ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಸಿಐಸಿಐ ನಿವ್ವಳ ಲಾಭದಲ್ಲಿ ಕುಸಿತ, ಷೇರುಗಳು ಮೇಲಕ್ಕೆ

By Mahesh
|
Google Oneindia Kannada News

ಬೆಂಗಳೂರು, ಮೇ 08: ಮಾರ್ಚ್ 31ಕ್ಕೆ ಕೊನೆಗೊಂಡ ನಾಲ್ಕನೇ ತ್ರೈಮಾಸಿಕ ವರದಿಯಲ್ಲಿ ಐಸಿಐಸಿಐ ಬ್ಯಾಂಕ್ ಸರಿ ಸುಮಾರು ಶೇ 45ರಷ್ಟು ನಿವ್ವಳ ಲಾಭದಲ್ಲಿ ಕುಸಿತ ಕಂಡಿದೆ. ಆದರೆ, 1,142 ಕೋಟಿ ರು ನಂತೆ ಲಾಭ ಗಳಿಸಿರುವ ಸಂಸ್ಥೆಯ ಷೇರುಗಳು ಮಂಗಳವಾರದಂದು ಶೇ 6.74ರಷ್ಟು ಏರಿಕೆ ಕಾಣುತ್ತಿದೆ.

ಬಿಎಸ್ಇನಲ್ಲಿ ಮಂಗಳವಾರ ಬೆಳಗ್ಗೆ 308.60ರು ನಂತೆ 19.20 ರು ಗಳಿಕೆ ಹೆಚ್ಚಿಸಿಕೊಂಡಿದೆ. ಎನ್ಎಸ್ ಇನಲ್ಲಿ 308.70 ರು ನಂತೆ ಶೇ 6.52ರಷ್ಟು ಏರಿಕೆ ಕಂಡು 18.90ರು ನಂತೆ ಏರಿಕೆ ಕಂಡಿದೆ.

ಐಸಿಐಸಿಐ ಹಗರಣ: ಚಂದಾ ಕೊಚ್ಚಾರ್ ಅಳಿಯ ಸಿಬಿಐ ವಶಕ್ಕೆಐಸಿಐಸಿಐ ಹಗರಣ: ಚಂದಾ ಕೊಚ್ಚಾರ್ ಅಳಿಯ ಸಿಬಿಐ ವಶಕ್ಕೆ

2016-17ರ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ 2,083 ರು ನಿವ್ವಳ ಲಾಭ ಗಳಿಸಿದ್ದ ಐಸಿಐಸಿಐ ಸಂಸ್ಥೆ, ಈ ಬಾರಿ ಕೇವಲ 1,142 ರು ಮಾತ್ರ ಗಳಿಸಿದೆ. ಇದಲ್ಲದೆ ತ್ರೈಮಾಸಿಕ ಲಾಭ ಕೂಡಾ ಶೇ 50ರಷ್ಟು ಕುಸಿದಿದ್ದು, 1,020 ಕೋಟಿ ರು ಮಾತ್ರ ಬಂದಿದೆ. ಕಳೆದ ವರ್ಷ ಇದೇ ಅವಧಿಗೆ 2,025 ಕೋಟಿ ರು ಗಳಿಕೆಯಾಗಿತ್ತು.

ICICI Bank Q4 profit plunges 45% to Rs 1,142 cr

ಐಸಿಐಸಿಐ ಬ್ಯಾಂಕಿನ ಮೇಲೆ ಸರಣಿ ಆರೋಪಗಳು, ತನಿಖೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ರೀತಿ ಫಲಿತಾಂಶ ನಿರೀಕ್ಷೆಯಿತ್ತು. ಸಿಇಒ ಚಂದಾ ಕೊಚ್ಚರ್ ಅವರು ಸ್ವಜನಪಕ್ಷಪಾತ ಮಾಡಿ, ಸಾಲ ಮಂಜೂರು ಮಾಡಿರುವ ಆರೋಪವನ್ನು ಎದುರಿಸುತ್ತಿದ್ದಾರೆ.

English summary
ICICI Bank today reported 45 per cent decline in consolidated net profit to Rs 1,142 crore for the fourth quarter ended March 31, 2017-18.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X