ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗ್ರಾಚ್ಯುಟಿ ಎಂದರೇನು? ಗ್ರಾಚ್ಯುಟಿ ಲೆಕ್ಕ ಹಾಕುವುದು ಹೇಗೆ?

By Mahesh
|
Google Oneindia Kannada News

Recommended Video

ಗ್ರಾಚ್ಯುಟಿ ಎಂದರೇನು? ಗ್ರಾಚ್ಯುಟಿ ಲೆಕ್ಕ ಹಾಕೋದಾದ್ರೂ ಹೇಗೆ? | Oneindia Kannada

ಮುಂದಿನ ಕೇಂದ್ರ ಬಜೆಟ್ ಅಧಿವೇಶನದಲ್ಲಿ ಗ್ರಾಚ್ಯುಟಿ ತಿದ್ದುಪಡಿ ಮಸೂದೆ 2017ಕ್ಕೆ ಅಂಗೀಕಾರ ಸಿಗುವ ಸಾಧ್ಯತೆ ಇದೆ. ಇದರಿಂದಾಗಿ ಉದ್ಯೋಗಿಗಳಿಗೆ 20 ಲಕ್ಷ ರೂ.ವರೆಗೂ ತೆರಿಗೆ ಮುಕ್ತ ಗ್ರಾಚ್ಯುಟಿ ಪಡೆಯಲು ಅರ್ಹರಾಗಲಿದ್ದಾರೆ.

ಸದ್ಯ ಐದು ಅಥವಾ ಅದಕ್ಕಿಂತ ಹೆಚ್ಚು ಸೇವಾ ಅವಧಿ ಹೊಂದಿರುವ ಉದ್ಯೋಗಿಗಳು ಉದ್ಯೋಗ ತೊರೆದಾಗ, ನಿವೃತ್ತಿ ಹೊಂದಿದಾಗ 10 ಲಕ್ಷ ರೂ. ವರೆಗೂ ತೆರಿಗೆ ಮುಕ್ತವಾಗಿ ಗ್ರಾಚ್ಯುಟಿ ಗಳಿಸಬಹುದಾಗಿದೆ. ಇಷ್ಟಕ್ಕೂ ಗ್ರಾಚ್ಯುಟಿ ಎಂದರೇನು? ಇದರ ಲೆಕ್ಕ ಹಾಕುವುದು ಹೇಗೆ? ಮುಂದೆ ಓದಿ...

ಉದ್ಯೋಗದಾತರಿಂದ ಉದ್ಯೋಗಿಗಳಿಗೆ ಸಿಗುವ ಕೊಡುಗೆಗಳಲ್ಲಿ ಗ್ರಾಚ್ಯುಟಿ ಕೂಡಾ ಒಂದಾಗಿದೆ. ಗ್ರಾಚ್ಯುಟಿ ಅಧಿನಿಯಮದ ಪ್ರಕಾರ ಉದ್ಯೋಗಿ ನಿವೃತ್ತಿ ಹೊಂದಿದ 1 ತಿಂಗಳ ಒಳಗಾಗಿ ಕಡ್ಡಾಯವಾಗಿ ಗ್ರಾಚ್ಯುಟಿ ಹಣವನ್ನು ಪಾವತಿಸಬೇಕಾಗುತ್ತದೆ. ಉದ್ಯೋಗಿ ತನ್ನ ವೃತ್ತಿ ಬದುಕಿನಲ್ಲಿ ಹಲವಾರು ಬಾರಿ ಉದ್ಯೋಗ ಬದಲಾಯಿಸಬೇಕಾಗುತ್ತದೆ. ಗ್ರಾಚ್ಯುಟಿ ಪಡೆದು ಉದ್ಯೋಗ ತೊರೆಯಬಹುದಾಗಿದೆ.

ತೆರಿಗೆ ರಹಿತ ಗ್ರಾಚ್ಯುಟಿ? ಉದ್ಯೋಗಿಗಳಿಗೆ ಮೋದಿಯಿಂದ ಗಿಫ್ಟ್!ತೆರಿಗೆ ರಹಿತ ಗ್ರಾಚ್ಯುಟಿ? ಉದ್ಯೋಗಿಗಳಿಗೆ ಮೋದಿಯಿಂದ ಗಿಫ್ಟ್!

