ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲ್ಯಾಪ್ಸ್‌ ಆದ LIC ಪಾಲಿಸಿಯನ್ನು ಪುನರಾರಂಭಿಸುವುದು ಹೇಗೆ?

|
Google Oneindia Kannada News

ನವದೆಹಲಿ, ಡಿಸೆಂಬರ್ 09: ದೇಶದ ಅತ್ಯಂತ ನಂಬಿಕಸ್ತ ವಿಮಾ ಕಂಪನಿಗಳಲ್ಲಿ ಸರ್ಕಾರಿ ಸ್ವಾಮ್ಯದ ಎಲ್‌ಐಸಿ ಎಲ್ಲರಿಗಿಂತ ಮುಂದಿದೆ. ಸಾರ್ವಜನಿಕರು ಭವಿಷ್ಯದ ಯೋಜನೆಗಾಗಿ ವಿಮೆ ಮಾಡಿಸಲು, ಪಿಂಚಣಿ ಬರುವಂತೆ ಮಾಡಿಕೊಳ್ಳಲು ಎಲ್‌ಐಸಿ ಕಡೆಗೆ ಹೆಚ್ಚಿನ ಒಲವು ಹೊಂದಿದ್ದಾರೆ. ಏಕೆಂದರೆ ಇಲ್ಲಿ ಹೂಡಿಕೆ ಮಾಡುವುದು ಸುರಕ್ಷಿತ ಎಂಬುದು ಜನರ ಭಾವನೆ.

ಎಲ್‌ಐಸಿನಲ್ಲಿ ಕೋಟ್ಯಾಂತರ ಜನರು ವಿಮೆಗಳನ್ನು ಮಾಡಿಸಿದ್ದಾರೆ. ಅನೇಕ ರೀತಿಯಲ್ಲಿ ಯೋಜನೆಗಳನ್ನು ಹೊಂದಿರುವ ಎಲ್‌ಐಸಿಗೆ ಹೆಚ್ಚು ಆಕರ್ಷಿತರಾಗಿದ್ದಾರೆ. ಇದರ ನಡುವೆ ಕೆಲವರಿಗೆ ತ್ರೈಮಾಸಿಕ, ಆರು ತಿಂಗಳಿಗೊಮ್ಮೆ, ವರ್ಷಕೊಮ್ಮೆ ಕಂತುಗಳನ್ನು ಪಾವತಿಸಲು ಸಾಧ್ಯವಾಗದೆ ತೊಂದರೆಗೆ ಸಿಲುಕಿದ್ದವರು ಸಹ ಇದ್ದಾರೆ. ಆದರೆ ಚಿಂತಿಸಬೇಡಿ, ನಿಮ್ಮ ಸ್ಥಗಿತಗೊಂಡಿರುವ ಎಲ್‌ಐಸಿ ಪಾಲಿಸಿಯನ್ನು ಪುನಃ ಆರಂಭಿಸಲು ಸಾಧ್ಯವಿದೆ. ಅದು ಹೇಗೆ ಎಂದು ಈ ಕೆಳಗೆ ತಿಳಿಯಿರಿ.

ನೀವು ಕಂತುಗಳನ್ನು ಸರಿಯಾಗಿ ಪಾವತಿಸದಿದ್ದರೆ ಪಾಲಿಸಿ ಸ್ಥಗಿತಗೊಳ್ಳುತ್ತದೆ

ನೀವು ಕಂತುಗಳನ್ನು ಸರಿಯಾಗಿ ಪಾವತಿಸದಿದ್ದರೆ ಪಾಲಿಸಿ ಸ್ಥಗಿತಗೊಳ್ಳುತ್ತದೆ

ಅನೇಕ ಜನರು ತಮ್ಮ ಭವಿಷ್ಯದ ದೃಷ್ಟಿಯಿಂದ ಭದ್ರತೆಗಾಗಿ ವಿಮಾ ಪಾಲಿಸಿಯನ್ನು ಮಾಡಿಸಿರುತ್ತಾರೆ. ಆದ್ರೆ ಹಣದ ಕೊರತೆ ಮತ್ತು ಅನೇಕ ಕಾರಣಗಳಿಂದಾಗಿ, ಪಾಲಿಸಿಯ ಮೊತ್ತವನ್ನು ಸಮಯಕ್ಕೆ ಜಮಾ ಮಾಡಲು ಸಾಧ್ಯವಾಗಿರುವುದಿಲ್ಲ. ಇದರಿಂದಾಗಿ ಪಾಲಿಸಿಯು ಸ್ಥಗಿತಗೊಂಡು ನಷ್ಟಗೊಳ್ಳುವ ಸಾಧ್ಯತೆ ಇರುತ್ತದೆ. ಆದರೆ ಈ ಪಾಲಿಸಿಯನ್ನು ಮತ್ತೆ ಪುನರಾರಂಭಿಸಲು ಅವಕಾಶವಿದೆ ಎಂದು ಅನೇಕ ಜನರಿಗೆ ತಿಳಿಯದೆ ಸಮಸ್ಯೆಗಳನ್ನು ಎದುರಿಸಿರುತ್ತಾರೆ.

