ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಟ್ಸಾಪ್ ಮೂಲಕ LPG ಸಿಲಿಂಡರ್ ಬುಕ್ ಮಾಡೋದು ಹೇಗೆ?

|
Google Oneindia Kannada News

ನವದೆಹಲಿ, ಜುಲೈ 27: ಮೋದಿ ಸರ್ಕಾರದ ಡಿಜಿಟಲ್ ಇಂಡಿಯಾದ ಆಶಯಕ್ಕೆ ತಕ್ಕಂತೆ ಇಂಡಿಯನ್ ಆಯಿಲ್ ಕಾರ್ಪೊರೇಷನ್(ಐಒಸಿ) ತನ್ನ ಗ್ರಾಹಕರಿಗೆ ಫೇಸ್ ಬುಕ್, ಟ್ವಿಟ್ಟರ್ ಮೂಲಕ ಅಡುಗೆ ಅನಿಲ (ಎಲ್‌ಪಿಜಿ) ಸಿಲಿಂಡರ್ ಗಳನ್ನು ಕಾಯ್ದಿರಿಸುವ ಸೌಲಭ್ಯವನ್ನು ಈಗಾಗಲೇ ನೀಡಿದೆ. ಈಗ ಕೊರೊನಾವೈರಸ್
ಸಂದರ್ಭದಲ್ಲಿ ಅಡುಗೆ ಅನಿಲ ಸಿಲಿಂಡರ್ ಕಾಯ್ದಿರಿಸಲು ವಾಟ್ಸಾಪ್ ಕೂಡಾ ಬಳಸಬಹುದಾಗಿದೆ.

Recommended Video

India - Bangladesh ಸಂಬಂಧಕ್ಕೆ ಹುಳಿ ಹಿಂಡಿದ China | Oneindia Kannada

ಇಂಡಿಯನ್ ಆಯಿಲ್‌ನ ಇಂಡೇನ್ ಅನಿಲದ ಗ್ರಾಹಕರು, ಸುಲಭವಾಗಿ ವಾಟ್ಸಾಪ್ ಮೂಲಕ ಸಿಲಿಂಡರ್ ಬುಕ್ ಮಾಡಬಹುದು ಎಂದು ಇಂಡಿಯನ್ ಆಯಿಲ್ ಟ್ವೀಟ್ ಮಾಡಿದೆ. ಗ್ರಾಹಕರು 7588888824 ಸಂಖ್ಯೆಗೆ ಸಂದೇಶ ಕಳಿಸಿ ಬುಕ್ ಮಾಡಬಹುದು.

ಫೇಸ್ಬುಕ್, ಟ್ವಿಟ್ಟರ್ ಬಳಸಿ ಎಲ್ ಪಿಜಿ ಸಿಲಿಂಡರ್ ಬುಕ್ ಮಾಡಿ!ಫೇಸ್ಬುಕ್, ಟ್ವಿಟ್ಟರ್ ಬಳಸಿ ಎಲ್ ಪಿಜಿ ಸಿಲಿಂಡರ್ ಬುಕ್ ಮಾಡಿ!

ಇಂಡಿಯನ್ ಆಯಿಲ್ ಬಳಿಕ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ (ಬಿಪಿಸಿಎಲ್) ವಾಟ್ಸಾಪ್ ಮೂಲಕ ಎಲ್‌ಪಿಜಿ ಸಿಲಿಂಡರ್‌ಗಳನ್ನು ಕಾಯ್ದಿರಿಸುವ ಸೌಲಭ್ಯ ನೀಡುತ್ತಿದೆ. ಬಿಪಿಸಿಎಲ್ ಸಂಖ್ಯೆ 1800224344 ಮೂಲಕ ವಾಟ್ಸಾಪ್ ನಲ್ಲಿ ನೋಂದಾಯಿಸಿಕೊಂಡು ಸಿಲಿಂಡರ್ ಬುಕ್ ಮಾಡಬಹುದು. ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್, ಯುಪಿಐ ಮತ್ತು ಅಮೆಜಾನ್ ನಂತಹ ಪಾವತಿ ಅಪ್ಲಿಕೇಶನ್‌ಗಳ ಮೂಲಕ ಹಣ ಪಾವತಿಸಬಹುದಾಗಿದೆ.

How to book LPG cylinders using WhatsApp

ಸತತವಾಗಿ 2ನೇ ತಿಂಗಳು ಅಡುಗೆ ಅನಿಲ ಬೆಲೆ ತುಸು ಏರಿಕೆ ಸತತವಾಗಿ 2ನೇ ತಿಂಗಳು ಅಡುಗೆ ಅನಿಲ ಬೆಲೆ ತುಸು ಏರಿಕೆ

ಇದಲ್ಲದೆ, ಫೋನ್ ಕರೆ/ಎಸ್ಎಂಎಸ್ ಮೂಲಕ ಬುಕ್ಕಿಂಗ್ ವ್ಯವಸ್ಥೆ ಈಗಾಗಲೇ ದೇಶದ ಹಲವೆಡೆ ಜಾರಿಯಲ್ಲಿದೆ.ಟ್ವಿಟ್ಟರ್ ಮೂಲಕ ಬುಕ್ ಮಾಡಲು refill @indanerefill ಎಂದು ಟ್ವೀಟ್ ಮಾಡಿ ಪಡೆಯಬಹುದು.

 ಪ್ರಧಾನ ಮಂತ್ರಿ ಪ್ರಧಾನ ಮಂತ್ರಿ "ಉಜ್ವಲ" ಯೋಜನೆ ಎಂದರೇನು?

ಸದ್ಯ ಚಾಲ್ತಿಯಲ್ಲಿರುವ ವ್ಯವಸ್ಥೆಯಂತೆ ಗ್ರಾಹಕರು ತಮ್ಮ ಗ್ಯಾಸ್ ಏಜೆನ್ಸಿ (ಇಂಡೇನ್, ಎಚ್ ಪಿ, ಭಾರತ್) ನೋಂದಣಿ ಮಾಡಿದ ದೂರವಾಣಿ ಸಂಖ್ಯೆ ಮೂಲಕ ಕರೆ ಮಾಡಿ ಅಥವಾ ಎಸ್ಎಂಎಸ್ ಮೂಲಕ (REFILL ಎಂದು ಟೈಪಿಸಿ ನೋಂದಾಯಿತ ಸಂಖ್ಯೆಗೆ ಕಳಿಸಬಹುದು) ಅಡುಗೆ ಅನಿಲ ಸಿಲಿಂಡರ್ ಬುಕ್ ಮಾಡಬಹುದು.

English summary
How to book LPG cylinders using WhatsApp.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X