ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಿಲ್ ಅನ್ನು EMI ಆಗಿ ಪರಿವರ್ತಿಸುವುದು ಹೇಗೆ?

|
Google Oneindia Kannada News

ನವದೆಹಲಿ, ನವೆಂಬರ್ 21: ನೀವು ಹೆಚ್‌ಡಿಎಫ್‌ಸಿ ಕ್ರೆಡಿಟ್‌ ಕಾರ್ಡ್ ಬಳಕೆದಾರರಾಗಿದ್ದರೆ, ನಿಮ್ಮ ಬಿಲ್ ಅನ್ನು ಒಂದೇ ಬಾರಿ ಪಾವತಿ ಮಾಡಲು ಸಾಧ್ಯವಾಗದಿದ್ದರೆ ಅದನ್ನು ಇಎಂಐ ಆಗಿ ಪರಿವರ್ತಿಸಬಹುದು. ಕ್ರೆಡಿಟ್ ಕಾರ್ಡ್ ಬಾಕಿಗಳನ್ನು ಇಎಂಐಗೆ ಪರಿವರ್ತಿಸುವುದು ಮೂಲತಃ ಅದನ್ನು ಸಾಲವಾಗಿ ಪರಿವರ್ತಿಸುವುದು ಎಂದರ್ಥ.

ನಿಮ್ಮ ಬಿಲ್‌ ಅನ್ನು ಇಎಂಐಗೆ ಆಗಿ ಪರಿವರ್ತಿಸಿದರೆ ನಿಮ್ಮ ಬಾಕಿ ಸಾಲಕ್ಕೆ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. ಈ ಸೌಲಭ್ಯವನ್ನು ಸ್ಮಾರ್ಟ್‌ ಇಎಂಐ ಪ್ಲಾಟ್‌ಫಾರ್ಮ್ ಮೂಲಕ ಹೆಚ್ಚಿನ ಎಚ್‌ಡಿಎಫ್‌ಸಿ ಕ್ರೆಡಿಟ್ ಕಾರ್ಡ್‌ಗಳಲ್ಲಿ ನೀಡಲಾಗುತ್ತದೆ. ಸ್ಮಾರ್ಟ್‌ಇಎಂಐ ಸೌಲಭ್ಯವು ಎಚ್‌ಡಿಎಫ್‌ಸಿ ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ಇಎಂಐ ಆಗಿ ಪರಿವರ್ತಿಸಲು ನಿಮಗೆ ಅನುಮತಿಸುತ್ತದೆ.

HDFC Bank: ವೀಡಿಯೋ ಕೆವೈಸಿ ಮೂಲಕ ಸಾಲ ನೀಡುವ ಸೌಲಭ್ಯ ಪ್ರಾರಂಭHDFC Bank: ವೀಡಿಯೋ ಕೆವೈಸಿ ಮೂಲಕ ಸಾಲ ನೀಡುವ ಸೌಲಭ್ಯ ಪ್ರಾರಂಭ

ಆದರೆ ಈ ರೀತಿ ಇಎಂಐ ಆಗಿ ಪರಿವರ್ತನೆಗೊಳಿಸಲು ನೀವು ಅರ್ಹರಾಗಿರಬೇಕು. ನೀವು ಸ್ಮಾರ್ಟ್‌ ಇಎಂಐ ಆಯ್ಕೆ ಮಾಡಿದ ತಕ್ಷಣ, ನಿಮ್ಮ ಕ್ರೆಡಿಟ್ ಮಿತಿಯನ್ನು ನಿರ್ಬಂಧಿಸಲಾಗುತ್ತದೆ. ಹಾಗಿದ್ದರೆ ನಿಮ್ಮ ಎಚ್‌ಡಿಎಫ್‌ಸಿ ಕ್ರೆಡಿಟ್ ಕಾರ್ಡ್ ಬಿಲ್‌ಗಳನ್ನು ಇಎಂಐಗೆ ಪರಿವರ್ತಿಸುವುದು ಹೇಗೆ ಎಂಬುದನ್ನು ಈ ಕೆಳಗೆ ತಿಳಿದುಕೊಳ್ಳಿ.

ಯಾವ ಕ್ರೆಡಿಟ್ ಕಾರ್ಡ್ ಬಾಕಿಗಳನ್ನು ಇಎಂಐಗಳಾಗಿ ಪರಿವರ್ತಿಸಲಾಗುವುದಿಲ್ಲ?

ಯಾವ ಕ್ರೆಡಿಟ್ ಕಾರ್ಡ್ ಬಾಕಿಗಳನ್ನು ಇಎಂಐಗಳಾಗಿ ಪರಿವರ್ತಿಸಲಾಗುವುದಿಲ್ಲ?

