ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೇಸ್ಬುಕ್ ನಲ್ಲಿ ಹಳೆ ಪೋಸ್ಟ್ ಒಮ್ಮೆಗೆ ಡಿಲೀಟ್ ಹೇಗೆ?

|
Google Oneindia Kannada News

ಬೆಂಗಳೂರು, ಜೂನ್ 5: ಭಾರತದಲ್ಲಿ ಅತ್ಯಂತ ಜನಪ್ರಿಯವಾಗಿರುವ ಸಾಮಾಜಿಕ ಜಾಲತಾಣ ಫೇಸ್ಬುಕ್ ಸುರಕ್ಷತೆ, ಬಳಕೆ ವಿಧಾನವನ್ನು ಆಗಾಗ ಬದಲಾಯಿಸಲಾಗುತ್ತದೆ. ಇತ್ತೀಚೆಗೆ ಫೇಸ್ಬುಕ್ ಪೋಸ್ಟ್ ಭದ್ರತೆ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿವೆ. ಯಾವುದೋ ಹಳೆ ಪೋಸ್ಟ್ ಧುತ್ತೆಂದು ಮತ್ತೆ ಸ್ಟೇಟಸ್ ನಲ್ಲಿ ಕಾಣಿಸಿಕೊಂಡು ಕಿರಿಕಿರಿ ಉಂಟು ಮಾಡುವ ಪ್ರಸಂಗಗಳು ಎದುರಾಗಿರಬಹುದು.

ಬಳಕೆದಾರರು ತಮ್ಮ ಖಾತೆಯಲ್ಲಿ ಹಳೆ ಪೋಸ್ಟ್ ಗಳನ್ನು ಒಮ್ಮೆಗೆ ಡಿಲೀಟ್ ಮಾಡುವ ಆಯ್ಕೆಯನ್ನು ಇದೀಗ ಫೇಸ್ಬುಕ್ ನೀಡುತ್ತಿದೆ. ಈ ಮೂಲಕ ತಮ್ಮ ಟೈಮ್‌ಲೈನ್‌ನಿಂದ ಹಳೆಯ ಪೋಸ್ಟ್‌ಗಳನ್ನು ಒಟ್ಟಿಗೆ ತೆಗೆದುಹಾಕಬಹುದಾಗಿದೆ.

ನಿಮ್ಮ ಫೇಸ್ಬುಕ್ ಖಾತೆ ಡಿಲೀಟ್ ಮಾಡುವುದು ಹೇಗೆ? ನಿಮ್ಮ ಫೇಸ್ಬುಕ್ ಖಾತೆ ಡಿಲೀಟ್ ಮಾಡುವುದು ಹೇಗೆ?

ಈ ತಕ್ಷಣದ ಪೋಸ್ಟ್ ಗಳನ್ನು ಕ್ಲಿಯರ್ ಮಾಡಲು ಹಿಸ್ಟರಿ ಕ್ಲಿಯರ್ ಆಯ್ಕೆ ಬಳಸಬಹುದಾಗಿದೆ. FB ಹಿಸ್ಟರಿ ಕ್ಲಿಯರ್ ಮಾಡಲುಬಲ ಭಾಗದಲ್ಲಿ ಕಾಣಿಸುವ ಮೂರು ಗೆರೆಗಳಿರುವ ಮೆನು ಆಯ್ಕೆ ಮಾಡಿ, ಸೆಟ್ಟಿಂಗ್ಸ್ ಮತ್ತು ಪ್ರೈವೆಸಿ ಆಯ್ಕೆ ಮಾಡಿರಿ, ಆಫ್‌ ಫೇಸ್‌ಬುಕ್ ಆಕ್ಟಿವಿಟಿ ಆಯ್ಕೆ ಕ್ಲಿಕ್ ಮಾಡಿ, ಕ್ಲಿಯರ್ ಹಿಸ್ಟರಿ ಆಯ್ಕೆ ಮೂಲಕ ಪೂರ್ಣಗೊಳಿಸಿ. ಆದರೆ, ಪೋಸ್ಟ್ ಡಿಲೀಟ್ ಮಾಡಲು ವಿಧಾನ ಹೇಗೆ? ಮುಂದೆ ತಿಳಿಯಿರಿ

