ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್ಬಿಐ ಎಟಿಎಂ ವಿಥ್ ಡ್ರಾ ರಗಳೆ ಬಿಡಿ, ಕಾರ್ಡ್ ಇಲ್ಲದೆ ಕ್ಯಾಶ್ ಪಡೆಯಿರಿ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 10: ದೇಶದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕಿಂಗ್ ಸಂಸ್ಥೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್.ಬಿ.ಐ) ಆರ್ ಟಿ ಜಿಎಸ್ ಹಾಗೂ ಎನ್ ಇಎಫ್ ಟಿ ಸೌಲಭ್ಯಗಳ ಶುಲ್ಕ ತಗ್ಗಿಸಿದೆ. ಇದರ ಬೆನ್ನಲ್ಲೇ ಎಟಿಎಂ ವ್ಯವಹಾರದಲ್ಲಿ ಭಾರಿ ಬದಲಾವಣೆ ಮಾಡಿದೆ. ಈಗ ಎಟಿಎಂ ವಿಥ್ ಡ್ರಾ ಮಿತಿ, ಶುಲ್ಕ ತಲೆನೋವು ಮರೆತು ಕಾರ್ಡ್ ಇಲ್ಲದೆ ಕ್ಯಾಶ್ ಪಡೆಯುವ ಸೌಲಭ್ಯವನ್ನು ಗ್ರಾಹಕರಿಗೆ ಎಸ್ಬಿಐ ಒದಗಿಸುತ್ತಿದೆ.

ಎಟಿಎಂ ಬಳಕೆಯ ಶುಲ್ಕ ಹಾಗೂ ಹಣ ಕಡಿತದ ಸಂಪೂರ್ಣ ವಿವರಗಳನ್ನು ಪರಿಶೀಲನೆ ನಡೆಸಿ, ಮೆಟ್ರೋ, ಅರೆ ನಗರ ಹಾಗೂ ಗ್ರಾಮಾಂತರ ಶಾಖೆಗಳಿಗೆ ಬೇರೆ ರೀತಿಯ ನಿಯಮಗಳನ್ನು ಜಾರಿಗೆ ತರಲಾಗಿದೆ. ಅಕ್ಟೋಬರ್ 01ರಿಂದ ಎಸ್ಬಿಐ ಎಟಿಎಂ ವಿಥ್ ಡ್ರಾ ಮಿತಿ 2 ರಿಂದ 15 ಮಿತಿಗೆ ತಗ್ಗಿದೆ. ತಿಂಗಳ ಸರಾಸರಿ ಮಿತಿ(ಎಎಂಬಿ) ಬಗ್ಗೆ ಬ್ಯಾಂಕಿನ ವೆಬ್ ತಾಣದಲ್ಲಿ ವಿವರ ಪಡೆಯಬಹುದು. ಜೊತೆಗೆ ಕನಿಷ್ಠ ಮಿತಿ ಬ್ಯಾಲೆನ್ಸ್ ಇಲ್ಲದ ಖಾತೆಯಿಂದ ವ್ಯವಹರಿಸಿದರೆ 20 ರು ಶುಲ್ಕ ಕಟ್ ಆಗಲಿದೆ. ಜೊತೆಗೆ ಎಟಿಎಂಗಳಲ್ಲಿ ಕಾರ್ಡ್ ಲೆಸ್ ನಗದು ಪಾವತಿ ಮಾಡಿದರೆ 22 ರು ಶುಲ್ಕ ಕಟ್ಟಬೇಕಾಗುತ್ತದೆ.

ಗ್ರಾಹಕರಿಗೆ ದೀಪಾವಳಿ ಕೊಡುಗೆ: ಎಸ್ಬಿಐ ವಿವಿಧ ಸಾಲಗಳ ಬಡ್ಡಿ ದರ ಇಳಿಕೆಗ್ರಾಹಕರಿಗೆ ದೀಪಾವಳಿ ಕೊಡುಗೆ: ಎಸ್ಬಿಐ ವಿವಿಧ ಸಾಲಗಳ ಬಡ್ಡಿ ದರ ಇಳಿಕೆ

