ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಮಾಜಿಕ ಜಾಲ ತಾಣಗಳಲ್ಲಿ ಹೆಬ್ಬಾರ್ 'ಆಹಾರ ಕಾಂತಿ'

ಎಲ್ಲಾ ಬಗೆಯ ತಿಂಡಿ, ತಿನಿಸು, ಕುರುಕುಲು ಪದಾರ್ಥ, ಕೋತಿನಾಷ್ಟ, ಚಾಟ್ಸ್ ಗಳನ್ನು ಕೇವಲ 2 ನಿಮಿಷಗಳಲ್ಲೇ ತಿಳಿಸಿ ಕೊಡುವ ಹೆಬ್ಬಾರ್ಸ್ ಕಿಚನ್ ಪ್ರಯತ್ನ ಭರ್ಜರಿ ಯಶಸ್ಸು ಕಂಡಿದೆ.

By ಮಲೆನಾಡಿಗ
|
Google Oneindia Kannada News

'ಹೆಬ್ಬಾರ್ಸ್ ಕಿಚನ್' -ಸಾಮಾಜಿಕ ಜಾಲ ತಾಣಗಳಲ್ಲಿ ಚಿರಪರಿಚಿತ ಹೆಸರು. ವೇಗದ ಜೀವನ ಶೈಲಿಯನ್ನು ಬೇಡದಿದ್ದರೂ ಅಳವಡಿಸಿಕೊಂಡು ಹೆಣಗುತ್ತಿರುವ ಸಿಟಿ ಮಂದಿಗೆ ಅಡುಗೆ ಎಂದರೆ ಹೋಟೆಲ್ ನೆನಪಾಗುವ ಕಾಲವಿದು.

ಆದರೆ, ಎಲ್ಲಾ ಬಗೆಯ ತಿಂಡಿ, ತಿನಿಸು, ಕುರುಕುಲು ಪದಾರ್ಥ, ಕೋತಿನಾಷ್ಟ, ಚಾಟ್ಸ್ ಗಳನ್ನು ಕೇವಲ 2 ನಿಮಿಷಗಳಲ್ಲೇ ತಿಳಿಸಿ ಕೊಡುವ ಪ್ರಯತ್ನ ಭರ್ಜರಿ ಯಶಸ್ಸು ಕಂಡಿದೆ.[ಕಾಫಿ ಪ್ರಿಯರಿಗಾಗಿ ಆನ್ಲೈನ್ ಕೆಫೆ]

ಬಹುಶಃ 2 ನಿಮಿಷದಲ್ಲಿ ಮ್ಯಾಗಿ ಮಾತ್ರ ಮಾಡಲು ಸಾಧ್ಯ ಎಂದು ತಿಳಿದುಕೊಂಡಿದ್ದವರಿಗೆ 2 ನಿಮಿಷ ಏನೆಲ್ಲ ಬಗೆ ಬಗೆ ತಿಂಡಿಗಳನ್ನು ತಯಾರಿಸುವುದನ್ನು ಕಲಿಯಬಹುದು ಎಂಬುದನ್ನು ಹೆಬ್ಬಾರ್ಸ್ ಕಿಚನ್ ತೋರಿಸಿಕೊಟ್ಟಿದೆ.['ಹಳ್ಳಿ ಮನೆ ರೊಟ್ಟಿಸ್' ರುಚಿ ಹಿಂದಿದೆ ಯಶಸ್ಸಿನ ಕಥೆ!]

