ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಷೇರು ಮಾರಾಟದ ಮೂಲಕ 15,000 ಕೋಟಿ ಸಂಗ್ರಹಿಸಲಿರುವ ಐಸಿಐಸಿಐ ಬ್ಯಾಂಕ್

|
Google Oneindia Kannada News

ನವದೆಹಲಿ, ಜುಲೈ 8: ದೇಶದ ಎರಡನೇ ಅತಿದೊಡ್ಡ ಖಾಸಗಿ ಬ್ಯಾಂಕ್ ವಲಯ ಐಸಿಐಸಿಐ ಬ್ಯಾಂಕ್ ಲಿಮಿಟೆಡ್ ಕೊರೊನಾ ಸಾಂಕ್ರಾಮಿಕ ರೋಗದ ಆರ್ಥಿಕ ವಾತಾವರಣದಲ್ಲಿ ತನ್ನ ಬ್ಯಾಲೆನ್ಸ್ ಶೀಟ್ ಅನ್ನು ಬಲಪಡಿಸಲು, ಷೇರು ಮಾರಾಟದ ಮೂಲಕ 15,000 ಕೋಟಿ ರುಪಾಯಿ ಸಂಗ್ರಹಿಸಲು ಮುಂದಾಗಿದೆ.

ಬ್ಯಾಂಕ್‌ನ ಈ ಪ್ರಸ್ತಾವಿತ ನಿಧಿ ಸಂಗ್ರಹವು 13 ವರ್ಷಗಳ ನಂತರ ನಡೆಯುತ್ತಿದೆ. ಐಸಿಐಸಿಐ ಬ್ಯಾಂಕ್ ಕೊನೆಯದಾಗಿ ಜೂನ್ 2007 ರಲ್ಲಿ ಹೊಸದಾಗಿ ಷೇರುಗಳ ವಿತರಣೆಯ ಮೂಲಕ 8,750 ಕೋಟಿ ರುಪಾಯಿಗಳನ್ನು ಸಂಗ್ರಹಿಸಿತ್ತು.

Good News: ನಿಮ್ಮ ಸ್ಯಾಲರಿ ಅಕೌಂಟ್ ಐಸಿಐಸಿಐ ಬ್ಯಾಂಕ್‌ನಲ್ಲಿದ್ಯಾ?Good News: ನಿಮ್ಮ ಸ್ಯಾಲರಿ ಅಕೌಂಟ್ ಐಸಿಐಸಿಐ ಬ್ಯಾಂಕ್‌ನಲ್ಲಿದ್ಯಾ?

ಭಾನುವಾರ, ಐಸಿಐಸಿಐ ಬ್ಯಾಂಕ್ ಎಕ್ಸ್‌ಚೇಂಜ್ ಫೈಲಿಂಗ್‌ನಲ್ಲಿ ಬ್ಯಾಲೆನ್ಸ್ ಶೀಟ್ ಅನ್ನು ಇನ್ನಷ್ಟು ಬಲಪಡಿಸುವ ಬಗ್ಗೆ ಗಮನಹರಿಸಿದೆ ಎಂದು ಹೇಳಿದೆ. ಬ್ಯಾಂಕಿನ ಶ್ರೇಣಿ -1 ಬಂಡವಾಳ ಅನುಪಾತವು 2020 ರ ಹಣಕಾಸು ವರ್ಷದಲ್ಲಿ ಶೇಕಡಾ 14.72ರಷ್ಟಿದ್ದರೆ, 2019 ರ ಹಣಕಾಸು ವರ್ಷದಲ್ಲಿ ಶೇಕಡಾ 15.09% ರಷ್ಟಿತ್ತು.

ICICI Bank Share Sale:Bank To Raise Rs 15,000 Crore Via Share Sale

ಬ್ಯಾಂಕಿನ ಬಂಡವಾಳವು ಅಪಾಯ-ತೂಕದ ಆಸ್ತಿ ಅನುಪಾತಕ್ಕೆ (ಸಿಆರ್ಎಆರ್) 2019 ರ ಆರ್ಥಿಕ ವರ್ಷದಲ್ಲಿ ಶೇಕಡಾ 16.89 ರಿಂದ 2020 ಮಾರ್ಚ್ 31 ರ ವೇಳೆಗೆ ಶೇಕಡಾ 16.11ಕ್ಕೆ ಇಳಿದಿದೆ. ಈಗ, ಬ್ಯಾಂಕಿನ ಬಂಡವಾಳ ಸ್ಥಾನವು ದುರ್ಬಲಗೊಳ್ಳುವುದರೊಂದಿಗೆ, ಐಸಿಐಸಿಐ ಬ್ಯಾಂಕ್ ಹೆಚ್ಚು ಹಣವನ್ನು ಸಂಗ್ರಹಿಸುವ ಭರಾಟೆಯಲ್ಲಿದೆ ಷೇರು ಮಾರಾಟದ ಮೂಲಕ ಸಾಧ್ಯವಾದಷ್ಟು ಹಣ ಸಂಗ್ರಹಕ್ಕೆ ಮುಂದಾಗಿದೆ.

ಬ್ಯಾಂಕ್ ಈಗಾಗಲೇ ಕಳೆದ ತಿಂಗಳು ತನ್ನ ಎರಡು ವಿಮಾ ಅಂಗಸಂಸ್ಥೆಗಳಲ್ಲಿ ತನ್ನ ಹಿಡುವಳಿಗಳ ಒಂದು ಭಾಗವನ್ನು ಮಾರಾಟ ಮಾಡುವ ಮೂಲಕ 3,090 ಕೋಟಿ ರುಪಾಯಿ ಪಡೆದಿದೆ.

ಜೂನ್ 22 ರಂದು, ಐಸಿಐಸಿಐ ಬ್ಯಾಂಕ್ ತನ್ನ ಜೀವ ವಿಮಾ ವಿಭಾಗದ ಐಸಿಐಸಿಐ ಪ್ರುಡೆನ್ಶಿಯಲ್ ಲೈಫ್ ಇನ್ಶುರೆನ್ಸ್‌ ಕಂ ಲಿಮಿಟೆಡ್‌ನಲ್ಲಿ ಶೇಕಡಾ 1.5ರಷ್ಟು ಪಾಲನ್ನು 840 ಕೋಟಿಗಳಿಗೆ ಮಾರಾಟ ಮಾಡಿತು. ಇದಕ್ಕೂ ಮೊದಲು ಐಸಿಐಸಿಐ ಲೊಂಬಾರ್ಡ್ ಜನರಲ್ ಇನ್ಷುರೆನ್ಸ್ ಕೊ. ಲಿಮಿಟೆಡ್‌ನ ಶೇಕಡಾ 3.96ರಷ್ಟು ಷೇರುಗಳನ್ನು 2,250 ಕೋಟಿ ರುಪಾಯಿಗೆ ಮಾರಾಟ ಮಾಡಿತು.

English summary
Country’s second largest private lender ICICI Bank Ltd on Wednesday said that it will raise up to Rs. 15,000 crore via share sale
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X