ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಟ್ಸಪ್ ಕಿರಿಕಿರಿ, ಎಲ್ಲರ 'ಸ್ಟೇಟಸ್' ಕಳಚಿದ ಫೇಸ್ಬುಕ್!

ಅತ್ಯಂತ ಜನಪ್ರಿಯ ಚಾಟಿಂಗ್ ಅಪ್ಲಿಕೇಷನ್ ವಾಟ್ಸಪ್ ನಲ್ಲಿ ಭಾರಿ ಬದಲಾವಣೆಯಾಗಿದೆ. ಶಿವರಾತ್ರಿ ಮೆಸೇಜ್ ಕಳಿಸಲು ವಾಟ್ಸಪ್ ಓಪನ್ ಮಾಡಿದವರಿಗೆ ಸ್ಟೇಟಸ್ ಅಪ್ಡೇಟ್ ಕಿರಿಕಿರಿ ಎದುರಾಗಿದೆ. ಏನಿದು ಸ್ಟೇಟಸ್ ಅಪ್ಡೇಟ್? ಮುಂದೆ ಓದಿ...

By ಮಲೆನಾಡಿಗ
|
Google Oneindia Kannada News

ಅತ್ಯಂತ ಜನಪ್ರಿಯ ಚಾಟಿಂಗ್ ಅಪ್ಲಿಕೇಷನ್ ವಾಟ್ಸಪ್ ನಲ್ಲಿ ಭಾರಿ ಬದಲಾವಣೆಯಾಗಿದೆ. ಶಿವರಾತ್ರಿ ಮೆಸೇಜ್ ಕಳಿಸಲು ವಾಟ್ಸಪ್ ಓಪನ್ ಮಾಡಿದವರಿಗೆ ಸ್ಟೇಟಸ್ ಅಪ್ಡೇಟ್ ಕಿರಿಕಿರಿ ಎದುರಾಗಿದೆ.ಏನಿದು ಸ್ಟೇಟಸ್ ಅಪ್ಡೇಟ್? ವಾಟ್ಸಪ್ ಸುಧಾರಣೆಯ ಮುಖ್ಯ ಉದ್ದೇಶವೇನು? ಅಪ್ಡೇಡ್ ಮಾಡಿಕೊಳ್ಳುವುದು ಹೇಗೆ? ಮುಂದೆ ಓದಿ...

ಒಮ್ಮೆ ಫೇಸ್ ಬುಕ್ ಬಳಿ ಕೆಲಸ ಕೇಳಿಕೊಂಡು ಹೋಗಿ ಕೆಲಸ ಸಿಗದೇ ಆಚೆ ಹೋಗಿದ್ದ ಬ್ರಿಯಾನ್ ಅಕ್ಟಾನ್ ಅನ್ನುವ ಯುವಕ ಕೊನೆಗೆ WhatsApp ಅನ್ನುವ ಮೆಸೆಂಜರ್ ಕಂಡು ಹಿಡಿದ. [ಎಫ್ ಬಿ-ವಾಟ್ಸಪ್ ಖರೀದಿ ಹಿಂದಿರುವ ಉದ್ದೇಶ?]

ಈಗ ಆ ಕಂಪನಿಯನ್ನು ಫೇಸ್ ಬುಕ್ 22 ಬಿಲಿಯನ್ ಡಾಲರ್ ಕೊಟ್ಟು ಖರೀದಿಸಿತು ಎಂಬುದು ಎರಡು ವರ್ಷಗಳ ಹಿಂದಿನ ಕುತೂಹಲದ ಸಂಗತಿಯಾಗಿತ್ತು.[ವಾಟ್ಸಪ್ ಮೆಸೇಜ್ ಹ್ಯಾಕ್ ಹೇಗೆ? ಸೇಫ್ ಮಾಡೋದು ಹೇಗೆ?]