ಸಾಮಾಜಿಕ ಜಾಲ ತಾಣದಲ್ಲಿ ಒಂದು ರೀತಿ ಅಹಾರ ಕ್ರಾಂತಿಗೆ ಕಾರಣವಾಗಿರುವ ಹೆಬ್ಬಾರ್ ಕಿಚನ್ ಎಂಬ ಅಡುಗೆ ಅರಮನೆಯಲ್ಲಿ ಏನುಂಟು ಏನಿಲ್ಲ? [ಅವರೇ: ಅಡುಗೆಗೆ ಬೇಕಿಲ್ಲ, ಕೋತಿನಾಷ್ಟಕ್ಕೆ ಇರದಿರೇ ಆಗಲ್ಲ]

ಹೆಬ್ಬಾರ್ ಕಿಚನ್ ಅಪ್ಲಿಕೇಷನ್ ಡೌನ್ ಲೋಡ್ ಮಾಡಿಕೊಳ್ಳುವುದು ಹೇಗೆ ? ಹೆಬ್ಬಾರ್ಸ್ ಕಿಚನ್ ಅಪ್ಲಿಕೇಷನ್ ಆಂಡ್ರಾಯ್ಡ್ ಅಲ್ಲದೆ ಐಓಎಸ್ ನಲ್ಲೂ ಲಭ್ಯವಿದ್ದು, ಡೌನ್ ಲೋಡ್ ಲಿಂಕ್ ಕೊನೆ ಸ್ಲೈಡ್ ನಲ್ಲಿ ಲಭ್ಯವಿದೆ. ಮುಂದೆ ಓದಿ...

ವೈವಿಧ್ಯತೆಯೇ ಹೆಗ್ಗುರುತು

ವೈವಿಧ್ಯತೆಯೇ ಹೆಗ್ಗುರುತು

ಆಹಾರದಲ್ಲಿರುವ ವೈವಿಧ್ಯತೆಯನ್ನು ಪರಿಚಯಿಸುವ ಮೂಲಕ ತಿಂಡಿ ಪೋತರ ಮನಗೆದ್ದಿರುವ ಹೆಬ್ಬಾರ್ಸ್ ಕಿಚನ್, ಕೇವಲ ವೆಬ್ ಸೈಟ್ ಗೆ ಮಾತ್ರ ಸೀಮಿತವಾಗಿರದೆ, ಸಾಮಾಜಿಕ ಜಾಲ ತಾಣಗಳಲ್ಲಿನ ಎಲ್ಲಾ ಸಾಧ್ಯತೆಗಳನ್ನು ಮೈಗೂಡಿಸಿಕೊಂಡಿದೆ. ಸರಳ, ಸುಂದರ, ಸುಲಲಿತವಾಗಿ ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ಚಿತ್ರಗಳ ಮೂಲಕ ವಿಡಿಯೋ ಅಡುಗೆ ಪಾಠ ನಿಮಗೆ ಸಿಗುತ್ತದೆ. ಮೊದಲೇ ಹೇಳಿದಂತೆ ಬಹುತೇಕ ಎಲ್ಲಾ ವಿಡಿಯೋಗಳು ಕ್ವಿಕ್ ಆಗಿ ನಿಮಗೆ ಪಾಠ ಹೇಳಬಲ್ಲವು.

ಆಫ್ ಲೈನ್ ನಲ್ಲಿ ವಿಡಿಯೋ ಲಭ್ಯ

ಆಫ್ ಲೈನ್ ನಲ್ಲಿ ವಿಡಿಯೋ ಲಭ್ಯ

ಹೆಬ್ಬಾರ್ಸ್ ಕಿಚನ್ ಅಪ್ಲಿಕೇಷನ್ ಡೌನ್ ಲೋಡ್ ಮಾಡಿಕೊಂಡ ಮೇಲೆ ಬಗೆಬಗೆ ಆಹಾರ ಪದಾರ್ಥಗಳನ್ನು ಮಾಡುವ ಬಗೆಯನ್ನು ಆಫ್ ಲೈನ್ ನಲ್ಲೇ ನೋಡಿ ಕಲಿಯಬಹುದು.ಈ ರೀತಿಯಲ್ಲಿ ಚಿತ್ರಗಳ ಮೂಲಕ ವಿಡಿಯೋ ಅಡುಗೆ ಪಾಠ ಹೊಸತನದಿಂದ ಕೂಡಿದ್ದು, ಮೊದಲ ನೋಟ, ಮೊದಲ ಅಡುಗೆಯಲ್ಲೇ ನಿಮ್ಮ ಮೆಚ್ಚುಗೆ ಪಡೆಯಬಲ್ಲದು.