ಮೊಬೈಲ್ ನಲ್ಲಿ ಫೇಸ್‌ಬುಕ್ ಆಪ್ ತೆರೆಯಿರಿ

ಮೊಬೈಲ್ ನಲ್ಲಿ ಫೇಸ್‌ಬುಕ್ ಆಪ್ ತೆರೆಯಿರಿ

* ಐಫೋನ್ ಅಥವಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ ಫೇಸ್‌ಬುಕ್ ಅಪ್ಲಿಕೇಶನ್ ತೆರೆಯಿರಿ ಅಥವಾ ಡೆಸ್ಕ್ ಟಾಪ್ ವರ್ಷನ್ ಬಳಸಿ.
* ಸದ್ಯಕ್ಕೆ ಹೊಸ ಸೌಲಭ್ಯ ಮೊಬೈಲ್ ವರ್ಷನ್ ನಲ್ಲಿ ಲಭ್ಯವಿದೆ. ಸಾಮಾನ್ಯವಾಗಿ Activity Log ಕ್ಲಿಯರ್ ಮಾಡುವ ವಿಧಾನದಂತೆ ಇದೆ.
* ನಿಮ್ಮ ಪ್ರೊಫೈಲ್ ಪುಟ ಬಲಗಡೆ ಸಿಗುವ Go to Activity Log ಬಟನ್ ಒತ್ತಿ
* ಎಡ ಬದಿಯಲ್ಲಿ ಟೈಮ್ ಲೈನ್ ರಿವ್ಯೂ, ಫೋಟೊ ರಿವ್ಯೂ ಹಾಗೂ ಟ್ಯಾಗ್ ರಿವ್ಯೂ ಎಂಬ ಮೂರು ಆಯ್ಕೆಗಳು ಕಾಣುತ್ತವೆ.
* ಜೊತೆಗೆ ಈ ದಿನದ ನಿಮ್ಮ ಚಟುವಟಿಕೆಗಳ ಹಿಸ್ಟರಿ ಅದರ ಕೆಳಗಡೆ ಇರುತ್ತದೆ.
* ನಿಮಗೆ ಬೇಡದ Activity ಆಯ್ಕೆ ಮಾಡಿ ಡಿಲೀಟ್ ಮಾಡಿ.

ಹೊಸ ವಿಧಾನದಲ್ಲಿ ಬಲ್ಕ್ ಡಿಲೀಟ್ ಸಾಧ್ಯ

ಹೊಸ ವಿಧಾನದಲ್ಲಿ ಬಲ್ಕ್ ಡಿಲೀಟ್ ಸಾಧ್ಯ

ನಿಮ್ಮ ಎಫ್ ಬಿ ಪ್ರೊಫೈಲ್ ಪುಟ ಟ್ಯಾಪ್‌ ಮಾಡಿ "Go to Activity Log" ಬಟನ್ ಒತ್ತಿ ಮತ್ತೊಮ್ಮೆ "Activity Log" ನಲ್ಲಿ ''Manage Activity'' ಟ್ಯಾಪ್ ಮಾಡಿ ಮತ್ತು ನಂತರ "Your Posts" ಆಯ್ಕೆ ಸೆಲೆಕ್ಟ್‌ ಮಾಡಿ.
* ಇದರಲ್ಲಿ ಬಹು ಆಯ್ಕೆ ಫೋಸ್ಟ್‌ ಡಿಲೀಟ್ ಮಾಡುವ ಆಯ್ಕೆ ಕಾಣಿಸುತ್ತದೆ. ಬಳಕೆದಾರರು ವರ್ಗ, ದಿನಾಂಕ, ಅಥವಾ ಜನರನ್ನು ಆಧರಿಸಿ ಫಿಲ್ಟರ್ ಮಾಡುವ ಮೂಲಕ ಅನೇಕ ಪೋಸ್ಟ್‌ಗಳನ್ನು ಆಯ್ಕೆ ಮಾಡಲು ಸಾಧ್ಯವಾಗುತ್ತದೆ. ಈ ಆಯ್ಕೆಗಳನ್ನು ಬಳಸಿ ಅಧಿಕ ಪೋಸ್ಟ್‌ಗಳನ್ನು ಸೆಲೆಕ್ಟ್‌ ಮಾಡಿ ತೆಗೆದುಹಾಕಬಹುದು. ಈ ವಿಧಾನ ಸದ್ಯಕ್ಕೆ ಬೀಟಾ ಆವೃತ್ತಿಯಲ್ಲಿದ್ದು, ನಿಧಾನವಾಗಿ ಡೆಸ್ಕ್ ಟಾಪ್ ಆವೃತ್ತಿಗೂ ಲಭ್ಯವಾಗಲಿದೆ.

