ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೂಗಲ್ ಚಿತ್ರ ಹುಡುಕಾಟ ಪರದಾಟ, ಸೇವ್ ಹೇಗೆ?

By Mahesh
|
Google Oneindia Kannada News

ಜನೆ ಹುಡುಕಾಟಕ್ಕೆ ತಕ್ಷಣಕ್ಕೆ ಬಳಸುವ ಗೂಗಲ್ ನಲ್ಲಿ ಈಗ ಇಮೇಜ್ ಹುಡುಕಾಟ ಬಲು ದುಸ್ತರವಾಗಿದೆ.

ಈ ಮುಂಚೆ ಸುಲಭವಾಗಿ ಇಮೇಜ್ ಕೈಗೆಟುಕುತ್ತಿತ್ತು. ಆದರೆ, ಈಗ ನಿಮ್ಮ ಹುಡುಕಾಟದ ಇಮೇಜ್ ಪಡೆಯಬೇಕಾದರೆ ಆ ಇಮೇಜ್ ಇರುವ ವೆಬ್ ಸೈಟಿಗೆ ನಿಮ್ಮನ್ನು ಗೂಗಲ್ ಕರೆದೊಯ್ಯಲಿದೆ.

ಗೂಗಲ್ ನಲ್ಲಿ ಯಾವುದಾದರೂ ಇಮೇಜ್ ಗಾಗಿ ಹುಡುಕಾಟ ನಡೆಸಿದ್ದೀರಾ? ನೀವು ಹುಡುಕಿದ ಇಮೇಜ್ ತಕ್ಷಣವೇ ಸೇವ್ ಮಾಡಲು ಆಗುತ್ತಿದ್ದೆಯೆ? ಇಲ್ಲ ತಾನೆ, ಗೂಗಲ್ ತನ್ನ ಇಮೇಜ್ ನಿಯಮವನ್ನು ಬದಲಾಯಿಸಿಕೊಂಡಿದ್ದು, ಅನೇಕರು ತಮ್ಮ ಬ್ರೌಸರ್ ನಲ್ಲೆ ಸಮಸ್ಯೆ ಇರಬಹುದು ಎಂದು ಅಂದಾಜಿಸಿ ಸುಮ್ಮನಾಗಿದ್ದಾರೆ. ಆದರೆ, ಇದು ಗೂಗಲ್ ಹಾಗೂ ಇಮೇಜ್ ಪೂರೈಸುವ ಸಂಸ್ಥೆಗಳ ನಡುವಿನ ಶಾಂತಿ ಒಪ್ಪಂದದ ಫಲವಾಗಿದೆ.

View Image ಬಟನ್ ಅನ್ನು ಗೂಗಲ್ ತೆಗೆದು ಹಾಕಿದ್ದು, ಇನ್ಮುಂದೆ ಇಮೇಜ್ ಗಾಗಿ ಹುಡುಕಾಟ ನಡೆಸಿ, ಫಲಿತಾಂಶ ಪಡೆದರೆ, ಆ ಇಮೇಜ್ ಇರುವ ಮೂಲ ವೆಬ್ ಸೈಟಿನ ಪುಟಕ್ಕೆ ಹೋಗಿ ಆ ಇಮೇಜ್ ಸೇವ್ ಮಾಡಿಕೊಳ್ಳಬೇಕಾಗುತ್ತದೆ.

ಏನಿದು ಗೂಗಲ್ ಒಪ್ಪಂದ

ಏನಿದು ಗೂಗಲ್ ಒಪ್ಪಂದ

ಸರ್ಚ್ ಇಂಜಿನ್ ದೈತ್ಯ ಗೂಗಲ್ ಗೂ ಗೆಟ್ಟಿ ಇಮೇಜಸ್(getty images) ನಡುವೆ ಆಗಿರುವ ಶಾಂತಿ ಒಪ್ಪಂದಂತೆ, ಕಾಪಿ ರೈಟ್ ಚಿತ್ರಗಳನ್ನು ಸುಲಭವಾಗಿ ಸಾರ್ವನಿಕರಿಗೆ ಸಿಗದಂತೆ ಮಾಡಲು ಈ ಹೊಸ ಕ್ರಮ ಅನುಸರಿಸಲಾಗುತ್ತಿದೆ. ಗೆಟ್ಟಿ ಇಮೇಜ್ ಸರ್ವೀಸ್ ಪಡೆದ ಸಂಸ್ಥೆಗಳ ವೆಬ್ ಸೈಟ್ ಗೆ ಫಲಿತಾಂಶವು ಕರೆದೊಯ್ಯಲಿದೆ.

