• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಡಾಲರ್ ಮೇಲಿನ ಗಾಬರಿಯಿಂದ ದೇಶದ ಬಾಗಿಲು ಮುಚ್ಚಿದರೆ ಹೇಗೆ 'ಸ್ವಾಮಿ'?

By ಕೆ.ಜಿ.ಕೃಪಾಲ್
|

ಪಾರ್ಟಿಸಿಪೇಟರಿ ನೋಟ್ಸ್ ಅಥವಾ ಪಿ-ನೋಟ್ಸ್ ಪೂರ್ತಿಯಾಗಿ ನಿಷೇಧ ಮಾಡಿಬಿಡಬೇಕು ಎಂಬ ಸುಬ್ರಮಣಿಯನ್ ಸ್ವಾಮಿ ಅವರ ಅಭಿಪ್ರಾಯದ ಬಗ್ಗೆ ಓದಿದ ಮೇಲೆ ಹೀಗೊಂದು ಲೇಖನ ಬರೆಯಬೇಕು ಅನ್ನಿಸಿತು. ವೃತ್ತಿಯಿಂದ ನಾನು ಸ್ಟಾಕ್ ಬ್ರೋಕರ್ (ಷೇರು ದಲ್ಲಾಳಿ). ಆದರೆ ಇಷ್ಟು ಮಾತ್ರ ಅಲ್ಲ.

ಪ್ರಮುಖ ದಿನ ಪತ್ರಿಕೆಯೊಂದರಲ್ಲಿ ಅಂಕಣಕಾರನಾಗಿದ್ದೇನೆ. ಜತೆಗೆ ಹೂಡಿಕೆದಾರರ ಜಾಗೃತಿ ಸಮಾವೇಶಗಳಲ್ಲಿ ಮುಖ್ಯ ಭಾಷಣಕಾರನಾಗಿಯೂ ಭಾಗವಹಿಸುತ್ತೇನೆ. ಸುಬ್ರಮಣಿಯನ್ ಅವರು ಹೇಳಿರುವ ಮಾತಿಗೆ ವಾಪಸ್ ಬರುವುದಾದರೆ, ಪಿ-ನೋಟ್ಸ್ ಎಂಬುದನ್ನು ಈ ತನಕ ಮುಂದುವರಿಸಿಕೊಂಡು ಬರುತ್ತಲೇ ಇದ್ದೇವೆ. ಇದರಿಂದ ವಿದೇಶಿ ಬಂಡವಾಳ ಕೂಡ ಹರಿದು ಬರುವುದು ಸಲೀಸು.

ರುಪಾಯಿ ದುರ್ಬಲಕ್ಕೆ ಪಿ-ನೋಟ್ಸ್ ಕಾರಣ ಎಂದ ಸ್ವಾಮಿ, ಏನಿದು ಪಿ-ನೋಟ್ಸ್?

ಹೇಗೆ ನೀರು ಹರಿಯುವ ಜಾಗದಲ್ಲಿ ಜಾಲರಿ ಹಾಕದಿದ್ದಾಗ ಕಡ್ಡಿ-ಕಸ ತಡೆಯಲು ಸಾಧ್ಯವಿಲ್ಲವೋ ಅದೇ ರೀತಿಯಲ್ಲಿ ವಿದೇಶಿ ಬಂಡವಾಳದ ಜತೆಗೆ ಹರಿದು ಬರುವ ಕಪ್ಪು ಹಣವನ್ನು ತಡೆಯುವುದು ಕೂಡ ಸದ್ಯದ ಸನ್ನಿವೇಶದಲ್ಲಿ ಕಷ್ಟಸಾಧ್ಯ. ಇಷ್ಟು ವರ್ಷಗಳ ಕಾಲ ಯಾವುದೇ ನಿಬಂಧನೆ ಹಾಕದೆ, ಭಾರತದ ಷೇರು ಮಾರುಕಟ್ಟೆಯಲ್ಲಿ ಪಾರ್ಟಿಸಿಪೇಟರಿ ನೋಟ್ಸ್ ಮೂಲಕ ಹೂಡಿಕೆ ಮಾಡಿ ಎಂದು ಬಾಗಿಲು ತೆರೆದಿಡಲಾಗಿದೆ.

