ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಧಾರ್ ಬಳಸಿ ಇ-ಪ್ಯಾನ್ ಕಾರ್ಡನ್ನು ತ್ವರಿತವಾಗಿ ಪಡೆಯುವುದು ಹೇಗೆ?

|
Google Oneindia Kannada News

ನವದೆಹಲಿ, ಮೇ 30: ಬ್ಯಾಂಕ್ ಆಧಾರಿತ ವಿವಿಧ ವ್ಯವಹಾರಗಳಿಗೆ ಬಳಕೆ ಮಾಡುವ ಶಾಶ್ವತ ಖಾತೆ ಸಂಖ್ಯೆ (PAN) ಕಾರ್ಡನ್ನು ಆನ್​ಲೈನ್ ಮೂಲಕ ವಿತರಿಸುವ ಯೋಜನೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅಧಿಕೃತವಾಗಿ ಚಾಲನೆ ನೀಡಿದ್ದಾರೆ.

Recommended Video

ಚಾಮುಂಡಿ ಬೆಟ್ಟದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದಿಂದ 100 ಕೋಟಿ | Oneindia Kannada

2020-21ರ ಬಜೆಟ್​ನಲ್ಲಿ ಘೋಷಿಸಿದಂತೆ ಆಧಾರ್ ಕಾರ್ಡ್ ದಾಖಲೆ ಮೇಲೆ ತಕ್ಷಣವೇ ಇ-ಪ್ಯಾನ್ ಕಾರ್ಡನ್ನು ಆನ್​ಲೈನ್ ಮೂಲಕ ಪಡೆದುಕೊಳ್ಳಬಹುದು ಎಂದು ಕಂದಾಯ ಸಚಿವಾಲಯದ ಕಾರ್ಯದರ್ಶಿ ಅಜಯ್ ಭೂಷಣ್ ಪಾಂಡೆ ಹೇಳಿದ್ದಾರೆ.

ರೇಷನ್ ಕಾರ್ಡ್ - ಆಧಾರ್ ಸಂಖ್ಯೆ ಜೋಡಣೆ ಬಗ್ಗೆ ಮಹತ್ವದ ಆದೇಶರೇಷನ್ ಕಾರ್ಡ್ - ಆಧಾರ್ ಸಂಖ್ಯೆ ಜೋಡಣೆ ಬಗ್ಗೆ ಮಹತ್ವದ ಆದೇಶ

ಇ-ಪ್ಯಾನ್ ಕಾರ್ಡ್ ಪಡೆಯಲು ಅರ್ಜಿ ಭರ್ತಿ ಮಾಡಿ ಸಲ್ಲಿಸುವ ಅಗತ್ಯ ಇಲ್ಲ. ಆಧಾರ್ ಕಾರ್ಡ್ ಮಾಹಿತಿಯನ್ನು ಒದಗಿಸಿ ಇ-ಪ್ಯಾನ್ ಕಾರ್ಡ್ ಪಡೆಯುವ ಯೋಜನೆ ಕಳೆದ ಫೆಬ್ರವರಿ ತಿಂಗಳಿನಲ್ಲೇ ಪ್ರಾಯೋಗಿಕವಾಗಿ ಆರಂಭವಾಗಿತ್ತು. ಬೀಟಾ ಆವೃತ್ತಿಯ ಪ್ರಯೋಗದ ನಂತರ ಈಗ ಅಧಿಕೃತವಾಗಿ ಚಾಲನೆ ಸಿಕ್ಕಿದ್ದು, 10 ನಿಮಿಷದಲ್ಲೇ ಇ ಪ್ಯಾನ್ ಪಡೆಯಬಹುದು.

 ಇ-ಪ್ಯಾನ್ ಕಾರ್ಡ ಪಡೆಯುವ ವಿಧಾನ

ಇ-ಪ್ಯಾನ್ ಕಾರ್ಡ ಪಡೆಯುವ ವಿಧಾನ

* ಆದಾಯ ತೆರಿಗೆ ಇಲಾಖೆ(Income Tax)ಯ ಅಧಿಕೃತ ವೆಬ್​ಸೈಟ್​ನಲ್ಲಿ12 ಅಂಕಿಗಳ ಆಧಾರ್ ಸಂಖ್ಯೆ ನಮೂದಿಸಿ.
* ಆಧಾರ್​ಗೆ ನೀಡಿರುವ ಮೊಬೈಲ್ ಸಂಖ್ಯೆಗೆ ಒಮ್ಮೆ ಮಾತ್ರ ಬಳಸುವ ಪಾಸ್​ವರ್ಡ್ (ಒಟಿಪಿ) ಬರುತ್ತದೆ.
* ಆಧಾರ್ ದಾಖಲೆ ಪರಿಶೀಲನೆ ಮಾಡಲು ಒಟಿಪಿ ಬಳಸಲಾಗುತ್ತದೆ. 15 ಅಂಕಿಗಳ ಸ್ವೀಕೃತಿ ಅಂಕಿಗಳನ್ನುನಮೂದಿಸಿದ ಬಳಿಕ ಇ-ಪ್ಯಾನ್ ಡೌನ್ ಲೋಡ್ ಗೆ ಲಭ್ಯವಾಗಲಿದೆ. ತಕ್ಷಣವೇ ಡೌನ್ ಲೋಡ್ ಮಾಡಿಕೊಳ್ಳಬಹುದು.
* ಇದರ ಜೊತೆಗೆ ಆಧಾರ್- ಪ್ಯಾನ್ ಜೊತೆ ನಮೂದಿಸಿರುವ ಅಧಿಕೃತ ಇಮೇಲ್ ಖಾತೆಗೆ ಖೂಡಾ ಇ-ಪ್ಯಾನ್ ಡೌನ್ ಲೋಡ್ ಮಾಡಲು ಸಂದೇಶ ಬರುತ್ತದೆ.

