ವಿಡಿಯೋಕಾನ್ ನ 75 ಕೋಟಿ ವಹಿವಾಟಿಗೆ 650 ಕೋಟಿ ಸಾಲ ಕೊಟ್ಟ ಐಸಿಐಸಿಐ

Posted By: Nayana
Subscribe to Oneindia Kannada

ನವದೆಹಲಿ, ಏಪ್ರಿಲ್ 04: ವಿಡಿಯೋಕಾನ್ ಬ್ಯಾಂಕ್ ಸಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ದೀಪಕ್ ಕೋಚಾರ್ ಗೆ ನೋಟಿಸ್ ಜಾರಿಗೊಳಿಸಿದೆ.

ದೀಪಕ್ ಕೋಚಾರ್, ಐಸಿಐಸಿಐ ಬ್ಯಾಂಕ್ ಎಂಡಿ ಹಾಗೂ ಸಿಇಒ ಚಂದಾ ಕೋಚಾರ್ ಪತಿಯಾಗಿದ್ದು, ಐಟಿ ಕಾಯ್ದೆ ಸೆಕ್ಷನ್ 131 ರ ಅಡಿಯಲ್ಲಿ ನೋಟಿಸ್ ಕಳಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು

ದೀಪಕ್ ಕೋಚಾರ್ ಗೆ ವೈಯಕ್ತಿಕ ಫೈನಾನ್ಸ್ ವಿವರ, ಆದಾಯ ತೆರಿಗೆ ವಿವರಗಳನ್ನು ಸಲ್ಲಿಸುವಂತೆ ಸೂಚಿಸಲಾಗಿದ್ದು, ಸಂಸ್ಥೆಯ ಆರ್ಥಿಕ ವಿವರಗಳನ್ನೂ ಸಲ್ಲಿಸಲು ಸೂಚನೆ ನೀಡಲಾಗಿದೆ. ಸಂಸ್ಥೆಯೊಂದಿಗೆ ಗುರುತಿಸಿಕೊಂಡಿರುವ ಇನ್ನೂ ಅನೇಕರಿಗೆ ನೊಟೀಸ್ ಜಾರಿಗೊಳಿಸಲಾಗಿದೆ ಎಂದು ಐಟಿ ಇಲಾಖೆ ತಿಳಿಸಿದೆ.

ICICI Bank gave Rs.650cr loan to Dhoots company that had aturnover of just Rs.75 cr

ವೀಡಿಯೋಕಾನ್ ಅಲ್ಲಿರುವ ಐದು ಕಂಪನಿಗಳ ಪೈಕಿ ಒಂದು ಕಂಪನಿ , ಇವಾನ್ಸ್ ಫ್ರೇಸರ್ ಅಂಡ್ ಕಂಪನಿ ಇಂಡಿಯಾ ಲಿಮಿಟೆಡ್ 2012ರಲ್ಲಿ ಐಸಿಐಸಿಐ ಬ್ಯಾಂಕ್‌ನಿಂದ 650 ಕೋಟಿ ಸಾಲ ಪಡೆದಿದೆ. 2011ರಲ್ಲಿ ಕಂಪನಿಯ ವಹಿವಾಟು ಕೇವಲ 75 ಕೋಟಿ ಮಾತ್ರ ಹಾಗಿರುವಾಗ ತನ್ನ ವಹಿವಾಟಿಗಿಂತ ಹತ್ತು ಪಟ್ಟು ಹೆಚ್ಚಿನ ಸಾಲವನ್ನು ವಿಡಿಯೋಕಾನ್ ಪಡೆದಿದೆ.

ಐಸಿಐಸಿಐ ಬ್ಯಾಂಕ್ ಸಾಲ ನೀಡುವಾಗ ದಾಖಲೆಗಳನ್ನು ಪರಿಶೀಲಿಸಿಲ್ಲವೇ ಎನ್ನುವ ಪ್ರಶ್ನೆ ಉದ್ಭವವಾಗಿದೆ. ಒಂದೊಮ್ಮೆ ಸರಿಯಾಗಿ ದಾಖಲೆಗಳನ್ನು ಪರಿಶೀಲಿಸಿದ್ದರೆ ಆದಾಯ, ವಹಿವಾಟಿಗಿಂತ ಒಂಭತ್ತು ಪಟ್ಟು ಸಾಲ ಅಂದರೆ ಹಿಂದಿರುಗಿ ನೀಡಲು ಸಾಧ್ಯವೇ ಇಲ್ಲದ ಮೊತ್ತದ ಸಾಲವನ್ನು ಬ್ಯಾಂಕ್ ನೀಡಲು ಸಾಧ್ಯವಾಗುತ್ತಿರಲಿಲ್ಲ.