ತದನಂತರ ವಾಟ್ಸಪ್ ನಲ್ಲಿ ಹೆಚ್ಚಿನ ಸುರಕ್ಷತೆ,ವಿಡಿಯೋ ಕಾಲಿಂಗ್ ಸೌಲಭ್ಯ ನೀಡುವ ಮೂಲಕ ಗ್ರಾಹಕರ ಮೆಚ್ಚುಗೆಗೆ ಫೇಸ್ ಬುಕ್ ಪಾತ್ರವಾಗಿತ್ತು. ಆದರೆ, ಇಂದು ಇನ್ಸ್ಟಾ ಗ್ರಾಮ್ ಮಾದರಿಯಲ್ಲಿ ಸ್ಟೇಟಸ್ ಅಪ್ಡೇಟ್ ಆಯ್ಕೆ ನೀಡಿ ಎಲ್ಲರಿಗೂ ಕಿರಿಕಿರಿ ಉಂಟು ಮಾಡಿದೆ. [ವಾಟ್ಸಪ್: ಬ್ಲಾಕ್ ಮಾಡಿದ್ರೆ UnBlock ಮಾಡ್ಕೊಳ್ಳೊದು ಹೇಗೆ?]

ಈ ಅಪ್ಡೇಡ್ ಮಾಡಿಕೊಳ್ಳುವುದು ಸುಲಭವಾದರೂ ಹೊಸ ಸಂಗತಿಯೇನಿಲ್ಲ. ಸ್ನಾಪ್ ಚಾಟ್ ಜತೆ ಪೈಪೋಟಿಗೆ ಬಿದ್ದಿರುವ ಫೇಸ್ ಬುಕ್, ಇನ್ಸ್ಟಾ ಗ್ರಾಮ್ ನಲ್ಲಿರುವ ಸೌಲಭ್ಯವನ್ನು ವಾಟ್ಸಪ್ ಗೆ ನೀಡಿರುವುದು ಬಹುತೇಕರಿಗೆ ಕಿರಿಕಿರಿ ಉಂಟು ಮಾಡಿದೆ.

ಚಾಟ್ ಟ್ಯಾಬ್ ಪಕ್ಕದಲ್ಲೆ ಸ್ಟೇಟಸ್

ಚಾಟ್ ಟ್ಯಾಬ್ ಪಕ್ಕದಲ್ಲೆ ಸ್ಟೇಟಸ್

ವಾಟ್ಸಪ್ ಓಪನ್ ಮಾಡಿದ ಬಳಿಕ chats ಎಂಬ ಟ್ಯಾಬ್ ಪಕ್ಕದಲ್ಲಿ status ಎಂಬ ಹೊಸ ಟ್ಯಾಬ್ ಕಾಣುತ್ತದೆ. ಈ ಮೊದಲು ಈ ಜಾಗದಲ್ಲಿ ಕಾಂಟ್ಯಾಕ್ಟ್ ಇತ್ತು. ಈ ಸ್ಟೇಟಸ್ ಒತ್ತಿ ನಿಮ್ಮ ಸ್ಟೇಟಸ್ ಹಾಕಿಕೊಳ್ಳಬಹುದು.

ಹಸಿರು ಬಣ್ಣದ WhatsApp ಎಂಬ ಚಿನ್ಹೆಯನ್ನು ಒತ್ತಿದರೆ ನಿಮಗೆ ಹೊಸ ಸೌಲಭ್ಯಕ್ಕೆ ಸ್ವಾಗತ ಕೋರುತ್ತದೆ. ಅದರ ಮೇಲೆ ಟ್ಯಾಪ್ ಮಾದಿದರೆ ಸ್ಟೇಟಸ್ ಅಪ್ಡೇಟ್ ಬಗ್ಗೆ ಸಂಕ್ಷಿಪ್ತವಾಗಿ ವಿವರಣೆ ಸಿಗುತ್ತದೆ. ಈ ಸ್ಟೇಟಸ್ ಅಪ್ಡೇಟ್ ತಾನಾಗೇ ಆಗಿದು, ಆಂಡ್ರಾಯ್ಡ್, ಐಓಎಸ್, ವಿಂಡೋಸ್ ಫೋನ್ ಗಳಲ್ಲೂ ಲಭ್ಯವಿದೆ.

