ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಬಿಎಂನಲ್ಲಿ 2,000 ಉದ್ಯೋಗಿಗಳಿಗೆ 'ಪಿಂಕ್ ಸ್ಲಿಪ್'

|
Google Oneindia Kannada News

ಬೆಂಗಳೂರು, ಜೂನ್ 09: ಇಂಟರ್ ನ್ಯಾಷನಲ್ ಬಿಸಿನೆಸ್ ಮಷಿನ್ ಕಾರ್ಪ್ (ಐಬಿಎಂ) ಸುಮಾರು 2000 ಉದ್ಯೋಗಿಗಳಿಗೆ 'ಪಿಂಕ್ ಸ್ಲಿಪ್' ಕೊಟ್ಟು ಮನೆಗೆ ಕಳಿಸಲಿದೆ ಎಂಬ ಸುದ್ದಿ ಬಂದಿದೆ. ಹಲವು ಬಾರಿ ಉದ್ಯೋಗ ಕಡಿತ ಸುದ್ದಿಯನ್ನು ಐಬಿಎಂ ತಳ್ಳಿ ಹಾಕಿತ್ತು.

ಆದರೆ, ಈಗ ತನ್ನ 3,50,600 ಉದ್ಯೋಗಿಗಳ ಪೈಕಿ ಶೇ 1ರಷ್ಟು ಕಡಿತಕ್ಕೆ ಮುಂದಾಗಿದ್ದು, ಇದರ ಮೊದಲ ಭಾಗವಾಗಿ 2000 ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ. ಉದ್ಯೋಗಿಗಳ ಕಾರ್ಯ ಕ್ಷಮತೆ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಂಸ್ಥೆಯ ಮೂಲಗಳು ಹೇಳಿವೆ.

IBM lays off 2,000 employees based on performance

'ಸಂಸ್ಥೆಯಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಉದ್ಯೋಗಿಗಳ ಕಡಿತ ಸುದ್ದಿಯನ್ನು ಖಚಿತ ಪಡಿಸಿರುವ ಐಬಿಎಂ, ಸ್ಪರ್ಧಾತ್ಮಕ ಮಟ್ಟದಲ್ಲಿ ಸಮರ್ಪಕವಾಗಿ ಕಾರ್ಯ ನಿರ್ವಹಿಸದ ಉದ್ಯೋಗಿಗಳು ಸಂಸ್ಥೆ ತೊರೆಯಬೇಕಾಗುತ್ತದೆ. ಐಟಿ ಮಾರುಕಟ್ಟೆಯಲ್ಲಿ ಪ್ರಗತಿ ಕಾಣಲು ಇದು ಅನಿವಾರ್ಯ, ಕ್ಲೈಂಟುಗಳ ಅಗತ್ಯಕ್ಕೆ ತಕ್ಕಂತೆ ಹೊಸ ತಂತ್ರಜ್ಞಾನ ವಿಭಾಗದಲ್ಲಿ ಉದ್ಯೋಗ ಅವಕಾಶಗಳನ್ನು ನಿರೀಕ್ಷಿಸಬಹುದು' ಎಂದು ಐಬಿಎಂ ಪ್ರಕಟಿಸಿದೆ.

ವಾಲ್ ಸ್ಟ್ರೀಟ್ ಜರ್ನಲ್, ಸಿಎನ್ ಬಿಸಿ ಈ ಮುಂಚೆ ಉದ್ಯೋಗ ಕಡಿತದ ಬಗ್ಗೆ ಮಾಡಿದ್ದ ವರದಿಯನ್ನು ಐಬಿಎಂ ತಳ್ಳಿ ಹಾಕಿತ್ತು. ತಂತ್ರಜ್ಞಾ ಕ್ಷೇತ್ರದಲ್ಲಿ ಒಟ್ಟಾರೆಯಾಗಿ ಹಿಂದೆ ಉಳಿದಿರುವ ಐಬಿಎಂ, 2018ರಲ್ಲಿ ಶೇ 1ರಷ್ಟು ಮಾತ್ರ ಆದಾಯದಲ್ಲಿ ಪ್ರಗತಿ ಕಂಡಿತ್ತು. ಮುಂಬರುವ ದಿನಗಳಲ್ಲಿ ಜಾಗತಿಕವಾಗಿ ಸುಮಾರು 25,000 ಉದ್ಯೋಗ ಅವಕಾಶಗಳು ಐಬಿಎಂನಲ್ಲಿ ಸೃಷ್ಟಿಯಾಗುವ ನಿರೀಕ್ಷೆಯಿದೆ.

English summary
International Business Machines Corp. is laying off about 2,000 employees this week, according to news reports, as the company reshapes its business. The total employees of IBM 350,600 at the end of last year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X