ಆರ್.ಬಿ.ಐ ನಿಯಮ ಉಲ್ಲಂಘಿಸಿದ ಐಸಿಐಸಿಐ ಬ್ಯಾಂಕಿಗೆ ಭಾರೀ ದಂಡ

ಸಿಬಿಐ ಇದೀಗ ವಿಡಿಯೋಕಾನ್ ಕಂಪನಿ ಹಾಗೂ ಐಸಿಐಸಿಐ ಬ್ಯಾಂಕ್ ನಡುವಿನ ಒಪ್ಪಂದವನ್ನು ಪರಿಶೀಲಿಸುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಕ್ಕ ದಾಖಲಾತಿ ಪ್ರಕಾರ ಸಾಲಕ್ಕೆ ಮೇಲಧಿಕಾರಿಗಳಿಂದ ಒಪ್ಪಿಗೆ ಸಿಕ್ಕಿತ್ತು ಎಂಬ ವಿಷ್ಯ ಗೊತ್ತಾಗಿದೆ. ಚಂದಾ ಕೊಚ್ಚಾರ್ ಕುಟುಂಬ ಹಾಗೂ ವಿಡಿಯೋಕಾನ್ ಗ್ರೂಪ್ ಚೇರ್ಮೆನ್ ವೇಣುಗೋಪಾಲ್ ಧೂತ್ ಮಧ್ಯೆ ಸ್ವೀಟ್ ಡೀಲ್ ನಡೆದಿದೆ ಎನ್ನಲಾಗಿದೆ. ಚಂದಾ ಕೊಚ್ಚಾರ್ ಪತಿ ದೀಪಕ್ ವಿರುದ್ಧ ಸಿಬಿಐ ಈಗಾಗಲೇ ದೂರ ದಾಖಲಿಸಿಕೊಂಡು ಪ್ರಾಥಮಿಕ ತನಿಖೆ ಶುರು ಮಾಡಿದೆ.

ICICI Bank gave Rs.650cr loan to Dhoots company that had aturnover of just Rs.75 cr

2008 ಡಿಸೆಂಬರ್: ವಿಡಿಯೋಕಾನ್ ಗ್ರೂಪ್​ನ ವೇಣು ಗೋಪಾಲ್ ಧೂತ್ ಮತ್ತು ದೀಪಕ್ ಕೊಚ್ಚಾರ್ ಸೇರಿ ಎನ್​ಯುು ಪವರ್ ರಿನೀವೆಬಲ್ಸ್ ಪ್ರೈ.ಲಿ..(ಎನ್​ಆರ್​ಪಿಎಲ್) ಸ್ಥಾಪಿಸುತ್ತಾರೆ. ಇದರಲ್ಲಿ ಶೇಕಡ 50 ಪಾಲುದಾರಿಕೆ ಧೂತ್ ಮತ್ತು ಕುಟುಂಬಸ್ಥರದ್ದು. ಇನ್ನುಳಿದ ಶೇಕಡ 50 ಪಾಲು ದೀಪಕ್ ಕೊಚ್ಚಾರ್ ಮತ್ತು ಅವರ ತಂದೆ, ಚಂದಾ ಕೊಚ್ಚಾರ್ ಸಹೋದರನ ಪತ್ನಿಯ ಮಾಲೀಕತ್ವದ ಪೆಸಿಫಿಕ್ ಕ್ಯಾಪಿಟಲ್​ನದ್ದು.

2009 ಜನವರಿ: ಎನ್​ಆರ್​ಪಿಎಲ್​ನ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಧೂತ್, ತನ್ನ ಬಳಿ ಇದ್ದ 24,999 ಷೇರುಗಳನ್ನು ಕೊಚ್ಚಾರ್​ಗೆ ರೂ. 2.5 ಲಕ್ಷಕ್ಕೆ ವರ್ಗಾಯಿಸಿದರು.

2010 ಮಾರ್ಚ್: ಎನ್​ಆರ್​ಪಿಎಲ್​ಗೆ 64 ಕೋಟಿ ರೂ.(ಪರಿ ವರ್ತನೆಯಾಗಬಲ್ಲ ಡಿಬೆಂಚರ್) ಸಾಲ ನೀಡಿದ ಸುಪ್ರೀಂ ಎನರ್ಜಿ ಪ್ರೈವೇಟ್ ಲಿಮಿಟೆಡ್- ಈ ಕಂಪನಿಯ ಶೇಕಡ 99.9 ಮಾಲೀಕತ್ವ ಧೂತ್​ರದ್ದು. ಇನ್ನೊಂದಿಷ್ಟು ಷೇರುಗಳನ್ನು ಕೊಚ್ಚಾರ್​ಗೆ ವರ್ಗಾಯಿಸುವ ಮೂಲಕ ಸುಪ್ರೀಂ ಎನರ್ಜಿಯಲ್ಲಿ ಧೂತ್ ಪಾಲುದಾರಿಕೆ ಶೇಕಡ 94.99ಕ್ಕೆ ಇಳಿಕೆಯಾಗುತ್ತದೆ.

2010 ನವೆಂಬರ್: ಸುಪ್ರೀಂ ಎನರ್ಜಿಯ ಸಂಪೂರ್ಣ ಮಾಲೀಕತ್ವವನ್ನು ಧೂತ್ ತಮ್ಮ ಸಹವರ್ತಿ ಮಹೇಶ್ ಚಂದ್ರ ಪುಂಗ್ಲಿಯಾಗೆ ವರ್ಗಾಯಿಸಿದರು.

