ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಚ್ ಎಸ್ ಬಿಸಿ ಬ್ಯಾಂಕ್ ಬಾಗಿಲು ಮುಚ್ಚಲಿದೆ

By Mahesh
|
Google Oneindia Kannada News

ಮುಂಬೈ, ನ.28: ಜಾಗತಿಕವಾಗಿ ಪ್ರಮುಖ ಬ್ಯಾಂಕ್ ಸಂಸ್ಥೆ ಎಚ್ ಎಸ್ ಬಿಸಿ ಭಾರತದಲ್ಲಿನ ತನ್ನ ಖಾಸಗಿ ಬ್ಯಾಂಕಿಂಗ್ ಸೇವೆಯನ್ನು ಶಾಶ್ವತವಾಗಿ ಸ್ಥಗಿತಗೊಳಿಸಲಿದೆ. ಮನಿಲ್ರಾಂಡಿಂಗ್ ಸಮಸ್ಯೆಯಲ್ಲಿ ಸಿಲುಕಿರುವ ಎಚ್ ಎಸ್ ಬಿಸಿ 2016ರ ಮೊದಲ ತ್ರೈಮಾಸಿಕ ಅವಧಿಯಲ್ಲಿ ನಿರ್ಗಮಿಸಲಿದೆ.

ರಾಯಲ್ ಬ್ಯಾಂಕ್ ಆಫ್ ಸ್ಕಾಟ್ಲೆಂಡ್ ಹಾಗೂ ಸ್ವಿಸ್ ಬ್ಯಾಂಕಿಂಗ್ ಸಂಸ್ಥೆ ಯುಬಿಎಸ್ ನಿರ್ಗಮನದ ನಂತರ ಭಾರತದಿಂದ ಹೊರ ಹೋಗುತ್ತಿರುವ ಸಂಸ್ಥೆಗಳ ಪೈಕಿ ಎಚ್ ಎಸ್ ಬಿಸಿ ಮೂರನೇ ಸಂಸ್ಥೆಯಾಗಿದೆ.

ಎಚ್ ಎಸ್ ಬಿಸಿ ಸಂಸ್ಥೆ ಶುಕ್ರವಾರವೇ ತನ್ನ ಉದ್ಯೋಗಿಗಳಿಗೆ ಈ ಬಗ್ಗೆ ಅಧಿಕೃತವಾಗಿ ಇಮೇ ಲ್ ಕಳಿಸಿದೆ. ಭಾರತದಲ್ಲಿ ಸುಮಾರು 32,000 ಮಂದಿ ಉದ್ಯೋಗಿಗಳನ್ನು ಹೊಂದಿದೆ. ದೇಶದ ಆರೇಳು ಬ್ರ್ಯಾಂಚ್ ಗಳಲ್ಲಿ ರೀಟೈಲ್ ಬ್ಯಾಂಕಿಂಗ್ ವ್ಯವಹಾರ ನಡೆಸುತ್ತಿದೆ.

HSBC to wind up private banking business in India

2012ರಲ್ಲಿ ಸಂಸ್ಥೆಯ ನಿವ್ವಳ ಲಾಭ ಶೇ 16.5 ರಷ್ಟು ಕುಸಿತ ಕಂಡಿತ್ತು. ಅಮೆರಿಕದ ಮನಿ ಲಾಂಡ್ರಿಂಗ್ ದಂಡಗಳು, ಹೆಚ್ಚಿನ ತೆರಿಗೆ ಪಾವತಿ, ಅಕೌಂಟಿಂಗ್ ಶುಲ್ಕ, ಹಗರಣಗಳಲ್ಲಿ ಹಣ ಸೋರಿಕೆ ಎಲ್ಲವೂ ಎಚ್ ಎಸ್ ಬಿಸಿಗೆ ಮುಳುವಾಗಿದೆ. ಸದ್ಯಕ್ಕೆ ಎಚ್ ಎಸ್ ಬಿಸಿ ಏಷ್ಯಾದಲ್ಲಿ ತನ್ನ ಮಾರುಕಟ್ಟೆ ಹುಡುಕುತ್ತಿದೆ.

ಅಕ್ರಮ ಹಣ ರವಾನೆ, ಅಕ್ರಮ ಔಷಧಿ ಸಾಗಾಟ, ಭಯೋತ್ಪಾದಕ ಸಂಘಟನೆಗಳಿಗೆ ಹಣ ವರ್ಗಾವಣೆ, ಅಕ್ರಮ ಹಣ ಸಕ್ರಮಗೊಳಿಸಿದ ಆರೋಪ ಹೊತ್ತಿರುವ ಬ್ಯಾಂಕಿಂಗ್ ಸಂಸ್ಥೆ ಎಚ್ ಎಸ್ ಬಿಸಿ ಈಗ ಭಾರಿ ದಂಡಕ್ಕೆ ಬಲಿಯಾಗಬೇಕಾಯಿತು.

ಸೌದಿ ಅರೇಬಿಯಾ, ಬಾಂಗ್ಲಾದೇಶ, ಸಿರಿಯಾ, ಕ್ಯೂಬಾ, ಮೆಕ್ಸಿಕೋ, ಇರಾನ್, ಉತ್ತರ ಕೊರಿಯಾ, ಬರ್ಮಾ, ಕೇಮ್ಯಾನ್ ಐಲ್ಯಾಂಡ್ಸ್, ಜಪಾನ್ ಮತ್ತು ರಷ್ಯಾದ ವಿವಿಧ ಸಂಸ್ಥೆಗಳ ಜತೆ ಈ ಬ್ಯಾಂಕ್ ಹಲವಾರು ಪ್ರಶ್ನಾರ್ಹ ಹಣಕಾಸಿನ ವ್ಯವಹಾರ ನಡೆಸಿದೆ.

ಯುರೋಪಿನ ಅತಿ ದೊಡ್ಡ ಬ್ಯಾಂಕಿನ ಜಾಲ ಹೊಂದಿರುವ, ಅಮೆರಿಕದ ಪ್ರಮುಖ ಬ್ಯಾಂಕ್ ಕೂಡಾ ಆಗಿರುವ ಎಚ್ ಎಸ್ ಬಿಸಿ ಸುಮಾರು 5,000 ಉದ್ಯೋಗಿಗಳನ್ನು ಈಗಾಗಾಲೇ ಮನೆಗೆ ಕಳಿಸಿದೆ. (ಒನ್ ಇಂಡಿಯಾ ಸುದ್ದಿ)

English summary
Global banking major HSBC announced shutting down of its private banking business in India that offers wealth management services.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X