ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಕ್ಷಣ ರೀಚಾರ್ಜ್ ಮಾಡಿ ನಂತರ ಪಾವತಿಸಿ: ಜಿಯೊ ಪರಿಚಯಿಸುತ್ತಿದೆ 'ಎಮರ್ಜೆನ್ಸಿ ಡೇಟಾ ಲೋನ್' ಸೌಲಭ್ಯ

|
Google Oneindia Kannada News

ನವದೆಹಲಿ, ಜುಲೈ 04: ಮುಕೇಶ್ ಅಂಬಾನಿ ಅವರ ರಿಲಯನ್ಸ್ ಜಿಯೊ ಕಂಪನಿ ಇದೀಗ ತನ್ನ ಬಳಕೆದಾರರಿಗೆ ತಕ್ಷಣವೇ ರೀಚಾರ್ಜ್ ಮಾಡಿ ನಂತರ ಪಾವತಿ ಮಾಡಬಹುದಾದ 'ಎಮರ್ಜೆನ್ಸಿ ಡೇಟಾ ಲೋನ್' ಸೌಲಭ್ಯ ಪರಿಚಯಿಸುತ್ತಿದೆ.

ಡೇಟಾ ಟಾಪ್‌ಅಪ್‌ ಅನ್ನು ತಕ್ಷಣವೇ ಖರೀದಿಸುವ ಪರಿಸ್ಥಿತಿಯಲ್ಲಿ, ಬೇರೆ ಬೇರೆ ಕಾರಣಗಳಿಗಾಗಿ ಎಲ್ಲ ಬಳಕೆದಾರರೂ ಇರುವುದಿಲ್ಲ ಎಂಬುದು ಭಾರತದ ಕಿರಿಯ, ಆದರೆ ಅತಿದೊಡ್ಡ ಟೆಲಿಕಾಂ ಆಪರೇಟರ್‌ ಆಗಿರುವ ಜಿಯೊಗೆ ತಿಳಿದಿದೆ.

ಜಿಯೊದ ಬಳಕೆದಾರರು ತಮ್ಮ ಹೈಸ್ಪೀಡ್ ಡೇಟಾದ ಕೋಟಾ ಮುಗಿದು ಹೋದಾಗ, ತಕ್ಷಣವೇ ರಿಜಾರ್ಜ್ ಮಾಡಿಕೊಳ್ಳಲು ಸಾಧ್ಯವಾಗದಿರುವ ಪರಿಸ್ಥಿತಿಯಲ್ಲಿ 'ಈಗಲೇ ರೀಚಾರ್ಜ್ ಮಾಡಿಕೊಳ್ಳಿ ಮತ್ತು ನಂತರ ಪಾವತಿಸಿ' ಅನುಕೂಲತೆಯನ್ನು ತುರ್ತು ಡೇಟಾ ಸಾಲ ಸೌಲಭ್ಯ ಒದಗಿಸುತ್ತದೆ.

How to use Recharge now pay later: Jio launches new facility

ಈ ಸೌಲಭ್ಯದಡಿಯಲ್ಲಿ, ಜಿಯೊ ತನ್ನ ಪ್ರೀಪೇಯ್ಡ್ ಬಳಕೆದಾರರಿಗೆ 1 ಜಿಬಿಯ (ಪ್ರತಿ ಪ್ಯಾಕ್‌ಗೆ ₹11 ಮೌಲ್ಯ) ಐದು ತುರ್ತು ಡೇಟಾವರೆಗಿನ ಸಾಲ ಪಡೆಯಲು ಅವಕಾಶ ನೀಡುತ್ತದೆ. ತುರ್ತು ಡೇಟಾ ಸೌಲಭ್ಯವನ್ನು ಮೈ ಜಿಯೊ ಆಪ್ (MyJio App) ಮೂಲಕ ಪಡೆದುಕೊಳ್ಳಬಹುದಾಗಿದೆ.

ಜಿಯೊ ಬಳಕೆದಾರರು ಈಗಾಗಲೇ ಉತ್ತಮ ನೆಟ್‌ವರ್ಕ್ ಸಂಪರ್ಕ ಮತ್ತು ಹೈ ಸ್ಪೀಡ್‌ಗಳನ್ನು ಅನುಭವಿಸಲು ಶುರುಮಾಡಿದ್ದಾರೆ. ಹಲವು ಬಳಕೆದಾರರು ದಿನದಲ್ಲಿ ಬಹುಬೇಗನೇ ತಮ್ಮ ಹೈ ಸ್ಪೀಡ್‌ ಡೇಟಾ ಕೋಟಾವನ್ನು ಬಳಸಿ ಮುಗಿಸಿಬಿಡುತ್ತಾರೆ. ಅವರು ದಿನದ ಉಳಿದ ಸಮಯದಲ್ಲಿ ಹೈ ಸ್ಪೀಡ್‌ ಡೇಟಾ ಬಳಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಎಲ್ಲ ಬಳಕೆದಾರರೂ ತಮ್ಮ ದೈನಂದಿನ ಕೋಟಾ ಖಾಲಿಯಾದ ತಕ್ಷಣವೇ ಹೊಸ ಡೇಟಾ ಟಾಪ್‌-ಅಪ್‌ ಖರೀದಿಸುವ ಪರಿಸ್ಥಿತಿಯಲ್ಲಿ ಇರುವುದಿಲ್ಲ ಎಂದು ಜಿಯೊ ಅರಿತಿದೆ. ಅವರಿಗಾಗಿಯೇ ಈ ಹೊಸ ಸೌಲಭ್ಯವನ್ನು ಪರಿಚಯಿಸಲಾಗುತ್ತಿದೆ.

ಎಮರ್ಜೆನ್ಸಿ ಡೇಟಾ ಲೋನ್ ಸೌಲಭ್ಯ ಪಡೆಯುವುದು ಹೇಗೆ?

1) ಮೈ ಜಿಯೊ (Myjio) ಆಪ್ ಓಪನ್ ಮಾಡಿ. ಪುಟದ ಎಡತುದಿಯಲ್ಲಿರುವ 'ಮೆನು'ಗೆ ಹೋಗಿ.

2) ಮೊಬೈಲ್‌ ಸರ್ವಿಸ್ ಅಡಿಯಲ್ಲಿರುವ 'ಎಮರ್ಜೆನ್ಸಿ ಡೇಟಾ ಲೋನ್' ಆಯ್ಕೆ ಮಾಡಿ.

3) ಎಮರ್ಜೆನ್ಸಿ ಡೇಟಾ ಲೋನ್ ಬ್ಯಾನರ್‌ ಮೇಲಿರುವ 'ಪ್ರೊಸೀಡ್' ಆಯ್ಕೆ ಕ್ಲಿಕ್ ಮಾಡಿ

4) 'ಗೆಟ್ ಎಮರ್ಜೆನ್ಸಿ ಡೇಟಾ' ಆಯ್ಕೆಯನ್ನು ಆಯ್ದುಕೊಳ್ಳಿ

5) 'ಆಕ್ಟೀವ್ ನೌ' ಆಯ್ಕೆಯ ಮೇಲೆ ಕ್ಲಿಕ್ ಮಾಡಿ,

6) ಎಮರ್ಜೆನ್ಸಿ ಡೇಟಾ ಲೋನ್‌ ಸೌಲಭ್ಯ ಆಕ್ಟಿವೇಟ್ ಆಗಿರುತ್ತದೆ.

English summary
How to use Recharge now pay later: Jio launches 'emergency data loan' facility.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X