ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ICICI ಬ್ಯಾಂಕ್‌ನಿಂದ ಹೊಸ ಆ್ಯಪ್: ಎಲ್ಲಾ ಬ್ಯಾಂಕ್ ಗ್ರಾಹಕರಿಗೆ ಪಾವತಿ ಸೇವೆ

|
Google Oneindia Kannada News

ನವದೆಹಲಿ, ಡಿಸೆಂಬರ್ 07: ಅತಿದೊಡ್ಡ ಖಾಸಗಿ ಬ್ಯಾಂಕುಗಳಲ್ಲಿ ಒಂದಾದ ಐಸಿಐಸಿಐ ಬ್ಯಾಂಕ್ ತನ್ನ ಅತ್ಯಾಧುನಿಕ ಮೊಬೈಲ್ ಅಪ್ಲಿಕೇಶನ್ 'ಐ ಮೊಬೈಲ್ ಪೇ' ಅನ್ನು ಬಿಡುಗಡೆ ಮಾಡಿದ್ದು, ಯಾವುದೇ ಬ್ಯಾಂಕಿನ ಗ್ರಾಹಕರು ಹಣ ಪಾವತಿ ಮತ್ತು ಇತರೆ ಬ್ಯಾಂಕಿಂಗ್ ಸೇವೆಗಳನ್ನು ಒಂದೆಡೆ ಒದಗಿಸುವ ಅಪ್ಲಿಕೇಶನ್ ಇದಾಗಿದೆ.

'ಐಮೊಬೈಲ್ ಪೇ' ಎಂದು ಕರೆಯಲ್ಪಡುವ ಈ ಆ್ಯಪ್ ವಿಶೇಷ ಕಾರ್ಯರೂಪವನ್ನು ಹೊಂದಿದೆ. ಯಾವುದೇ ಬ್ಯಾಂಕಿನ ಗ್ರಾಹಕರು ಯುಪಿಐ ಐಡಿ ಅಥವಾ ವ್ಯಾಪಾರಿಗಳ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿ ಬಿಲ್ ಪಾವತಿಸುವುದು, ಆನ್‌ಲೈನ್ ರೀಚಾರ್ಜ್, ಹಣ ಪಾವತಿ ಮಾಡಬಹುದು.

ಗಡಿ ಉದ್ವಿಗ್ನತೆ: ಭಾರತದ ಪೇಟಿಎಂ ಪಾಲನ್ನು ಮಾರಾಟ ಮಾಡಲು ಯೋಜಿಸುತ್ತಿದೆ ಚೀನಾ ಕಂಪನಿ?ಗಡಿ ಉದ್ವಿಗ್ನತೆ: ಭಾರತದ ಪೇಟಿಎಂ ಪಾಲನ್ನು ಮಾರಾಟ ಮಾಡಲು ಯೋಜಿಸುತ್ತಿದೆ ಚೀನಾ ಕಂಪನಿ?

ಇದರ ಜೊತೆಗೆ ತ್ವರಿತವಾಗಿ ಇತರರೊಂದಿಗೆ ಬ್ಯಾಂಕಿಂಗ್ ಸೇವೆಗಳಾದ ಉಳಿತಾಯ ಖಾತೆ, ಹೂಡಿಕೆಗಳು, ಸಾಲಗಳು, ಕ್ರೆಡಿಟ್ ಕಾರ್ಡ್‌ಗಳು, ಗಿಫ್ಟ್‌ ಕಾರ್ಡ್‌ಗಳು, ಟ್ರಾವೆಲ್ ಕಾರ್ಡ್‌ಗಳು ಮತ್ತು ಇನ್ನಷ್ಟು ಸೇವೆ ಹೊಂದಿದೆ. 'ಐಮೊಬೈಲ್ ಪೇ' ಬಳಕೆದಾರರು ಯಾವುದೇ ಬ್ಯಾಂಕ್ ಖಾತೆ, ಪಾವತಿ ಅಪ್ಲಿಕೇಶನ್ ಮತ್ತು ಡಿಜಿಟಲ್ ವ್ಯಾಲೆಟ್‌ಗೆ ಹಣವನ್ನು ವರ್ಗಾಯಿಸಬಹುದು.

