ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಯೋ ಫೈಬರ್ ಬಳಕೆದಾರರಿಗೆ ZEE5 ಪ್ರೀಮಿಯಂ ಉಚಿತ

|
Google Oneindia Kannada News

ಬೆಂಗಳೂರು, ಜೂನ್ 28: ಜಿಯೋ ಫೈಬರ್ ತನ್ನ ಬಳಕೆದಾರರಿಗಾಗಿ ಬಂಪರ್ ಆಫರ್ ನೀಡಿದೆ. ಸೆಟ್-ಟಾಪ್ ಬಾಕ್ಸ್ ನಲ್ಲಿ ZEE5 ಪ್ರೀಮಿಯಂ ಕಂಟೆಂಟ್ ಫ್ರೀಯಾಗಿ ಪಡೆದುಕೊಳ್ಳಬಹುದಾಗಿದೆ.

ಜಿಯೋ ಈ ಹಿಂದಿನಂತೆ ತನ್ನ ಬಳಕೆದಾದರಿಗೆ ಹೊಸ ಮಾದರಿಯ ಆಯ್ಕೆಯೊಂದನ್ನು ನೀಡಲು ಮುಂದಾಗಿದೆ. ತನ್ನ ಜಿಯೋ ಫೈಬರ್ ಬಳಕೆದಾರರಿಗೆ ಆಚ್ಚರಿಯ ಆಫರ್ ನೀಡಿದ್ದು, ತನ್ನ ಸೆಟ್ ಟಾಪ್ ಬಾಕ್ಸ್ ನಲ್ಲಿ ಉಚಿತವಾಗಿ ZEE5 ಪ್ರೀಮಿಯಂ ಕಂಟೆಂಟ್ ಗಳನ್ನು ನೋಡುವ ಅವಕಾಶವನ್ನು ಮಾಡಿಕೊಟ್ಟಿದೆ.

ಜಿಯೋಫೈಬರ್ ಸಂಪರ್ಕದೊಂದಿಗೆ ಅಮೆಜಾನ್ ಪ್ರೈಮ್ ಸದಸ್ಯತ್ವಜಿಯೋಫೈಬರ್ ಸಂಪರ್ಕದೊಂದಿಗೆ ಅಮೆಜಾನ್ ಪ್ರೈಮ್ ಸದಸ್ಯತ್ವ

ಸಕ್ರಿಯ ಜಿಯೋ ಫೈಬರ್ ಪ್ಲ್ಯಾನ್ ಗ್ರಾಹಕರು: ಇದಲ್ಲದೆ ಜಿಯೋ ಫೈಬರ್ ಸಿಲ್ವರ್ ತ್ರೈಮಾಸಿಕ ಅಥವಾ ಮೇಲಿನ ಯೋಜನೆಯಲ್ಲಿ ಈಗಾಗಲೇ ಸಕ್ರಿಯವಾಗಿರುವ ಎಲ್ಲ ಬಳಕೆದಾರರಿಗೆ ಜಿಯೋ ಈ ಪ್ರಯೋಜನವನ್ನು ವಿಸ್ತರಿಸುತ್ತಿದೆ. ಇನ್ನೂ ಹೆಚ್ಚಿನ ಪ್ರೀಮಿಯಂ ವಿಷಯಕ್ಕೆ ಪ್ರವೇಶವನ್ನು ಹುಡುಕುತ್ತಿರುವ ಜಿಯೋಫೈಬರ್ ಬಳಕೆದಾರರು ಗೋಲ್ಡ್ ಯೋಜನೆಯನ್ನು ಆರಿಸಿಕೊಳ್ಳಬಹುದು, ಇದು ಹೆಚ್ಚಿನ ವೇಗ ಮತ್ತು ಹೆಚ್ಚಿನ ಬ್ರಾಡ್‌ಬ್ಯಾಂಡ್ ಡೇಟಾವನ್ನು ನೀಡುತ್ತದೆ ಜೊತೆಗೆ ಪ್ರೀಮಿಯಂ ಒಟಿಟಿಗಳಿಗೆ ಉಚಿತ ಪ್ರವೇಶವನ್ನು ನೀಡುತ್ತದೆ.

 ZEE5 ಪ್ರೀಮಿಯಂ ಪಡೆದುಕೊಳ್ಳುವುದು ಹೇಗೆ?

ZEE5 ಪ್ರೀಮಿಯಂ ಪಡೆದುಕೊಳ್ಳುವುದು ಹೇಗೆ?

