ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಯೋಫೈಬರ್ ಎಂಬ ವೇಗದ ಬ್ರಾಡ್‍ಬ್ಯಾಂಡ್ ಕನೆಕ್ಷನ್ ಬಗ್ಗೆ ಎಬಿಸಿಡಿ

|
Google Oneindia Kannada News

ಮುಂಬೈ, ಸೆ. 06: ವಿಶ್ವದ ಅತಿದೊಡ್ಡ ಮೊಬೈಲ್ ಡೇಟಾ ಜಾಲ ಹೊಂದಿರುವ ಜಿಯೋ ಸೆ.5ರಿಂದ ಭಾರತದಾದ್ಯಂತ 1,600 ನಗರಗಳಲ್ಲಿ ತನ್ನ ಫೈಬರ್ ಟು ಹೋಮ್ ಸೇವೆಯಾದ ಜಿಯೋಫೈಬರ್ ಪ್ರಾರಂಭಿಸಿದೆ. ಸಂಪರ್ಕಿತರಲ್ಲದವರನ್ನು ಸಂಪರ್ಕಿಸುವ ಜೊತೆಗೆ ಪರಿವರ್ತನೆ ತರಬಲ್ಲ ಬದಲಾವಣೆಗಳನ್ನು ಭಾರತೀಯ ಮನೆಗಳಿಗೆ ತರುವ, ಮೂರು ವರ್ಷಗಳ ಹಿಂದೆ 5 ಸೆಪ್ಟೆಂಬರ್ 2016ರಂದು ತನ್ನ ಮೊಬಿಲಿಟಿ ಸೇವೆಗಳೊಡನೆ ಪ್ರಾರಂಭವಾದ, ತನ್ನ ವಾಗ್ದಾನದ ಪೂರೈಕೆಯನ್ನು ಜಿಯೋ ಇದೀಗ ಜಿಯೋಫೈಬರ್ ನೊಡನೆ ಮುಂದುವರೆಸಿದೆ.

ಸದ್ಯ ಭಾರತದಲ್ಲಿ ಫಿಕ್ಸೆಡ್-ಲೈನ್ ಬ್ರಾಡ್‍ಬ್ಯಾಂಡ್‍ನ ಸರಾಸರಿ ವೇಗ 25 ಎಂಬಿಪಿಎಸ್ ಆಗಿದೆ. ಅತ್ಯಂತ ಮುಂದುವರೆದ ದೇಶವಾದ ಅಮೆರಿಕಾದಲ್ಲೂ ಇದು 90 ಎಂಬಿಪಿಎಸ್ ಆಸುಪಾಸಿನಲ್ಲಿದೆ. ಭಾರತದ ಮೊದಲ ಆಲ್-ಫೈಬರ್ ಬ್ರಾಡ್‍ಬ್ಯಾಂಡ್ ಸೇವೆಯಾದ ಜಿಯೋಫೈಬರ್ 100 ಎಂಬಿಪಿಎಸ್‍ನಿಂದ ಪ್ರಾರಂಭವಾಗಲಿದ್ದು 1 ಜಿಬಿಪಿಎಸ್‍ವರೆಗೂ ಇರಲಿದೆ. ಇದು ಭಾರತವನ್ನು ಜಾಗತಿಕವಾಗಿ ಮೊದಲ ಐದು ಬ್ರಾಡ್‍ಬ್ಯಾಂಡ್ ರಾಷ್ಟ್ರಗಳ ಸಾಲಿಗೆ ಕೊಂಡೊಯ್ಯಲಿದೆ.

ಜಿಯೋ ಫೈಬರ್: ಉಚಿತ ಟಿವಿ, ಉಚಿತ ಕರೆ ಹಾಗು ಎರಡು ತಿಂಗಳ ಉಚಿತ ಸೇವೆಗಳ ಪಟ್ಟಿ ಇಲ್ಲಿದೆ..