 ಇ ಪ್ಯಾನ್ ಪಡೆಯುವ ವಿಧಾನ ಕಾಗದ ರಹಿತ

ಇ ಪ್ಯಾನ್ ಪಡೆಯುವ ವಿಧಾನ ಕಾಗದ ರಹಿತ

ಕೇಂದ್ರ ನೇರ ತೆರಿಗೆ ಬೋರ್ಡ್ (ಸಿಬಿಡಿಟಿ) ಪ್ರಕಟಣೆಯಂತೆ ಇ ಪ್ಯಾನ್ ಪಡೆಯುವ ವಿಧಾನ ಕಾಗದ ರಹಿತವಾಗಿದೆ ಹಾಗೂ ಇದು ಸಂಪೂರ್ಣ ಉಚಿತವಾಗಿದೆ. ಪ್ಯಾನ್ ಹಾಗೂ ಆಧಾರ್ ಜೋಡಣೆಗೆ ಜೂನ್ 30, 2020 ಕೊನೆ ದಿನಾಂಕವಾಗಿದೆ.

ಪ್ಯಾನ್ ಕಾರ್ಡ್ ಸರಿಯಾಗಿದೆಯೇ ಚೆಕ್ ಮಾಡಲು ಹೀಗೆ ಮಾಡಿಪ್ಯಾನ್ ಕಾರ್ಡ್ ಸರಿಯಾಗಿದೆಯೇ ಚೆಕ್ ಮಾಡಲು ಹೀಗೆ ಮಾಡಿ

 ಎಷ್ಟು ಇ ಪ್ಯಾನ್ ವಿತರಣೆಯಾಗಿದೆ

ಎಷ್ಟು ಇ ಪ್ಯಾನ್ ವಿತರಣೆಯಾಗಿದೆ

ಫೆಬ್ರವರಿ ತಿಂಗಳಿನಿಂದ ಮೇ 25ರ ತನಕ ಸುಮಾರು 6,77,680 Insta Pan ಅಥವಾ ಇ ಪ್ಯಾನ್ ಗಳನ್ನು ವಿತರಿಸಲಾಗಿದೆ. ಒಟ್ಟಾರೆ, 50.52 ಕೋಟಿ ಪ್ಯಾನ್ ಗಳನ್ನು ತೆರಿಗೆದಾರರಿಗೆ ನೀಡಲಾಗಿದೆ. ಈ ಪೈಕಿ 49.39 ವೈಯಕ್ತಿಕ ನಂಬರ್ ಗಳಾಗಿವೆ, 32.17 ಕೋಟಿಗೂ ಅಧಿಕ ನಂಬರ್ ಆಧಾರ್ ಜೊತೆ ಜೋಡಣೆಯಾಗಿವೆ.

 ಆದಾಯ ತೆರಿಗೆ ಕಾಯ್ದೆ ಏನು ಹೇಳುತ್ತದೆ

ಆದಾಯ ತೆರಿಗೆ ಕಾಯ್ದೆ ಏನು ಹೇಳುತ್ತದೆ

ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 139 ಎಎ(2) ಪ್ರಕಾರ ಎಲ್ಲಾ ಪ್ಯಾನ್ ಕಾರ್ಡ್ ಬಳಕೆದಾರರು ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ಜೋಡಿಸಬೇಕು ಎಂದು 2017ರ ಜುಲೈ 1ರಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು. ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 272 ಬಿ ಅಡಿಯಲ್ಲಿ ನಿಗದಿತ ಗಡುವು ಮುಗಿದ ನಂತರ ಪಾನ್ ಜೊತೆ ಆಧಾರ್ ಲಿಂಕ್ ಆಗಿಲ್ಲವೆಂದರೆ ಅಂಥ ಪಾನ್ ಕಾರ್ಡನ್ನು ನಿಷ್ಕ್ರಿಯಗೊಳಿಸಲಾಗುವುದು, ಯಾವುದೇ ವ್ಯವಹಾರಕ್ಕೂ ಬಳಸಲು ಸಾಧ್ಯವಾಗುವುದಿಲ್ಲ. ಇ ಪ್ಯಾನ್ ವಿತರಣೆ ಬಗ್ಗೆ 2020ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ ಘೋಷಣೆ ಮಾಡಲಾಗಿತ್ತು.

ಆಧಾರ್ ಬಳಸಿ ಜನ್ಮ ದಿನಾಂಕ ತಿದ್ದುಪಡಿ ಮಾಡಲು EPFO ಒಪ್ಪಿಗೆಆಧಾರ್ ಬಳಸಿ ಜನ್ಮ ದಿನಾಂಕ ತಿದ್ದುಪಡಿ ಮಾಡಲು EPFO ಒಪ್ಪಿಗೆ

English summary
Finance Minister Nirmala Sitharaman formally launched the facility for instant allotment of PAN. HEre are the steps How to Get Instant PAN or e-PAN Via Aadhaar Card.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X