ಎಸ್ಎಂಎಸ್ ಮೂಲಕ ಇಪಿಎಫ್ ಚೆಕ್ ಮಾಡುವುದು ಹೇಗೆ?

ಬೆಂಗಳೂರು, ಫೆಬ್ರವರಿ 06 : ಉದ್ಯೋಗಿಗಳ ಭವಿಷ್ಯ ನಿಧಿ(ಇಪಿಎಫ್) ಬ್ಯಾಲೆನ್ಸ್ ಈಗ ಸುಲಭವಾಗಿ ಚೆಕ್ ಮಾಡಬಹುದು. ಯುಎಎನ್ ಇದ್ದರೆ ಆನ್ ಲೈನ್, ಎಸ್ಎಂಎಸ್ ಮೂಲಕ ಇಪಿಎಫ್ ವಿವರಗಳನ್ನು ಸುಲಭವಾಗಿ ಪಡೆಯಬಹುದು.
ಪ್ರತಿಯೊಂದು ಪಿಎಫ್ ಖಾತೆಗೂ ಯುಎಎನ್ ನಂಬರ್ ನೀಡಿರಲಾಗುತ್ತದೆ. ಇದು ನಿಮ್ಮ ಪಿಎಫ್ ಖಾತೆಯಲ್ಲಿ ಎಷ್ಟು ಹಣವಿದೆ, ಸ್ಥಿತಿಗತಿಯೇನು? ಎಂಬುದನ್ನು ಅರಿತುಕೊಳ್ಳಲು ನೆರವಾಗುತ್ತದೆ.
ಮೊಬೈಲ್ ಫೋನ್ ಮೂಲಕ ಇಪಿಎಫ್ ಬ್ಯಾಲೆನ್ಸ್ ತಿಳಿಯಲು ಉದ್ಯೋಗ ಸಂಸ್ಥೆ ನೀಡುವ ಯೂನಿವರ್ಸಲ್ ಅಕೌಂಟ್ ನಂಬರ್ (UAN) ಹೊಂದಿರಬೇಕು. ಈ ಮೂಲಕ ಭವಿಷ್ಯ ನಿಧಿ ಮೊತ್ತವನ್ನು ತಿಳಿಯಬಹುದು. ಹಳೆ ಪಿಎಫ್ ನಂಬರ್ ಕೂಡಾ ಯುಎಎನ್ ಗೆ ಹೊಂದಿಸಿಕೊಳ್ಳಬಹುದು.
ಪಿಎಫ್ ಹೊಸ ನಿಮಯ : ಟೇಕ್ ಹೋಮ್ ಸಂಬಳಕ್ಕೆ ಕುತ್ತು !
ಯುಎಎನ್ (UAN) ಸಂಖ್ಯೆಯೊಂದಿಗೆ ಪಿಎಫ್ ಬಹು ಖಾತೆಗಳನ್ನು ವಿಲೀನ ಮಾಡಬಹುದಾಗಿದೆ. ಈ ಸೌಲಭ್ಯದ ಪ್ರಕಾರ ನೌಕರರ ಭವಿಷ್ಯ ನಿಧಿ ಸಂಸ್ಥೆ (ಎಪಿಎಫ್ಒ) ಚಂದಾದಾರರು ಈ ಹಿಂದೆ ಹೊಂದಿರುವ ಹತ್ತು ಖಾತೆಗಳನ್ನು ವಿಲೀನಗೊಳಿಸಬಹುದು.
ಹಳೆ ಭವಿಷ್ಯನಿಧಿ ಖಾತೆಗಳ ವಿಲೀನ ಈಗ ಸಾಧ್ಯ, ಹೇಗೆ?
ಚಾಲನೆಯಲ್ಲಿಲ್ಲದ ಪಿಎಫ್ ಖಾತೆಗಳಿಗೆ ಶೇ. 8.8ರಷ್ಟು ಬಡ್ಡಿದರ ನೀಡುವ ನಿರ್ಧಾರವನ್ನು ಸರ್ಕಾರ ಕೈಗೊಂಡಿರುವುದರಿಂದ ಸುಮಾರು 9.70 ಕೋಟಿ ನೌಕರರಿಗೆ ಪ್ರಯೋಜನವಾಗಲಿದೆ. ಇಪಿಎಫ್ ವಿವರಗಳನ್ನು ಸುಲಭವಾಗಿ ಪಡೆಯುವ ವಿಧಾನಗಳ ಬಗ್ಗೆ ವಿವರಕ್ಕಾಗಿ ಮುಂದೆ ಓದಿ...