ಬರಲಿರುವ ಜಿಯೋಫೈಬರ್ ಸೇವೆಗಳು:
1. ಅಲ್ಟ್ರಾ-ಹೈ-ಸ್ಪೀಡ್ ಬ್ರಾಡ್‍ಬ್ಯಾಂಡ್ (1 ಜಿಬಿಪಿಎಸ್‍ವರೆಗೆ)
2. ಉಚಿತ ದೇಶೀಯ ಧ್ವನಿ ಕರೆಗಳು, ಕಾನ್‍ಫರೆನ್ಸಿಂಗ್ ಹಾಗೂ ಅಂತಾರಾಷ್ಟ್ರೀಯ ಕರೆಗಳು
3. ಟೀವಿ ವೀಡಿಯೋ ಕರೆಗಳು ಮತ್ತು ಕಾನ್‍ಫರೆನ್ಸಿಂಗ್
4. ಮನರಂಜನೆಗಾಗಿ ಓಟಿಟಿ ಆಪ್‍ಗಳು
5. ಆಟಗಳು
6. ಹೋಮ್ ನೆಟ್‍ವರ್ಕಿಂಗ್
7. ಸಾಧನ ಸುರಕ್ಷತೆ
8. ವಿಆರ್ ಅನುಭವ
9. ಪ್ರೀಮಿಯಂ ಕಂಟೆಂಟ್ ವೇದಿಕೆ

ಜಿಯೋಫೈಬರ್ ಮಾಸಿಕ ಪ್ರೀ-ಪೇಯ್ಡ್ ದರಗಳು

ಜಿಯೋಫೈಬರ್ ಮಾಸಿಕ ಪ್ರೀ-ಪೇಯ್ಡ್ ದರಗಳು

ಎಲ್ಲ ಪ್ಲಾನ್‍ಗಳ ಮೇಲೂ ಜಿಎಸ್‍ಟಿ ಪ್ರತ್ಯೇಕವಾಗಿ ಅನ್ವಯವಾಗುತ್ತದೆ | ಹೆಚ್ಚುವರಿ ಜಿಬಿಗಳು 6 ತಿಂಗಳವರೆಗೆ ಪ್ರಾರಂಭಿಕ ಕೊಡುಗೆಯಾಗಿ ಲಭ್ಯವಿರುತ್ತವೆ | ಷರತ್ತುಗಳು ಅನ್ವಯಿಸುತ್ತವೆ | ವಿವರಗಳಿಗೆ jio.com ಸಂಪರ್ಕಿಸಿ / ವಾಟ್ಸ್‍ಆಪ್‍ನಲ್ಲಿ 70008-70008 ಸಂಖ್ಯೆಗೆ 'HELLO' ಎಂದು ಮೆಸೇಜ್ ಮಾಡಿ. ಪ್ಲಾಟ್‍ಫಾರ್ಮ್ ಸೇವಾ ಸಂಸ್ಥೆಯಾದ RCITPLನಿಂದ ನೀಡಲಾಗುವ ಗೇಮಿಂಗ್, ಸಾಧನ ಸುರಕ್ಷತೆ, ಹೋಮ್ ನೆಟ್‍ವರ್ಕಿಂಗ್, ವಿಆರ್ ಅನುಭವ ಹಾಗೂ ವೀಡಿಯೊ ಕಂಟೆಂಟ್ ಸೇವೆಗಳು ಮತ್ತು ಟೀವಿ ವೀಡಿಯೊ ಕರೆಗಳು ಹಾಗೂ ಕಾನ್‍ಫರೆನ್ಸಿಂಗ್‍ಗಾಗಿ ಚಂದಾದಾರರು ಸರಿಹೊಂದುವ ಸಾಧನಗಳನ್ನು ಕೊಳ್ಳಬೇಕಾಗುತ್ತದೆ.