ಕಿಚನ್ ವಿಡಿಯೋ ಪ್ಲೇ ಲಿಸ್ಟ್

ಕಿಚನ್ ವಿಡಿಯೋ ಪ್ಲೇ ಲಿಸ್ಟ್

ಬೆಳಗಿನ ಉಪಾಹಾರ, ಹಬ್ಬದ ಅಡುಗೆ, ಸಿಹಿ ತಿನಿಸು, ರಸ್ತೆ ಬದಿ ಸಿಗುವ ಆಹಾರ, ರೋಟಿ ಚಪಾತಿ, ಪರಾಠಾ, ಸೂಪ್, ಬಗೆ ಬಗೆ ದೋಸೆ, ಕೇಕ್, ಇಡ್ಲಿ, ಉಪ್ಪಿನಕಾಯಿ, ಸಾರು, ಸಾಂಬಾರ್, ಮಸಾಲ ಪುಡಿ, ಜ್ಯೂಸ್ ಗಳು, ಕೇಕ್ ಎಲ್ಲವೂ ಇಲ್ಲಿ ಲಭ್ಯ. ವೆಬ್, ಯೂಟ್ಯೂಬ್, ಮೊಬೈಲ್ ಅಪ್ಲಿಕೇಷನ್ ಎಲ್ಲೆಡೆ ಪ್ಲೇ ಲಿಸ್ಟ್ ಒಂದೇ ರೀತಿ ಇದ್ದು, ವೀಕ್ಷಕರಿಗೆ ಸುಲಭವಾಗಿ ಅಯ್ಕೆ ಮಾಡಲು ಸಾಧ್ಯವಾಗಿದೆ.

ಹೆಬ್ಬಾರ್ಸ್ ಕಿಚನ್ ಸಂಪರ್ಕ

ಹೆಬ್ಬಾರ್ಸ್ ಕಿಚನ್ ಸಂಪರ್ಕ

ಹೆಬ್ಬಾರ್ಸ್ ಕಿಚನ್ ಅಪ್ಲಿಕೇಷನ್ ಆಂಡ್ರಾಯ್ಡ್ ಅಲ್ಲದೆ ಐಓಎಸ್ ನಲ್ಲೂ ಲಭ್ಯವಿದ್ದು, ಡೌನ್ ಲೋಡ್ ಲಿಂಕ್ ಕೊನೆಯಲ್ಲಿದೆ.

* ಇಮೇಲ್ : [email protected]

* ವೆಬ್ ಸೈಟ್ : http://hebbarskitchen.com/

* ಫೇಸ್ ಬುಕ್

* ಟ್ವಿಟ್ಟರ್

* ಪಿಂಟ್ರೆಸ್ಟ್(Pinterest)

* ಗೂಗಲ್ ಪ್ಲಸ್

* ಲಿಂಕ್ ಡಿನ್
* instagram
* tumblr

* youtube

* download android app:

* download iOS app:

ಗೂಗಲ್ ಪ್ಲೇ ಸ್ಟೋರ್ ನಲ್ಲಿ hebbars kitchen ಎಂದು ಟೈಪಿಸಿ ಮೊದಲ ಲಿಂಕ್ ಕ್ಲಿಕ್ ಮಾಡಿ, ಅಪ್ಲಿಕೇಷನ್ ಹಾಗೂ ವೆಬ್ ಸೈಟ್ ನಲ್ಲಿ ಅಡುಗೆ ಮಾಡುವ ವಿಧಾನದ ವಿವರಣೆ ವಿಸ್ತಾರವಾಗಿ ಸಿಗುತ್ತದೆ.

English summary
Hebbar's Kitchen is all about Indian veg recipes.Hebbar's Kitchen is Indian vegetarian recipes collection app. First indian food recipe app to offer step-by-step photo recipes with a brief square short video.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X