ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಡಿಯಾ ಸೆಲ್ಯುಲಾರ್ ಗೆ 600 ಕೋಟಿ ರು ದಂಡ

By Mahesh
|
Google Oneindia Kannada News

ನವದೆಹಲಿ, ಡಿ.3: ಸ್ಪೈಸ್ ಸೆಲ್ಯುಲಾರ್ ಸಂಸ್ಥೆ ಜತೆ ವಿಲೀನಗೊಳ್ಳುವಾಗ ಲೈಸನ್ಸ್ ನಿಯಮಗಳನ್ನು ಉಲ್ಲಂಘಿಸಿದ ಆರೋಪ ಹೊತ್ತಿರುವ ಐಡಿಯಾ ಸೆಲ್ಯುಲಾರ್ ಸಂಸ್ಥೆ ಮೇಲೆ ದೂರಸಂಪರ್ಕ ಇಲಾಖೆ(DoT) 600 ಕೋಟಿ ರು ದಂಡ ವಿಧಿಸಿದೆ. ಇಲಾಖೆಯಿಂದ ನೋಟಿಸ್ ಬಂದಿರುವುದನ್ನು ಐಡಿಯಾ ಸಂಸ್ಥೆ ವಕ್ತಾರರು ಖಾತ್ರಿಪಡಿಸಿದ್ದಾರೆ.

ಈ ಹಿಂದೆ ಕೇಂದ್ರ ಸಂಪರ್ಕ ಸಚಿವಾಲಯ ಐಡಿಯಾ ಸೆಲ್ಯುಲಾರ್ನ ಕರ್ನಾಟಕ ವೃತ್ತ ಹಾಗೂ ಸ್ಪೈಸ್ ಸೆಲ್ಯುಲಾರ್‌ನ ಆಂಧ್ರಪ್ರದೇಶ ವೃತ್ತದ ಪರವಾನಿಗೆಯನ್ನು ರದ್ದುಗೊಳಿಸುವ ಸಂಬಂಧ ಎರಡೂ ಸಂಸ್ಥೆಗಳಿಗೆ ಶೋಕಾಸ್ ನೋಟಿಸ್ ನೀಡಲಾಗಿತ್ತು.

ಪರವಾನಿಗೆಯನ್ನು ಪಡೆದ ನಂತರ ಸಂಪರ್ಕ ಇಲಾಖೆಯ ನಿಯಮಗಳನ್ನು ಅಳವಡಿಸಿಕೊಳ್ಳಲು ವಿಳಂಬ ಮಾಡಿದ್ದವು. ಈ ಹಿನ್ನೆಲೆಯಲ್ಲಿ ಈ ಎರಡೂ ಸಂಸ್ಥೆಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿತ್ತು.

Idea Cellular gets Rs 600 crore penalty notice over Spice Communications merger issue

2008ರಲ್ಲಿ ಸ್ಪೈಸ್ ನ್ನು ಐಡಿಯಾ ಖರೀದಿಸಿದ್ದರೂ ಐಡಿಯಾದೊಂದಿಗಿನ ಸ್ಪೈಸ್ ವಿಲೀನಕ್ಕಾಗಿ ದೂರ ಸಂಪರ್ಕ ಇಲಾಖೆಯಿಂದ ಈ ಸಂಸ್ಥೆಗಳು ಅನುಮೋದನೆ ಪಡೆದಿರಲಿಲ್ಲ. ಹೀಗಾಗಿ ಈ ಸಂಸ್ಥೆಗಳಿಗೆ ಮತ್ತೆ ಮತ್ತೆ ನೋಟಿಸ್ ಕಳುಹಿಸಲಾಗಿತ್ತು. ಆದರೆ, ನೋಟಿಸ್ ಗಳಿಗೆ ಐಡಿಯಾ ಉತ್ತರ ನೀಡಿರಲಿಲ್ಲ.

2ಜಿ ಸ್ಪೆಕ್ಟ್ರಂ ಹಂಚಿಕೆ ಸಮಯದಲ್ಲಿ ಮಾಜಿ ಟೆಲಿಕಾಂ ಸಚಿವ ರಾಜಾ 122 ಹೊಸ ಪರವಾನಿಗೆ ನೀಡಿದ್ದರು. ಇದರಲ್ಲಿ ಐಡಿಯಾ ಸಂಸ್ಥೆ ಸ್ಪೆಕ್ಟ್ರಂ ಹಂಚಿಕೆ ಕೂಡಾ ತನಿಖೆಗೊಳಲ್ಪಟ್ಟಿತ್ತು.

ಸ್ಪೈಸ್ ಮತ್ತು ಐಡಿಯಾ ಕಂಪೆನಿಗಳು ನಿಗದಿತ ಸಮಯದಲ್ಲಿ ಸೇವೆ ನೀಡಲು ವಿಫಲವಾಗಿದೆ ಮತ್ತು ಪರವಾನಿಗೆ ನಿಯಮವನ್ನು ಉಲ್ಲಂಘಿಸಿರುವುದರಿಂದ ಐದು ರಾಜ್ಯಗಳಲ್ಲಿ ಅವುಗಳ ಸೇವೆಗೆ ನೀಡಿರುವ ಪರವಾನಿಗೆಯನ್ನು ರದ್ದುಗೊಳಿಸುವಂತೆ ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ ಶಿಫಾರಸ್ಸು ಕೂಡಾ ಮಾಡಿತ್ತ್ತು.

2008ರಲ್ಲಿ ಅದಿತ್ಯಾ ಬಿರ್ಲಾ ಸಮೂಹ ಒಡೆತನದ ಐಡಿಯಾ ಸೆಲ್ಯುಲರ್ ಸಂಸ್ಥೆ ಸ್ಪೈಸ್ ಟೆಲಿಕಾಂನ ಶೇ. 41.09ರಷ್ಟು ಪಾಲು ಖರೀದಿಸಿತ್ತು.. ಇದಕ್ಕಾಗಿ 2,716ಕೋಟಿ ರು ವೆಚ್ಚಮಾಡಿತ್ತು.

ಆಂಧ್ರಪ್ರದೇಶ, ದೆಹಲಿ, ಹರ್ಯಾಣ, ಮಹಾರಾಷ್ಟ್ರ, ಪಂಜಾಬ್ ಹಾಗೂ ಕರ್ನಾಟಕ -ಆರು ಟೆಲಿಕಾಂ ಸರ್ಕಲ್ ನಲ್ಲಿ ಈ ವಿಲೀನ ಜಾರಿಗೆ ಬಂದಿತ್ತು. 2012ರಲ್ಲಿ ಸುಪ್ರೀಂಕೋರ್ಟ್ ಐಡಿಯಾ ಸಂಸ್ಥೆಯ ಪಂಜಾಬ್ ಹಾಗೂ ಕರ್ನಾಟಕ ಸರ್ಕಲ್ ಲೈಸನ್ಸ್ ರದ್ದುಗೊಳಿಸಿತ್ತು. ಉಳಿದ ನಾಲ್ಕು ಟೆಲಿಕಾಂ ಸರ್ಕಲ್ ಗಳಲ್ಲಿ ಸ್ಪೈಸ್ ತನ್ನ ಹಿಡಿತ ಕಳೆದುಕೊಂಡಿತ್ತು. (ಪಿಟಿಐ)

English summary
Idea Cellular said it has received a letter from Department of Telecom (DoT) imposing a penalty of Rs 600 crore for alleged violation of licence conditions in its merger deal with Spice Communications.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X