ಮಾಸಿಕ ಪ್ಲಾನ್‍ಗಳು

ಮಾಸಿಕ ಪ್ಲಾನ್‍ಗಳು

1. ಜಿಯೋಫೈಬರ್ ಪ್ಲಾನ್ ಬಾಡಿಗೆಗಳು ರೂ. 699ರಿಂದ ಪ್ರಾರಂಭವಾಗಿ ರೂ. 8,499ವರೆಗೂ ಇರಲಿವೆ
2. ಅತ್ಯಂತ ಕಡಿಮೆ ಬೆಲೆಯ ಪ್ಲಾನ್ ಕೂಡ 100 ಎಂಬಿಪಿಎಸ್‍ನಿಂದ ಪ್ರಾರಂಭವಾಗುತ್ತದೆ
3. ನೀವು 1 ಜಿಬಿಪಿಎಸ್‍ವರೆಗಿನ ವೇಗವನ್ನು ಪಡೆಯಬಹುದು
4. ಬಹುತೇಕ ಟ್ಯಾರಿಫ್ ಪ್ಲಾನ್‍ಗಳು ಮೇಲೆ ಹೇಳಿದ ಎಲ್ಲ ಸೇವೆಗಳನ್ನೂ ಒಳಗೊಂಡಿರುತ್ತವೆ
5. ಎಲ್ಲರ ಕೈಗೂ ಎಟುಕುವಂತೆ ಮಾಡಲು, ಎಲ್ಲ ಬಜೆಟ್ ಹಾಗೂ ಅಗತ್ಯಗಳನ್ನೂ ಪೂರೈಸಲು ಜಿಯೋ ಈ ಪ್ಲಾನುಗಳಿಗೆ ಜಾಗತಿಕ ದರದ ಹತ್ತನೇ ಒಂದು ಭಾಗದಷ್ಟು ಮಾತ್ರ ದರ ನಿಗದಿಪಡಿಸಿದೆ

ದೀರ್ಘಾವಧಿ ಪ್ಲಾನುಗಳು
1. ಗಣನೀಯವಾಗಿ ಹೆಚ್ಚಿನ ಮೌಲ್ಯ ನೀಡುವ 3, 6 ಹಾಗೂ 12 ತಿಂಗಳ ಪ್ಲಾನುಗಳನ್ನು ಜಿಯೋಫೈಬರ್ ಬಳಕೆದಾರರು ಪಡೆದುಕೊಳ್ಳಬಹುದು
2. ಬ್ಯಾಂಕುಗಳ ಸಹಯೋಗದಲ್ಲಿ ಜಿಯೋ ನೀಡುವ ಆಕರ್ಷಕ ಇಎಂಐ ಯೋಜನೆಗಳ ಮೂಲಕ ಬಳಕೆದಾರರು ಮಾಸಿಕ ಕಂತುಗಳನ್ನು ಮಾತ್ರ ಪಾವತಿಸಿ ವಾರ್ಷಿಕ ಪ್ಲಾನುಗಳ ಅನುಕೂಲ ಪಡೆದುಕೊಳ್ಳಬಹುದು

ಜಿಯೋ ಪೈಬರ್ ಬ್ರಾಡ್‌ಬ್ಯಾಂಡ್ ಲಾಂಚ್: ಕನೆಕ್ಷನ್ ಪಡೆಯುವುದು ಹೇಗೆ?

ಜಿಯೋ ಇನ್ ಫೋಕಾಮ್ ನಿರ್ದೇಶಕ ಆಕಾಶ್ ಅಂಬಾನಿ

ಜಿಯೋ ಇನ್ ಫೋಕಾಮ್ ನಿರ್ದೇಶಕ ಆಕಾಶ್ ಅಂಬಾನಿ

ಜಿಯೋಫೈಬರ್ ವೆಲ್‍ಕಮ್ ಕೊಡುಗೆ
1. ಜಿಯೋಫೈಬರ್ ವಾರ್ಷಿಕ ಪ್ಲಾನುಗಳಿಗೆ ಚಂದಾದಾರರಾಗುವ ಪ್ರತಿಯೊಬ್ಬ ಜಿಯೋಫೈಬರ್ ಬಳಕೆದಾರರಿಗೂ ಅಭೂತಪೂರ್ವ ಮೌಲ್ಯ ದೊರಕಲಿದೆ
2. ಜಿಯೋಫೈಬರ್ ವಾರ್ಷಿಕ ಪ್ಲಾನುಗಳ ಜೊತೆಯಲ್ಲಿ ಗ್ರಾಹಕರು ಈ ಕೆಳಕಂಡ ಸೌಲಭ್ಯಗಳನ್ನು ಪಡೆಯುತ್ತಾರೆ:
ಅ. ಜಿಯೋ ಹೋಮ್ ಗೇಟ್‍ವೇ
ಆ. ಜಿಯೋ 4ಕೆ ಸೆಟ್ ಟಾಪ್ ಬಾಕ್ಸ್
ಇ. ಟೀವಿ ಸೆಟ್ (ಗೋಲ್ಡ್ ಪ್ಲಾನ್ ಮತ್ತು ಮೇಲ್ಪಟ್ಟು)
ಈ. ನಿಮ್ಮ ಮೆಚ್ಚಿನ ಓಟಿಟಿ ಆಪ್‍ಗಳ ಸದಸ್ಯತ್ವ
ಉ. ಅಪರಿಮಿತ ವಾಯ್ಸ್ ಮತ್ತು ಡೇಟಾ