ಗ್ರಾಚ್ಯುಟಿ ಅಧಿನಿಯಮ 1972ರ ಪ್ರಕಾರ ಉದ್ಯೋಗಿಯ ಹೆಸರು ಸೇರ್ಪಡೆಗೊಂಡಿದ್ದರೆ, ಹಲವು ವಿಧಾನಗಳಲ್ಲಿ ಗ್ರಾಚುಟಿ ಮೊತ್ತವನ್ನು ಲೆಕ್ಕಾ ಹಾಕಲಾಗುತ್ತದೆ. ಈಗ ಒಬ್ಬ ಉದ್ಯೋಗಿ ಗ್ರಾಚುಟಿ ಪೇಮೆಂಟ್ ಕಾಯ್ದೆ 1972ಗೆ ಒಳಪಟ್ಟಿದ್ದರೆ, 15 ದಿನಗಳ ಸಂಬಳದ ಗ್ರಾಚುಟಿ ಮೊತ್ತವನ್ನು ಉದ್ಯೋಗಿಯ ಅನುಭವದ ವರ್ಷಗಳ ಜೊತೆ ಗುಣಿಸಿ ಲೆಕ್ಕ ಹಾಕಲಾಗುತ್ತದೆ ಸಂಬಳದ ಲೆಕ್ಕದಲ್ಲಿ ಮೂಲ ಸಂಬಳ, ಕೊನೆ ಬಾರಿ ಪಡೆದ ತುಟ್ಟಿಭತ್ಯೆ (DA) ಎಲ್ಲವೂ ಸೇರಿಸಲಾಗುತ್ತದೆ ನಂತರ ಮೊತ್ತವನ್ನು 26ರಿಂದ ಭಾಗಿಸಬೇಕಾಗುತ್ತದೆ.

ಗ್ರಾಚ್ಯುಟಿ ಎಂದರೇನು?

ಗ್ರಾಚ್ಯುಟಿ ಎಂದರೇನು?

ಗ್ರಾಚ್ಯುಟಿ ಎಂದರೆ, ಉದ್ಯೋಗದಾತ ಕಂಪನಿಯು ತನ್ನಲ್ಲಿನ ನೌಕರರಿಗೆ ಅವರ ಸೇವಾವಧಿಯನ್ನು ಮಾನದಂಡವಾಗಿಟ್ಟುಕೊಂಡು ನೀಡುವ ಗೌರವ ಧನ. ಅಂದರೆ, ಉದ್ಯೋಗಿಯು ಕಂಪನಿಯಿಂದ ನಿವೃತ್ತನಾದಾಗ ಅಥವಾ ಸೇವೆಗೆ ರಾಜಿನಾಮೆ ಸಲ್ಲಿಸಿದಾಗ ನೀಡಲಾಗುವ ಮೊತ್ತವಿದು.

ಗಣಿ, ತೈಲಕ್ಷೇತ್ರ, ಫ್ಯಾಕ್ಟರಿ, ಬಂದರು, ರೈಲ್ವೇ ಕಂಪನಿಗಳು ಮೊದಲಾದ ಕಡೆಗಳಲ್ಲಿ ಕಾರ್ಯನಿರ್ವಹಿಸುವವರಿಗೆ ಅನುಕೂಲ ಒದಗಿಸಲು ಗ್ರಾಚುಟಿ ಪಾವತಿ ಕಾಯ್ದೆ 1972 ನ್ನು ಜಾರಿಗೆ ತರಲಾಗಿದೆ. ಗ್ರಾಚ್ಯುಟಿ ಅಧಿನಿಯಮ 1972ರ ಪ್ರಕಾರ ಉದ್ಯೋಗಿಯ ಹೆಸರು ಸೇರ್ಪಡೆಗೊಂಡಿದ್ದರೆ, ನಿಮ್ಮ ಔದ್ಯೋಗಿಕ ಅನುಭವದ ಜತೆ ಲೆಕ್ಕ ಹಾಕಿ ಗ್ರಾಚ್ಯುಟಿ ನೀಡಲಾಗುತ್ತದೆ.

ಗ್ರಾಚ್ಯುಟಿ ಲೆಕ್ಕಾಚಾರ ಉದಾಹರಣೆ

ಗ್ರಾಚ್ಯುಟಿ ಲೆಕ್ಕಾಚಾರ ಉದಾಹರಣೆ

ಉದಾಹರಣೆಗೆ: ಉದ್ಯೋಗಿಗೆ ಮೂಲ ಸಂಬಳ(basic pay) ಪ್ರತಿ ತಿಂಗಳು 10,000 ರು ಸಂಬಳ ಬರುತ್ತಿದೆ ಎಂದುಕೊಳ್ಳೋಣ. ಇದರ ಜೊತೆಗೆ ತುಟ್ಟಿಭತ್ಯೆ(dearness allowance) ಸೇರಿಸಬೇಕು. ಜೊತೆಗೆ 10 ವರ್ಷದ ಅನುಭವ ಸೇರಿಸಿಕೊಳ್ಳಿ.