ದಿಢೀರನೇ ನಿಬಂಧನೆ ತಂದರೆ ಕಷ್ಟ

ದಿಢೀರನೇ ನಿಬಂಧನೆ ತಂದರೆ ಕಷ್ಟ

ದಿಢೀರನೇ, ನಿಬಂಧನೆ-ಷರತ್ತು ಅಂತೆಲ್ಲ ತಂದುಬಿಟ್ಟರೆ ಈಗಾಗಲೇ ಹಣ ಹೂಡಿದವರು ಏಕಾಏಕಿ ಮಾರುಕಟ್ಟೆಯಿಂದ ತಮ್ಮ ಹೂಡಿಕೆ ಹಣ ವಾಪಸ್ ತೆಗೆದುಕೊಂಡು ಬಿಡುತ್ತಾರೆ. ವಾಪಸ್ ತೆಗೆದುಕೊಳ್ಳುವುದು ಅದೇ ಅಮೆರಿಕ ಡಾಲರ್ ರೂಪದಲ್ಲಿ. ಇದರಿಂದ ಭಾರತದ ಬಂಡವಾಳ ಮಾರುಕಟ್ಟೆಗೆ ಹೊಡೆತ ಬೀಳುತ್ತದೆ. ಜತೆಗೆ ರುಪಾಯಿ ಮೌಲ್ಯಕ್ಕೆ ಮತ್ತಷ್ಟು ಕುತ್ತು ಬರುತ್ತದೆ. ಈಗ ಪಾರ್ಟಿಸಿಪೇಟರಿ ನೋಟ್ಸ್ ಯಾಕಿಷ್ಟು ಖ್ಯಾತಿ ಮತ್ತು ಕುಖ್ಯಾತಿ ಪಡೆದಿದೆ ಅಂದರೆ, ವಿದೇಶದ ಹೂಡಿಕೆದಾರರು ತಮ್ಮ ಯಾವುದೇ ಮಾಹಿತಿ ನೀಡದೆ- ಭಾರತದ ಸೆಬಿಯಲ್ಲಿ ನೋಂದಣಿ ಮಾಡಿಸಿಕೊಳ್ಳುವ ಅಗತ್ಯವಿಲ್ಲದೆ ಹಣವನ್ನು ಹೂಡಿಕೆ ಮಾಡಬಹುದು. ಅದು ಹೇಗೆ ಎಂಬುದನ್ನು 'ಷೇರು ಸಂಪತ್ತು' ಎಂಬ ನನ್ನದೇ ಪುಸ್ತಕದಲ್ಲಿ ವಿಸ್ತೃತವಾಗಿ ವಿವರಿಸಿದ್ದೇನೆ.

ಹೂಡಿಕೆದಾರರ ಸಂಪತ್ತು ವೃದ್ಧಿಯಾಗುತ್ತದೆ

ಹೂಡಿಕೆದಾರರ ಸಂಪತ್ತು ವೃದ್ಧಿಯಾಗುತ್ತದೆ

ಹಾಗೆ ಮಾಡುವುದರಿಂದ ಆದಾಯ ತೆರಿಗೆ ಮತ್ತಿತರ ಅಂಶಗಳು ಕೂಡ ಇಲ್ಲಿ ಬರುತ್ತವೆ. ಅದರಿಂದ ಆ ಹೂಡಿಕೆದಾರರಿಗೆ ಅನುಕೂಲ ಇದೆ. ಹಾಗಂತ ಅವರಿಗಷ್ಟೇ ಅನುಕೂಲವಾ? ವಿದೇಶಿ ಬಂಡವಾಳ ಹರಿದು ಬಂದರೆ ಭಾರತದ ಷೇರು ಮಾರುಕಟ್ಟೆಗೆ ಮೇಲಕ್ಕೆ ಏರುತ್ತದೆ. ಹೂಡಿಕೆದಾರರ ಸಂಪತ್ತು ವೃದ್ಧಿಯಾಗುತ್ತದೆ ಇತ್ಯಾದಿ ಅನುಕೂಲವಿದೆ.