ಆನ್ ಲೈನ್ ನಲ್ಲೇ ವರ್ಗಾವಣೆ ಸಾಧ್ಯ
ಉದ್ಯೋಗ ಬದಲಾಯಿಸುವವರೂ ಕೂಡಾ ಪಿಎಫ್ ನಂಬರ್ ಬದಲಾವಣೆಯಾದರೆ ಯುಎಎನ್ ನಂಬರ್ ಮೂಲಕ ಇಪಿಎಫ್ ವರ್ಗಾವಣೆ ಆನ್ ಲೈನ್ ನಲ್ಲೇ ಮಾಡಿಕೊಳ್ಳಬಹುದು. ಅದರೆ, ಇಪಿಎಫ್ ವರ್ಗಾವಣೆ ಹಾಗೂ ವಿಥ್ ಡ್ರಾ ಮಾಡಲು ಕೆಲ ಸಮಯ ಹಿಡಿಯುತ್ತದೆ.
UAN ಸಂಖ್ಯೆ ಜತೆ EPFO ಚಂದಾದಾರರು ಒಟ್ಟು 10 ಖಾತೆಗಳನ್ನು ವಿಲೀನ ಮಾಡಲು ಅವಕಾಶ ನೀಡಲಾಗಿದೆ. 120ಕ್ಕೂ ಹೆಚ್ಚು EPFO ಕಚೇರಿಗಳಿಗೆ ಅತಿ ಶೀಘ್ರದಲ್ಲಿ ಈ ಸೌಲಭ್ಯ ಅಳವಡಿಸುವಂತೆ ನಿರ್ದೇಶನವನ್ನೂ ನೀಡಲಾಗಿದೆ.

ಆನ್ ಲೈನ್ ಮೂಲಕ ಚೆಕ್ ಮಾಡುವುದು ಹೇಗೆ?
* ಮೊದಲಿಗೆ http://uanmembers.epfoservices.in/ ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ.
* ವೆಬ್ ಪುಟದ ಬಲ ಬದಿಯಲ್ಲಿರುವ ಲಾಗ್ ಇನ್ ಕ್ಲಿಕ್ ಮಾಡಿ
* ನಿಮ್ಮ ಯುನಿವರ್ಸಲ್ ಅಕೌಂಟ್ ನಂಬರ್(ಯುಎಎನ್) ಸಲ್ಲಿಸಿ.
* ಮೊಬೈಲ್ ಸಂಖ್ಯೆ ದಾಖಲಿಸಿ.
* ರಾಜ್ಯ ಮತ್ತು ನಿಮ್ಮ ಕಚೇರಿ ಪ್ರದೇಶವನ್ನು ಸೂಚಿಸಿ.
* captcha ನಮೂದಿಸಿದ ಬಳಿಕ ನಿಮ್ಮ ನೋಂದಾಯಿತ ಮೊಬೈಲ್ ಫೋನಿಗೆ ಪಿನ್ ನಂಬರ್ ಬರಲಿದೆ. ಒಟಿಪಿ ದಾಖಲಿಸಿ ಪೂರ್ಣ ವಿವರ ಪಡೆಯಬಹುದು.

ಮೊಬೈಲ್ ಮೂಲಕ ಚೆಕ್ ಮಾಡುವ ವಿಧಾನ
ಇಪಿಎಫ್ ಒ ಈಗ ಎಸ್ಎಂಎಸ್ ಬ್ಯಾಲೆನ್ಸ್ ಚೆಕ್ಕಿಂಗ್ ವ್ಯವಸ್ಥೆ ನೀಡುತ್ತಿದೆ. ಯುಎಎನ್ ಹಾಗೂ ನೋಂದಾಯಿತ ಮೊಬೈಲ್ ಸಂಖ್ಯೆ ಇದ್ದರೆ ಬ್ಯಾಲೆನ್ಸ್ ವಿವರ ಪಡೆದುಕೊಳ್ಳಬಹುದು.
ನೋಂದಾಯಿತ ಮೊಬೈಲ್ ಫೋನಿನಿಂದ ಹೀಗೆ ಟೈಪ್ ಮಾಡಿ
EPFOHO UAN ENG ಈ ಸಂದೇಶವನ್ನು 7738299899 ಸಂಖ್ಯೆಗೆ ಎಸ್ಎಂಎಸ್ ಕಳಿಸಿ
ವಿಡಿಯೋ ಮೂಲಕ ಮಾರ್ಗದರ್ಶಿ
ಕನ್ನಡದಲ್ಲೂ ಮಾಹಿತಿ: ಇಪಿಎಫ್ಒ ಈಗ 10 ಭಾಷೆಗಳಲ್ಲಿ ಬ್ಯಾಲೆನ್ಸ್ ಮಾಹಿತಿ ನೀಡುತ್ತಿದೆ. ಕನ್ನಡ ಅಲ್ಲದೆ ಇಂಗ್ಲೀಷ್, ಹಿಂದಿ, ಪಂಜಾಬಿ, ಗುಜರಾತಿ, ಮರಾಠಿ, ಮಲೆಯಾಳಂ, ತಮಿಳು ಹಾಗೂ ಬೆಂಗಾಲಿಯಲ್ಲಿ ಈ ಮಾಹಿತಿ ಲಭ್ಯವಿದೆ.
ಗಮನಿಸಿ: ನಿಮ್ಮ ಉದ್ಯೋಗ ಸಂಸ್ಥೆಯಿಂದ ಆಧಾರ್, ಪ್ಯಾನ್ ಅಥವಾ ಬ್ಯಾಂಕ್ ಅಕೌಂಟ್ ಮಾಹಿತಿ ಡಿಜಿಟಲಿ ಅನುಮೋದನೆಯಾಗಿದ್ದರೆ ಮಾತ್ರ ಮಾಹಿತಿ ಸಿಗಲಿದೆ. ಹೆಚ್ಚಿನ ಮಾಹಿತಿಗೆ 1800118005 ಸಹಾಯವಾಣಿಗೆ ಕರೆ ಮಾಡಿ.