• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಾಲಿವುಡ್ ಫ್ಯಾನ್ ಬ್ರಿಯಾನ್ ಲಾರಾ ಜತೆ ಪರಿಣತಿ ಸೆಲ್ಫಿ

By Mahesh
|

ಹೈದರಾಬಾದ್, ಅ.15: 'ನಾನು ಕೂಡಾ ಬಾಲಿವುಡ್ ಸಿನಿಮಾಗಳ ಫ್ಯಾನ್. ನನ್ನ ಟ್ರಿನಿಡಾಡ್ ನಲ್ಲಿ ಶೇ 40ರಷ್ಟು ಭಾರತೀಯ ಮೂಲದವರಿದ್ದಾರೆ. ಭಾರತಕ್ಕೆ ಬರುವುದೆಂದರೆ ಎಲ್ಲಿಲ್ಲದ ಆನಂದ ಎಂದು ಕ್ರಿಕೆಟ್ ದಿಗ್ಗಜ ಬ್ರಿಯಾನ್ ಲಾರಾ ಹೇಳಿದ್ದಾರೆ. Yupp TV ಬ್ರ್ಯಾಂಡ್ ಅಂಬಾಸಿಡರ್ ಆಗಿರುವ ಲಾರಾ ಅವರು ಹೊಸ ಅಪ್ಲಿಕೇಷನ್ ಲೋಕಾರ್ಪಣೆ ಮಾಡಿದರು.

ಹೈದರಾಬಾದಿನಲ್ಲಿ ವೈಯುಪಿಪಿ ಟಿವಿ ಅಪ್ಲಿಕೇಷನ್ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಬಂದಿದ್ದ ಲಾರಾ ಅವರು, ಮುಂಬರುವ ಆಲ್ ಸ್ಟಾರ್ ಲೀಗ್ ಬಗ್ಗೆ ಉತ್ಸುಕರಾಗಿರುವುದಾಗಿ ಹೇಳಿದರು. ಸಚಿನ್, ವಾರ್ನ್ ಸೇರಿದಂತೆ ಹಲವಾರು ದಿಗ್ಗಜರ ಜೊತೆ ಆಡುವುದು ಅತ್ಯಂತ ಸಂತಸದ ಕ್ಷಣ ಎಂದರು.

ಸಮಾರಂಭದಲ್ಲಿ ಬಾಲಿವುಡ್ ನಟಿ ಪರಿಣಿತಿ ಛೋಪ್ರಾ, ತೆಲಂಗಾಣದ ಸಚಿವ ಕೆಟಿ ರಾಮರಾವ್ ಕೂಡಾ ಇದ್ದರು. ಪರಿಣಿತಿ ಛೋಪ್ರಾ ಅವರು ಲಾರಾ ಜೊತೆಗೆ ಸೆಲ್ಫಿ ತೆಗೆದುಕೊಂಡು ಫೇಸ್ ಬುಕ್ ನಲ್ಲಿ ಹಂಚಿಕೊಂಡರು. ಈ ಚಿತ್ರಕ್ಕೆ ಸುಮಾರು 131 562 ಲೈಕ್ಸ್ ಹಾಗೂ 399 ಬಾರಿ ಹಂಚಿಕೆಯಾಗಿದೆ.[ದೈತ್ಯ ಭಾರತವೇ ವಿಶ್ವ ಟಿ20 ಗೆಲ್ಲಲಿದೆ: ಲಾರಾ]

ಉತ್ತರ ಅಮೆರಿಕದ ಟಾಪ್ 100 ಕಂಪನಿಗಳಲ್ಲಿ ಒಂದೆನಿಸಿರುವ ವೈಯುಪಿಪಿ ಟಿವಿ ಈಗ ತೆಲಂಗಾಣದಲ್ಲಿ ಡಿಜಿಟಲ್ ಅಭಿಯಾನದ ಭಾಗವಾಗಿದೆ.