ಭಾರತದಲ್ಲಿ ಹೂಡಿಕೆ ಮಾಡಲು ಸಕಾಲ

ಭಾರತದಲ್ಲಿ ಹೂಡಿಕೆ ಮಾಡಲು ಸಕಾಲ

ವಿದೇಶಿ ಬಂಡವಾಳ ಅಗತ್ಯವಿದ್ದಾಗ ಬರಲಿ. ಈಗ ಅದರಿಂದ ಸಮಸ್ಯೆಯಾಗುತ್ತಿದೆ ಬೇಡ ಎನ್ನಲು ಸಾಧ್ಯವೆ? ಆದರೆ ವಿದೇಶದಲ್ಲಿ ದುಡಿಯುತ್ತಿರುವವರು ಭಾರತದಲ್ಲಿ ಹೂಡಿಕೆ ಮಾಡುವುದಕ್ಕೆ ಇದು ಬಹಳ ಒಳ್ಳೆ ಕಾಲ. ಇನ್ನು ರಫ್ತು ಆಧಾರಿತ ಕಂಪೆನಿಗಳ ಲಾಭವೂ ಉತ್ತೇಜನಕಾರಿಯಾಗಿದೆ. ಆದ್ದರಿಂದ ರಫ್ತು ಮಾಡಿ ವಿದೇಶಿ ವಿನಿಮಯ ಗಳಿಸುವ ಕಂಪೆನಿಗಳ ಷೇರುಗಳು ಏರುತ್ತಲೇ ಇವೆ.

ವಿದೇಶಿ ವಿನಿಮಯ ಪಾವತಿಸಬೇಕಾದ ಕಂಪೆನಿಗಳಿಗೆ ಕಷ್ಟ

ವಿದೇಶಿ ವಿನಿಮಯ ಪಾವತಿಸಬೇಕಾದ ಕಂಪೆನಿಗಳಿಗೆ ಕಷ್ಟ

ಇನ್ನು ಯಾವ ಕಂಪೆನಿಗಳು ವಿದೇಶದಿಂದ ವಸ್ತು ಖರೀದಿಸಬೇಕೋ ಹಾಗೂ ತೈಲ ಖರೀದಿ ಮೇಲೆ ಹೆಚ್ಚಿನ ಅವಲಂಬನೆ ಇದೆಯೋ ಅಂತಹ ಕಂಪೆನಿಯ ಷೇರುಗಳ ಸ್ಥಿತಿ ಸ್ವಲ್ಪ ಕಷ್ಟವಾಗಿದೆ. ಅದರರ್ಥ ದಿನದಿಂದ ದಿನಕ್ಕೆ ಪೆಟ್ರೋಲ್ ಬೆಲೆ ಏರಿಕೆ ಆಗುವುದರಿಂದ ಪೇಂಟ್ ಕಂಪೆನಿಗಳ ಷೇರು ಇಳಿಕೆಯಾಗುತ್ತಿದೆ. ಅದೇ ರೀತಿ ವಿದೇಶಿ ಕಂಪೆನಿಗಳಿಗೆ ಹಣ ಪಾವತಿಸಬೇಕಾದ ಮಾರುತಿ ಸುಜುಕಿ ಷೇರು ಮೌಲ್ಯ ಬೀಳುತ್ತಿದೆ. ಪಿ-ನೋಟ್ಸ್ ಬಗ್ಗೆ ಪ್ರಸ್ತಾಪಿಸುತ್ತಾ ಇದ್ದೆಲ್ಲಾ ಹೇಳಬೇಕಾಯಿತು ನೋಡಿ. ಆದರೆ ‌ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯು ಏರಿಕೆ ಆಗುತ್ತಿರುವುದೇ ಡಾಲರ್ ವಿರುದ್ಧ ರುಪಾಯಿ ಮೌಲ್ಯ ಕುಸಿಯುವುದಕ್ಕೆ ಬಹಳ ಮುಖ್ಯ ಕಾರಣ ಎಂಬುದರಲ್ಲಿ ಅನುಮಾನ ಬೇಡ. ಆ ಗಾಬರಿಯಲ್ಲಿ ಇನ್ನೇನೋ ಮಾಡಲು ಹೋಗಿ ಪಿ-ನೋಟ್ಸ್ ಗೆ ಕೈಯಿಟ್ಟರೆ ಮತ್ತಷ್ಟು ಅನಾಹುತ ಆದೀತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Stock broker and well known columnist KG Krupal explains why p-notes abolition will not help Indian economy and rupee value cannot be recovered against dollar by this step.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more