ಕ್ರೆಡಿಟ್ ಕಾರ್ಡ್‌ನಿಂದ ಚಿನ್ನ ಅಥವಾ ಯಾವುದೇ ಆಭರಣ ಖರೀದಿಸಿದ ಬಿಲ್‌ಗಳನ್ನು ಇಎಂಐಗಳಾಗಿ ಪರಿವರ್ತಿಸಲು ಸಾಧ್ಯವಿಲ್ಲ. ಹೆಚ್ಚುವರಿಯಾಗಿ, 60 ದಿನಗಳು ಅಥವಾ ಅದಕ್ಕಿಂತ ಹೆಚ್ಚಿನದನ್ನು ದಾಟಿದ ವಹಿವಾಟುಗಳನ್ನು ಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ.

ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ಇಎಂಐ ಆಗಿ ಪರಿವರ್ತಿಸುವ ವಿಧಾನ

ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ಇಎಂಐ ಆಗಿ ಪರಿವರ್ತಿಸುವ ವಿಧಾನ

ಈ ಯೋಜನೆಗೆ ಅರ್ಜಿ ಸಲ್ಲಿಸಲು, ಮೊದಲು, ನಿಮ್ಮ ಕ್ರೆಡಿಟ್ ಕಾರ್ಡ್‌ನ ಅರ್ಹತೆಯನ್ನು ಪರಿಶೀಲಿಸಿ. ನೆಟ್‌ ಬ್ಯಾಂಕಿಂಗ್ ಅಥವಾ ಫೋನ್ ಬ್ಯಾಂಕಿಂಗ್ ಬಳಸಿ ಅರ್ಹತಾ ಮಾನದಂಡಗಳ ಪರಿಶೀಲನೆಯನ್ನು ಮಾಡಬಹುದು.

ಐಸಿಐಸಿಐ ಬ್ಯಾಂಕ್‌ನಿಂದ 'ಕಾರ್ಡ್‌ಲೆಸ್‌ ಇಎಂಐ' ಸೌಲಭ್ಯ: ನೀವು ಅರ್ಹರಾಗಿದ್ದೀರಾ? ಇಲ್ಲಿ ಪರೀಕ್ಷಿಸಿಐಸಿಐಸಿಐ ಬ್ಯಾಂಕ್‌ನಿಂದ 'ಕಾರ್ಡ್‌ಲೆಸ್‌ ಇಎಂಐ' ಸೌಲಭ್ಯ: ನೀವು ಅರ್ಹರಾಗಿದ್ದೀರಾ? ಇಲ್ಲಿ ಪರೀಕ್ಷಿಸಿ

ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ಇಎಂಐಗೆ ಪರಿವರ್ತಿಸುವುದು ಹೇಗೆ?

ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ಇಎಂಐಗೆ ಪರಿವರ್ತಿಸುವುದು ಹೇಗೆ?

ಎಚ್‌ಡಿಎಫ್‌ಸಿ ಬ್ಯಾಂಕ್ ನೆಟ್‌ಬ್ಯಾಂಕಿಂಗ್ ಮೂಲಕ ನಿಮ್ಮ ಅರ್ಹತೆಯನ್ನು ಪರೀಕ್ಷಿಸಲು ನಿಮಗೆ ಸಹಾಯ ಮಾಡಲು ಕೆಳ ಹಂತಗಳನ್ನು ಹೊಂದಿದೆ. ಅವುಗಳು ಈ ಕೆಳಕಂಡಂತಿದೆ.

1) ನಿಮ್ಮ ಎಚ್‌ಡಿಎಫ್‌ಸಿ ಬ್ಯಾಂಕ್ ನೆಟ್‌ಬ್ಯಾಂಕಿಂಗ್ ಖಾತೆಗೆ ಲಾಗ್ ಇನ್ ಮಾಡಿ

2) ಕಾರ್ಡ್ಸ್ ಟ್ಯಾಬ್ ಕ್ಲಿಕ್ ಮಾಡಿ

3) ಮುಂದೆ, ಕ್ರೆಡಿಟ್ ಕಾರ್ಡ್ ಅಡಿಯಲ್ಲಿ, ವಹಿವಾಟು, ನಂತರ ಸ್ಮಾರ್ಟ್ ಇಎಂಐ ಆಯ್ಕೆಯನ್ನು ಆರಿಸಿ

4) ಬಿಲ್ ಮಾಡದ ವ್ಯವಹಾರಗಳ ಪೇಜ್ ಕಾಣಿಸುತ್ತದೆ. ನಿಮ್ಮ ನಿರ್ದಿಷ್ಟ ಕಾರ್ಡ್ ಅನ್ನು ಆಯ್ಕೆಮಾಡಿ.