ಆದರೆ, ಈ ಎಲ್ಲಾ ಸಮಸ್ಯೆಗೂ ಪರಿಹಾರವೆಂದರೆ YoNo ಕ್ಯಾಶ್ ಪಾಯಿಂಟ್ ಎಟಿಎಂ. ಇದರಲ್ಲಿ ದಿನಕ್ಕೆ ಎರಡಕ್ಕೂ ಅಧಿಕ ಬಾರಿ ಉಚಿತವಾಗಿ ಹಣ ತೆಗೆಯಬಹುದು. ಇದಕ್ಕೂ ಮುನ್ನ ಎಸ್.ಬಿ.ಐ. ಯೋನೋ ಆಪ್ ನಿಮ್ಮ ಮೊಬೈಲ್ ನಲ್ಲಿ ಸ್ಥಾಪಿಸಿಕೊಂಡರೆ ವ್ಯವಹಾರ ಇನ್ನೂ ಸುಲಭ.

 ಯೋನೋ ಕಾಶ್ ಪಾಯಿಂಟ್

ಯೋನೋ ಕಾಶ್ ಪಾಯಿಂಟ್

ಇದರ ಜೊತೆಗೆ ಎಸ್.ಬಿ.ಐ. ಎಟಿಎಂನಲ್ಲಿ 5 ಬಾರಿ, ಇತರೆ ಎಟಿಎಂನಲ್ಲಿ 8 ಬಾರಿ ಉಚಿತವಾಗಿ ಹಣವನ್ನು ವಿಥ್ ಡ್ರಾ ಮಾಡಬಹುದು, ಈ ಮಿತಿ ಮೀರಿದ ಬಳಿಕ ಪ್ರತಿ ವಿಥ್ ಡ್ರಾಕ್ಕೂ ಶುಲ್ಕ ವಿಧಿಸಲಾಗುತ್ತದೆ. ಇದಕ್ಕೆ ಪರಿಹಾರ ರೂಪವಾಗಿ ಕಾರ್ಡ್ ಲೆಸ್ ಕ್ಯಾಶ್ ವಿಥ್ ಡ್ರಾ ಸೇವೆಯನ್ನು ಹೆಚ್ಚಳ ಮಾಡಲಾಗಿದ್ದು, ದೇಶದೆಲ್ಲೆಡೆ 16,500 ಎಟಿಎಂಗಳು ಕಾರ್ಯ ನಿರ್ವಹಿಸುತ್ತಿವೆ. ಈ ರೀತಿಯ ಎಸ್ಬಿಐ ಎಟಿಎಂಗಳನ್ನು You Only Need One(YoNo) ಕ್ಯಾಶ್ ಪಾಯಿಂಟ್ ಎಂದು ಕರೆಯಲಾಗುತ್ತದೆ.

 ಯೋನೋ ಕ್ಯಾಶ್ ಏನಿದರ ವಿಶೇಷ?

ಯೋನೋ ಕ್ಯಾಶ್ ಏನಿದರ ವಿಶೇಷ?

* ಇದು ಕಾರ್ಡ್‌ ಲೆಸ್ ವ್ಯವಹಾರವಾಗಿದ್ದು, ಎಸ್ ಬಿಐನ 16,500 ಎಟಿಎಂಗಳಲ್ಲಿ ಬಳಸಬಹುದಾಗಿದೆ.
* ಈ ರೀತಿಯ ಎಟಿಎಂಗಳನ್ನು ಯೋನೋ ಕಾಶ್ ಪಾಯಿಂಟ್ ಎಂದು ಕರೆಯಲಾಗುತ್ತದೆ. ಇಲ್ಲಿ ಡೆಬಿಟ್ ಕಾರ್ಡ್ ಬೇಕಾಗುವುದಿಲ್ಲ.
* ನಿಮ್ಮ ಮೊಬೈಲ್ ಇದ್ದರೆ ಸಾಕು. ಆದರೆ ಲಭ್ಯ ಎಸ್.ಬಿ.ಐ. ಎಟಿಎಂ ಬಳಸಬೇಕಾಗುತ್ತದೆ.
* ಇಂಟರ್ನೆಟ್ ಲಾಗಿನ್ ಹಾಗೂ ಪಾಸ್ವರ್ಡ್ ಮೂಲಕ ಯೋನೋ ಆಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಎರಡು ಸ್ತರದ ಸುರಕ್ಷಿತ ಪದ್ಧತಿಯನ್ನು ಇದು ಹೊಂದಿದೆ.

