ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ನೆಲದ ವಿಜಯಾ ಬ್ಯಾಂಕ್ ಗೆ ಏಕೆ ಹೀಗೆ ವಿಲೀನದ ಶಿಕ್ಷೆ?

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 19: ಇಬ್ಬರು ಉಡಾಳ ಹುಡುಗರ ಜತೆಗೆ ಒಬ್ಬ ಸಭ್ಯ ಹುಡುಗನನ್ನು ಜತೆ ಮಾಡಿ, ವ್ಯಾಪಾರ ನಡೆಸು ಎಂದು ಬಿಟ್ಟರೆ ಏನಾಗಬಹುದು? ಕನ್ನಡ ನೆಲದ, ಬ್ಯಾಂಕಿಂಗ್ ವಲಯದಲ್ಲಿ ಒಳ್ಳೆ ಹೆಸರಿರುವ ವಿಜಯಾ ಬ್ಯಾಂಕ್ ನ ಸ್ಥಿತಿ ಹಾಗಾಗಿದೆ. ಆ ಬ್ಯಾಂಕ್ ನ ಕೇಂದ್ರ ಕಚೇರಿ ಇರುವುದು ಕರ್ನಾಟಕದಲ್ಲಿ. ಅದು ಈ ನೆಲದ ಹೆಮ್ಮೆ ಅನ್ನೋದು ಕೂಡ ಅಷ್ಟೇ ಸತ್ಯ.

330 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ವಿಜಯಾ ಬ್ಯಾಂಕ್330 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ವಿಜಯಾ ಬ್ಯಾಂಕ್

ಇದೀಗ ಆ ಬ್ಯಾಂಕ್ ಅನ್ನು ಬ್ಯಾಂಕ್ ಆಫ್ ಬರೋಡಾ ಹಾಗೂ ದೇನಾ ಬ್ಯಾಂಕ್ ಜತೆಗೆ ಸೇರಿ ವಿಲೀನ ಮಾಡಬೇಕು ಎಂದು ಕೇಂದ್ರ ಸರಕಾರ ಪ್ರಸ್ತಾವ ಇಟ್ಟಿದೆ. ವಿಜಯಾ ಬ್ಯಾಂಕ್ ಅನ್ನು ವಿಲೀನ ಮಾಡಬಾರದು ಎಂಬ ಕೂಗು ಈಗಾಗಲೇ ಎದ್ದಿದೆ. ಅದಕ್ಕೆ ಕಾರಣಗಳೇನು ಎಂಬುದನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

ವಿಜಯಾ ಬ್ಯಾಂಕ್, ದೇನಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ವಿಲೀನವಿಜಯಾ ಬ್ಯಾಂಕ್, ದೇನಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ವಿಲೀನ

ವಿಲೀನದ ಬಗ್ಗೆ ಪ್ರಸ್ತಾವ ಬಂದ ನಂತರ ಸಾರ್ವಜನಿಕ ವಲಯದ ಬ್ಯಾಂಕ್ ಷೇರುಗಳ ಬೆಲೆಯಲ್ಲಿ ಭಾರೀ ಇಳಿಕೆ ಆಗುತ್ತಿದೆ. ಅದರಲ್ಲೂ ವಿಜಯಾ ಬ್ಯಾಂಕ್ ಇಪ್ಪತ್ತು ಪರ್ಸೆಂಟ್ ಗೂ ಹೆಚ್ಚು ಕುಸಿತ ಕಂಡಿದೆ. ಹೂಡಿಕೆದಾರರು ವಿಲೀನ ಪ್ರಸ್ತಾವವನ್ನು ಯಾವ ರೀತಿ ಪರಿಗಣಿಸುತ್ತಾರೆ ಎಂಬುದಕ್ಕೆ ಇದನ್ನು ಬೇಕಾದರೆ ಮಾನದಂಡವಾಗಿಯೇ ಪರಿಗಣಿಸಬಹುದು.

ಕನ್ನಡದ ನೆಲದಲ್ಲಿ ಹುಟ್ಟಿದ ಬ್ಯಾಂಕ್

ಕನ್ನಡದ ನೆಲದಲ್ಲಿ ಹುಟ್ಟಿದ ಬ್ಯಾಂಕ್

* ಮೊದಲೇ ಹೇಳಿದ ಹಾಗೆ ವಿಜಯಾ ಬ್ಯಾಂಕ್ ಹುಟ್ಟಿದ್ದು ಕನ್ನಡದ ನೆಲದಲ್ಲಿ. ವಿಲೀನ ಆದ ಮೇಲೆ ಕನ್ನಡದ ಅಥವಾ ದಕ್ಷಿಣ ಭಾರತದ ತನ್ನ ಬೇರನ್ನು ಅದು ಕಳೆದುಕೊಳ್ಳುತ್ತದೆ.

* ವಿಜಯಾ ಬ್ಯಾಂಕ್ ಅತ್ಯುತ್ತಮ ಬ್ಯಾಂಕ್ ಅನ್ನೋದರಲ್ಲಿ ಅನುಮಾನವೇ ಇಲ್ಲ. ಏಕೆಂದರೆ, ಬ್ಯಾಂಕ್ ನ ಅನುತ್ಪಾದಕ ಆಸ್ತಿ ಬಹಳ ಕಡಿಮೆ ಇದೆ. ಸರಕಾರಕ್ಕೆ ಲಾಭಾಂಶ (144 ಕೋಟಿ ರುಪಾಯಿ) ನೀಡುತ್ತಿರುವ ಎರಡು ಬ್ಯಾಂಕ್ ಗಳಲ್ಲಿ ವಿಜಯಾ ಬ್ಯಾಂಕ್ ಕೂಡ ಒಂದು.