ಗ್ರಾಚುಟಿ = ಕೊನೆ ಬಾರಿ ಪಡೆದ ಸಂಬಳ + 15/26 x ಔದ್ಯೋಗಿಕ ಅನುಭವ ವರ್ಷಗಳು ಈ ಉದಾಹರಣೆಯಂತೆ= 10000x15/26x10 = Rs 57,692 ಒಂದು ವೇಳೆ ಉದ್ಯೋಗಿಯ ಅನುಭವ 4.5 ಅಥವಾ ನಾಲ್ಕು ಮುಕ್ಕಾಲು ವರ್ಷ ಇದ್ದರೆ ಅದನ್ನು ಹತ್ತಿರದ ಸಂಖ್ಯೆಗೆ ರೌಂಡ್ ಆಫ್ ಮಾಡಲಾಗುತ್ತದೆ.

ಉದ್ಯೋಗಿ ನಡೆದುಕೊಂಡ ರೀತಿ

ಉದ್ಯೋಗಿ ನಡೆದುಕೊಂಡ ರೀತಿ

ಇದರ ಜೊತೆಗೆ ಸಂಸ್ಥೆಯಯಲ್ಲಿ ಉದ್ಯೋಗಿ ನಡೆದುಕೊಂಡ ರೀತಿ, ಉದ್ಯೋಗಿ ಪ್ರಗತಿ ವರದಿ, ಸಂಸ್ಥೆಗೆ ಹಾನಿ ಮಾಡಿದ್ದರೆ ಗ್ರಾಚ್ಯುಟಿ ಮೊತ್ತ ಮುಟ್ಟುಗೋಲು ಹಾಕಿಕೊಳ್ಳಬಹುದಾಗಿದೆ. ಗ್ರಾಚುಟಿ ಮೊತ್ತವನ್ನು ಪಡೆಯಲು ಕನಿಷ್ಠ 5 ವರ್ಷಗಳ ಒಂದೇ ಸಂಸ್ಥೆಯನ್ನು ಔದ್ಯೋಗಿಕ ಅನುಭವ ಪಡೆದಿರಬೇಕಾಗುತ್ತದೆ.

ಆದರೆ, ಕರ್ತವ್ಯ ನಿರತ ಉದ್ಯೋಗಿ ಮೃತಪಟ್ಟ ಸಂದರ್ಭದಲ್ಲಿ ಒಂದು ವರ್ಷಗಳ ನಿಯಮ ಸಡಿಲಿಕೆಗೆ ಅವಕಾಶವಿದೆ. ನಿವೃತ್ತಿ ಹೊಂದುವ ತನಕ ಉದ್ಯೋಗದಾತರು ಉದ್ಯೋಗಿಗಳಿಗೆ ನೀಡುವ ಉತ್ತಮವಾದ ಸೌಲಭ್ಯವಾಗಿ ಗ್ರಾಚ್ಯುಟಿ ಬಳಕೆಯಲ್ಲಿದೆ.