ಅಯ್ಯೋ ನನ್ನ ಹಳೆ ಸ್ಟೇಟಸ್ ಹೋಯ್ತು

ಅಯ್ಯೋ ನನ್ನ ಹಳೆ ಸ್ಟೇಟಸ್ ಹೋಯ್ತು

ಈ ಮುಂಚೆಯಂತೆ ಹೊಸ ಸೌಲಭ್ಯವನ್ನು ಬೀಟಾ ವರ್ಷನ್ ನಲ್ಲಿ ರಿಲೀಸ್ ಮಾಡಬಹುದಾಗಿತ್ತು. ಪ್ರಾಯೋಗಿಕವಾಗಿ ಬಳಕೆದಾರರು ಅಪ್ಡೇಟ್ ಮಾಡಿಕೊಂಡು ತಮ್ಮ ಅನುಭವವನ್ನು ಸಂಸ್ಥೆಗೆ ತಿಳಿಸುವ ವ್ಯವಸ್ಥೆ ಇತ್ತು. ಆದರೆ, ಈಗ ಏಕಾಏಕಿ ಅಪ್ಡೇಟ್ ಆಗಿರುವುದರಿಂದ ಈ ಮುಂಚೆ ಇದ್ದ ಸ್ಟೇಟಸ್ ಮೇಸೇಜ್ ಗಳೆಲ್ಲವೂ ಮಾಯವಾಗಿದೆ. ಇದಕ್ಕೆ ಯಾರು ಹೊಣೆ? ನಮ್ಮ ನಿಯಂತ್ರಣದಲ್ಲಿದ್ದ ಸ್ಟೇಟಸ್ ಮೆಸೆಜ್ ಈಗ ಇನ್ನಷ್ಟು ಸುರಕ್ಷತೆ ಪಡೆದುಕೊಂಡರೂ ಹಳೆ ಸ್ಟೇಟಸ್ ಗಳನ್ನು ಕಳೆದುಕೊಳ್ಳಬೇಕಾಗಿದೆ.

ಬರೀ ಚಿತ್ರವಲ್ಲ,ಕಥೆಯನ್ನೆ ಬರೆಯಿರಿ

ಬರೀ ಚಿತ್ರವಲ್ಲ,ಕಥೆಯನ್ನೆ ಬರೆಯಿರಿ

ಈ ಮುಂಚೆ ಸ್ಟೇಟಸ್ ಮೆಸೇಜ್ ನಲ್ಲಿ ಬರಿ ಪಠ್ಯ ಹಾಕಬಹುದಾಗಿತ್ತು. ಈಗ ಚಿತ್ರ, .GIF,ವಿಡಿಯೋ, ಸೆಲ್ಫಿ ವಿಡಿಯೋಗಳನ್ನು ಹಾಕಬಹುದು. ಚಿತ್ರ ಪ್ಲಸ್ ಪಠ್ಯ ಹಾಕಬಹುದು. ಈ ಸೌಲಭ್ಯ ಈಗಾಗಲೆ ಇನ್ಸ್ಟಾ ಗ್ರಾಮ್ ಬಳಕೆದಾರರಿಗೆ ಚಿರಪರಿಚಿತ. ಆದರೆ, ದೈನಂದಿನ ಅಪ್ಡೇಟ್ ಗಳಲ್ಲಿ ಕಂಡು ಬರುವುದು ಕಡಿಮೆ. ವಿಶೇಷ ಸಂದರ್ಭಗಳಲ್ಲಿ ಹೆಚ್ಚು ಬಳೆಕಯಲ್ಲಿದೆ. ಸದ್ಯಕ್ಕೆ ವಾಟ್ಸಪ್ ನಲ್ಲಿ ಈ ಸ್ಟೇಟಸ್ ಅಪ್ಡೇಟ್ 24 ಗಂಟೆಗಳ ಕಾಲ ಮಾತ್ರ ಬೇರೆಯವರಿಗೆ ಕಾಣಿಸುತ್ತದೆ.

ಯಾರು ನೋಡಬಹುದು?

ಯಾರು ನೋಡಬಹುದು?