ಜಿಯೋಫೈಬರ್ ಬಳಕೆದಾರರು ವಿವಿಧ ಬೆಲೆಗಳಲ್ಲಿ ಲಭ್ಯವಿರುವ ಆಯ್ಕೆಗಳಲ್ಲಿ ತಮಗಿಷ್ಟವಾದ ವೆಲ್‍ಕಮ್ ಕೊಡುಗೆಯನ್ನು ಆರಿಸಿಕೊಳ್ಳಬಹುದು.

ಜಿಯೋ ಇನ್ ಫೋಕಾಮ್ ನಿರ್ದೇಶಕ ಆಕಾಶ್ ಅಂಬಾನಿ

ಜಿಯೋ ಇನ್ ಫೋಕಾಮ್ ನಿರ್ದೇಶಕ ಆಕಾಶ್ ಅಂಬಾನಿ

ಜಿಯೋಫೈಬರ್ ಲೋಕಾರ್ಪಣೆಯ ಸಂದರ್ಭದಲ್ಲಿ ಮಾತನಾಡಿದ ರಿಲಯನ್ಸ್ ಜಿಯೋ ಇನ್ ಫೋಕಾಮ್ ನಿರ್ದೇಶಕ ಆಕಾಶ್ ಅಂಬಾನಿ, "ನಾವು ಮಾಡುವ ಪ್ರತಿಯೊಂದು ಕೆಲಸದ ಕೇಂದ್ರದಲ್ಲೂ ನಮ್ಮ ಗ್ರಾಹಕರು ಇದ್ದಾರೆ, ಹಾಗೂ ಸಂಪೂರ್ಣ ಜಿಯೋಫೈಬರ್ ಅನ್ನು ನಿಮಗೆ ಆಹ್ಲಾದದಾಯಕ ಅನುಭವ ನೀಡುವ ಒಂದೇ ಉದ್ದೇಶದಿಂದ ರೂಪಿಸಲಾಗಿದೆ. ಕ್ರಾಂತಿಕಾರಕ ಸೇವೆಗಳೊಡನೆ ಜಿಯೋಫೈಬರ್‍ನ ಲೋಕಾರ್ಪಣೆ, ಒಂದು ಹೊಸ ಹಾಗೂ ರೋಚಕ ಪಯಣದ ಪ್ರಾರಂಭ ಮಾತ್ರ. ಎಂದಿನಂತೆ, ಇಂತಹ ಇನ್ನಷ್ಟು ವಿಶಿಷ್ಟ ಸೇವೆಗಳನ್ನು ನಿಮ್ಮ ಮನೆಗೆ ತರಲು ಹಾಗೂ ಜಿಯೋಫೈಬರ್ ಅನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ನಾವು ಶ್ರಮಿಸುವುದನ್ನು ಮುಂದುವರೆಸುತ್ತೇವೆ.

ನಮ್ಮ ಉತ್ಪನ್ನ ಹಾಗೂ ಸೇವೆಯ ಅನುಭವವನ್ನು ಉತ್ತಮಗೊಳಿಸುವಲ್ಲಿ ಗಮನಾರ್ಹ ಕೊಡುಗೆ ನೀಡಿರುವ ನಮ್ಮ 5 ಲಕ್ಷ ಜಿಯೋಫೈಬರ್ ಪ್ರಿವ್ಯೂ ಬಳಕೆದಾರರಿಗೆ ನಾನು ಧನ್ಯವಾದಗಳನ್ನು ಅರ್ಪಿಸಲು ಬಯಸುತ್ತೇನೆ. ಜಿಯೋಫೈಬರ್

English summary
How to get JioFiber Connection? Know all rentals, offers and other details. Reliance Jio has launched Jio Fiber plans under six categories - Bronze, Silver, Gold, Diamond, Platinum and Titanium.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X