ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್‌ಬಿಐ ಮನೆಬಾಗಿಲಿಗೆ ಬ್ಯಾಂಕಿಂಗ್ ಸೇವೆ ಪಡೆಯೋದು ಹೇಗೆ?

|
Google Oneindia Kannada News

ಸರ್ಕಾರಿ ಸ್ವಾಮ್ಯದ ಅತಿ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಸೇವೆಯನ್ನು ಇನ್ನಷ್ಟು ವಿಸ್ತರಿಸುತ್ತಿದೆ. ಡೋರ್ ಸ್ಟೆಪ್ ಬ್ಯಾಂಕಿಂಗ್ ಎಂಬ ವ್ಯವಸ್ಥೆಯನ್ನು ಹೊಸದಾಗಿ ಅಳವಡಿಸಿಕೊಳ್ಳುತ್ತಿದೆ. ಗ್ರಾಹಕರ ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆಯನ್ನು ಕೊಂಡೊಯ್ಯುವ ಉದ್ದೇಶ ಹೊಂದಿದೆ.

ಕೋವಿಡ್ 19 ನಿರ್ಬಂಧ, ಮಾರ್ಗಸೂಚಿಗಳಿಂದ ಬ್ಯಾಂಕುಗಳಿಗೆ ತೆರಳಲು ಕಷ್ಟಪಡುವ ಗ್ರಾಹಕರಿಗೆ ಈ ಹೊಸ ವ್ಯವಸ್ಥೆಯಿಂದ ಅನುಕೂಲವಾಗಲಿದೆ, ಅದಷ್ಟು ಬೇಗ ಈಗ ಹೊಸ ಸೆಗೆ ನೋಂದಾಯಿಸಿಕೊಂಡು, ಸೇವೆ ಲಾಭ ಪಡೆಯಿರಿ ಎಂದು ಸಂಸ್ಥೆ ಟ್ವೀಟ್ ಮಾಡಿದೆ.

ನೋಂದಣಿ ಹೇಗೆ?
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕರು ಈ ಸೇವೆ ಪಡೆಯಲು ನೋಂದಣಿ ಮಾಡಿಕೊಳ್ಳುವುದು ಅಗತ್ಯವಾಗಿದ್ದು, 1800 1037 188 ಅಥವಾ 1800 1213 721 ಗೆ ಕರೆ ಮಾಡಿ ನೋಂದಾಯಿಸಿಕೊಳ್ಳಬಹುದು. ಅಥವಾ ಅಧಿಕೃತ ವೆಬ್ ತಾಣದ ಲಿಂಕ್ (https://bank.sbi/dsb) ಕ್ಲಿಕ್ ಮಾಡಿ ನೋಂದಾಯಿಸಿಕೊಳ್ಳಿ.

How To Register for SBI Doorstep Banking: Know about List Of Services

ಈ ವ್ಯವಸ್ಥೆಯಲ್ಲಿ ಮೂರು ರೀತಿ ಸೇವೆ ಲಭ್ಯವಿದ್ದು, ಪಿಕ್ ಅಪ್ ಸೇವೆ, ಡೆಲಿವರಿ ಸೇವೆ ಹಾಗೂ ಇನ್ನಿತರ ಸೇವೆಗಳಿವೆ. ಪಿಕ್ ಅಪ್ ಸೇವೆಯಲ್ಲಿ ಚೆಕ್/ಡ್ರಾಫ್ಟ್/ಪೇ ಆರ್ಡರ್, ಹೊಸ ಚೆಕ್ ಬುಕ್ ಮನವಿ, ಐಟಿ ಚಲನ್ ಇನ್ನಿತರ ಸೇವೆಗಳು ಲಭ್ಯವಿರಲಿದೆ.

ಡೆಲಿವರಿ ಸೇವೆಯಲ್ಲಿ ಡ್ರಾಫ್ಟ್, ಪೇ ಆರ್ಡರ್, ಡೆಪಾಸಿಟ್ ರಸತಿ, ಖಾತೆ ಬ್ಯಾಲೆನ್ಸ್ ವಿವರ, ಟಿಡಿಎಸ್/ಫಾರ್ಮ್ 16 ಸರ್ಟಿಫಿಕೇಟ್, ಗಿಫ್ಟ್ ಕಾರ್ಡ್ ಪಡೆಯುವುದು ಮುಂತಾದವುಗಳು ಸೇರಿವೆ. ಇದಲ್ಲದೆ, ನಗದು ವಿಥ್ ಡ್ರಾ, ಪಿಂಚಣಿದಾರರಿಗೆ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಒದಗಿಸುವ ಸೇವೆಗಳಿವೆ.

ಇದಲ್ಲದೆ, ಎಸ್‌ಬಿಐ ಇತ್ತೀಚೆಗೆ ಹೊಸ ಮಾದರಿ ವೈಯಕ್ತಿಕ ಸಾಲ ಯೋಜನೆ ಪ್ರಕಟಿಸಿದೆ. ಕವಚ್ ವೈಯಕ್ತಿಕ ಸಾಲ ಯೋಜನೆಯು ಕೋವಿಡ್ 19 ಸೋಂಕಿತರಿಗಾಗಿ ವಿನ್ಯಾಸಗೊಳಿಸಲಾಗಿದ್ದು, ಕೋವಿಡ್ ಆರೈಕೆಗೆ ತಗುಲುವ ಖರ್ಚು ವೆಚ್ಚ ನಿಭಾಯಿಸಲು ಸಹಕಾರಿಯಾಗಲಿದೆ. ಶೇ 8.5ರ ವಾರ್ಷಿಕ ಬಡ್ಡಿದರದಂತೆ 5 ಲಕ್ಷ ರು ಲಭ್ಯವಾಗಲಿದೆ.

English summary
State Bank of India (SBI) is offering doorstep banking facility amid the ongoing Covid pandemic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X