ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಕ್‍ಡೌನ್: ವೊಡಾಫೋನ್ ಪ್ರೀಪೇಯ್ಡ್ ರೀಚಾರ್ಜ್ ಮಾಡಲು ''ಐಡಿಯಾ"

|
Google Oneindia Kannada News

ಬೆಂಗಳೂರು, ಏಪ್ರಿಲ್ 12: ಲಾಕ್‍ಡೌನ್ ಅವಧಿಯಲ್ಲಿ ಕೂಡಾ ಕರ್ನಾಟಕದ ಗ್ರಾಹಕರು ಸಂಪರ್ಕ ಸಾಧಿಸುವುದನ್ನು ಖಾತರಿಪಡಿಸುವ ದೃಷ್ಟಿಯಿಂದ ವೊಡಾಫೋನ್ ಐಡಿಯಾ ತನ್ನ ಡಿಜಿಟಲ್ ಪ್ಲಾಟ್‍ಫಾರಂ ಮೂಲಕ ಗ್ರಾಹಕರು ಎಲ್ಲ ಸೇವೆಗಳನ್ನು ಪಡೆಯಲು ಮತ್ತು ರೀಚಾರ್ಜ್ ಮಾಡಲು ಅವಕಾಶ ಮಾಡಿಕೊಟ್ಟಿದೆ.

ವೊಡಾಫೋನ್ ಐಡಿಯಾ ಗ್ರಾಹಕ ಸೇವಾ ತಂಡದವರು ವಿಡಿಯೋ ಲಿಂಕ್, ಜಿಐಎಫ್ ಮತ್ತು ಡಾಕೆಟ್‍ಗಳ ಮೂಲಕ ರೀಚಾರ್ಜ್ ಮಾಡುವ ಪ್ರಕ್ರಿಯೆಯನ್ನು ವಿವರಿಸುವುದಲ್ಲದೇ ಇದರ ಮೂಲಕ ಬಿಲ್ ಹೇಗೆ ಪಾವತಿಯಾಗುತ್ತದೆ ಎಂದು ವಿವರಿಸಿ ಡಿಜಿಟಲ್ ಪ್ಲಾಟ್‍ಫಾರಂನ ಪ್ರಯೋಜನಗಳಿಗೆ ಸಂಬಂಧಿಸಿದಂತೆ ಗ್ರಾಹಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ರೀಚಾರ್ಜ್ ಪ್ರಕ್ರಿಯೆ ವಿವರಗಳನ್ನು ವೊಡಾಫೋನ್ ಆ್ಯಪ್, ಮೈ ಐಡಿಯಾ ಆ್ಯಪ್ ಮೂಲಕವೂ ನೀಡಲಾಗುತ್ತಿದ್ದು, ಡಿಜಿಟಲ್ ವ್ಯಾಲೆಟ್‍ಗಳ ಮೂಲಕ ಇದನ್ನು ಸಕ್ರಿಯಗೊಳಿಸಲಾಗುತ್ತದೆ.

ಜಿಯೋಫೋನ್‌ ಬಳಕೆದಾರರಿಗೆ ಬಂಪರ್ ಆಫರ್ ಕೊಟ್ಟ ಜಿಯೋಜಿಯೋಫೋನ್‌ ಬಳಕೆದಾರರಿಗೆ ಬಂಪರ್ ಆಫರ್ ಕೊಟ್ಟ ಜಿಯೋ

ಪ್ರಿಪೇಯ್ಡ್ ಗ್ರಾಹಕರು ತಮ್ಮ ಹತ್ತಿರದ ಬ್ಯಾಂಕ್ ಎಟಿಎಂಗಳ ಮೂಲಕವೂ ರೀಚಾರ್ಜ್ ಮಾಡಿಕೊಳ್ಳಬಹುದಾಗಿದೆ. ಇದರ ಜತೆಗೆ ವೊಡಾಫೋನ್ ಐಡಿಯಾ, ಡಿಜಿಟಲ್ ವ್ಯವಸ್ಥೆ ಪರಿಚಿತವಿರುವ ಗ್ರಾಹಕರು #Rechargeforgood ಮೂಲಕ ತಮ್ಮ ಡಿಜಿಟಲ್ ವ್ಯವಸ್ಥೆಯ ಪರಿಚಯ ಇಲ್ಲದ ಸ್ನೇಹಿತರು, ಸಂಬಂಧಿಕರು ಮತ್ತು ನೆರೆಹೊರೆಯವರಿಗೆ ನೆರವಾಗುವಂತೆಯೂ ಮನವಿ ಮಾಡುತ್ತಿದೆ.

