• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜಿಯೋ ಫೋನಿನಲ್ಲಿ ವಾಟ್ಸಾಪ್ ಡೌನ್ಲೋಡ್ ಮಾಡುವುದು ಹೇಗೆ?

|

ಬೆಂಗಳೂರು, ಸೆಪ್ಟೆಂಬರ್ 11:ಅತ್ಯಂತ ಜನಪ್ರಿಯ ಅಪ್ಲಿಕೇಷನ್ ವಾಟ್ಸಾಪ್ ಕೊನೆಗೂ ಜಿಯೋ ಫೋನ್ ಗೆ ಬಂದಿದೆ.

ಚುರುಕಾದ ಹಾಗೂ ವಿಶ್ವಾಸಾರ್ಹವಾದ ಮೆಸೇಜಿಂಗ್ ಮತ್ತು ಚಿತ್ರಗಳನ್ನು ಹಾಗೂ ವೀಡಿಯೋಗಳನ್ನು ಹಂಚಿಕೊಳ್ಳುವ ಸಾಮರ್ಥ್ಯ ಸೇರಿದಂತೆ ವಾಟ್ಸಾಪ್ ನ ಅತ್ಯುತ್ತಮ ಸೌಲಭ್ಯಗಳನ್ನು ಈ ಹೊಸ ಆಪ್ ಎಂಡ್-ಟು-ಎಂಡ್ ಎನ್‌ಕ್ರಿಪ್ಷನ್‌ನೊಡನೆ ನೀಡಲಿದೆ.

ಜಿಯೋಫೋನ್‌‌ನಲ್ಲಿ ಕೊನೆಗೂ ವಾಟ್ಸಾಪ್ ಲಭ್ಯ

ಕೀಪ್ಯಾಡಿನಲ್ಲಿ ಕೆಲವೇ ಕೀಲಿಗಳನ್ನು ಒತ್ತುವ ಮೂಲಕ ಧ್ವನಿರೂಪದ ಸಂದೇಶಗಳನ್ನು ರೆಕಾರ್ಡ್ ಮಾಡಿ ಕಳಿಸುವುದೂ ಸುಲಭವಾಗಿದೆ. ಮೊದಲಿಗೆ ಜಿಯೋಫೋನ್ ಗ್ರಾಹಕರು ತಮ್ಮ ದೂರವಾಣಿ ಸಂಖ್ಯೆಯನ್ನು ದೃಢೀಕರಿಸಬೇಕಿದ್ದು, ಆನಂತರ ಇತರ ವಾಟ್ಸಾಪ್ ಬಳಕೆದಾರರೊಡನೆ ಪ್ರತ್ಯೇಕವಾಗಿ ಅಥವಾ ಗುಂಪುಗಳಲ್ಲಿ ಚಾಟ್ ಮಾಡಲು ಪ್ರಾರಂಭಿಸಬಹುದಾಗಿದೆ.

ಪ್ರಥಮ AI ಆಧಾರಿತ ವಿಡಿಯೋ ವೇದಿಕೆ ಪರಿಚಯಿಸಿದ ಜಿಯೋ

"ಭಾರತದಾದ್ಯಂತ ಲಕ್ಷಾಂತರ ಜನರು ಇದೀಗ ಜಿಯೋಫೋನ್‌‌ನಲ್ಲಿ ವಾಟ್ಸಾಪ್ ಖಾಸಗಿ ಮೆಸೇಜಿಂಗ್ ಅನ್ನು ಬಳಸಬಹುದಾಗಿದೆ," ಎಂದ ವಾಟ್ಸಾಪ್ ಉಪಾಧ್ಯಕ್ಷ ಕ್ರಿಸ್ ಡೇನಿಯೆಲ್ಸ್ "ಕಾಯ್ ಓಎಸ್‌ಗಾಗಿ ಈ ಹೊಸ ಆಪ್ ಅನ್ನು ರೂಪಿಸುವ ಹಾಗೂ ಜಿಯೋಫೋನ್ ಗ್ರಾಹಕರಿಗೆ ಅತ್ಯುತ್ತಮ ಮೆಸೇಜಿಂಗ್ ಅನುಭವ ನೀಡುವ ಮೂಲಕ, ಭಾರತ ಹಾಗೂ ವಿಶ್ವದ ಯಾರ ಜೊತೆ ಬೇಕಾದರೂ ಸಂವಹನ ನಡೆಸುವ ಸಾಮರ್ಥ್ಯವನ್ನು ಇನ್ನಷ್ಟು ಜನರಿಗೆ ವಿಸ್ತರಿಸಲು ಬಯಸುತ್ತೇವೆ" ಎಂದು ಹೇಳಿದರು.