ಮೊಬೈಲ್ ನಲ್ಲಿ ಬೇರೆ ವಿಧಾನ ಯಾವುದಿದೆ

ಮೊಬೈಲ್ ನಲ್ಲಿ ಬೇರೆ ವಿಧಾನ ಯಾವುದಿದೆ

ಮೊಬೈಲ್ ಆವೃತ್ತಿಯಲ್ಲಿ ಈಗಲೂ ನಿಮ್ಮ ಡಿಜಿಟಲ್ ಫುಟ್ ಪ್ರಿಂಟ್ ಅಳಿಸಬಹುದು. ಆದರೆ, ಬಹು ಆಯ್ಕೆ ವಿಧಾನ ಲಭ್ಯವಿಲ್ಲ. ಆದರೆ, ಅನೇಕ ಫಿಲ್ಟರ್ ಗಳು ಲಭ್ಯವಿದ್ದು, ಸ್ವಲ್ಪ ಹಿಡಿದರೂ ಒಂದು ಪೋಸ್ಟ್ ಮಿಸ್ ಆಗದಂತೆ ಡಿಲೀಟ್ ಮಾಡಲು ಸಾಧ್ಯ. ಎಫ್ ಬಿ ಪ್ರೊಫೈಲ್ ಓಪನ್ ಮಾಡಿ, ಮೂರು ಗೆರೆಯ ಮೆನು ಟ್ಯಾಪ್ ಮಾಡಿ ಸೆಟ್ಟಿಂಗ್ಸ್ ಒತ್ತಿ. Your Facebook Information ಆಡಿಯಲ್ಲಿರುವ Activity Log ಮೇಲೆ ಟ್ಯಾಪ್ ಮಾಡಿ
ಇಲ್ಲಿ Year ಹಾಗೂ Category ಇದೆ. ಉದಾಹರಣೆಗೆ 2010 ಆಯ್ಕೆ ಮಾಡಿಕೊಂಡರೆ ಯಾವ ತಿಂಗಳು ಎಂದು ಆಯ್ಕೆ ಮಾಡಿಕೊಳ್ಳಬಹುದು ನಂತರ ಕೆಟಗೆರಿಯಲ್ಲಿರುವ ಅನೇಕ ಚಟುವಟಿಕೆಗಳಲ್ಲಿ ಯಾವುದಾದರೂ ಒಂದು ಆಯ್ಕೆ ಮಾಡಿಕೊಂಡರೆ ಅದಕ್ಕೆ ಸಂಬಂಧಿಸಿದ ಎಲ್ಲಾ ಪೋಸ್ಟ್ ಕಾಣಿಸುತ್ತದೆ. ಒಂದೊಂದಾಗಿ ಪರಿಶೀಲಿಸಿ ಡಿಲೀಟ್ ಮಾಡಬಹುದು.

ಡಿಲೀಟ್ ಗೂ ಮುನ್ನ ಮಾಹಿತಿ ಡೌನ್ಲೋಡ್

ಡಿಲೀಟ್ ಗೂ ಮುನ್ನ ಮಾಹಿತಿ ಡೌನ್ಲೋಡ್

ನೀವು ನಿಮ್ಮ ಖಾತೆಯನ್ನು ಡಿಲೀಟ್ ಮಾಡುವ ಮುನ್ನ ಎಲ್ಲಾ ಮಾಹಿತಿಗಳನ್ನೂ ಡೌನ್ಲೋಡ್ ಮಾಡಬಹುದು. ಇ
ದಕ್ಕೆ ನೀವು ಈ ಕೆಳಗಿನ ಹಂತಗಳನ್ನು ಅನುಸರಿಸಿದರೆ ಸಾಕು.
ನಿಮ್ಮ ಫೇಸ್ಬುಕ್ ಖಾತೆಗೆ ಲಾಗಿನ್ ಆಗಿ ನಿಮ್ಮ ಖಾತೆಯ ಮೇಲ್ಭಾಗದ ಬಲತುದಿಯ ಆಯ್ಕೆಯ ಮೂಲಕ 'ಸೆಟ್ಟಿಂಗ್ಸ್' (Settings) ಆಯ್ಕೆ ಕ್ಲಿಕ್ ಮಾಡಿ.

ಅದರಲ್ಲಿ ಜನರಲ್ ಸೆಟ್ಟಿಂಗ್ ನಲ್ಲಿರುವ "Download a copy of your Facebook data"ದ ಮೇಲೆ ಕ್ಲಿಕ್ ಮಾಡಿ.
ನಂತರ Start My Archive ಆಯ್ಕೆಮಾಡಿ. ನಿಮ್ಮ ಫೇಸ್ಬುಕ್ ಖಾತೆಯ ಮಾಹಿತಿಗಳು ನೇರವಾಗಿ ನಿಮ್ಮ ಇಮೇಲ್ ಗೆ ಬರುತ್ತವೆ.

English summary
Facebook on Tuesday introduced a new feature called Manage Activity to help billions of users archive or trash their old posts in one place.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X