ಒಮ್ಮೆ ಸ್ಟೇಟಸ್ ಹಾಕಿದ ಬಳಿಕ ಯಾರು ನೋಡಬಹುದು ಎಂಬುದನ್ನು ನೀವೆ ನಿರ್ಧರಿಸಬಹುದು.
* status privacy ಗೆ ಹೋಗಿ ನಿಮ್ಮ ಆಯ್ಕೆ
- My Contacts - ನಿಮ್ಮ ಎಲ್ಲ ಸಂಪರ್ಕ ಸಂಖ್ಯೆಗಳಿಗೆ ನಿಮ್ಮ ಸ್ಟೇಟಸ್ ಕಾಣಿಸುತ್ತದೆ
-.My Contacts except -ನಿಮ್ಮ ಸ್ಟೇಟಸ್ ಯಾರಿಗೆ ಕಾಣಬಾರದು ಎಂಬುದನ್ನು ಆಯ್ಕೆ ಮಾಡಿಕೊಳ್ಳಿ. ಒಂದಕ್ಕಿಂತ ಹೆಚ್ಚು ಕಾಂಟ್ಯಾಕ್ಟ್ ಆಯ್ಕೆ ಮಾಡಿಕೊಳ್ಳಬಹುದು.
- Only Share with -ಯಾರು ಯಾರಿಗೆ ಕಾಣಬೇಕು ಆಯ್ಕೆ ಮಾಡಿಕೊಳ್ಳಿ.

ಸ್ನಾಪ್ ಚಾಪ್ ಅಸಲಿ ಟಾರ್ಗೆಟ್

ಸ್ನಾಪ್ ಚಾಪ್ ಅಸಲಿ ಟಾರ್ಗೆಟ್

ತಿಂಗಳಿಗೆ 1 ಬಿಲಿಯನ್ ಗೂ ಅಧಿಕ ಬಳಕೆದಾರರನ್ನು ಹೊಂದುತ್ತಿರುವ ವಾಟ್ಸಪ್ 60 ಬಿಲಿಯನ್ ಸಂದೇಶಗಳ ಜತೆ ಆಟವಾಡುತ್ತಿದೆ. 3 ಬಿಲಿಯನ್ ಚಿತ್ರಗಳು, 750 ಮಿಲಿಯನ್ ವಿಡಿಯೋ, 80 ಮಿಲಿಯನ್ GIFs ಅದಲು ಬದಲಾಗುತ್ತಿವೆ. ಈಗ ಈ ಸಂಖ್ಯೆಗಳು ಇನ್ನಷ್ಟು ಹೆಚ್ಚಿಸಲು ಸ್ಟೇಟಸ್ ಸೌಲಭ್ಯ ನೀಡಲಾಗಿದೆ.

ವಾಟ್ಸಪ್ ಹಾಗೂ ಇನ್ಸ್ಟಾ ಗ್ರಾಮ್

ವಾಟ್ಸಪ್ ಹಾಗೂ ಇನ್ಸ್ಟಾ ಗ್ರಾಮ್

ಇನ್ಸ್ಟಾಗ್ರಾ ಈಗಾಗಲೇ ಫೇಸ್ ಬುಕ್ ನ ಭಾಗವಾಗಿದೆ. ಅಂದರೆ, ಡೆಸ್ಕ್ ಟಾಪ್ ನಲ್ಲಿ ಓಪನ್ ಮಾಡಿದರೆ, instagram ಫೇಸ್ ಬುಕ್ ನ ಒಂದು app ಆಗಿ ಲಭ್ಯವಿದೆ. ಮುಂದೆ ವಾಟ್ಸಪ್ ಕೂಡಾ ಅದರೂ ಅಚ್ಚರಿಯೇನಿಲ್ಲ.

ಇನ್ಸ್ಟಾಗ್ರಾಮ್ ನಲ್ಲಿ ಇನ್ಸ್ಟಾ ಸ್ಟೋರಿಸ್(ಸ್ಟೇಟಸ್ ಮಾದರಿ) ಬರುತ್ತಿದ್ದಂತೆ ಸ್ನಾಪ್ ಚಾಟ್ ನ ಬಳಕೆ ಶೇ 82ರಷ್ಟು ಕುಸಿತ ಕಂಡಿತು. ಈಗ ವಾಟ್ಸಪ್ ನಲ್ಲಿ ಬಳಕೆದಾರರು ಹೇಗೆ ಸ್ವೀಕರಿಸುತ್ತಾರೋ ಕಾದುನೋಡಬೇಕಿದೆ. ಫೇಸ್ಬುಕ್ ನಡೆ ಕಿರಿಕಿರಿಯಾಗಿದೆ.

English summary
With latest update Popular messaging platform WhatsApp allows its users to share photos, videos, GIFs via WhatsApp ‘Status’, Know How?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X