ಜಿಯೋ ಈಗ ಭಾರತದಲ್ಲಿ ನಂ.1, ವಿಶ್ವದ ನಂ 17

ಜಿಯೋಫೋನ್ ಅನೇಕ ಮೈಲಿಗಲ್ಲು ಹಾಗೂ ಜಿಯೋಫೋನಿನಲ್ಲಿ ವಾಟ್ಸಾಪ್ ಡೌನ್ ಲೋಡ್ ಮಾಡುವುದು ಹೇಗೆ ಮುಂದೆ ತಿಳಿಯಿರಿ

ವಿಶೇಷ ಸಹಾಯವಾಣಿ

ವಿಶೇಷ ಸಹಾಯವಾಣಿ

ಜಿಯೋಫೋನ್‌ನಲ್ಲಿ ವಾಟ್ಸಾಪ್ ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ:

* 10ನೇ ಸೆಪ್ಟೆಂಬರ್ 2018ರಿಂದ ಪ್ರಾರಂಭಿಸಿ ಜಿಯೋಫೋನ್ ಆಪ್‌ಸ್ಟೋರಿನಲ್ಲಿ ವಾಟ್ಸಾಪ್ ದೊರಕಲಿದ್ದು, 20ನೇ ಸೆಪ್ಟೆಂಬರ್ 2018ರ ವೇಳೆಗೆ ಎಲ್ಲ ಜಿಯೋಫೋನ್‌ಗಳಲ್ಲೂ ಲಭ್ಯವಾಗಲಿದೆ.

* ಜಿಯೋಫೋನ್‌ನಲ್ಲಿ ಲಭ್ಯವಾದ ನಂತರ, ಆಪ್‌ಸ್ಟೋರಿನಲ್ಲಿ ಡೌನ್‌ಲೋಡ್ ಆಯ್ಕೆಯ ಮೇಲೆ ಕ್ಲಿಕ್ ಮಾಡುವ ಮೂಲಕ ಗ್ರಾಹಕರು ಜಿಯೋಫೋನ್ ಹಾಗೂ ಜಿಯೋಫೋನ್ 2 ಎರಡರಲ್ಲೂ ವಾಟ್ಸಾಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

ಜಿಯೋಫೋನ್ ಕುರಿತ ಪ್ರಶ್ನೆಗಳಿಗೆ ಉತ್ತರಿಸಲು ರಿಲಯನ್ಸ್ ರೀಟೇಲ್ '1991' ಎಂಬ ವಿಶೇಷ ಸಹಾಯವಾಣಿ ಸಂಖ್ಯೆಯನ್ನು ಪ್ರಾರಂಭಿಸಿದೆ.

ಜಿಯೋಫೋನ್ ಅನೇಕ ಮೈಲಿಗಲ್ಲುಗಳನ್ನು ಸಾಧಿಸಿದೆ

ಜಿಯೋಫೋನ್ ಅನೇಕ ಮೈಲಿಗಲ್ಲುಗಳನ್ನು ಸಾಧಿಸಿದೆ

1. ರಿಲಯನ್ಸ್ ರೀಟೇಲ್ ಲಿ. ಮೂಲಕ ಪರಿಚಯಿಸಲಾದ ಜಿಯೋಫೋನ್, ಭಾರತದಲ್ಲಿ ಅತ್ಯಂತ ಹೆಚ್ಚು ಮಾರಾಟವಾಗುವ ಫೋನ್ ಎಂಬ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದೆ.