ಗ್ರಾಚ್ಯುಟಿ ನೀಡಬೇಕೆಂಬ ನಿಯಮವಿದೆ

ಗ್ರಾಚ್ಯುಟಿ ನೀಡಬೇಕೆಂಬ ನಿಯಮವಿದೆ

ಗ್ರಾಚ್ಯುಟಿ ಮೊತ್ತವನ್ನು ಕಂಪನಿಯಲ್ಲಿ ಸೇವೆಯಲ್ಲಿದ್ದಾಗಲೇ ಪಡೆಯುವ ಹಾಗಿಲ್ಲ. 10ಕ್ಕಿಂತ ಹೆಚ್ಚು ಉದ್ಯೋಗಿಗಳಿರುವ ಸಂಸ್ಥೆಗಳು ಕಡ್ಡಾಯವಾಗಿ ಗ್ರಾಚ್ಯುಟಿ ನೀಡಬೇಕೆಂಬ ನಿಯಮವಿದೆ. ಉದ್ಯೋಗಿಯು ದಿನಗೂಲಿ ನೌಕರನಾಗಿದ್ದಲ್ಲಿ ಆತ ಸೇವೆಯಿಂದ ಮುಕ್ತನಾಗುವ ಮುನ್ನ ಪಡೆದಿದ್ದ ಮೂರು ತಿಂಗಳ ಕೂಲಿಯನ್ನು ಒಂದು ದಿನದ ವೇತನವೆಂದು ಪರಿಗಣಿಸುವ ನಿಯಮವಿದೆ. ಈ ಮೊತ್ತ ಪಡೆಯಲು ನೌಕರಸ್ಥನು ತನಗೆ ಸಂಬಂಧಪಟ್ಟ ಕಂಪನಿಯಲ್ಲಿ ಕನಿಷ್ಠ ಐದು ವರ್ಷಗಳನ್ನಾದರೂ ಸತತವಾಗಿ ಸೇವೆ ಸಲ್ಲಿಸಿರಬೇಕು.

ಐದು ವರ್ಷಗಳ ನಿಯಮ ಅನ್ವಯವಾಗುವುದಿಲ್ಲ

ಐದು ವರ್ಷಗಳ ನಿಯಮ ಅನ್ವಯವಾಗುವುದಿಲ್ಲ

ಆದರೆ, ಉದ್ಯೋಗಿಯು ಕಂಪನಿಯ ಸೇವೆಯಲ್ಲಿದ್ದಾಗ ಮರಣ ಹೊಂದಿದಲ್ಲಿ ಅಥವಾ ಅಂಗವಿಕಲನಾದ ಸಂದರ್ಭದಲ್ಲಿ ಈ ಐದು ವರ್ಷಗಳ ನಿಯಮ ಅನ್ವಯವಾಗುವುದಿಲ್ಲ. ಉದ್ಯೋಗಿಯು ಮರಣ ಹೊಂದಿದ ಅಥವಾ ಅಂಗವಿಕಲನಾದ ಸಂದರ್ಭದಲ್ಲಿ ಗ್ರಾಚುಟಿ ಮೊತ್ತವನ್ನು ಉದ್ಯೋಗಿಯ ನಾಮಿನಿಗೆ ಅಥವಾ ಕಾನೂನಾತ್ಮಕವಾಗಿ ಯಾರಿಗೆ ಸಲ್ಲಬೇಕೋ ಅವರಿಗೆ ನೀಡಲಾಗುವುದು.

ಯಾವುದೇ ರೀತಿಯ ತೆರಿಗೆ ಅನ್ವಯವಾಗುವುದಿಲ್ಲ

ಯಾವುದೇ ರೀತಿಯ ತೆರಿಗೆ ಅನ್ವಯವಾಗುವುದಿಲ್ಲ

ಗ್ರಾಚುಟಿಗೆ ಯಾವುದೇ ರೀತಿಯ ತೆರಿಗೆ ಅನ್ವಯವಾಗುವುದಿಲ್ಲ. ಹಾಗಾಗಿ, ಸಾಮಾನ್ಯವಾಗಿ ಇದು ಟ್ಯಾಕ್ಸ್ ಫ್ರೀ ಬೆನಿಫಿಟ್. ಆದರೆ, ಗ್ರಾಚುಟಿಗಾಗಿ ನೀಡುವ ಮೊತ್ತವನ್ನು ಉದ್ಯೋಗಿಯು ಹೆಚ್ಚಿಸಿದಲ್ಲಿ ಆ ಹೆಚ್ಚಳವಾಗುವ ಹಣಕ್ಕೆ ತೆರಿಗೆ ಇರುತ್ತದೆ. ಉದ್ಯೋಗಿಯಿಂದ ಕಂಪನಿಗೆ ಯಾವುದಾದರೂ ಆರ್ಥಿಕ ನಷ್ಟವಾದರೆ ಆ ನಷ್ಟದ ಹಣವನ್ನು ಸಂಬಂಧಪಟ್ಟ ಉದ್ಯೋಗಿಯ ಗ್ರಾಚುಟಿ ಮೊತ್ತದಲ್ಲಿ ಮುಟ್ಟುಗೋಲು ಹಾಕಿಕೊಳ್ಳಲು ಕಂಪನಿಗೆ ಅಧಿಕಾರವಿರುತ್ತದೆ.

English summary
What is Gratuity? How to calculate Gratuity of Employee? Gratuity is a part of the benefits that an employee receives from the employee, who has completed 5 years of continuous service.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X