2012: ಸೆಪ್ಟೆಂಬರ್​ನಿಂದ 2013ರ ಏಪ್ರಿಲ್ ಅವಧಿಯಲ್ಲಿ ಪುಂಗ್ಲಿಯಾ ತಮ್ಮ ಪಾಲನ್ನು ಪಿನಾಕಲ್ ಎನರ್ಜಿ(ಟ್ರಸ್ಟ್)ಗೆ ಕೇವಲ ರೂ.9 ಲಕ್ಷಕ್ಕೆ ವರ್ಗಾಯಿಸಿದರು. ಈ ಟ್ರಸ್ಟ್​ನ ಮ್ಯಾನೇಜಿಂಗ್ ಟ್ರಸ್ಟಿ ದೀಪಕ್ ಕೊಚ್ಚಾರ್. ಪರಿಣಾಮ, ಎನ್ ​ಆರ್​ಪಿಎಲ್​ಗೆ ಸುಪ್ರೀಂ ಎನರ್ಜಿ ನೀಡಿದ್ದ 64 ಕೋಟಿ ರೂ. ಸಾಲ ಮೂರು ವರ್ಷದೊಳಗೆ ಪಿನಾಕಲ್ ಎನರ್ಜಿಯ ವ್ಯವಹಾರ ದೊಂದಿಗೆ ವಿಲೀನವಾಗಿ 'ಸಾಲ'ದ ಹೊರೆ ತಪ್ಪಿತು.

2017: 'ಸ್ವೀಟ್ ಡೀಲ್' ಪರಿವರ್ತನೆಯಾದ ಬಳಿಕ ವಿಡಿಯೋಕಾನ್ ಗ್ರೂಪ್​ಗೆ ಐಸಿಐಸಿಐ ಬ್ಯಾಂಕ್ ಕೊಟ್ಟ ಸಾಲದಲ್ಲಿ ರೂ.2,810 ಕೋಟಿ(86%) ಮರುಪಾವತಿಯಾಗದೇ ಉಳಿದಿತ್ತು. ಇದನ್ನು ಬ್ಯಾಂಕ್ ಅನುತ್ಪಾದಕ ಆಸ್ತಿ ಪಟ್ಟಿ(ಎನ್​ ಪಿಎ)ಗೆ ಸೇರಿಸಿದ್ದಾಗಿ ಘೋಷಿಸಿತು.

ಐಸಿಐಸಿಐ ಬ್ಯಾಂಕ್​ಗೆ 58.9 ಕೋಟಿ ರೂ.ದಂಡ
ಭಾರತೀಯ ರಿಸರ್ವ್ ಬ್ಯಾಂಕ್(ಆರ್​ಬಿಐ) ಜಾರಿಗೊಳಿಸಿದ ಮಾರ್ಗದರ್ಶಿ ಸೂತ್ರಗಳನ್ನು ನಿರ್ದೇಶನಗಳನ್ನು ಪಾಲಿಸದ ಹಿನ್ನೆಲೆಯಲ್ಲಿ ಐಸಿಐಸಿಐ ಬ್ಯಾಂಕ್​ಗೆ 58.9 ಕೋಟಿ ರೂ. ದಂಡ ವಿಧಿಸಲಾಗಿದೆ. ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ 1949ರ ಸೆಕ್ಷನ್ 47ಎ(1)(ಸಿ) ಪ್ರಕಾರ ಆರ್​ಬಿಐ ಈ ಅಧಿಕಾರ ಚಲಾಯಿಸಿದ್ದು, ನಿಯಮ ಉಲ್ಲಂಘನೆಗೆ ವಿಧಿಸಿದ ಗರಿಷ್ಠ ದಂಡ ಇದಾಗಿರಬಹುದು ಎಂದು ಹೇಳಲಾಗುತ್ತಿದೆ.

ಎನ್​ಆರ್​ಪಿಎಲ್ ಮತ್ತು ಸುಪ್ರೀಂ ಎನರ್ಜಿಯ ಆಡಳಿತ ಮಂಡಳಿಗೆ 2009ರಲ್ಲೇ ರಾಜೀನಾಮೆ ನೀಡಿದ್ದು, ಸದ್ಯ ತೈಲ, ಅನಿಲ ಮತ್ತು ಟೆಲಿಕಾಂ ಮುಂತಾದ ದೊಡ್ಡ ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಆ ಕಂಪನಿಗಳ ಮೇಲೆ ನನಗೆ ಹಿಡಿತ ಇಲ್ಲ. ವೇಣುಗೋಪಾಲ್ ಧೂತ್ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
One of five companies in the Videocon Group, Evans and company India Limited, which recieved a Rs.650 crore loan from ICICI Bank in 2012, had net sales just 75 crore in 2011 and a net profit of Rs.94 lakh.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