ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಸಿಐಸಿಐ ಚೇರ್ಮನ್ ಯಾಗಿ ಗಿರೀಶ್ ಚತುರ್ವೇದಿ ನೇಮಕ

By Mahesh
|
Google Oneindia Kannada News

ಮುಂಬೈ, ಜೂನ್ 29: ಐಸಿಐಸಿಐ ಬ್ಯಾಂಕಿಗೆ ನೂತನ ಛೇರ್ಮನ್ ಆಗಿ ಗಿರೀಶ್ ಚತುರ್ವೇದಿ ನೇಮಕ ಮಾಡಲಾಗಿದೆ. ಜೂನ್ 30ರಂದು ಹಾಲಿ ಚೇರ್ಮನ್ ಎಂ.ಕೆ. ಶರ್ಮಾ ಅವರ ಅಧಿಕಾರಾವಧಿ ಅಂತ್ಯವಾಗಲಿದೆ.

ಖಾಸಗಿ ವಲಯದ ಅತಿದೊಡ್ಡ ಬ್ಯಾಂಕ್ ಐಸಿಐಸಿಐ ಇತ್ತೀಚೆಗೆ ವಿವಾದದ ಸುಳಿಗೆ ಸಿಲುಕಿದೆ. ಬ್ಯಾಂಕಿನ ಸಿಇಒ ಚಂದಾ ಕೋಚ್ಚರ್ ವಿರುದ್ಧ ಹಣಕಾಸು ಅವ್ಯವಹಾರದ, ಆಡಳಿತ ಮಂಡಳಿಯಲ್ಲಿನ ಹಗರಣದಲ್ಲಿ ಭಾಗಿ ಆರೋಪ ಕೇಳಿ ಬಂದಿತ್ತು. ಇದಾದ ಬಳಿಕ, ಅನಿರ್ಧಿಷ್ಟ ಅವಧಿಗೆ ರಜೆ ಮೇಲೆ ಕಳಿಸಲಾಗಿದೆ.

ICCI Bank Board appoints Girish Chandra as Non-executive Chairman

ಉತ್ತರ ಪ್ರದೇಶ ಮೂಲದ ಗಿರೀಶ್ ಚತುರ್ವೇದಿ ಅವರು ಭೌತಶಾಸ್ತ್ರದಲ್ಲಿ ಎಂಎಸ್ಸಿ, ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್​ನಲ್ಲಿ ಸೋಷಿಯಲ್ ಪಾಲಿಸಿ ಪದವಿ, ಆಕ್ಸ್​ಫರ್ಡ್ ವಿವಿಯಲ್ಲಿ ಡಾಕ್ಟರೇಟ್ ಪಡೆದಿದ್ದಾರೆ. 1977ರ ಬ್ಯಾಚ್​ನ ಉತ್ತರ ಪ್ರದೇಶ ಕೆಡರ್​ನ ಐಎಎಸ್ ಅಧಿಕಾರಿ ಆದ ಗಿರೀಶ್ ಚತುರ್ವೇದಿ ಹಲವಾರು ಸರಕಾರಿ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ.

ಐಡಿಬಿಐ, ಬ್ಯಾಂಕ್ ಆಫ್ ಬರೋಡಾ, ಕೆನರಾ ಬ್ಯಾಂಕುಗಳ ಆಡಳಿತ ಮಂಡಳಿ,ಪೆಟ್ರೋಲಿಯಂ ಇಲಾಖೆಯಲ್ಲಿ ಕಾರ್ಯದರ್ಶಿ, ಹಣಕಾಸು ಇಲಾಖೆಯಲ್ಲಿ ಹೆಚ್ಚುವರಿ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ. ಚಂದಾ ಕೋಚ್ಚರ್ ಸ್ಥಾನದಲ್ಲಿ ಸಂದೀಪ್ ಭಕ್ಷಿ ಸದ್ಯ ಕಾರ್ಯ ನಿರ್ವಹಿಸುತ್ತಿದ್ದಾರೆ.

English summary
ICICI Bank on Friday said it has appointed former petroleum secretary Girish Chandra Chaturvedi as the company's non-executive chairman. The term of office of incumbent M K Sharma expires on June 30, 2018, ICICI Bank said in a statement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X