LIC ಒಂದು ಬಾರಿ ಪಾವತಿ: ಪ್ರತಿ ತಿಂಗಳು 36,000 ರೂ. ಪಿಂಚಣಿLIC ಒಂದು ಬಾರಿ ಪಾವತಿ: ಪ್ರತಿ ತಿಂಗಳು 36,000 ರೂ. ಪಿಂಚಣಿ

ನಿರ್ದಿಷ್ಟ ಸಮಯದಲ್ಲಿ ಪಾಲಿಸಿ ಪುನರಾರಂಭಿಸಬಹುದು

ನಿರ್ದಿಷ್ಟ ಸಮಯದಲ್ಲಿ ಪಾಲಿಸಿ ಪುನರಾರಂಭಿಸಬಹುದು

ಜೀವ ವಿಮಾ ಪಾಲಿಸಿಯ ಪ್ರೀಮಿಯಂ ಅನ್ನು ಸಮಯಕ್ಕೆ ಸರಿಯಾಗಿ ಠೇವಣಿ ಮಾಡದಿದ್ದರೆ, ಪಾಲಿಸಿಯು ಲ್ಯಾಪ್ಸ್‌ ಆಗುತ್ತದೆ. ಆದರೆ ಒಂದು ನಿರ್ದಿಷ್ಟ ಸಮಯದೊಳಗೆ ಕೆಲವು ಷರತ್ತುಗಳನ್ನು ಪೂರೈಸುವ ಮೂಲಕ ಮುಚ್ಚಿದ ವಿಮಾ ಪಾಲಿಸಿಯನ್ನು ಪುನರಾರಂಭಿಸಬಹುದು.

ಈ ರೀತಿ ಆಗಿದ್ದರೆ ಪಾಲಿಸಿ ಪುನಃ ಆರಂಭಿಸಲು ಸಾಧ್ಯವಿಲ್ಲ!

ಈ ರೀತಿ ಆಗಿದ್ದರೆ ಪಾಲಿಸಿ ಪುನಃ ಆರಂಭಿಸಲು ಸಾಧ್ಯವಿಲ್ಲ!

ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದಲ್ಲಿ ನೀವು ಯಾವುದೇ ಪಾಲಿಸಿಯನ್ನು ಖರೀದಿಸಿದ್ದರೆ, ಕನಿಷ್ಠ ಮೂರು ವರ್ಷಗಳವರೆಗೆ ಪಾಲಿಸಿಯ ಕಂತುಗಳನ್ನು ಕಟ್ಟಿರಬೇಕಾಗುತ್ತದೆ. ಆಗ ಮಾತ್ರ ನೀವು ಪಾಲಿಸಿಯನ್ನು ಪುನಃ ಆರಂಭಿಸಬಹುದು. ಅದೇ ಸಮಯದಲ್ಲಿ, ಪಾಲಿಸಿಯನ್ನು ಒಂದು ವರ್ಷಕ್ಕಿಂತ ಕಡಿಮೆ ಅವಧಿಗೆ ಸಲ್ಲಿಸದಿದ್ದರೆ, ಪಾಲಿಸಿ ಪುನಃ ಆರಂಭಿಸಲು ಸಾಧ್ಯವಿಲ್ಲ. ಇದು ವಿಭಿನ್ನ ಕಂಪನಿಗಳಲ್ಲಿ ಬೇರೆ ನಿಯಮಗಳನ್ನು ಸಹ ಹೊಂದಿದೆ.

