ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನಾಮಿಕ ಸಂದೇಶಗಳ ಆಗರ Sarahah ಬಳಕೆ ಹೇಗೆ?

By Mahesh
|
Google Oneindia Kannada News

ಬೆಂಗಳೂರು, ಆಗಸ್ಟ್ 14:ಸಾಮಾಜಿಕ ಜಾಲ ತಾಣಗಳಲ್ಲಿ ಪ್ರತಿ ಕ್ಷಣ ಜಾಲಾಡುವವರಿಗೆ ಅರಬ್ ಮೂಲದ 'ಸಾರಾಹ್'(Sarahah) ಅಪ್ಲಿಕೇಷನ್ ಈಗ ಚಿರಪರಿಚಿತ. ಅತ್ಯಂತ ವೇಗವಾಗಿ ಎಲ್ಲೆಡೆ ಈ ಆಪ್ ನ ಜನಪ್ರಿಯತೆ ವ್ಯಾಪಿಸುತ್ತಿದೆ.

ಯಾರು ಯಾರಿಗೆ ಬೇಕಾದರೂ ಅನಾಮಧೇಯ ಸಂದೇಶ ಕಳಿಸಬಹುದು ಎಂಬ ವಿಷಯ ಕಿವಿಗೆ ಬಿದ್ದಿದೆ ತಡ, ನಾ ಮುಂದು ತಾ ಮುಂದು ಎಂದು ಎಲ್ಲರೂ ಈ ಆಪ್ ಬಳಸತೊಡಗಿದ್ದಾರೆ.

ಸೌದಿ ಅರೇಬಿಯಾದ ಝೈನ್ ಅಲ್ ಅಬಿದಿಬ್ ತಾಫಿಕ್ ಅವರು 2016ರಲ್ಲಿ ವಿನ್ಯಾಸಗೊಳಿಸಿದ ಸರಾಹ್ ಎಂಬ ಅಪ್ಲಿಕೇಷನ್ ಮೂಲಕ ನಿಷ್ಠಾವಂತ ಸಂದೇಶವನ್ನು ಪಡೆಯುವ ಉದ್ದೇಶ ಹೊಂದಿದ್ದರು. ಅರೇಬಿಕ್ ನಲ್ಲಿ Sarahah ಎಂದರೆ ನಿಷ್ಠೆ, ಪ್ರಮಾಣಿಕತೆ ಎಂದರ್ಥ.

ಏಷ್ಯಾ ಖಂಡವನ್ನಲ್ಲದೆ ಅಮೆರಿಕ-ಯುರೋಪ್ ಗಳಲ್ಲೂ ಈ ಅಪ್ಲಿಕೇಷನ್ ವ್ಯಾಪಿಸಿದೆ. ಸದ್ಯ 50 ಲಕ್ಷದಿಂದ 1 ಕೋಟಿಗೂ ಹೆಚ್ಚು ಡೌನ್‌ಲೋಡ್ ಆಗಿದೆ. ಭಾರತದಲ್ಲಂತೂ ಹೆಚ್ಚೆಚ್ಚು ಹಂಚಿಕೆಯಾಗುತ್ತಿದೆ. ಏನಿದು ಸಾರಾಹ್? ಹೇಗೆ ಇದನ್ನು ಬಳಸುವುದು? ಮಾಹಿತಿ ನಿಮ್ಮ ಮುಂದಿದೆ...

ಆಪ್ ಡೌನ್‌ಲೋಡ್ ಮಾಡಿ

ಆಪ್ ಡೌನ್‌ಲೋಡ್ ಮಾಡಿ

ಗೂಗಲ್ ಪ್ಲೇ ಸ್ಟೋರಿನಲ್ಲಿ SARAHAH ಎಂಬ ಹೆಸರಿನಲ್ಲೇ ಈ ಅಪ್ಲಿಕೇಷನ್ ಲಭ್ಯವಿದೆ. ಆಂಡ್ರಾಯ್ಡ್ ಹಾಗೂ ಐಒಎಸ್ ನಲ್ಲಿ ಲಭ್ಯವಿದೆ. ಒಮ್ಮೆ ಇನ್ ಸ್ಟಾಲ್ ಆದ ಬಳಿಕ ನಿಮ್ಮ ಇಮೇಲ್ ಐಡಿ ನೀಡಿ ಹೊಸ ಖಾತೆ ತೆರೆಯಬೇಕು. ನಿಮಗೆ ಪ್ರತ್ಯೇಕ ಯೂಸರ್ ಐಡಿ ಹಾಗೂ ಡಿಸ್ ಪ್ಲೇ ಹೆಸರು ನೀಡುವ ಅವಕಾಶವಿದೆ. ನಿಮ್ಮ ಭಾವಚಿತ್ರ ಹಾಕಿಕೊಳ್ಳಬಹುದು. ನಂತರ ಫೇಸ್ ಬುಕ್, ಸ್ನಾಪ್ ಚಾಟ್, ಟ್ವಿಟ್ಟರ್, ವಾಟ್ಸಪ್ ಗಳಿಗೆ ನಿಮ್ಮ ಐಡಿ basu********.sarahah.com ಯನ್ನು ಹಂಚಿಕೊಳ್ಳಬಹುದು.

