾಲಿಡಿಟಿ.

509 ಪ್ಲಾನ್

509 ಪ್ಲಾನ್

509 ಪ್ಲಾನ್: 100 ರಷ್ಟು ಕ್ಯಾಶ್ ಬ್ಯಾಕ್, ಇಂಟರ್ನೆಟ್ 1 ಜಿಬಿ ಪ್ರತಿದಿನ, ಉಚಿತ ಎಸ್ಟಿಡಿ/ರೋಮಿಂಗ್ ಕರೆ, 84ದಿನಗಳ ವ್ಯಾಲಿಡಿಟಿ.

179 ಪ್ಲಾನ್

179 ಪ್ಲಾನ್

ಇಂಟರ್ನೆಟ್ 1 ಜಿಬಿ ಪ್ರತಿದಿನ, ಉಚಿತ ಎಸ್ಟಿಡಿ/ರೋಮಿಂಗ್ ಕರೆ, 28 ದಿನಗಳ ವ್ಯಾಲಿಡಿಟಿ. ಈ ಯೋಜನೆಗೆ ಯಾವುದೇ ಕ್ಯಾಶ್ ಬ್ಯಾಕ್ ಆಫರ್ ಇಲ್ಲ. ಆದರೆ, ಬಹುತೇಕ ಎಲ್ಲಾ ಯೋಜನೆಗಳ ಮೇಲೆಕೆಲ ಷರತ್ತಿನ ಮೂಲಕ ಐಡಿಯಾ ಶೇಕಡಾ 100ರಷ್ಟು ಕ್ಯಾಶ್ ಬ್ಯಾಕ್ ಸೌಲಭ್ಯವನ್ನು ಗ್ರಾಹಕರಿಗೆ ನೀಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Idea Cellular has launched a new Rs. 309 plan with bundled data and calls for its prepaid consumers seeking 1GB data per day. Here are offers by Idea for its Pre paid customers.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