ಸಿಸ್ಟಂ ಸ್ಥಗಿತದಿಂದ YONO ಆ್ಯಪ್‌ನಲ್ಲಿ ತಾಂತ್ರಿಕ ಸಮಸ್ಯೆ ಆಗಿದೆ: ಎಸ್‌ಬಿಐಸಿಸ್ಟಂ ಸ್ಥಗಿತದಿಂದ YONO ಆ್ಯಪ್‌ನಲ್ಲಿ ತಾಂತ್ರಿಕ ಸಮಸ್ಯೆ ಆಗಿದೆ: ಎಸ್‌ಬಿಐ

ಈ ಆ್ಪ್ ಇನ್ನೊಂದು ವಿಶೇಷವೆಂದರೆ ನಿಮ್ಮ ಕಾಂಟಾಕ್ಟ್‌ನಲ್ಲಿರುವ ಯುಪಿಐ ಐಡಿಗಳನ್ನು ಸ್ವಯಂಚಾಲಿತವಾಗಿ ಐಸಿಐಸಿಐ ಬ್ಯಾಂಕ್ ಯುಪಿಐ ಐಡಿ ನೆಟ್‌ವರ್ಕ್‌ನಲ್ಲಿ ನೋಂದಾಯಿಸಲಾಗಿದೆ. ಯಾವುದೇ ಪಾವತಿ ಅಪ್ಲಿಕೇಶನ್ ಮತ್ತು ಡಿಜಿಟಲ್ ವ್ಯಾಲೆಟ್ ಅನ್ನು ಸ್ವಯಂಚಾಲಿತವಾಗಿ ನೋಡಲು ಅನುವು ಮಾಡಿಕೊಡುತ್ತದೆ.

ಐ ಮೊಬೈಲ್ ಪೇ ಬಳಕೆ ಮಾಡಲು ಏನು ಮಾಡಬೇಕು?

ಐ ಮೊಬೈಲ್ ಪೇ ಬಳಕೆ ಮಾಡಲು ಏನು ಮಾಡಬೇಕು?

'ಐಮೊಬೈಲ್ ಪೇ' ನಲ್ಲಿ ಹಣ ಪಾವತಿ ಪ್ರಾರಂಭಿಸಲು ದೇಶದ ಯಾವುದೇ ಬ್ಯಾಂಕಿನ ಗ್ರಾಹಕರು ಅಪ್ಲಿಕೇಶನ್ ಡೌನ್‌ಲೋಡ್ ಮಾಡಬಹುದು. ಈ ಮೂಲಕ ತಕ್ಷಣ ತಮ್ಮ ಬ್ಯಾಂಕ್ ಖಾತೆಗಳನ್ನು ಲಿಂಕ್ ಮಾಡಲು ಮತ್ತು ಎಲ್ಲಾ ಸೌಲಭ್ಯಗಳನ್ನು ಪಡೆಯಲು ಯುಪಿಐ ಐಡಿ ಅನ್ನು ರಚಿಸಬಹುದು.

ಯಾವುದೇ ಶುಲ್ಕ ಅನ್ವಯಿಸುವುದಿಲ್ಲ

ಯಾವುದೇ ಶುಲ್ಕ ಅನ್ವಯಿಸುವುದಿಲ್ಲ

ಈ ಆ್ಯಪ್ ಗ್ರಾಹಕರಿಗೆ ಐಸಿಐಸಿಐ ಬ್ಯಾಂಕ್‌ನೊಂದಿಗೆ ಹೊಸ ಸಂಬಂಧವನ್ನು ಪ್ರಾರಂಭಿಸಲು ಸೇತುವೆ ಆಗಿ ಕಾರ್ಯನಿರ್ವಹಿಸುತ್ತದೆ. ಐಸಿಐಸಿಐ ಬ್ಯಾಂಕ್ ಉಳಿತಾಯ ಖಾತೆಯನ್ನು ಡಿಜಿಟಲ್ ಮತ್ತು ತ್ವರಿತವಾಗಿ ತೆರೆಯಲು ಯಾವುದೇ ಶುಲ್ಕವಿಲ್ಲ. ಶೂನ್ಯ ಸೇರ್ಪಡೆ ಶುಲ್ಕದಲ್ಲಿ ಕ್ರೆಡಿಟ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಮತ್ತು ಮನೆ / ವೈಯಕ್ತಿಕ / ಕಾರು ಸಾಲಗಳಿಗೆ ತ್ವರಿತ ಅನುಮೋದನೆ ಪಡೆಯಲು ಇದು ಅವರಿಗೆ ಅವಕಾಶ ನೀಡುತ್ತದೆ.

ಐ ಮೊಬೈಲ್ ಪೇ ಆ್ಯಪ್ ಬಳಕೆ ಹೇಗೆ?

ಐ ಮೊಬೈಲ್ ಪೇ ಆ್ಯಪ್ ಬಳಕೆ ಹೇಗೆ?

