ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಸಿಐಸಿಐ ಬ್ಯಾಂಕಲ್ಲಿ ಹೆಚ್ಚು ವಂಚನೆ : ಆರ್ ಬಿ ಐ

ಬ್ಯಾಂಕ್ ಗಳಲ್ಲಿ ನಡೆದ ವಂಚನೆಯ ಪಟ್ಟಿಯಲ್ಲಿ ಐಸಿಐಸಿಐ ಮೊದಲ ಸ್ಥಾನದಲ್ಲಿದೆ.ಕಳೆದ ಏಪ್ರಿಲ್- ಡಿಸೆಂಬರ್ 9 ತಿಂಗಳ ಅವಧಿಯಲ್ಲಿ ವಿವಿಧ ಬ್ಯಾಂಕ್‍ಗಳಲ್ಲಿ ನಡೆದಿರುವ ವಂಚನೆಗಳ ಆಧಾರದ ಮೇಲೆ ಈ ಪಟ್ಟಿ ಸಿದ್ಧಪಡಿಸಲಾಗಿದೆ.

By Mahesh
|
Google Oneindia Kannada News

ನವದೆಹಲಿ, ಮಾರ್ಚ್ 13: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 500 ಹಾಗೂ 1000 ರೂಪಾಯಿ ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿ, ಅಪನಗದೀಕರಣ ಯೋಜನೆ ಜಾರಿಗೊಳಿಸಿದ ಬಳಿಕ ದೇಶದ ವಿವಿಧ ಬ್ಯಾಂಕ್ ಗಳಲ್ಲಿ ಎಷ್ಟೆಷ್ಟು ವಂಚನೆ ನಡೆದಿದೆ ಎಂಬುದರ ಪಟ್ಟಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ಪ್ರಕಟಿಸಿದೆ.

ಬ್ಯಾಂಕ್ ಗಳಲ್ಲಿ ನಡೆದ ವಂಚನೆಯ ಪಟ್ಟಿಯಲ್ಲಿ ಐಸಿಐಸಿಐ ಮೊದಲ ಸ್ಥಾನದಲ್ಲಿದೆ.ಕಳೆದ ಏಪ್ರಿಲ್- ಡಿಸೆಂಬರ್ 9 ತಿಂಗಳ ಅವಧಿಯಲ್ಲಿ ವಿವಿಧ ಬ್ಯಾಂಕ್‍ಗಳಲ್ಲಿ ನಡೆದಿರುವ ವಂಚನೆಗಳ ಆಧಾರದ ಮೇಲೆ ಈ ಪಟ್ಟಿ ಸಿದ್ಧಪಡಿಸಲಾಗಿದೆ.

ICICI Bank records most frauds: RBI

ಐಸಿಐಸಿಐ ಬ್ಯಾಂಕ್‍ನಲ್ಲಿ 455 ವಂಚನೆ ಪ್ರಕರಣಗಳು ನಡೆದಿದ್ದರೆ, ಎಸ್‍ಬಿಐ (429), ಸ್ಟ್ಯಾಂಡರ್ಡ್ ಚಾರ್ಟೆಡ್ (244) ಹಾಗೂ ಎಚ್‍ಡಿಎಫ್‍ಸಿ (237) , ಆ್ಯಕ್ಸಿಸ್ ಬ್ಯಾಂಕ್ (189), ಬ್ಯಾಂಕ್ ಆಫ್ ಬರೋಡಾ (176) ಹಾಗೂ ಸಿಟಿ ಬ್ಯಾಂಕ್ (150) ವಂಚನೆ ಪಟ್ಟಿಯ ನಂತರದ ಸ್ಥಾನಗಳಲ್ಲಿದೆ.

ವಂಚನೆ ಪ್ರಕರಣದಲ್ಲಿ 2ನೇ ಸ್ಥಾನದಲ್ಲಿರುವ ಎಸ್‍ಬಿಐ ಬ್ಯಾಂಕ್ ಹಣದ ವಂಚನೆ ಪ್ರಕರಣದಲ್ಲಿ ಮೊದಲ ಸ್ಥಾನದಲ್ಲಿದೆ. ಈ ಬ್ಯಾಂಕ್ ಇದುವರೆಗೂ 2,236.81 ಕೋಟಿ ಗಳಿಗೂ ಹೆಚ್ಚು ವಂಚಿಸಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ (2,250.34 ಕೋಟಿ), ಆ್ಯಕ್ಸಿಸ್ (1,998.49 ಕೋಟಿ) ನಂತರದ ಸ್ಥಾನದಲ್ಲಿವೆ.

ಏಪ್ರಿಲ್- ಡಿಸೆಂಬರ್ ಒಳಗಾಗಿ ಈ ವಂಚನೆ ಪ್ರಕರಣಗಳಲ್ಲಿ ಸರ್ಕಾರಿ ಹಾಗೂ ಖಾಸಗಿ ಬ್ಯಾಂಕ್‍ಗಳು ಸೇರಿದಂತೆ ಒಟ್ಟು 450 ಸಿಬ್ಬಂದಿಗಳು ಶಾಮೀಲಾಗಿದ್ದು, ಇವುಗಳಲ್ಲಿ 3,870 ಕೇಸ್‍ಗಳಲ್ಲಿ 17,750.27 ಕೋಟಿ ರೂ.ಗಳನ್ನು ವಂಚಿಸಿದ್ದಾರೆ ಎಂದು ಆರ್‍ಬಿಐ ಹೇಳಿದೆ (ಐಎಎನ್ಎಸ್)

English summary
Private sector ICICI Bank suffered the most number of frauds during the first nine months of the current fiscal, while state-run State Bank of India took the second place in this regard, the Reserve Bank of India (RBI) has revealed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X