An honour to have met you !! You are such a humble human being. So touched !! @BrianLara

Posted by Parineeti Chopra on14 October 2015

ವೈಯುಪಿಪಿ ಟಿವಿ ಇಂಟರ್ನೆಟ್ ಆಧಾರಿತ ಟಿವಿ ಲೈವ್ ಸ್ಟ್ರೀಮಿಂಗ್ ಒದಗಿಸುವ ಸಂಸ್ಥೆಯಾಗಿದೆ. ಇದರ ಹೊಸ ಮೊಬೈಲ್ ಅಪ್ಲಿಕೇಷನ್ ಅನ್ನು ಲಾರಾ ಲೋಕಾರ್ಪಣೆ ಮಾಡಿದರು. ಟಿವಿ ಸರಣಿಗಳನ್ನು ಸೇವ್ ಮಾಡಿಕೊಂಡು ನೋಡಬಹುದಾಗಿದೆ. ಕಳೆದ ವಾರದ ಧಾರಾವಾಹಿಗಳು ನೋಡಲು ಲಭ್ಯವಾಗುವುದರಿಂದ ಭಾರತೀಯ ಗ್ರಾಹಕರಿಗೆ ಮೆಚ್ಚುಗೆಯಾಗಲಿದೆ ಎಂದು ಸಿಇಒ ಉದಯ್ ರೆಡ್ಡಿ ಹೇಳಿದರು.

ಭಾರತಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ನೀಡುವ ವಿಶ್ವದ ಅತಿದೊಡ್ಡ ಓವರ್ ದ ಟಾಪ್ (ಒಟಿಟಿ) ಸಂಸ್ಥೆಯಾಗಿರುವ ವೈಯುಪಿಪಿ ಟಿವಿ 12 ಭಾಷೆಗಳಲ್ಲಿ 200ಕ್ಕೂ ಅಧಿಕ ಚಾನೆಲ್ ಗಳನ್ನು ನೀಡುತ್ತಿದೆ. 5,000ಕ್ಕೂ ಅಧಿಕ ಸಿನಿಮಾಗಳು, ಟಿವಿ ಶೋಗಳು ಒಂದು ಬಟನ್ ಕ್ಲಿಕ್ ನಲ್ಲೇ ಲಭ್ಯವಾಗಲಿದೆ.

ಆಂಡ್ರಾಯ್ಡ್ ಹಾಗೂ ಐಓಎಸ್ ಸಾಧನಗಳಲ್ಲಿ ಲಭ್ಯವಾಗಿರುವ ವೈಯುಪಿಪಿ ಟಿವಿ ನಿಮ್ಮ ಸ್ಮಾರ್ಟ್ ಟಿವಿ, ಸ್ಮಾರ್ಟ್ ಫೋಣ್ ಗಳಲ್ಲಿ ಬಳಸಬಹುದಾಗಿದೆ. ವಿಡಿಯೋ ಆನ್ ಡಿಮ್ಯಾಂಡ್ ಕೂಡಾ ಲಭ್ಯವಿದೆ. 2ಜಿ ತಂತ್ರಜ್ಞಾನ ಲಭ್ಯವಿರುವ ಫೋನ್ ಗಳಲ್ಲೂ ಈ ಅಪ್ಲಿಕೇಷನ್ ಕಾರ್ಯನಿರ್ವಹಿಸುವುದರಿಂದ ಹೆಚ್ಚಿನ ಜನರನ್ನು ತಲುಪಲು ಸಾಧ್ಯವಾಗಲಿದೆ ಎಂದು ಸಿಇಒ ಉದಯ್ ರೆಡ್ಡಿ ಹೇಳಿದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
YuppTV, an internet based TV streaming service provider, launched its service in India on Oct 14. The event was held in Hyderabad. Brian Lara is also associated with Yupp TV in his home country Trinidad being the brand Ambassador of TSTT, its technology partner.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more