ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫಾರ್ಮ್ 16 ಇಲ್ಲದೆ ಆದಾಯ ತೆರಿಗೆ ಇ ರಿಟರ್ನ್ಸ್ ಹೇಗೆ?

By Mahesh
|
Google Oneindia Kannada News

ಆದಾಯ ತೆರಿಗೆ ಕಟ್ಟಲು ಅನೇಕ ಸುಲಭ ವಿಧಾನಗಳಿವೆ. ವಾರ್ಷಿಕವಾಗಿ 5 ಲಕ್ಷ ರೂ.ಗಳಿಗಿಂತ ಹೆಚ್ಚಿನ ವರಮಾನವಿರುವ ತೆರಿಗೆ ಪಾವತಿದಾರರು ತಮ್ಮ ಆದಾಯ ವಿವರಗಳನ್ನು ವಿದ್ಯುನ್ಮಾನ ರೂಪದಲ್ಲಿ ಸಲ್ಲಿಸುವ ಆವಶ್ಯಕತೆಯಿರುವುದರಿಂದ ಆನ್ ಲೈನ್ ಮೂಲಕ ತೆರಿಗೆ ಕಟ್ಟುವವರ ಸಂಖ್ಯೆ ಹೆಚ್ಚಿದೆ. ಆದಾಯ ತೆರಿಗೆ ಇಲಾಖೆ ಅನೇಕ ಸುಲಭ ವಿಧಾನಗಳನ್ನು ತೆರಿಗೆದಾರರಿಗೆ ನೀಡಿದೆ.

ಏನಿದು ಫಾರ್ಮ್ 16? ಇದು ಯಾಕೆ ಬೇಕು?: Tax deducted at Source(TDS) ಪ್ರಮಾಣಪತ್ರ ಹೊಂದಿರುವ ಅರ್ಜಿಯೇ ಫಾರ್ಮ್ 16. ಇದರಲ್ಲಿ ನೀವು ಪಾವತಿಸಿದ ತೆರಿಗೆಗೆ ಒಳಪಡುವ ಎಲ್ಲಾ ಆದಾಯಗಳ ವಿವರ ಸಿಗಲಿದೆ. ಒಂದು ವೇಳೆ ಟಿಡಿಎಸ್ ಸಿಗದಿದ್ದರೆ, ಉದ್ಯೋಗದಾತರು ಎಲ್ಲಾ ಪೇ ಸ್ಲಿಪ್ ಗಳನ್ನು ಒಟ್ಟುಗೂಡಿಸಿ, ತೆರಿಗೆಗೆ ಒಳಪಡುವ ಆದಾಯ ಮೂಲಗಳನ್ನು ಗುರುತಿಸಬಹುದಾಗಿದೆ.

ಆದರೆ, ನಾನಾ ಕಾರಣಗಳಿಂದ ಅನೇಕ ಉದ್ಯೋಗಿಗಳು ನಿಗದಿತ ಸಮಯಕ್ಕೆ ಸರಿಯಾಗಿ ರಿಟರ್ನ್ಸ್ ಫೈಲ್ ಮಾಡುವಲ್ಲಿ ವಿಫಲರಾಗುತ್ತಾರೆ. ಫಾರ್ಮ್ 16 ಇಲ್ಲದಿರುವುದು ಒಂದು ಕಾರಣ ಎನ್ನಬಹುದು. ಫಾರ್ಮ್ 16 ಸಿಗದಿದ್ದಾಗ ಇ ರಿಟರ್ನ್ಸ್ ಮಾಡುವುದು ಹೇಗೆ? ಇಲ್ಲಿ ಓದಿ...

ಕೆಲವು ಸೌಲಭ್ಯಗಳಿಂದ ವಂಚಿತರಾಗುತ್ತಾರೆ

ಕೆಲವು ಸೌಲಭ್ಯಗಳಿಂದ ವಂಚಿತರಾಗುತ್ತಾರೆ

ಕೊನೆ ದಿನಾಂಕ(ಸಾಮಾನ್ಯವಾಗಿ ಜುಲೈ 31 ಕೊನೆ ದಿನಾಂಕ, ವಿಸ್ತರಣೆಗೊಂಡರೂ ಆಗಸ್ಟ್ 05ರತನಕ ಇರುತ್ತದೆ)ದ ನಂತರ ರಿಟರ್ನ್ಸ್ ಫೈಲ್ ಮಾಡಿದರೆ ಕೆಲವು ಸೌಲಭ್ಯಗಳಿಂದ ವಂಚಿತರಾಗುತ್ತಾರೆ.

