ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ ಮೂಲದ ಅರವಿಂದ್ ಕೃಷ್ಣ ಐಬಿಎಂ ಸಿಇಒ ಹುದ್ದೆಯಿಂದ ಚೇರ್ಮನ್ ಸ್ಥಾನಕ್ಕೆ

|
Google Oneindia Kannada News

ನ್ಯೂಯಾರ್ಕ್, ಡಿ.17: ಅಮೆರಿಕ ಮೂಲದ ಐಟಿ ದಿಗ್ಗಜ ಇಂಟರ್ ನ್ಯಾಷನಲ್ ಬಿಸಿನೆಸ್ ಮಷಿನ್ಸ್(ಐಬಿಎಂ) ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ(ಸಿಇಒ) ಆಗಿ ಕಾರ್ಯ ನಿರ್ವಹಿಸುತ್ತಿರುವ ಭಾರತ ಮೂಲದ ಅರವಿಂದ್ ಕೃಷ್ಣ ಅವರಿಗೆ ಮಹತ್ವದ ಹುದ್ದೆ ನೀಡಲಾಗಿದೆ.

ತಂತ್ರಜ್ಞಾನ ಕ್ಷೇತ್ರ ದಿಗ್ಗಜ ಮಹಿಳಾ ಉದ್ಯಮಿ, ಐಬಿಎಂ ಮಾಜಿ ಸಿಇಒ ಗಿನ್ನಿ ರೊಮೆಟ್ಟಿ ಅವರ ಸ್ಥಾನಕ್ಕೆ ಕೃಷ್ಣ ಅವರನ್ನು ನೇಮಿಸಲಾಗಿದೆ. ಜನವರಿ 01,2021ರಿಂದ ಕೃಷ್ಣ ಅವರು ಐಬಿಎಂ ಚೇರ್ಮನ್ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಏಪ್ರಿಲ್ 06ರಿಂದ ಅರವಿಂದ್ ಅವರ ಸಿಇಒ ಅಧಿಕಾರಾವಧಿ ಆರಂಭವಾಗಿತ್ತು. ಇದಕ್ಕೂ ಮುನ್ನ ಕೃಷ್ಣ ಅವರು ಸದ್ಯ ಐಬಿಎಂನಲ್ಲಿ ಹಿರಿಯ ಉಪಾಧ್ಯಕ್ಷರಾಗಿ, ಕ್ಲೌಡ್ ಹಾಗೂ ಕಾಗ್ನಿಟಿವ್ ಸಾಫ್ಟ್ ವೇರ್ ವಿಭಾಗದಲ್ಲಿ ಕಾರ್ಯ ನಿರ್ವಹಿಸಿದ್ದಾರೆ.

IBM CEO Arvind Krishna to take over as chairman

ಸುಮಾರು 40 ವರ್ಷಗಳ ಬಳಿಕ 62 ವರ್ಷ ವಯಸ್ಸಿನ ರೊಮೆಟ್ಟಿ ಅವರು ಸಿಇಒ ಸ್ಥಾನದಿಂದ ಕೆಳಗಿಳಿದಿದ್ದರು. 57 ವರ್ಷ ವಯಸ್ಸಿನ ಕೃಷ್ಣ ಅಧಿಕಾರ ವಹಿಸಿಕೊಂಡಿದ್ದರು.

ಐಬಿಎಂ ಚೇರ್ಮನ್, ಅಧ್ಯಕ್ಷೆ, ಸಿಇಒ ಆಗಿದ್ದ ರೊಮೆಟ್ಟಿ ಕಾರ್ಯಕಾರಿ ಚೇರ್ಮನ್ ಆಗಿ ಮುಂದುವರೆದಿದ್ದರು. ಈಗ ಚೇರ್ಮನ್ ಸ್ಥಾನಕ್ಕೆ ಕೃಷ್ಣ ಅವರನ್ನು ನೇಮಿಸಲಾಗಿದೆ. ರೆಡ್ ಹ್ಯಾಟ್ ಹಾಗೂ ಐಬಿಎಂ ಹಿರಿಯ ಉಪಾಧ್ಯಕ್ಷರಾಗಿರುವ ಜೇಮ್ಸ್ ವೈಟ್ ಹರ್ಸ್ಟ್ ಅವರನ್ನು ಐಬಿಎಂ ಅಧ್ಯಕ್ಷ ಸ್ಥಾನಕ್ಕೇರಿಸಲಾಗಿದೆ.

ಐಐಟಿ ಕಾನ್ಪುರ್ ನಿಂದ ಪದವಿ ಪಡೆದ ಬಳಿಕ1990ರಲ್ಲಿಐಬಿಎಂ ಸೇರಿದ ಕೃಷ್ಣ ಅವರು ಇಲಿನಾಯ್ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಿಕಲ್ ಇಂಜಿನಿಯರ್ ವಿಷಯದಲ್ಲಿ ಪಿಎಚ್ ಡಿ ಪಡೆದಿದ್ದಾರೆ. ಕೃಷ್ಣ ಹೆಸರಿನಲ್ಲಿ 15 ಪೆಟೆಂಟ್ ಗಳಿವೆ. ಐಇಇಇ ಹಾಗೂ ಎಸಿಎಂ ಜರ್ನಲ್ಸ್ ಸಂಪಾದಕರಾಗಿದ್ದರು. ತಾಂತ್ರಿಕ ವಿಷಯಗಳ ಬಗ್ಗೆ ಉತ್ತಮ ಲೇಖನಗಳನ್ನು ಬರೆದಿದ್ದಾರೆ. ಓಪನ್ ಸೋರ್ಸ್ ತಂತ್ರಜ್ಞಾನ ದೈತ್ಯ ರೆಡ್ ಹ್ಯಾಟ್ ಸಂಸ್ಥೆಯನ್ನು 109 ವರ್ಷಗಳ ಇತಿಹಾಸ ಹೊಂದಿರುವ ಐಬಿಎಂ ಸಂಸ್ಥೆಯು ಖರೀದಿಸುವಲ್ಲಿ ಕೃಷ್ಣಮಹತ್ವದ ಪಾತ್ರ ವಹಿಸಿದ್ದರು.

English summary
International Business Machines Corp said on Wednesday Chief Executive Officer Arvind Krishna would take over as chairman from Jan. 1, replacing Ginni Rometty, who stepped down as its long-time CEO earlier this year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X