ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಯೋದಿಂದ ಪೋಸ್ಟ್‌ ಪೇಯ್ಡ್ ಕ್ರೆಡಿಟ್ ಲಿಮಿಟ್ ಬಳಸುವುದು ಹೇಗೆ?

|
Google Oneindia Kannada News

ಬೆಂಗಳೂರು, ಅ. 11: ಜಿಯೋದಿಂದ ಪೋಸ್ಟ್‌ ಪೇಯ್ಡ್ ಗ್ರಾಹಕರಿಗೆ ಮೊಟ್ಟ ಮೊದಲ ಬಾರಿಗೆ ಉಚಿತ ಕ್ರೆಡಿಟ್ ಕ್ಯಾರಿ ಫಾರ್ವರ್ಡ್ ಕೊಡುಗೆ ನೀಡಲಾಗುತ್ತಿದೆ. ಟೆಲಿಕಾಂ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಸೃಷ್ಠಿಸಿರುವ ರಿಲಯನ್ಸ್ ಜಿಯೋ, ಈಗ ಹೊಸದಾಗಿ ಜಿಯೋ ಪೋಸ್ಟ್‌ ಪೇಯ್ಡ್‌ ಪ್ಲಸ್ ಯೋಜನೆಗಳಲ್ಲಿಯೂ ಬಳಕೆದಾರರಿಗೆ ಹೆಚ್ಚಿನ ಲಾಭವನ್ನು ಮಾಡಿಕೊಡಲು ಮುಂದಾಗಿದೆ.

ಜಿಯೋ ಪೋಸ್ಟ್‌ ಪೇಯ್ಡ್‌ ಪ್ಲಸ್ ಯೋಜನೆಗಳಿಗೆ ಸೇರುವ ಇತರ ಆಪರೇಟರ್ಗಳ ಪೋಸ್ಟ್‌ ಪೇಯ್ಡ್ ಗ್ರಾಹಕರಿಗೆ ಟೆಲಿಕಾಂ ವಲಯದಲ್ಲಿಯೇ ಮೊದಲ ಬಾರಿಗೆ ಸಂಪೂರ್ಣವಾಗಿ ಶೂನ್ಯ ವೆಚ್ಚದಲ್ಲಿ ಮತ್ತು ಯಾವುದೇ ಭದ್ರತಾ ಠೇವಣಿ (ಸೆಕ್ಯೂರೀಟಿ ಡೆಪಾಸಿಟ್) ಇಲ್ಲದೇ ಕ್ರೆಡಿಟ್ ಮಿತಿಯನ್ನು 'ಕ್ಯಾರಿ ಫಾರ್ವರ್ಡ್' ಮಾಡಬಹುದಾದ ಆಯ್ಕೆಯನ್ನು ನೀಡಿದೆ.

ಜಿಯೋ, ಏರ್‌ಟೆಲ್, VI: ಮೊಬೈಲ್ ಸಂಖ್ಯೆಯನ್ನು ಆನ್‌ಲೈನ್ನಲ್ಲಿ ಪೋರ್ಟ್ ಮಾಡುವುದು ಹೇಗೆ?ಜಿಯೋ, ಏರ್‌ಟೆಲ್, VI: ಮೊಬೈಲ್ ಸಂಖ್ಯೆಯನ್ನು ಆನ್‌ಲೈನ್ನಲ್ಲಿ ಪೋರ್ಟ್ ಮಾಡುವುದು ಹೇಗೆ?

ಇತರ ಆಪರೇಟರ್ ಗಳಲ್ಲಿ ಅಸ್ತಿತ್ವದಲ್ಲಿರುವ ಎಲ್ಲಾ ಬಳಕೆದಾರರಿಗೆ ಜಿಯೋ ಪೋಸ್ಟ್‌ ಪೇಯ್ಡ್‌ ಪ್ಲಸ್‌ಗೆ ಸೇರಲು ಸುಲಭವಾಗುವಂತೆ ಜಿಯೋ ಈ 'ಕ್ಯಾರಿ-ಫಾರ್ವರ್ಡ್ ಯುವರ್ ಕ್ರೆಡಿಟ್ ಲಿಮಿಟ್' ವೈಶಿಷ್ಟ್ಯವನ್ನು ಪ್ರಾರಂಭಿಸಿದೆ.