ಎಸ್‍ಎಂಎಸ್ ಮತ್ತು ಮಿಸ್ಡ್ ಕಾಲ್

ಎಸ್‍ಎಂಎಸ್ ಮತ್ತು ಮಿಸ್ಡ್ ಕಾಲ್

ಲಾಕ್‍ಡೌನ್ ಅವಧಿಯಲ್ಲಿ ಚಿಲ್ಲರೆ ಮಳಿಗೆಗಳು ಕಾರ್ಯ ನಿರ್ವಹಿಸದೇ ಇರುವುದರಿಂದ ವೊಡಾಫೋನ್ ಐಡಿಯಾ ತನ್ನ ಫೀಚರ್ ಫೋನ್‍ಗಳನ್ನು ಹೊಂದಿದ 2ಜಿ ಗ್ರಾಹಕರಿಗೆ ಕ್ಷಿಪ್ರ ರೀಚಾರ್ಜ್ ಸೇವೆಯನ್ನು ಎಸ್‍ಎಂಎಸ್ ಮತ್ತು ಮಿಸ್ಡ್ ಕಾಲ್ ಮೂಲಕ ಕೂಡಾ ಒದಗಿಸುತ್ತಿದೆ. ಈ ಪ್ರಕ್ರಿಯೆಯು ಅರ್ಥ ಮಾಡಿಕೊಳ್ಳಲು ಸರಳ ಹಾಗೂ ಸುಲಭ. ಗ್ರಾಹಕರು ತಮ್ಮ ರಿಜಿಸ್ಟರ್ಡ್ ಮೊಬೈಲ್ ಸಂಖ್ಯೆಯಿಂದ ಎಸ್‍ಎಂಎಸ್ ಮಾಡುವ ಮೂಲಕ ರೀಚಾರ್ಜ್ ಮಾಡಿಸಿಕೊಳ್ಳಬಹುದು. ಕೆಲ ಪ್ರಕರಣಗಳಲ್ಲಿ ಗ್ರಾಹಕರು ನಿಯೋಜಿತ ಸಂಖ್ಯೆಗೆ ಮಿಸ್ಡ್ ಕಾಲ್ ನೀಡುವ ಮೂಲಕ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಾಗುತ್ತದೆ.

ಎಸ್‍ಎಂಎಸ್ ಮೂಲಕ ಕ್ಷಿಪ್ರ ರೀಚಾರ್ಜ್

ಎಸ್‍ಎಂಎಸ್ ಮೂಲಕ ಕ್ಷಿಪ್ರ ರೀಚಾರ್ಜ್

ಉದಾಹರಣೆಗೆ ಎಸ್‍ಬಿಐ ಬ್ಯಾಂಕ್: 9223440000 ಸಂಖ್ಯೆಗೆ ಎಸ್‍ಎಂಸ್ ಮಾಡಿ.

ಎಸ್‍ಎಂಎಸ್‍ಮಾದರಿ:

StopupUseridMPINVODAFONE/IDEA10 digit Mob NoAmount
• ಐಸಿಐಸಿಐ ಬ್ಯಾಂಕ್: 9222208888 ಸಂಖ್ಯೆಗೆ ಎಸ್‍ಎಂಎಸ್ ಮಾಡಿ: MTOPUPIDEA/VODAFONE10 digit Mob NoAmountLast 6 digits of Bank Acc

• ಆ್ಯಕ್ಸಿಸ್ ಬ್ಯಾಂಕ್: 9717000002/ 5676782 ಸಂಖ್ಯೆಗೆ ಕರೆ ಮಾಡಿ: MOBILE10 digit Mob NoIdea/VodafoneAmountLast 6 digits of Bank Acc
• ಕೊಟಕ್ ಬ್ಯಾಂಕ್: 9971056767/ 5676788ಕ್ಕೆ ಎಸ್‍ಎಂಎಸ್ ಮಾಡಿ: REC10 digit Mob No VODAFONE/IDEAAmountLast 4 digits of Bank Acc
• ಇಂಡುಸ್‍ಇಂಡ್ ಬ್ಯಾಂಕ್: 9212299955ಗೆ ಎಸ್‍ಎಂಎಸ್ ಮಾಡಿ: MOB10 digit Mob No VODAFONE/IDEAAmountLast 4 digits of Debit card

ಜಿಯೋ ಫೈಬರ್ ಹೊಚ್ಚ ಹೊಸ ಆಫರ್, WFHಗೆ ಅನುಕೂಲಜಿಯೋ ಫೈಬರ್ ಹೊಚ್ಚ ಹೊಸ ಆಫರ್, WFHಗೆ ಅನುಕೂಲ

ಮಿಸ್ಡ್ ಕಾಲ್ ಮೂಲಕ ತ್ವರಿತ ರೀಚಾರ್ಜ್

ಮಿಸ್ಡ್ ಕಾಲ್ ಮೂಲಕ ತ್ವರಿತ ರೀಚಾರ್ಜ್

• ಉದಾಹರಣೆಗೆ ಎಚ್‍ಡಿಎಫ್‍ಸಿ ಬ್ಯಾಂಕ್: 7308080808ಗೆ ಎಸ್‍ಎಂಎಸ್ ಮತ್ತು ಕರೆ ಮಾಡಿ.
ಹಂತ 1: ACT VODAFONE/IDEALast 5 digits of Bank Acc
ಹಂತ 2: FAV98XXXXXXXXAmount
ಕರೆ ಮಾಡುವ ಮೂಲಕ ನಿಮ್ಮ ರೀಚಾಜ್ ದೃಢೀಕರಿಸಿ
ಹಂತ 3: 7308080808ಗೆ ಮಿಸ್ಡ್ ಕಾಲ್ ಕೊಡಿ.