5) ನಿಮ್ಮ ವಹಿವಾಟು ಪ್ರಕಾರವಾಗಿ ಡೆಬಿಟ್ ಆಯ್ಕೆಮಾಡಿ, ವೀವ್‌ ಆಯ್ಕೆಮಾಡಿ.

6) ನಿಮ್ಮ ಅರ್ಹತೆಯನ್ನು ತಿಳಿಯಲು 'ಕ್ಲಿಕ್' ಮಾಡುವ ಆಯ್ಕೆಯೊಂದಿಗೆ ಸ್ಮಾರ್ಟ್‌ ಇಎಂಐಗಾಗಿ ನಿಮ್ಮ ಕ್ರೆಡಿಟ್ ಕಾರ್ಡ್ ವಹಿವಾಟಿನ ಸ್ಟೇಟ್‌ಮೆಂಟ್ ಕಾಣಿಸುತ್ತದೆ.

7) ನಿರ್ದಿಷ್ಟ ವಹಿವಾಟನ್ನು ಪರಿವರ್ತಿಸಲು 'ಕ್ಲಿಕ್' ಆಯ್ಕೆಯನ್ನು ಆರಿಸಿ

8) ಸಬ್‌ಮಿಟ್ ಆಯ್ಕೆ ಮಾಡುವ ಮೂಲಕ ನಿಯಮಗಳು ಮತ್ತು ಷರತ್ತುಗಳನ್ನು ದೃಢೀಕರಿಸಿ.

9) ವಹಿವಾಟನ್ನು ದೃಢೀಕರಿಸಿದ ನಂತರ, ಸ್ವೀಕೃತಿ ಸಂದೇಶ ಮತ್ತು ಸಾಲ ಸಂಖ್ಯೆಯನ್ನು ಎಸ್‌ಎಂಎಸ್ ಮೂಲಕ ನಿಮ್ಮ ಮೊಬೈಲ್‌ಗೆ ಕಳುಹಿಸಲಾಗುತ್ತದೆ.

ಫೋನ್‌ಬ್ಯಾಂಕಿಂಗ್ ಮೂಲಕ ಅರ್ಹತೆಯನ್ನು ಪರಿಶೀಲಿಸುವುದು ಹೇಗೆ?

ಫೋನ್‌ಬ್ಯಾಂಕಿಂಗ್ ಮೂಲಕ ಅರ್ಹತೆಯನ್ನು ಪರಿಶೀಲಿಸುವುದು ಹೇಗೆ?

ಈ ಕೆಳಗಿನ ಸ್ಟೆಪ್‌ಗಳನ್ನು ಅನುಸರಿಸುವ ಮೂಲಕ ನೀವು ಬಿಲ್ ಮಾಡಿದ ಕ್ರೆಡಿಟ್ ಕಾರ್ಡ್ ಮೊತ್ತವನ್ನು ಫೋನ್‌ಬ್ಯಾಂಕಿಂಗ್ ಮೂಲಕ ಎಚ್‌ಡಿಎಫ್‌ಸಿಯೊಂದಿಗೆ ಇಎಂಐಗೆ ಪರಿವರ್ತಿಸಬಹುದು:

ನಿಮ್ಮ ನಗರಕ್ಕೆ ಅನುಗುಣವಾಗಿರುವ ಕಸ್ಟಮರ್ ಕೇರ್ ನಂಬರ್‌ಗೆ ನೀವು ಕರೆ ಮಾಡಬೇಕು. ಬಡ್ಡಿ ದರ, ಲಭ್ಯವಿರುವ ಮೊತ್ತ ಮತ್ತು ಮರುಪಾವತಿ ಅವಧಿಯನ್ನು ಕಸ್ಟಮರ್ ಎಕ್ಸಿಕ್ಯೂಟಿವ್‌ಗೆ ತಿಳಿಸಬೇಕು. ದೃಢೀಕರಣದ ನಂತರ, ಯಾವುದೇ ಡಾಕ್ಯುಮೆಂಟ್ಸ್‌ ಇಲ್ಲದೆ ನಿಮ್ಮ ಸಾಲವನ್ನು ತಕ್ಷಣ ಅನುಮೋದಿಸಲಾಗುತ್ತದೆ. ಎಚ್‌ಡಿಎಫ್‌ಸಿ ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ಇಎಂಐ ಆಗಿ ಪರಿವರ್ತಿಸಲು ಈ ಸೌಲಭ್ಯವು ಸಲೀಸಾಗಿ ಅನುಮತಿಸುತ್ತದೆ.

English summary
You can convert HDFC credit card payment into EMI. Check more details here
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X