ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಸಿಐಸಿಐ-ವಿಡಿಯೋಕಾನ್ ಕೇಸ್ : ಚಂದಾ ಕೊಚ್ಚರ್ ಗೆ ಲುಕ್ ಔಟ್ ನೋಟಿಸ್

|
Google Oneindia Kannada News

ನವದೆಹಲಿ, ಫೆಬ್ರವರಿ 22: ಐಸಿಐಸಿಐ ಬ್ಯಾಂಕ್-ವಿಡಿಯೋಕಾನ್ ಹಗರಣಕ್ಕೆ ಸಂಬಂಧಿಸಿದಂತೆ ಬ್ಯಾಂಕಿನ ಮಾಜಿ ಎಂಡಿ ಮತ್ತು ಸಿಇಒ ಚಂದಾ ಕೊಚ್ಚಾರ್ ಅವರ ವಿರುದ್ಧ ಲುಕ್ ಔಟ್ ನೋಟಿಸ್(LOC) ಹೊರಡಿಸಲಾಗಿದೆ.

ಚಂದಾ ಕೊಚ್ಚಾರ್, ಅವರ ಪತಿ ದೀಪಕ್ ಕೊಚ್ಚಾರ್ ಹಾಗೂ ವಿಡಿಯೋಕಾನ್ ವ್ಯವಸ್ಥಾಪಕ ನಿರ್ದೇಶಕ ವೇಣುಗೋಪಾಲ್ ಧೂತ್ ವಿರುದ್ಧ ಸಿಬಿಐನಿಂದ ಲುಕ್ ಔಟ್ ಸರ್ಕ್ಯುಲರ್ ನೀಡಲಾಗಿದೆ ಎಂದು ಎಎನ್ಐ ವರದಿ ಮಾಡಿದೆ.

ಚಂದಾ ಕೊಚ್ಚರ್ ಮೇಲೆ ಎಫ್ಐಆರ್ ಹಾಕಿದ ಸಿಬಿಐ ಅಧಿಕಾರಿ ವರ್ಗಾವಣೆ ಚಂದಾ ಕೊಚ್ಚರ್ ಮೇಲೆ ಎಫ್ಐಆರ್ ಹಾಕಿದ ಸಿಬಿಐ ಅಧಿಕಾರಿ ವರ್ಗಾವಣೆ

ವೇಣುಗೋಪಾಲ್ ಧೂತ್,ದೀಪಕ್ ಕೊಚ್ಚಾರ್ ಹಾಗೂ ಇನ್ನಿತರರ ವಿರುದ್ಧ ಕಳೆದ ವರ್ಷ ಮಾರ್ಚ್ ತಿಂಗಳಿನಲ್ಲಿ ತನಿಖಾ ಸಂಸ್ಥೆಯು ಪ್ರಕರಣ ದಾಖಲಿಸಿಕೊಂಡಿತ್ತು. ಇದೀಗ ಎಲ್ಲರ ವಿರುದ್ಧ ಎಫ್ಐಆರ್ ಹಾಕಿರುವ ಸಿಬಿಐ, ತನಿಖೆಯನ್ನು ಚುರುಕುಗೊಳಿಸಿತ್ತು.

ICICI-Videocon case: CBI issues look out circulars against Kochhars, Dhoot

ಚಂದಾ ಕೊಚ್ಚಾರ್ ಅಧಿಕಾರದಲ್ಲಿ ಇದ್ದ ಸಮುಯದಲ್ಲಿ ಐಸಿಐಸಿಐ ಬ್ಯಾಂಕ್ ಮೂಲಕ ಅವ್ಯವಹಾರ ನಡೆದಿದೆ ಎಂದು ಕಳೆದ ಮಾರ್ಚ್ ನಲ್ಲಿ ಮೊದಲ ಬಾರಿಗೆ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಚಂದಾ ಕೊಚ್ಚರ್, 2018 ರ ಅಕ್ಟೋಬರ್‌ನಲ್ಲಿ ಸಿಇಒ ಹುದ್ದೆಯಿಂದ ಕೆಳಗಿಳಿದಿದ್ದರು. ಬ್ಯಾಂಕ್ ನ ನಿಯಮಗಳನ್ನು ಉಲ್ಲಂಘಿಸಿ ವಿಡಿಯೋಕಾನ್ ಗ್ರೂಪ್ ಗೆ ಸುಮಾರು 3250 ಕೋಟಿ ರೂ.ಸಾಲ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ ಅವ್ಯವಹಾರದ ಹಗರಣ ಇದಾಗಿದೆ.

ವಿಡಿಯೋಕಾನ್ ನ ಮುಂಬೈ ಹಾಗೂ ಔರಂಗಾಬಾದ್ ನ ಕಚೇರಿ ಹಾಗೂ ಐಸಿಐಸಿಐನ ಮಾಜಿ ಸಿಇಒ ಚಂದಾ ಕೊಚ್ಚರ್ ಅವರ ಪತಿ ದೀಪಕ್ ಕೊಚರ್ ಅವರ ನುಪವರ್ ಕಚೇರಿ ಮೇಲೂ ದಾಳಿ ಸಿಬಿಐ ಅಧಿಕಾರಿಗಳು ದಾಳಿ ನಡೆಸಿ, ಪ್ರಕರಣ ದಾಖಲಿಸಿಕೊಂಡು, ಎಫ್ಐಆರ್ ಹಾಕಿದ್ದ ಅಧಿಕಾರಿ ಸುಧಾಂಶು ಧರ್ ಮಿಶ್ರಾ ಅವರನ್ನು ಸಿಬಿಐನ ಬ್ಯಾಂಕಿಂಗ್ ಹಾಗೂ ಸುರಕ್ಷತೆ ವಂಚನೆ ನಿಯಂತ್ರಣ ವಿಭಾಗದಿಂದ ಜಾರ್ಖಂಡ್ ನ ರಾಂಚಿಯ ಆರ್ಥಿಕ ಅಪರಾಧಗಳ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿತ್ತು.

ಇದಾದ ಬಳಿಕ ಚಂದಾ ಕೊಚ್ಚಾರ್ ಅವರನ್ನು ಬೋರ್ಡ್ ಆಫ್ ಐಸಿಐಸಿಐ ಸೇವೆಯಿಂದ ವಜಾಗೊಳಿಸಿ, ಅವರ ವೇತನ, ಬೋನಸ್, ಮೆಡಿಕಲ್ ಸೌಲಭ್ಯಗಳು ಮತ್ತು ಷೇರು ಪಾಲುದಾರಿಕೆಯನ್ನು ಹಿಂಪಡೆಯಲು ಐಸಿಐಸಿಐ ಬೋರ್ಡ್ ಮುಂದಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
The Central Bureau of Investigation has issued look out circulars (LOC) against former ICICI Bank CEO Chanda Kochhar, her husband Deepak Kochhar and Videocon managing director Venugopal Dhoot, ANI reported.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X