ವೋಡಾಫೋನ್ ಮಳಿಗೆಗಳಲ್ಲೂ ಲಭ್ಯ

ವೋಡಾಫೋನ್ ಮಳಿಗೆಗಳಲ್ಲೂ ಲಭ್ಯ

ಈ ವ್ಯವಸ್ಥೆಯು ಈಗಾಗಲೇ ಚಾಲ್ತಿಯಲ್ಲಿದ್ದು, ಗ್ರಾಹಕರು ತಮ್ಮ ರಿಜಿಸ್ಟರ್ಡ್ ಮೊಬೈಲ್ ಸಂಖ್ಯೆ ಬಳಸಿ ಈ ಸೌಲಭ್ಯ ಪಡೆಯಬಹುದಾಗಿದೆ. ಗ್ರಾಹಕರಿಗೆ ಹೆಚ್ಚುವರಿ ಅನುಕೂಲತೆಯನ್ನು ಒದಗಿಸುವ ದೃಷ್ಟಿಯಿಂದ ವೊಡಾಫೋನ್ ಪ್ರಿಪೇಯ್ಡ್ ಗ್ರಾಹಕರು ಇದೀಗ ಐಡಿಯಾ ಚಿಲ್ಲರೆ ಮಳಿಗೆಗಳಲ್ಲಿ ಮತ್ತು ಐಡಿಯಾ ಗ್ರಾಹಕರು ವೊಡಾಫೋನ್ ಚಿಲ್ಲರೆ ಮಳಿಗೆಗಳಲ್ಲಿ ಕೂಡ ಇದೀಗ ರೀಚಾರ್ಜ್ ಮಾಡಿಸಿಕೊಳ್ಳಬಹುದಾಗಿದೆ.

ವೊಡಾಫೋನ್ ಐಡಿಯಾ ಬಗ್ಗೆ

ವೊಡಾಫೋನ್ ಐಡಿಯಾ ಬಗ್ಗೆ

ವೊಡಾಫೋನ್ ಐಡಿಯಾ ಲಿಮಿಟೆಡ್ ಒಂದು ಆದಿತ್ಯ ಬಿರ್ಲಾ ಸಮೂಹದ ಮತ್ತು ವೊಡಾಫೋನ್ ಸಮೂಹದ ಪಾಲುದಾರಿಕೆ ಕಂಪನಿಯಾಗಿದೆ. ಇದು ಭಾರತದ ಮುಂಚೂಣಿ ಟೆಲಿಕಾಂ ಸೇವೆ ಒದಗಿಸುವ ಸಂಸ್ಥೆಯಾಗಿದೆ. ಕಂಪನಿಯು ಭಾರತದಾದ್ಯಂತ ಧ್ವನಿ ಮತ್ತು ಡಾಟಾ ಸೇವೆಗಳನ್ನು 2ಜಿ, 3ಜಿ ಮತ್ತು 4ಜಿ ಪ್ಲಾಟ್‍ಪಾರಂ ಮೂಲಕ ಒದಗಿಸುತ್ತಿದೆ. ಡಾಟಾ ಮತ್ತು ಧ್ವನಿ ಸೇವೆಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸುವ ಸಲುವಾಗಿ ದೊಡ್ಡದಾದ ತರಂಗಗುಚ್ಛ ಶ್ರೇಣಿಯನ್ನು ಕಂಪನಿಯು ಹೊಂದಿದ್ದು, ಲಕ್ಷಾಂತರ ಗ್ರಾಹಕರು ಪರಸ್ಪರ ಸಂಪರ್ಕ ಸಾಧಿಸಲು ಮತ್ತು ಉತ್ತಮ ನಾಳೆಯನ್ನು ಸೃಷ್ಟಿಸಲು ಕೊಡುಗೆ ನೀಡುವ ಮೂಲಕ ಗ್ರಾಹಕರಿಗೆ ಸಂತೋಷದಾಯಕ ಅನುಭವವನ್ನು ಒದಗಿಸಲು ಮತ್ತು ನೈಜ ಡಿಜಿಟಲ್ ಇಂಡಿಯಾ ಸ್ಥಾಪನೆ ನಿಟ್ಟಿನಲ್ಲಿ ಗಣನೀಯ ಕೊಡುಗೆ ನೀಡುತ್ತಿದೆ.

English summary
During Lockdown Vodafone Idea is enabling customers in Karnataka to avail services and recharge online.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X