ವಿಳಂಬವಾಗಿ ಫೈಲ್ ಮಾಡುವುದರಿಂದ ಲಾಭವಂತೂ ಸಿಗುವುದಿಲ್ಲ. ಕೆಲ ವಿಭಾಗಗಳಿಂದ ಸಿಗಬಹುದಾದ ವಿನಾಯತಿ, ರೀ ಫಂಡ್ ಎಲ್ಲವೂ ಕೈ ತಪ್ಪುತ್ತದೆ.

ತೆರಿಗೆ ಲೆಕ್ಕಾಚಾರ ಹೇಗೆ? ಓದಿ

ವಿಳಂಬವಾಗಿದ್ದರೆ ಹಣ ಪಾವತಿ ಹೇಗೆ?

ವಿಳಂಬವಾಗಿದ್ದರೆ ಹಣ ಪಾವತಿ ಹೇಗೆ?

ವಿಳಂಬವಾಗಿದ್ದಲ್ಲಿ ಚಲನ್ 280ರ ಮೂಲಕ ಆನ್ ಲೈನ್ ನಲ್ಲಿ ಹಣ ಪಾವತಿ ಮಾಡಬೇಕಾಗುತ್ತದೆ. ಒಂದು ವೇಳೆ ನೀವು ಆಫ್ ಲೈನ್ ಮೂಲಕ ಹಣ ಪಾವತಿಸುವುದಾದರೂ ಇದೇ ಚಲನ್ ಡೌನ್ ಲೋಡ್ ಮಾಡಿಕೊಂಡು ಸಂಬಂಧಿಸಿದ ಬ್ಯಾಂಕ್ ಶಾಖೆಗೆ ಸಲ್ಲಿಸಬೇಕಾಗುತ್ತದೆ. ಚೆಕ್ ಅಥವಾ ನಗದು ಮೂಲಕ ಹಣ ಸಂದಾಯ ಮಾಡಬೇಕಾಗುತ್ತದೆ.

ಇನ್ನು ಫಾರ್ಮ್ 16 ಸಿಗದಿದ್ದರೆ, ಟಿಡಿಎಸ್ ಲೆಕ್ಕಾಚಾರವನ್ನು ನಾವೇ ಹಾಕಿಕೊಂಡು, ಆದಾಯ ತೆರಿಗೆ ಕಾಯ್ದೆ 234ಎಫ್ ಅಡಿಯಲ್ಲಿ ವಿಳಂಬವಾಗಿದ್ದಕ್ಕೆ ದಂಡ ತೆರದೆ ಪಾವತಿ ಸಾಧ್ಯವಿದೆ.

ಯಾವ ಯಾವ ದಾಖಲೆ ಅಗತ್ಯ

ಯಾವ ಯಾವ ದಾಖಲೆ ಅಗತ್ಯ

* ಬ್ಯಾಂಕ್ ಸ್ಟೇಟ್ ಮೆಂಟ್/ ಪಾಸ್ ಬುಕ್ (ಬ್ಯಾಂಕ್ ಠೇವಣಿ ಮೇಲೆ ವಿನಾಯಿತಿ ಲೆಕ್ಕಾಚಾರಕ್ಕೆ)
* ಬ್ಯಾಂಕ್ ಠೇವಣಿ ಅಲ್ಲದೆ ಉಳಿದ ಆದಾಯದ ಬಡ್ಡಿದರ ಮೇಲೆ ಸ್ಟೇಟ್ ಮೆಂಟ್
* ಬ್ಯಾಂಕಿನಿಂದ ಪಡೆದ TDS ಪ್ರಮಾಣ ಪತ್ರ (Form 26AS- TDSನಲ್ಲಿ ಜಮೆಯಾದ ತೆರಿಗೆ ಲೆಕ್ಕಾಚಾರದ ಬಗ್ಗೆ ತಿಳಿಸಲು ಅವಶ್ಯ)

* ಸೆಕ್ಷನ್ 80ಸಿ ವಿನಾಯತಿಗೆ LIC, NSC, PPF ಹೂಡಿಕೆ ಬಗ್ಗೆ ತಿಳಿಸಿ
* 80G ದಾನ ದತ್ತಿ ಮೂಲಕ ವಿನಾಯತಿಗೆ ರಸೀತಿ ನೀಡಿ
* ಗೃಹಸಾಲದ ಮೇಲೆ ನೀಡಿದ ಬಡ್ಡಿದರ ಲೆಕ್ಕಾಚಾರ ನೀಡಬೇಕು.
* ಮೆಡಿಕಲ್ ಬಿಲ್ (ಒರಿಜಿನಲ್), ಸ್ಟಾಕ್ ಮಾರುಕಟ್ಟೆ ಟ್ರೇಡಿಂಗ್ ಸ್ಟೇಟ್ ಮೆಂಟ್, ಗೃಹಸಾಲ, ಮುನ್ಸಿಪಲ್ ಕಾರ್ಪೊರೇಷನ್ ತೆರಿಗೆ ವಿವರ ನೀಡಿ ವಿನಾಯತಿ ಪಡೆಯಬಹುದು.