2. ಸದ್ಯ ಮಾರಾಟವಾಗುವ ರೂ. 1,500ಕ್ಕಿಂತ ಕಡಿಮೆ ಬೆಲೆಯ ಪ್ರತಿ 10 ಫೋನುಗಳ ಪೈಕಿ 8 ಜಿಯೋಫೋನ್‌ಗಳೇ ಆಗಿವೆ.

3. ಸ್ಮಾರ್ಟ್‌ಫೋನುಗಳಲ್ಲಿರುವುದಕ್ಕಿಂತ ಐದು ಪಟ್ಟು ಹೆಚ್ಚಿನ ಸಂಖ್ಯೆಯ ವಾಯ್ಸ್ ಕಮ್ಯಾಂಡ್‌ಗಳು ಜಿಯೋಫೋನ್‌ನಲ್ಲಿ ಬಳಕೆಯಾಗುತ್ತಿವೆ.

4. ಅಂತರಜಾಲ ಸಂಪರ್ಕ ಹಾಗೂ ಅಪ್ಲಿಕೇಶನ್‌ಗಳನ್ನು ಬಳಸುವಲ್ಲಿ ಜಿಯೋಫೋನ್ ಗ್ರಾಹಕರು ಸ್ಮಾರ್ಟ್‌ಫೋನ್ ಬಳಕೆದಾರರಿಗಿಂತ ಹೆಚ್ಚಿನ ಸಮಯ ವ್ಯಯಿಸುತ್ತಾರೆ.

5. ಸಂಪರ್ಕವಿಲ್ಲದ ಸ್ಥಿತಿಯಿಂದ ಸಂಪರ್ಕಿತರಾಗಿ ಬದಲಾಗುವುದಷ್ಟೇ ಅಲ್ಲದೆ, ಜಿಯೋಫೋನ್ ಗ್ರಾಹಕರು ಜಿಯೋಫೋನ್ ಹಾಗೂ ಅಂತರಜಾಲದ ಸಾಮರ್ಥ್ಯಗಳನ್ನು ಒಟ್ಟಾಗಿ ತೋರಿಸುತ್ತಿದ್ದಾರೆ.

ಕೈಗೆಟುಕುವ ಬೆಲೆಯ ಸಾಧನ

ಕೈಗೆಟುಕುವ ಬೆಲೆಯ ಸಾಧನ

1. ಕೈಗೆಟುಕುವ ಬೆಲೆಯ ಸಾಧನ: ಮಾನ್ಸೂನ್ ಹಂಗಾಮ ಕೊಡುಗೆಯು ಜಿಯೋಫೋನ್‌ನ ಎಂಟ್ರಿ ಬ್ಯಾರಿಯರ್ ಅನ್ನು ಕೇವಲ ರೂ. 501ಕ್ಕೆ ತಂದಿದೆ. ಈ ಮೂಲಕ ಶೇ. 100ರಷ್ಟು ಫೋನ್ ಬಳಕೆದಾರರಿಗೆ ಇದು ಕೈಗೆಟುಕುವಂತಾಗಿದೆ.

2. ಕೈಗೆಟುಕುವ ಬೆಲೆಯಲ್ಲಿ ವಿಶ್ವದರ್ಜೆಯ ಸೇವೆ: ಜಿಯೋಫೋನ್ ಗ್ರಾಹಕರಿಗೆಂದೇ ರೂಪಿಸಲಾದ ಆಕರ್ಷಕ ಟ್ಯಾರಿಫ್ ಕೊಡುಗೆಗಳೊಂದಿಗೆ, ಅತ್ಯುತ್ತಮ ಗುಣಮಟ್ಟದ ಡೇಟಾ ಹಾಗೂ ಟ್ರೂ-ಎಚ್‌ಡಿ ವಾಯ್ಸ್ ಕಾಲಿಂಗ್ ಸೇವೆಗಳನ್ನು ಜಿಯೋ ವಿಶ್ವದಲ್ಲೇ ಕಡಿಮೆ ಬೆಲೆಗೆ ನೀಡುತ್ತಿದೆ.