ಅಕ್ಟೋಬರ್ 01ರಿಂದ ಎಸ್ಬಿಐ ಎಟಿಎಂ ವಿಥ್ ಡ್ರಾದಲ್ಲಿ ಭಾರಿ ಬದಲಾವಣೆಅಕ್ಟೋಬರ್ 01ರಿಂದ ಎಸ್ಬಿಐ ಎಟಿಎಂ ವಿಥ್ ಡ್ರಾದಲ್ಲಿ ಭಾರಿ ಬದಲಾವಣೆ

 ಯೋನೋ ಕ್ಯಾಶ್ ಸೇವೆ ಬಳಸುವುದು ಹೇಗೆ?

ಯೋನೋ ಕ್ಯಾಶ್ ಸೇವೆ ಬಳಸುವುದು ಹೇಗೆ?

* ಎಸ್ಬಿಐ ಗ್ರಾಹಕರು ಈ ಸೇವೆಯನ್ನು ಯೋನೋ ಆಪ್ ನಲ್ಲಿ ಸಕ್ರಿಯಗೊಳಿಸಬಹುದು. ನಂತರ ಆರು ಡಿಜಿಟ್ ನ ಎಂ ಪಿನ್ ಅನ್ನು ಸೆಟ್ ಮಾಡಿಕೊಳ್ಳಬೇಕು.
* ಎಸ್ಎಂಎಸ್ ಮೂಲಕ ಬರುವ 6 ಅಂಕಿಗಳ ಸಂಖ್ಯೆ ಹಾಕಿ ಲಾಗಿನ್ ಆದ ಬಳಿಕ ಕ್ವಿಕ್ ಲಿಂಕ್ಸ್ ವಿಭಾಗ ಸಕ್ರಿಯವಾಗುತ್ತದೆ.
* ನಂತರ ಯೋನೋ ಕ್ಯಾಶ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿದಾಗ ಹೊಸ ಪುಟ ತೆರೆದುಕೊಳ್ಳುತ್ತದೆ.
* ಎಟಿಎಂ ಆಯ್ಕೆ ಕ್ಲಿಕ್ ಮಾಡಿ ನಿಮಗೆ ಬೇಕಾದ ಮೊತ್ತವನ್ನು ಟೈಪ್ ಮಾಡಿ
* ನಾವು ಸೆಟ್ ಮಾಡಿರುವ ಪಿನ್ ಸಂಖ್ಯೆ ಮತ್ತು ಅಲ್ಲಿಂದ ಬಂದಿರುವ ರೆಫರೆನ್ಸ್ ಸಂಖ್ಯೆ ಬಳಸಿ ನಗದು ವಿಥ್ ಡ್ರಾ ಮಾಡಲು 30 ನಿಮಿಷಗಳ ಅವಕಾಶವಿರುತ್ತದೆ.

 ಎಸ್ಬಿಐ ಎಟಿಎಂ ವಿಥ್ ಡ್ರಾ ಬದಲಾವಣೆಗಳು

ಎಸ್ಬಿಐ ಎಟಿಎಂ ವಿಥ್ ಡ್ರಾ ಬದಲಾವಣೆಗಳು

ನಗರ ಪ್ರದೇಶಗಳಲ್ಲಿ ಪ್ರತಿ ತಿಂಗಳ ಬ್ಯಾಲೆನ್ಸ್ ಮಿತಿ (average monthly balance(AMB)) 5,000 ರು ನಿಂದ 3,000 ರು ಗಿಳಿಸಲಾಗಿದೆ. ಅರೆ ನಗರ ಪ್ರದೇಶಕ್ಕೆ 2,000 ರು, ಗ್ರಾಮಾಂತರ ಪ್ರದೇಶಕ್ಕೆ 1,000 ರು ಮಿತಿ ನೀಡಲಾಗಿದೆ. ಇದಲ್ಲದೆ Real Time Gross Settlement (RTGS) ಹಾಗೂ National Electronic Fund Transfer (NEFT) ಡಿಜಿಟಲ್ ಮಾದರಿ ವ್ಯವಹಾರ ಸಂಪೂರ್ಣ ಉಚಿತವಾಗಿದೆ. ಆದರೆ, ಯಾವುದೇ ಬ್ರ್ಯಾಂಚ್ ನಲ್ಲಿ ಈ ಸೇವೆ ಬಳಸಿದರೆ ಶುಲ್ಕ ತೆರಬೇಕಾಗುತ್ತದೆ.

English summary
How to Withdraw Money without SBI ATM Card. The country's largest lender State Bank of India has launched cardless ATM withdrawals with its YONO Cash.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X