ಮೊದಲ ಸಂದೇಶ ಹೇಗೆ ಕಳಿಸಲಿ

ಮೊದಲ ಸಂದೇಶ ಹೇಗೆ ಕಳಿಸಲಿ

ನಿಮ್ಮ ಐಡಿ ಎಲ್ಲರಿಗೂ ಸರ್ಚ್ ಮಾಡಲು ಲಭ್ಯವಿರಬೇಕೇ? ಬೇಡವೇ? ಎಂಬುದನ್ನು ಸೆಟ್ಟಿಂಗ್ಸ್ ನಲ್ಲಿ ಆಯ್ಕೆ ಮಾಡಿಕೊಳ್ಳಬಹುದು. ನಿಮಗೆ ಬೇಕಾದವರ ಐಡಿ ತಿಳಿದಿದ್ದರೆ ಕ್ಲಿಕ್ ಮಾಡಿದರೆ, leave a constructive message ಎಂಬ ಬಾಕ್ಸ್ ಬರುತ್ತದೆ. ಇದರಲ್ಲಿ ಕೇವಲ text ಸಂದೇಶ ಮಾತ್ರ ಕಳಿಸಲು ಸಾಧ್ಯ.

ಸ್ವೀಕರಿಸುವವರಿಗೆ ಮೂರು ಆಯ್ಕೆಗಳಿರುತ್ತವೆ: ಲೈಕ್ ಮಾಡುವುದು(ಹಾರ್ಟ್ ಚಿನ್ಹೆ ಒತ್ತುವ ಮೂಲಕ), ಸ್ಪಾಮ್ ಎನಿಸಿದರೆ ಸ್ಪಾಮ್ ಎಂದು ಸೂಚಿಸುವುದು ಅಥವಾ ಸಂದೇಶ ಕಳಿಸಿದವರನ್ನು ಬ್ಲಾಕ್ ಮಾಡುವುದು. ಆದರೆ, ಸಂದೇಶಕ್ಕೆ ಪ್ರತಿಕ್ರಿಯೆ ನೀಡುವ ಸೌಲಭ್ಯವಿಲ್ಲ.

ಮತ್ತೇನಿದೆ

ಮತ್ತೇನಿದೆ

ಎಲ್ಲಾ ಸ್ವೀಕರಿಸಿದ ಸಂದೇಶಗಳು, ಕಳಿಸಿದ ಸಂದೇಶಗಳು, ನಿಮ್ಮ ಮೆಚ್ಚುಗೆಯ ಸಂದೇಶಗಳನ್ನು ಪ್ರತ್ಯೇಕ ಟ್ಯಾಬ್ ಗಳಲ್ಲಿ ನೋಡಬಹುದು.
ಇದಲ್ಲದೆ ಸರ್ಚ್ ಟ್ಯಾಬ್ ಮೂಲಕ ನಿಮ್ಮ ಗೆಳೆಯ/ಗೆಳತಿಯರನ್ನು ಹುಡುಕಿ ಅನಾಮಧೇಯರಾಗಿ ಸಂದೇಶ ಕಳಿಸಬಹುದು. ಇದರ ಜತೆಗೆ explore ಎಂಬ ಆಯ್ಕೆ ಕೂಡಾ ಇದ್ದು, ಇನ್ನೂ ಲೈವ್ ಆಗಬೇಕಿದೆ. ಆದರೆ, ಕೆಲವೊಮ್ಮೆ ಸರ್ಚ್ ಆಯ್ಕೆ ಸರಿಯಾಗಿ ರಿಸಲ್ಟ್ ನೀಡುವುದೇ ಇಲ್ಲ.

ಹಂಚಿಕೊಳ್ಳುವುದು ಹೇಗೆ?

ಹಂಚಿಕೊಳ್ಳುವುದು ಹೇಗೆ?

ನೀವು ಈ ಅಪ್ಲಿಕೇಷನ್ ಬಳಸುತ್ತಿದ್ದೀರಿ ಎಂದ ಮಾತ್ರ ನಿಮ್ಮ ಸ್ನೇಹಿತರ ಬಳಗಕ್ಕೆ ತಿಳಿಯುವುದಿಲ್ಲ. ನಿಮ್ಮ username.Sarahah.com ಅನ್ನು ಫೇಸ್ ಬುಕ್, ಸ್ನಾಪ್ ಚಾಟ್, ವಾಟ್ಸಪ್, ಟ್ವಿಟ್ಟರ್ ಮುಂತಾದೆಡೆ ಹಂಚಿಕೊಳ್ಳಬೇಕು. ನಿಮಗೆ ಬಂದ ಸಂದೇಶಗಳನ್ನು ಹಂಚಿಕೊಳ್ಳುವುದು ಬಿಡುವುದು ನಿಮ್ಮ ಇಚ್ಛೆ. ಫೇಸ್ ಬುಕ್ ಸೇರಿದಂತೆ ಇತರೆಡೆ ನಿಮ್ಮ ಫ್ರೊಫೈಲ್ ನಲ್ಲಿ ವೆಬ್ ಸೈಟ್ ಲಿಂಕ್ ಹಾಕುವ ಸೌಲಭ್ಯ ಇರುವ ಕಡೆ username.Sarahah.comಹಾಕಿ ಎಲ್ಲರಿಗೂ ತಿಳಿಯುವಂತೆ ಮಾಡಬಹುದು.

English summary
The Sarahah anonymous messaging app provides a platform to search for users, express one's feelings much easily and anonymously, and end it there.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X