3. ಅತ್ಯುತ್ತಮ ಆಪ್ಲಿಕೇಶನ್‌ಗಳು: ಜಿಯೋಟೀವಿ, ಜಿಯೋಸಿನೆಮಾ, ಜಿಯೋಮ್ಯೂಸಿಕ್, ಜಿಯೋಚಾಟ್, ಗೂಗಲ್ ಮ್ಯಾಪ್ಸ್ ಹಾಗೂ ಫೇಸ್‌ಬುಕ್‌ನಂತಹ ಆಪ್‌ಗಳನ್ನು ಜಿಯೋಫೋನ್ ಗ್ರಾಹಕರು ಈಗಾಗಲೇ ಆನಂದಿಸುತ್ತಿದ್ದಾರೆ.

4. ಡಿಜಿಟಲ್ ಸ್ವಾತಂತ್ರ್ಯ: ಇತರ ಯಾವುದೇ ದುಬಾರಿ 4ಜಿ ಸ್ಮಾರ್ಟ್‌ಫೋನ್ ಬಳಕೆದಾರರಂತೆ, ಜಿಯೋಫೋನ್ ಗ್ರಾಹಕರು ಕೂಡ ಮನರಂಜನೆ, ಶಿಕ್ಷಣ, ಮಾಹಿತಿ ಮತ್ತಿತರ ಪ್ರಮುಖ ಸೇವೆಗಳನ್ನು ತಮ್ಮ ಇಚ್ಛೆಯಂತೆ ಬಳಸಲು ಶಕ್ತರಾಗಿದ್ದಾರೆ.

ವಾಟ್ಸ್‌ಆಪ್ ತಂಡಗಳಿಗೆ ಜಿಯೋ ಧನ್ಯವಾದ

ವಾಟ್ಸ್‌ಆಪ್ ತಂಡಗಳಿಗೆ ಜಿಯೋ ಧನ್ಯವಾದ

"ಸಂಪರ್ಕದಿಂದ ದೂರವಿರುವವರನ್ನು ಸಂಪರ್ಕಿಸುವ ಈ ಅಭಿಯಾನವನ್ನು ಇನ್ನಷ್ಟು ಬಲಪಡಿಸಲು ಅನೇಕ ಪಾಲುದಾರರು ಮುಂದೆಬಂದರು. ಹೀಗೆ ನಿಜಕ್ಕೂ ನಮ್ಮೊಡನೆ ನಿಂತ ಪಾಲುದಾರರ ಪೈಕಿ ಫೇಸ್‌ಬುಕ್ ಮತ್ತು ಅದರ ಇಕೋಸಿಸ್ಟಂ ಕೂಡ ಒಂದು. ಈ ಪಾಲುದಾರಿಕೆಯ ಫಲ ಇದೀಗ ಇಡೀ ವಿಶ್ವದ ಮುಂದೆ ಇದೆ. ಇಂದಿನಿಂದ ಪ್ರಾರಂಭಿಸಿ, ವಿಶ್ವದಲ್ಲೇ ಅತಿ ಹೆಚ್ಚು ಬಳಕೆಯಾಗುವ ಚಾಟ್ ಅಪ್ಲಿಕೇಶನ್ ಆದ ವಾಟ್ಸಾಪ್ ಅನ್ನು ನಾವು ಎಲ್ಲ ಜಿಯೋಫೋನ್‌ಗಳಲ್ಲೂ ನೀಡುತ್ತಿದ್ದೇವೆ. ಇದನ್ನು ಸಾಧ್ಯವಾಗಿಸಿದ್ದಕ್ಕಾಗಿ ಫೇಸ್‌ಬುಕ್ ಹಾಗೂ ವಾಟ್ಸ್‌ಆಪ್ ತಂಡಗಳಿಗೆ ಜಿಯೋ ಧನ್ಯವಾದ ಅರ್ಪಿಸುತ್ತದೆ." ಎಂದು ರಿಲಯನ್ಸ್ ಜಿಯೋ ಇನ್‌ಫೋಕಾಮ್ ನಿರ್ದೇಶಕ ಆಕಾಶ್ ಅಂಬಾನಿ ಹೇಳಿದ್ದಾರೆ.

English summary
The WhatsApp service has been rolled out for JioPhone devices across India. According to the company, this new app for KaiOS will "give people a simple, reliable, and secure way to communicate with friends and family. Here are the steps how to download on Jio Phone.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X