ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈನರ್‌ಗಳಿಗೂ ಐಸಿಐಸಿಐ ಉಳಿತಾಯ ಖಾತೆ

|
Google Oneindia Kannada News

ಬೆಂಗಳೂರು, ಸೆ. 24 : ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಿರುವ ಐಸಿಐಸಿಐ ಬ್ಯಾಂಕ್‌ 10 ವರ್ಷ ಮೇಲಿನ ಮೈನರ್‌ಗಳಿಗಾಗಿ ಉಳಿತಾಯ ಖಾತೆ ತೆರೆಯುವ ಯೋಜನೆ ಆರಂಭಿಸಿದೆ. ಇದಕ್ಕೆ 'ಸ್ಮಾರ್ಟ್‌ ಸ್ಟಾರ್‌ ' ಖಾತೆ ಎಂದು ಹೆಸರಿಡಲಾಗಿದೆ.

ಮೈನರ್‌ ಬಾಲಕ ಅಥವಾ ಬಾಲಕಿ ಹೆಸರಿನಲ್ಲಿಯೇ ಖಾತೆ ತೆರೆಯಲಾಗುವುದು. ಅಲ್ಲದೇ ಚೆಕ್‌ ಬುಕ್‌ ಮತ್ತು ಡೆಬಿಟ್‌ ಕಾರ್ಡ್‌ಗಳನ್ನು ನೀಡಲಾಗುವುದು ಎಂದು ಬ್ಯಾಂಕ್‌ ಪ್ರಕಟಣೆ ತಿಳಿಸಿದೆ. 'ಸ್ಮಾರ್ಟ್‌ ಸ್ಟಾರ್‌' ಖಾತೆ ಗ್ರಾಹಕ ಸ್ನೇಹಿಯಾಗಿ ಕೆಲಸಮಾಡಲಿದ್ದು ಮೈನರ್‌ಗಳೆ ಅವರ ಅಕೌಂಟ್‌ ವ್ಯವಹಾರ ನಿಭಾಯಿಸಬಹುದಾಗಿದೆ.(ಬ್ಯಾಂಕಿನಿಂದ ಉಚಿತ ಎಸ್ಎಂಎಸ್ ಇನ್ನಿಲ್ಲ)

icici

ಮಕ್ಕಳಲ್ಲಿ ಉಳಿತಾಯ ಮನೋಭಾವ ಬೆಳೆಸಲು ಮತ್ತು ವ್ಯವಹಾರ ಜ್ಞಾನ ಹೆಚ್ಚಿಸಲು ಇದು ನೆರವಾಗಲಿದೆ ಎಂದು ಬ್ಯಾಂಕ್ ಕಾರ್ಯನಿರ್ವಾಹಕ ನಿರ್ದೇಶಕ ರಾಜೀವ್‌ ಸಬರ್‌ವಾಲ್ ಹೇಳಿದ್ದಾರೆ.(ಇನ್ನು ಮುಂದೆ ಕ್ರೆಡಿಟ್ ಕಾರ್ಡ್ ಪಿನ್‌ ಅಂಚೆಯಲ್ಲಿ ಬರಲ್ಲ)

ಮೈನರ್‌ಗಳು ಬ್ಯಾಂಕಿಂಗ್ ವ್ಯವಹಾರದ ಎಲ್ಲಾ ಕೆಲಸಗಳನ್ನು ಸುಲಭವಾಗಿ ನಿರ್ವಹಿಸಬಹುದಾಗಿದೆ. ಚೆಕ್‌ ನೀಡಿಕೆ, ಬಿಲ್‌ ಪಾವತಿ, ಮೊಬೈಲ್‌ ರೀಚಾರ್ಜ್ ಮಾಡಿಕೊಳ್ಳಬಹುದಾಗಿದೆ. ಅಲ್ಲದೇ ಎಟಿಎಂ ಸೇವೆಗಳು ಲಭ್ಯವಿರುತ್ತದೆ ಎಂದು ಬ್ಯಾಂಕ್ ತಿಳಿಸಿದೆ.

English summary
Private sector bank ICICI Bank on Wednesday launched a savings account for minors above 10 years of age. The account, which will be opened in the name of the minor, will offer a personalised cheque book and a debit card with a picture of his or her choice, the bank said in a statement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X