ಅಧಿಕೃತ ವೆಬ್ ಸೈಟ್ ಗಳಲ್ಲಿ ಮಾತ್ರ ಪಾವತಿಸಿ

ಅಧಿಕೃತ ವೆಬ್ ಸೈಟ್ ಗಳಲ್ಲಿ ಮಾತ್ರ ಪಾವತಿಸಿ

* ಆದಾಯ ತೆರಿಗೆ ಇಲಾಖೆ ವೆಬ್ ಸೈಟ್ ಅಲ್ಲದೆ ಇನ್ನೂ ಕೆಲವು ನಂಬಿಕೆಗೆ ಅರ್ಹವಾದ ಮಾನ್ಯತೆ ಪಡೆದ ತೆರಿಗೆ ಪಾವತಿ ಮಾಡಬಲ್ಲ ವೆಬ್ ಸೈಟ್ ಗಳನ್ನು ಮಾತ್ರ ಬಳಸಿ.
* ವೆಬ್ ಸೈಟ್ ಗೆ ಲಾಗಿನ್ ಆಗಿ ಅಗತ್ಯ ದಾಖಲೆಗಳನ್ನು ಒದಗಿಸಿ ಚಲನ್ ಭರ್ತಿ ಮಾಡಿ.
* ಹಣ ಪಾವತಿ ನಂತರ CIN (challan identification number) ಜೊತೆಗೆ ಚಲನ್ ಸಿಗಲಿದೆ.
* CIN ಐಡಿ ಸಂಖ್ಯೆಯನ್ನು ರಿಟರ್ನ್ ಫೈಲ್ ಮಾಡುವಾಗ ಬಳಸಬೇಕಾಗುತ್ತದೆ

ರಿಟರ್ನ್ಸ್ ಫೈಲ್ ಮಾಡಿ

ರಿಟರ್ನ್ಸ್ ಫೈಲ್ ಮಾಡಿ

* ನಿಮ್ಮ ಹಣ ಸರಿಯಾಗಿ ಪಾವತಿಯಾಗಿದೆಯೇ ಎಂದು ಆದಾಯ ತೆರಿಗೆ ಇಲಾಖೆ ತಾಣದಲ್ಲಿ ಪರೀಕ್ಷಿಸಿಕೊಳ್ಳಿ.
* ನಿಮ್ಮ ಹೆಸರು, ಮನೆ ಅಡ್ರೆಸ್, ಸಂಪರ್ಕ ಸಂಖ್ಯೆ ಬದಲಾವಣೆ ಮಾಡಿದ್ದರೆ ಅದನ್ನು ಆದಾಯ ತೆರಿಗೆ ತಾಣದಲ್ಲಿ ನೋಂದಣಿ ಮಾಡಲು ಮಾತ್ರ ಮರೆಯಬೇಡಿ.

*ರೆಸಿಡೆಂಶ್ಶಿಯಲ್ ಸ್ಟೇಟಸ್: ಎನ್ ಆರ್ ಐ ಮತ್ತು ಎನ್ ಒ ಆರ್ ಗಳಿಗೆ ಇದು ಸಂಬಂಧಿಸಿರುತ್ತದೆ. ಕೆಲ ಸೌಲಭ್ಯಗಳನ್ನು ಪಡೆಯಲು ಇದು ಅನುಕೂಲಕಾರಿಯಾಗಬಹುದು. ಎಲ್ಲವನ್ನು ಫಿಲ್ ಮಾಡಿ ರಿಟರ್ನ್ಸ್ ಫೈಲ್ ಮಾಡಿ. ಈಗ ಮುಂಚಿನ ರೀತಿಯಲ್ಲಿ ತೆರಿಗೆ ಇಲಾಖೆ ಕಚೇರಿಗೆ ಸ್ವೀಕೃತಿ ಪತ್ರ ರವಾನಿಸಬೇಕಿಲ್ಲ. ಆಧಾರ್ ಲಿಂಕ್ ಇರುವುದರಿಂದ ಆನ್ಲೈನ್ ನಲ್ಲೆ ಅಪ್ಡೇಡ್ ಆಗಲಿದೆ.

English summary
How to e-File Your Income Tax Returns in ITR-1 Without a Form 16?. In such a case, you can still file your income tax returns, which you need to before the due date to avoid paying late fees under section 234F of the income tax act.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X