ಮೊದಲ ವಿಧಾನ

ಮೊದಲ ವಿಧಾನ

ಹುಡುಕಿದ ನಂತರ ಸಿಕ್ಕ ಇಮೇಜ್ ಮೇಲೆ ರೈಟ್ ಕ್ಲಿಕ್ ಮಾಡಿ ಇಮೇಜ್ ಸೇವ್ ಮಾಡಬಹುದು. ಅಥವಾ ಹೊಸ ಟ್ಯಾಬ್ ನಲ್ಲಿ ಇಮೇಜ್ ಓಪನ್ ಮಾಡಿ ನಂತರ ಸೇವ್ ಮಾಡಿಕೊಳ್ಳಬಹುದು. ಆದರೆ, ಚಿತ್ರದ ಗುಣಮಟ್ಟ ಹಾಗೂ ಗಾತ್ರದ ಬಗ್ಗೆ ತಕ್ಷಣಕ್ಕೆ ಪ್ರೀವ್ಯೂ ನಲ್ಲಿ ಗೊತ್ತಾಗುವುದಿಲ್ಲ.

ಆಸ್ಟ್ರೇಲಿಯನ್ ಕಂಡುಹಿಡಿದ ವಿಧಾನ

ಆಸ್ಟ್ರೇಲಿಯನ್ ಕಂಡುಹಿಡಿದ ವಿಧಾನ

ಫೈರ್ ಫಾಕ್ಸ್ ಹಾಗೂ ಕ್ರೋಮ್ ಬ್ರೌಸರ್ ನಲ್ಲಿ ಸಿಗುವ ಆಡ್ ಆನ್ ನಲ್ಲಿ view image ಹೆಸರಿನಲ್ಲೇ ಒಂದು ಆಡ್ ಆನ್ ಇದೆ. ಇದನ್ನು ಇನ್ ಸ್ಟಾಲ್ ಮಾಡಿಕೊಳ್ಳಿ. ನಂತರ ನೀವು ಈ ಎರಡು ಬ್ರೌಸರ್ ನಲ್ಲಿ ಇಮೇಜ್ ಗಾಗಿ ಹುಡುಕಾಟ ನಡೆಸುವಾಗ ನಿಮಗೆ ವ್ಯೂ ಇಮೇಜ್ ಕಾಣಸಿಗುವುದು.

ಆಡ್ ಆನ್ ಬಳಸಿ ಗೂಗಲ್ ಇಮೇಜ್ ಉಳಿಸಿ

ಆಡ್ ಆನ್ ಬಳಸಿ ಗೂಗಲ್ ಇಮೇಜ್ ಉಳಿಸಿ

ವ್ಯೂ ಇಮೇಜ್ ಆಡ್ ಆನ್ ಬಳಸಿದ ನಂತರ ಗೂಗಲ್ ಇಮೇಜ್ ಹುಡುಕಾಟದ ನಂತರದ ಫಲಿತಾಂಶ ಈ ಹಿಂದಿನಂತೆ ಕಾಣಸಿಗುತ್ತದೆ. ವ್ಯೂ ಇಮೇಜ್ ಬಟನ್ ಒತ್ತಿ, ಚಿತ್ರವನ್ನು ಪೂರ್ಣ ಪರದೆಯಲ್ಲಿ ವೀಕ್ಷಿಸಿ ಸುಲಭವಾಗಿ ಸೇವ್ ಮಾಡಬಹುದು. ಆದರೆ, ಗೂಗಲ್ ನಲ್ಲಿ ಇರುವ ಪ್ರತಿ ಚಿತ್ರವನ್ನು ಒಂದಿಲ್ಲೊಂದು ರೀತಿಯಲ್ಲಿ ಕಾಪಿರೈಟ್ ನಿಯಮಕ್ಕೆ ಒಳಪಟ್ಟಿರುತ್ತದೆ. ಹೀಗಾಗಿ, ಇಮೇಜ್ ಸೇವ್ ಮಾಡುವ ಮುನ್ನ ಯೋಚಿಸಿ.

English summary
Google has decide to remove the View Image button from its Google Images search engine. Google’s decision to remove the View Image button from its Google Images search engine. But, a Australian as provided a add on to re implement google image back on popular browsers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X