* ವಿಜಯಾ ಬ್ಯಾಂಕ್ ನ ರಿಟರ್ನ್ ಆನ್ ಅಸೆಟ್ ಬಹಳ ಹೆಚ್ಚಿದೆ, ಅತಿಹೆಚ್ಚು ಕ್ಯಾಪಿಟಲ್ ಅಡಿಕ್ವೆಸಿ ರೇಷಿಯೋ ಇರುವ ಅತ್ಯಂತ ಸುರಕ್ಷಿತ ಬ್ಯಾಂಕ್ ಇದು.

ಅತಿ ಆಶಾವಾದಿ ಬ್ಯಾಂಕ್‌ಗಳೇ ಕೆಟ್ಟ ಸಾಲಕ್ಕೆ ಹೊಣೆಗಾರರು: ರಘುರಾಂ ರಾಜನ್

ದೇನಾ ಬ್ಯಾಂಕ್ ಗೆ ಹಣ ನೀಡುವುದನ್ನೇ ಆರ್ ಬಿಐ ನಿಲ್ಲಿಸಿದೆ

ದೇನಾ ಬ್ಯಾಂಕ್ ಗೆ ಹಣ ನೀಡುವುದನ್ನೇ ಆರ್ ಬಿಐ ನಿಲ್ಲಿಸಿದೆ

* ವಿಲೀನ ಆದ ಮೇಲೆ ವಿಜಯಾ ಬ್ಯಾಂಕ್ ನ ರಿಟರ್ನ್ ಆನ್ ಅಸೆಟ್ ನಕಾರಾತ್ಮಕ ಆಗಿಬಿಡುತ್ತದೆ!!

* ದೇಶದಲ್ಲೇ ಅತ್ಯಂತ ದುರ್ಬಲ ಬ್ಯಾಂಕ್ ಅಂದರೆ ಅದು ದೇನಾ ಬ್ಯಾಂಕ್. ಅದಕ್ಕೆ ಹಣ ನೀಡುವುದನ್ನೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿಲ್ಲಿಸಿಬಿಟ್ಟಿದೆ.

* 6,000 ಕೋಟಿ ರುಪಾಯಿಯ ವಿದೇಶಿ ವಿನಿಮಯ ಹಗರಣದೊಳಗೆ ಬ್ಯಾಂಕ್ ಆಫ್ ಬರೋಡ ಸಿಲುಕಿಕೊಂಡಿದೆ.

ವಿಜಯಾ ಬ್ಯಾಂಕ್ ಗೆ ಸಿಕ್ಕುತ್ತಿರುವ ಶಿಕ್ಷೆ ಇದು

ವಿಜಯಾ ಬ್ಯಾಂಕ್ ಗೆ ಸಿಕ್ಕುತ್ತಿರುವ ಶಿಕ್ಷೆ ಇದು

* ದೇನಾ ಬ್ಯಾಂಕ್ ನಂತಹ ದುರ್ಬಲವಾದ ಬ್ಯಾಂಕ್ ಅನ್ನು ಬ್ಯಾಂಕ್ ಆಫ್ ಬರೋಡ ಜತೆ ಸೇರಿಸಿ, ಪರಿಸ್ಥಿತಿ ಇನ್ನಷ್ಟು ಹದಗೆಡುವ ಬದಲು ವಿಜಯಾ ಬ್ಯಾಂಕ್ ನೂ ಸೇರಿಸಿ ವ್ಯವಹಾರವನ್ನು ಒಂದಿಷ್ಟು ಸಿಹಿ ಎಂದು ತೋರಿಸುವ ಇರಾದೆ ಕಾಣುತ್ತಿದೆ.

* ಒಳ್ಳೆ ಬ್ಯಾಂಕ್ ಎಂಬ ಹಣೆಪಟ್ಟಿಯಿರುವ ಕಾರಣಕ್ಕೇ ವಿಜಯಾ ಬ್ಯಾಂಕ್ ಗೆ ಸಿಕ್ಕುತ್ತಿರುವ ಶಿಕ್ಷೆ ಇದು!!

ಸಾರ್ವಜನಿಕ ವಲಯದ ಬ್ಯಾಂಕ್ ಗಳ ನಾಶಕ್ಕೆ ಹುನ್ನಾರ

ಸಾರ್ವಜನಿಕ ವಲಯದ ಬ್ಯಾಂಕ್ ಗಳ ನಾಶಕ್ಕೆ ಹುನ್ನಾರ

* ಖಾಸಗಿ ವಲಯದ ಬ್ಯಾಂಕ್ ಗಳಿಗೆ ಅನುಕೂಲ ಮಾಡಿಕೊಡುವ ಕಾರಣಕ್ಕೇ ಈ ರೀತಿ ಸಾರ್ವಜನಿಕ ವಲಯದ ಬ್ಯಾಂಕ್ ಗಳನ್ನು ನಾಶಪಡಿಸುವ ಹುನ್ನಾರ ಮಾಡುತ್ತಿರುವಂತಿದೆ.

* ಬ್ಯಾಂಕ್ ಗಳ ವಿಲೀನ ವಿಫಲ ಆಗಿರುವುದಕ್ಕೆ ನಮ್ಮೆದುರು ಸಾಕಷ್ಟು ಉದಾಹರಣೆಗಳಿವೆ. 1993ರಲ್ಲಿ ಎನ್ ಬಿಐ ಜತೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ಸೇರಿದ ಮೇಲೆ ನಷ್ಟ ಅನುಭವಿಸುವಂತಾಯಿತು.

English summary
Here is the story about how will merger hurts Karnataka based Vijaya bank? Central government proposed Vijay bank merger with Bank of Baroda and Dena bank. Read how will it affect on India's best bank.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X