JIO ಹೊಸ ಪೋಸ್ಟ್‌ ಪೇಯ್ಡ್‌ ಪ್ಲಸ್ ಯೋಜನೆ: ಪ್ರಿಪೇಯ್ಡ್‌ನಿಂದ ಬದಲಾಗುವುದು ಹೇಗೆ?JIO ಹೊಸ ಪೋಸ್ಟ್‌ ಪೇಯ್ಡ್‌ ಪ್ಲಸ್ ಯೋಜನೆ: ಪ್ರಿಪೇಯ್ಡ್‌ನಿಂದ ಬದಲಾಗುವುದು ಹೇಗೆ?

ಇದರೊಂದಿಗೆ ಇತರ ಆಪರೇಟರ್‌ಗಳ ಪೋಸ್ಟ್‌ ಪೇಯ್ಡ್ ಬಳಕೆದಾರರು ತಮ್ಮ ಅಸ್ತಿತ್ವದಲ್ಲಿರುವ ಕ್ರೆಡಿಟ್ ಮಿತಿಯನ್ನು ತಮ್ಮ ಅಸ್ತಿತ್ವದಲ್ಲಿರುವ ಆಪರೇಟರ್‌ನಿಂದ ಜಿಯೋಗೆ ಬದಲಾಯಿಸಿಕೊಂಡು ಮುಂದುವರೆಸಬಹುದಾಗಿದೆ.

ಭದ್ರತಾ ಠೇವಣಿ ಇಲ್ಲದ ಪೋಸ್ಟ್ ಪೇಯ್ಡ್ ಪ್ಲಸ್ ಪಡೆಯಿರಿ

ಭದ್ರತಾ ಠೇವಣಿ ಇಲ್ಲದ ಪೋಸ್ಟ್ ಪೇಯ್ಡ್ ಪ್ಲಸ್ ಪಡೆಯಿರಿ

ಒಂದು ರೂಪಾಯಿ ಅಥವಾ ಯಾವುದೇ ಭದ್ರತಾ ಠೇವಣಿ ಪಾವತಿಸದೆ ಜಿಯೋ ಪೋಸ್ಟ್‌ ಪೇಯ್ಡ್‌ ಪ್ಲಸ್‌ ಸೇರಬಹುದಾಗಿದೆ. ಅದಕ್ಕಾಗಿ ಈ 3 ಸರಳ ಹಂತಗಳನ್ನು ಪಾಲಿಸಿದರೆ ಸಾಕು.

ಈ ವೈಶಿಷ್ಟ್ಯವನ್ನು ಹೇಗೆ ಬಳಸುವುದು:

ಹಂತ 1: ವಾಟ್ಸಾಪ್‌ನಿಂದ 88-501-88-501 ಗೆ 'Hi' ಎಂದು ಸಂದೇಶ ಕಳುಹಿಸಿ (ನೀವು ಜಿಯೋಗೆ ಸೇರ ಬಯಸುವ ನಿಮ್ಮ ಪೋಸ್ಟ್‌ ಪೇಯ್ಡ್ ಸಂಖ್ಯೆಯಿಂದ)

ಹಂತ 2: ನಿಮ್ಮ ಅಸ್ತಿತ್ವದಲ್ಲಿರುವ ಆಪರೇಟರ್‌ ಪೋಸ್ಟ್‌ ಪೇಯ್ಡ್ ಬಿಲ್ ಅನ್ನು ಅಪ್‌ ಲೋಡ್ ಮಾಡಿ

ಹೊಮ್ ಡೆಲಿವರಿ ಪಡೆಯಬಹುದಾಗಿದೆ

ಹೊಮ್ ಡೆಲಿವರಿ ಪಡೆಯಬಹುದಾಗಿದೆ

ಹಂತ 3: 24 ಗಂಟೆಗಳ ನಂತರ, ನೀವು ಯಾವುದೇ ಜಿಯೋ ಅಂಗಡಿ ಹೋಗಿ ಅಥವಾ ನಿಮ್ಮ ಜಿಯೋ ಪೋಸ್ಟ್‌ ಪೇಯ್ಡ್ ಪ್ಲಸ್ ಸಿಮ್‌ ಅನ್ನು ಹೊಮ್ ಡೆಲಿವರಿ ಪಡೆಯಬಹುದಾಗಿದೆ. ಇದಲ್ಲದೇ ಒಂದು ರೂಪಾಯಿ / ಭದ್ರತಾ ಠೇವಣಿ ಪಾವತಿಸದೆ ನಿಮ್ಮ ಆಯ್ಕೆಯ ಕ್ರೆಡಿಟ್ ಮಿತಿಯನ್ನು ಪಡೆಯಬಹುದು.

