ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್ಬಿಐ, ಎಚ್‌ಡಿಎಫ್‌ಸಿ ನಂತರ ಐಸಿಐಸಿಐ ಬಡ್ಡಿದರ ಇಳಿಕೆ

|
Google Oneindia Kannada News

ಬೆಂಗಳೂರು, ಮಾರ್ಚ್ 5: ಸರ್ಕಾರಿ ಸ್ಯಾಮ್ಯದ ಅತಿದೊಡ್ಡ ಬ್ಯಾಂಕ್ ಹಾಗೂ ಮನೆ ಕಟ್ಟಲು ಸಾಲ, ಆರ್ಥಿಕ ನೆರವು ನೀಡುವ ಅತಿದೊಡ್ಡ ಬ್ಯಾಂಕಿಂಗ್ ಸಂಸ್ಥೆ ಸ್ಟೇಟ್‌ಬ್ಯಾಂಕ್ ಆಫ್ ಇಂಡಿಯಾ, ಖಾಸಗಿ ವಲಯ ಪ್ರಮುಖ ಬ್ಯಾಂಕ್ ಎಚ್‌ಡಿಎಫ್‌ಸಿ ನಂತರ ಐಸಿಐಸಿಐ ಕೂಡಾ ಗೃಹಸಾಲದ ಮೇಲಿನ ಬಡ್ಡಿದರ ಇಳಿಕೆ ಮಾಡಿದೆ. ಹೊಸ ದರವು ಮಾರ್ಚ್ 5ರಿಂದಲೇ ಜಾರಿಗೆ ಬರಲಿದ್ದು, ಮಾರ್ಚ್ 31ರ ತನಕ ಜಾರಿಯಲ್ಲಿರಲಿದೆ.

ಸಾಲದ ಮೊತ್ತ ಹಾಗೂ ಸಿಬಿಲ್ ಸ್ಕೋರ್ ಮೇಲೆ ಬಡ್ಡಿದರವು ಅವಲಂಬಿತವಾಗಿರುತ್ತದೆ. ಉತ್ತಮ ರಿಪೇಮೆಂಟ್ ಇತಿಹಾಸ ಹೊಂದಲು ಗ್ರಾಹಕರಿಗೆ ಉತ್ತಮ ದರದಲ್ಲಿ ಸೌಲಭ್ಯ ನೀಡುವುದು ಉದ್ದೇಶ ಎಂದು ಸಂಸ್ಥೆ ಹೇಳಿದೆ. 75 ಲಕ್ಷ ರು ತನಕದ ಸಾಲಕ್ಕೆ ಶೇ 6.70 ರಿಂದ ಬಡ್ಡಿದರ ಹಾಗೂ 75 ಲಕ್ಷ ರು ಗೂ ಅಧಿಕ ಮೊತ್ತಕ್ಕೆ ಶೇ 6.75 ರಂತೆ ಬಡ್ಡಿದರ ವಿಧಿಸಲಾಗುತ್ತಿದೆ.

ಎಚ್‌ಡಿಎಫ್‌ಸಿ ಗೃಹಸಾಲದ ಮೇಲಿನ ಬಡ್ಡಿದರ ಇಳಿಕೆ ಎಚ್‌ಡಿಎಫ್‌ಸಿ ಗೃಹಸಾಲದ ಮೇಲಿನ ಬಡ್ಡಿದರ ಇಳಿಕೆ

ಗೃಹಸಾಲ ಮಾರುಕಟ್ಟೆಯಲ್ಲಿ ಎಸ್ಬಿಐ ಶೇ 34 ರಷ್ಟು ಹಾಗ ವಾಹನ ಸಾಲ ವಿಭಾಗದಲ್ಲಿ ಶೇ 33 ರಷ್ಟು ಪಾಲು ಹೊಂದಿದೆ.

ICICI Bank reduces home loan interest rate to 6.70%

ಖಾತೆ ಹೊಂದಿಲ್ಲದಿದ್ದರೂ ಸಾಲ ಪಡೆಯಿರಿ
ಐಸಿಐಸಿಐ ಬ್ಯಾಂಕ್ ಗ್ರಾಹಕರಲ್ಲದಿದ್ದರೂ ಗೃಹಸಾಲ ಬಯಸುವವರಿಗೆ ಸುಲಭವಾಗಿ ಆನ್ ಲೈನ್ ಮೂಲಕವೇ ಸಾಲ ಪಡೆಯುವ ಸೌಲಭ್ಯವನ್ನು ಒದಗಿಸಲಾಗಿದೆ. ಮನೆ ಕಟ್ಟುವುದು ಅನೇಕರಿಗೆ ಜೀವಮಾನದ ಕನಸಾಗಿರುತ್ತದೆ. ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ವ್ಯವಸ್ಥೆ ರೂಪಿಸಲಾಗಿದೆ ಎಂದು ಐಸಿಐಸಿಐ ಬ್ಯಾಂಕಿನ ಉನ್ನತ ಅಧಿಕಾರಿ ರವಿ ನಾರಯಣನ್ ಹೇಳೀದ್ದಾರೆ.

ನವೆಂಬರ್ 2020ರಲ್ಲಿ ಸಾಲ, ಭೋಗ್ಯ ನೀಡುವ ಕ್ಷೇತ್ರದಲ್ಲಿ 2 ಟ್ರಿಲಿಯನ್ ವಹಿವಾಟು ನಡೆಸಿದ ಮೊದಲ ಖಾಸಗಿ ವಲಯ ಬ್ಯಾಂಕ್ ಎನಿಸಿಕೊಂಡಿದೆ. ಡಿಸೆಂಬರ್ 31, 2020ರಂತೆ 15,19,353 ಕೋಟಿ ರು ಮೌಲ್ಯ ಹೊಂದಿರುವ ಐಸಿಐಸಿಐ ಸಂಸ್ಥೆಯು ಭಾರತ ಸೇರಿದಂತೆ 15 ದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ.

English summary
ICICI Bank reduces home loan interest rate to 6.70%. Customers can avail of this rate for loans up to Rs 75 lakh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X