ಅಂಚೆ ಉಳಿತಾಯ ಖಾತೆಯಲ್ಲಿ 500 ರೂ. ಇರುವುದು ಕಡ್ಡಾಯಅಂಚೆ ಉಳಿತಾಯ ಖಾತೆಯಲ್ಲಿ 500 ರೂ. ಇರುವುದು ಕಡ್ಡಾಯ

ಇನ್ನು ಪ್ರೀಮಿಯಂ ಅನ್ನು ಮೂರು ವರ್ಷಗಳ ಕಾಲ ಪಾವತಿ ಮಾಡದಿದ್ದರೆ, ಪಾಲಿಸಿಯನ್ನು ಲ್ಯಾಪ್ಸ್ ಎಂದು ಘೋಷಿಸಲಾಗುತ್ತದೆ. ಎಲ್‌ಐಸಿ ಪ್ರಕಾರ, ಪಾಲಿಸಿಯನ್ನು ಐದು ವರ್ಷಗಳವರೆಗೆ ಸಲ್ಲಿಸದಿದ್ದರೆ, ಅದು ಸಂಪೂರ್ಣವಾಗಿ ನಷ್ಟವಾಗುತ್ತದೆ, ನಂತರ ಅದನ್ನು ಪುನರುಜ್ಜೀವನಗೊಳಿಸಲಾಗುವುದಿಲ್ಲ.

ಸ್ಥಗಿತಗೊಂಡ ಪಾಲಿಸಿಯನ್ನು ಹೇಗೆ ಪುನರಾರಂಭಿಸುವುದು?

ಸ್ಥಗಿತಗೊಂಡ ಪಾಲಿಸಿಯನ್ನು ಹೇಗೆ ಪುನರಾರಂಭಿಸುವುದು?

ನಿಮ್ಮ ಲ್ಯಾಪ್ಸ್ ಪಾಲಿಸಿಯನ್ನು ಪುನರಾರಂಭಿಸಲು ನೀವು ಮೊದಲು ನಿಮ್ಮ ವಿಮಾ ಕಂಪನಿಯ ಹತ್ತಿರದ ಶಾಖೆಗೆ ಹೋಗಬೇಕಾಗುತ್ತದೆ. ಜೊತೆಗೆ ನೀವು ಉಳಿದ ಪ್ರೀಮಿಯಂನ ಒಟ್ಟು ಮೊತ್ತವು ಎಷ್ಟಾಗಿದೆ ಎಂದು ತಿಳಿದು ಪ್ರೀಮಿಯಂ ಮೊತ್ತದ ಜೊತೆಗೆ ಗ್ರಾಹಕರು ದಂಡವನ್ನು ಪಾವತಿ ಮಾಡಬೇಕು.

ಹಣ ಪಾವತಿ ಜೊತೆಗೆ ಗ್ರಾಹಕರು ತಮ್ಮ ಆರೋಗ್ಯ ಪ್ರಮಾಣಪತ್ರವನ್ನೂ ಸಲ್ಲಿಸಬೇಕು. ಪುನರುಜ್ಜೀವನಕ್ಕಾಗಿ ಮೊತ್ತವನ್ನು ಠೇವಣಿ ಮಾಡುವಾಗ ಫಾರ್ಮ್ ಸಂಖ್ಯೆ 680 ಅನ್ನು ಸಹ ಭರ್ತಿ ಮಾಡಬೇಕಾಗುತ್ತದೆ. ಗ್ರಾಹಕರು ತಮ್ಮ ಐಡಿ ಮತ್ತು ವಿಳಾಸಗಳ ಕುರಿತಾದ ದಾಖಲೆಗಳ ಜೆರಾಕ್ಸ್‌ ಸಹ ಸಲ್ಲಿಸಬೇಕಾಗುತ್ತದೆ. ಇನ್ನು ಪುನಃ ಆರಂಭಿಸುವ ಪಾಲಿಸಿಯ ಮೊತ್ತವು 50 ಸಾವಿರಕ್ಕಿಂತ ಹೆಚ್ಚಿದ್ದರೆ, ಆ ಸಂದರ್ಭದಲ್ಲಿ ಗ್ರಾಹಕರು ಪ್ಯಾನ್ ಕಾರ್ಡ್‌ನ ಜೆರಾಕ್ಸ್‌ ಸಹ ಸಲ್ಲಿಸಬೇಕಾಗುತ್ತದೆ. ಈ ಮೂಲಕ ಗ್ರಾಹಕರು ತಮ್ಮ ಪಾಲಿಸಿಯನ್ನು ಪುನರಾರಂಭಿಸಬಹುದು.

English summary
If you have LIC policy, and to know about how to renewal or restart the LIC policy. Details here
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X