ಪೋಸ್ಟ್‌ ಪೇಯ್ಡ್ ಸೇವೆಗಳ ವಿಭಾಗವನ್ನು ಉತ್ತಮವಾಗಿಸುವ ಉದ್ದೇಶದಿಂದ, ಜಿಯೋ ಇತ್ತೀಚೆಗೆ ಜಿಯೋ ಪೋಸ್ಟ್‌ ಪೇಯ್ಡ್ ಪ್ಲಸ್ ಅನ್ನು ಪ್ರಾರಂಭಿಸಿತ್ತು, ಭಾರತದಲ್ಲಿ ಪೋಸ್ಟ್‌ ಪೇಯ್ಡ್ ಬಳಕೆದಾರರಿಗೆ ಹಿಂದೆಂದೂ ಕೇಳದಂತಹ ಪ್ರಯೋಜನಗಳೊಂದಿಗೆ, ಸಂಪರ್ಕ, ಮನರಂಜನೆಯೊಂದಿಗೆ ಉತ್ತಮ ಸೇವೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ.

ಕೇವಲ ರೂ. 399 / -ಕ್ಕೆ ಆರಂಭ

ಕೇವಲ ರೂ. 399 / -ಕ್ಕೆ ಆರಂಭ

ಕೇವಲ ರೂ. 399 / -ಕ್ಕೆ ಆರಂಭವಾಗಲಿರುವ ಜಿಯೋ ಪೋಸ್ಟ್‌ ಪೇಯ್ಡ್‌ ಪ್ಲಸ್ ಯೋಜನೆಗಳು 650+ ಲೈವ್ ಟಿವಿ ಚಾನೆಲ್‌ಗಳು, ವಿಡಿಯೋ ಕಂಟೆಂಟ್, 5 ಕೋಟಿ ಹಾಡುಗಳು, 300+ ಪತ್ರಿಕೆಗಳು ಮತ್ತು ಹೆಚ್ಚಿನವುಗಳೊಂದಿಗೆ ಜಿಯೋ ಅಪ್ಲಿಕೇಶನ್‌ಗಳ ಜೊತೆಗೆ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್, ಡಿಸ್ನಿ + ಹಾಟ್‌ ಸ್ಟಾರ್‌ ನಂತಹ ಪ್ರೀಮಿಯಂ ಒಟಿಟಿ ಅಪ್ಲಿಕೇಶನ್‌ಗಳಿಗೆ ಪೂರಕ ಪ್ರವೇಶವನ್ನು ನೀಡುತ್ತದೆ.

ಅಂತಾರಾಷ್ಟ್ರೀಯ ರೋಮಿಂಗ್

ಅಂತಾರಾಷ್ಟ್ರೀಯ ರೋಮಿಂಗ್

ಜಿಯೋ ಪೋಸ್ಟ್‌ ಪೇಯ್ಡ್‌ ಪ್ಲಸ್‌ ವಿಶ್ವಾಸಾರ್ಹ ಮತ್ತು ಉತ್ತಮ-ಗುಣಮಟ್ಟದ ಸಂಪರ್ಕದ ಜೊತೆಗೆ, ಇದು ಮಿತಿಯಿಲ್ಲದ ಪ್ರೀಮಿಯಂ ಮನರಂಜನೆ, ತಡೆರಹಿತ ಮತ್ತು ಕೈಗೆಟುಕುವ ಅಂತಾರಾಷ್ಟ್ರೀಯ ರೋಮಿಂಗ್, ಅತ್ಯಾಧುನಿಕ ನವೀನ ವೈಶಿಷ್ಟ್ಯಗಳು ಮತ್ತು ಮುಖ್ಯವಾಗಿ ಅತ್ಯುತ್ತಮ ಗ್ರಾಹಕ ಅನುಭವವನ್ನು ಒದಗಿಸುತ್ತದೆ.

English summary
How to use Reliance Jio carry forward of credit limit for post-paid plus users. Moreover will not have to pay a single rupee or any security deposit in order to join Jio's network.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X