ZEE5 ಪ್ರೀಮಿಯಂ ಅನ್ನು ಪಡೆದುಕೊಳ್ಳಲು ಜಿಯೋ ಫೈಬರ್ ಬಳಕೆದಾರರು ಮಾಡಬೇಕಾಗಿರುವು ಇಷ್ಟೇ, ಜಿಯೋಫೈಬರ್ ನಲ್ಲಿ ಲಭ್ಯವಿರುವ ಸಿಲ್ವರ್ ತ್ರೈಮಾಸಿಕ ಮತ್ತು ಅದಕ್ಕಿಂತ ಮೇಲಿನ ಯೋಜನೆಗಳನ್ನು ಆಯ್ಕೆ ಮಾಡಿಕೊಂಡರೆ ಸಾಕು ಸಂಪೂರ್ಣವಾಗಿ ZEE5 ಪ್ರೀಮಿಯಂನಲ್ಲಿರುವ ಕಂಟೆಂಟ್ ಗಳನ್ನು ಬಳಕೆ ಮಾಡಬಹುದಾಗಿದೆ.

ZEE5 ಪ್ರೀಮಿಯಂನಲ್ಲಿ ಏನೇನು ದೊರೆಯಲಿದೆ?

ZEE5 ಪ್ರೀಮಿಯಂನಲ್ಲಿ ಏನೇನು ದೊರೆಯಲಿದೆ?

ZEE5 ಪ್ರೀಮಿಯಂನಲ್ಲಿ ಏನೇನಿದೆ: ಜಿಯೋ ಫೈಬರ್ ಬಳಕೆದಾರರು ಬಹು ಭಾಷೆ ಮತ್ತು ಪ್ರಕಾರಗಳಲ್ಲಿ ವಿಭಜಿಸಲಾದ ಪ್ರೀಮಿಯಂ ವಿಷಯದ ಸಂಪೂರ್ಣ ಲೈಬ್ರರಿಗೆ ಉಚಿತವಾಗಿ ಪ್ರವೇಶವನ್ನು ಪಡೆಯಬಹುದಾಗಿದೆ. ಇದರಲ್ಲಿ ಬಳಕೆದಾರರಿಗೆ 1.25 ಲಕ್ಷ ಗಂಟೆಗಳ ಆನ್ ಡಿಮ್ಯಾಂಡ್ ಕಟೆಂಟ್ ಮತ್ತು 100+ ಲೈವ್ ಟಿವಿ ಚಾನೆಲ್‌ಗಳನ್ನು ನೋಡುವ ಅವಕಾಶ ನೀಡಲಿದೆ.

ಜಿಯೋ ಬಳಕೆದಾರರಿಗೆ ಆಫರ್ : ಡಿಸ್ನಿ + ಹಾಟ್‌ಸ್ಟಾರ್ ವಿಐಪಿಯಾಗಿಜಿಯೋ ಬಳಕೆದಾರರಿಗೆ ಆಫರ್ : ಡಿಸ್ನಿ + ಹಾಟ್‌ಸ್ಟಾರ್ ವಿಐಪಿಯಾಗಿ

 12 ಭಾಷೆಗಳಲ್ಲಿ ಕಂಟೆಂಟ್ ಗಳು

12 ಭಾಷೆಗಳಲ್ಲಿ ಕಂಟೆಂಟ್ ಗಳು

ZEE5 ಪ್ರೀಮಿಯಂ ನಲ್ಲಿ ಬಳಕೆದಾರರಿಗೆ ಒರಿಜಿನಲ್ಸ್, ಇಂಡಿಯನ್ ಮತ್ತು ಇಂಟರ್ನ್ಯಾಷನಲ್ ಮೂವೀಸ್ ಮತ್ತು ಟಿವಿ ಶೋಗಳು, ಸಂಗೀತ, ಮಕ್ಕಳ ಶೋಗಳು, ಸಿನೆಪ್ಲೇಗಳು, ಆರೋಗ್ಯ ಮತ್ತು ಜೀವನಶೈಲಿಗೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ಆನಂದಿಸುವ ಅವಕಾಶವು ದೊರೆಯಲಿದೆ.

12 ಭಾಷೆಗಳಲ್ಲಿ ಕಂಟೆಂಟ್ ಗಳು (ಕನ್ನಡ, ಇಂಗ್ಲಿಷ್, ಹಿಂದಿ, ಬಂಗಾಳಿ, ಮಲಯಾಳಂ, ತಮಿಳು, ತೆಲುಗು, ಮರಾಠಿ, ಒರಿಯಾ, ಭೋಜ್‌ಪುರಿ, ಗುಜರಾತಿ ಮತ್ತು ಪಂಜಾಬಿ) ZEE5 ಪ್ರೀಮಿಯಂನಲ್ಲಿ ಲಭ್ಯವಿರಲಿದೆ.

 ZEE5 ಪ್ರೀಮಿಯಂ ಪಡೆದುಕೊಳ್ಳಲು ಏನು ಮಾಡಬೇಕು?

ZEE5 ಪ್ರೀಮಿಯಂ ಪಡೆದುಕೊಳ್ಳಲು ಏನು ಮಾಡಬೇಕು?