1) ಗೂಗಲ್ ಪ್ಲೇ ಸ್ಟೋರ್‌ನಿಂದ 'ಐಮೊಬೈಲ್ ಪೇ' ಎಂಬ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ. ನಂತರ ಆ್ಯಪ್ ಓಪನ್ ಮಾಡಿ ನಾಲ್ಕು ಅಂಕಿಯ ಲಾಗ್ ಇನ್ ಪಿನ್ ನಮೂದಿಸಿ. ಬಳಕೆದಾರರು ತಮ್ಮ ಫಿಂಗರ್‌ಪ್ರಿಂಟ್ ಬಳಸಿ ಲಾಗಿನ್ ಮಾಡುವ ಆಯ್ಕೆಯನ್ನು ಸಹ ಹೊಂದಿದ್ದಾರೆ.

2) ಖಾತೆಗಳನ್ನು ಲಿಂಕ್ ಮಾಡಿ: ನೀವು ಎಷ್ಟು ಬ್ಯಾಂಕ್ ಖಾತೆಗಳನ್ನು ಸಹ ಲಿಂಕ್ ಮಾಡಬಹುದು. ಇದಕ್ಕಾಗಿ ನೀವು ವೆಲ್‌ಕಂ ಸ್ಕ್ರೀನ್‌ನಲ್ಲಿ 'ಲಿಂಕ್ ಖಾತೆ' ಟ್ಯಾಪ್ ಮಾಡಿ ಮತ್ತು ಯಾವುದೇ ಬ್ಯಾಂಕಿನ ಉಳಿತಾಯ ಖಾತೆಯನ್ನು ಲಿಂಕ್ ಮಾಡಲು ಅಗತ್ಯ ವಿವರಗಳನ್ನು ನಮೂದಿಸಿ.

3) ಯುಪಿಐ ಐಡಿ ರಚಿಸಿ: ಖಾತೆಗಳನ್ನು ಯಶಸ್ವಿಯಾಗಿ ಲಿಂಕ್ ಮಾಡಿದ ನಂತರ, ಯುಪಿಐ ಐಡಿ ರಚನೆಯಾಗುತ್ತದೆ. ಇದರಿಂದ ನೀವು ವ್ಯವಹಾರಗಳನ್ನು ಪ್ರಾರಂಭಿಸಲು ಬಳಸಬಹುದು. ರಚಿಸಲಾದ ಯುಪಿಐ ಐಡಿ ಎಲ್ಲಾ ಲಿಂಕ್ ಮಾಡಿದ ಬ್ಯಾಂಕ್ ಖಾತೆಗಳಿಗೆ ಒಂದೇ ಆಗಿರುತ್ತದೆ.

ಮುಂದಿನ ದಿನಗಳಲ್ಲಿ ಹೊಸ ಹೊಸ ಸೇವೆಗಳು

ಮುಂದಿನ ದಿನಗಳಲ್ಲಿ ಹೊಸ ಹೊಸ ಸೇವೆಗಳು

ಐಮೊಬೈಲ್ ಪೇ ಆ್ಯಪ್‌ನಲ್ಲಿ ಮುಂಬರುವ ದಿನಗಳಲ್ಲಿ ಅತ್ಯಾಕರ್ಷಕ ಸೇವೆಗಳನ್ನು ಪಡೆಯಬಹುದು. ಬಳಕೆದಾರರು ಯುಟಿಲಿಟಿ ಬಿಲ್‌ಗಳನ್ನು ಪಾವತಿಸಬಹುದು, ಮೊಬೈಲ್ ಫೋನ್‌ಗಳನ್ನು ರೀಚಾರ್ಜ್ ಮಾಡಬಹುದು, ಸಿಬಿಲ್ ಸ್ಕೋರ್ ಪರಿಶೀಲಿಸಬಹುದು, ಪ್ರಯಾಣ ಟಿಕೆಟ್‌ಗಳನ್ನು ಕಾಯ್ದಿರಿಸಬಹುದು.

ಇದರ ಜೊತೆಗೆ ಎಫ್‌ಡಿ, ಆರ್‌ಡಿ, ಮ್ಯೂಚುವಲ್ ಫಂಡ್‌ಗಳು ಮತ್ತು ವಿಮೆಗಳಲ್ಲಿ ಹೂಡಿಕೆ ಮಾಡಬಹುದು. ಜೊತೆಗೆ ನಿಮ್ಮ ಖರ್ಚುಗಳ ಒಟ್ಟಾರೆ ಲೆಕ್ಕಾಚಾರವನ್ನು ಒದಗಿಸಲು ಸಹಾಯ ಮಾಡುತ್ತದೆ.

English summary
ICICI Bank today announced that it has transformed its state-of-the-art mobile banking app, iMobile, into an app that offers payments and banking services to customers of any bank.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X