ಹೊಸ ಜಿಯೋ ಫೈಬರ್ ಬಳಕೆದಾರರು ಮತ್ತು ಅಸ್ತಿತ್ವದಲ್ಲಿರುವ ಜಿಯೋ ಬಳಕೆದಾರರು ಮೂರು ತಿಂಗಳ ಅಥವಾ ವಾರ್ಷಿಕ ಸಿಲ್ವರ್ ಯೋಜನೆಯನ್ನು ರೀಚಾರ್ಜ್ ಮಾಡಿಸಿಕೊಳ್ಳುವುದರಿಂದ ಪೂರ್ವನಿಯೋಜಿತವಾಗಿ ZEE5 ಪ್ರೀಮಿಯಂ ಕಂಟೆಂಟ್ ಗೆ ಪ್ರವೇಶ ಸಿಗುತ್ತದೆ ಮತ್ತು ಇದಕ್ಕಾಗಿ ಲಾಗಿನ್ ಮಾಡುವ ಅಗತ್ಯವಿಲ್ಲ.

ಇದಲ್ಲದೇ ಗೋಲ್ಡ್ ಪ್ಲಾನ್ ಗಳ ಚಂದಾದಾರರಿಕೆಯನ್ನು ಪಡೆಯುವವರಿಗೆ ZEE5 ಪ್ರೀಮಿಯಂ ಕಟೆಂಟ್ ಬಳಕೆಗೆ ಉಚಿತವಾಗಿ ದೊರೆಯಲಿದೆ. ಇದರೊಂದಿಗೆ ಮಾಸಿಕ ಸಿಲ್ವರ್ ಪ್ಲಾನ್ ರೀಚಾರ್ಜ್ ಮಾಡಿಸಿಕೊಳ್ಳುವ ಹೊಸ ಜಿಯೋಫೈಬರ್ ಬಳಕೆದಾರರು ಮೊದಲ 3 ರೀಚಾರ್ಜ್‌ಗಳಿಗೆ ಮಾತ್ರ ಪ್ರೀಮಿಯಂ ಕಟೆಂಟ್ ಗೆ ಉಚಿತ ಪ್ರವೇಶವನ್ನು ಪಡೆಯಲಿದ್ದಾರೆ.

ಗೋಲ್ಡ್ ಪ್ಲಾನ್ ಬಳಕೆದಾರರಿಗೆ ಹೆಚ್ಚಿನ ಆಯ್ಕೆ

ಗೋಲ್ಡ್ ಪ್ಲಾನ್ ಬಳಕೆದಾರರಿಗೆ ಹೆಚ್ಚಿನ ಆಯ್ಕೆ

ಜಿಯೋಫೈಬರ್ ಗೋಲ್ಡ್ ಪ್ಲ್ಯಾನ್: ಜಿಯೋಫೈಬರ್ ಗೋಲ್ಡ್ ಪ್ಲ್ಯಾನ್ ರೀಚಾರ್ಜ್ ಮಾಡಿಸಿಕೊಳ್ಳುವವರಿಗೆ 250 Mbps ವರೆಗಿನ ಡೇಟಾ ವೇಗ ದೊರೆಯಲಿದೆ. ಇದಲ್ಲದೇ ಅನಿಯಮಿತ ಇಂಟರ್ನೆಟ್ (ಮಾಸಿಕ 1,750 ಜಿಬಿ ಡೇಟಾ ವರೆಗೆ) ಬಳಕೆ ಮಾಡಬಹುದಾಗಿದೆ. ಇದರೊಂದಿಗೆ ಅನ್ಲಿಮಿಟೆಡ್ ವಾಯ್ಸ್ ಕಾಲಿಂಗ್ ಮಾಡುವ ಅವಕಾಶವು ದೊರೆಯಲಿದೆ. ಇಷ್ಟು ಮಾತ್ರವಲ್ಲದೆ ಪ್ರೀಮಿಯಂ ಒಟಿಟಿ ಅಪ್ಲಿಕೇಶನ್‌ಗಳಿಗೆ ಪ್ರವೇಶವನ್ನು ಪಡೆದುಕೊಳ್ಳಲಿದ್ದಾರೆ. - ZEE5 ಪ್ರೀಮಿಯಂ , ಅಮೆಜಾನ್ ಪ್ರೈಮ್ ವಿಡಿಯೋ, ಡಿಸ್ನಿ + ಹಾಟ್‌ಸ್ಟಾರ್, ಸೋನಿಲಿವ್, ಸನ್‌ ನೆಕ್ಟ್, ವೂಟ್, ಆಟಿಎಲ್ ಬಾಲಾಜಿ, ಲಯನ್ಸ್‌ಗೇಟ್, ಹೊಯಿಚೋಯ್, ಶೆಮರೂಮ್, ಜಿಯೋ ಸಿನೆಮಾ ಮತ್ತು ಜಿಯೋಸಾವನ್ ಮುಂತಾದವು ದೊರೆಯಲಿದೆ.

English summary
How to get Zee5 premium subscription? Here is guide to Jiofiber subscribers to change setting on set up box.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X