ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೆಬ್ ಸೈಟ್ ನಿಂದ ವಾಟ್ಸಪ್ ಬಳಸುವುದು ಹೇಗೆ?

By Mahesh
|
Google Oneindia Kannada News

ಸ್ಯಾನ್ ಫ್ರಾನ್ಸಿಸ್ಕೋ, ಜ.22: ಜನಪ್ರಿಯ ಮೊಬೈಲ್ ಮೆಸೆಂಜಿಂಗ್ ಅಪ್ಲಿಕೇಷನ್ ವಾಟ್ಸಪ್ ಈಗ ವೆಬ್ ಲೋಕಕ್ಕೆ ಕಾಲಿಟ್ಟಿದೆ. ವೆಬ್ ಬ್ರೌಸರ್ ಮೂಲಕ ವಾಟ್ಸಾಪ್ ಬಳಕೆದಾರರು ಇನ್ಮುಂದೆ ಸಂದೇಶ ಕಳಿಸುವ ಸೌಲಭ್ಯವನ್ನು ಒದಗಿಸಲಾಗಿದೆ.

ಕಳೆದ ವರ್ಷ ವಾಟ್ಸಪ್ ಸಂಸ್ಥೆಯನ್ನು 22 ಬಿಲಿಯನ್ ಯುಎಸ್ ಡಾಲರ್ ಕೊಟ್ಟು ಫೇಸ್ ಬುಕ್ ಖರೀದಿಸಿತ್ತು. ಸರಿ ಸುಮಾರು 500 ಮಿಲಿಯನ್ ಬಳಕೆದಾರರನ್ನು ಜಗತ್ತಿನಾದ್ಯಂತ ಹೊಂದಿದೆ. ಈಗ ಚಾಲ್ತಿಯಲ್ಲಿರುವ ಮೊಬೈಲ್ ಸಂದೇಶ ರವಾನೆ ವ್ಯವಸ್ಥೆಗೆ ಕನ್ನಡಿಯಂತೆ ವೆಬ್ ಸೌಲಭ್ಯ ವರ್ತಿಸಲಿದೆ. ಇಂಟರ್ನೆಟ್ ಸಂಪರ್ಕವುಳ್ಳ ಮೊಬೈಲ್ ಫೋನ್ ಅಗತ್ಯ ಎಂದು ಫೇಸ್ ಬುಕ್ ಸಂಸ್ಥೆ ಹೇಳಿದೆ.

ಐಫೋನಿನಲ್ಲಿ ಲಭ್ಯವಿಲ್ಲ: ವಾಟ್ಸಪ್ ವೆಬ್ ಲೋಕಕ್ಕೆ ಬಂದರೂ ಸದ್ಯಕ್ಕೆ ಗೂಗಲ್ ಕ್ರೋಮ್ ಬ್ರೌಸರ್ ನಲ್ಲಿ ಮಾತ್ರ ಲಭ್ಯವಿದೆ. ಅಲ್ಲದೆ ಐಫೋನ್, ಆಪಲ್ ಸಾಧನಗಳನ್ನು ಬಳಸುವವರಿಗೆ ಈ ಹೊಸ ಸೌಲಭ್ಯ ಲಭ್ಯವಿಲ್ಲ.

How to access Whatsapp in web browser?

ವಾಟ್ಸಪ್: 2009ರಲ್ಲಿ ಉಕ್ರೇನಿನಿಂದ ವಲಸೆ ಬಂದ ಕಾಲೇಜು ತ್ಯಜಿಸಿದ ಜಾನ್ ಕೌಮ್ ಹಾಗೂ ಸ್ಟಾನ್ ಫೋರ್ಡ್ ಅಲುಮ್ನಿ ಬ್ರಿಯಾನ್ ಆಕ್ಷನ್ ವಾಟ್ಸಪ್ ಸ್ಥಾಪಕರು. ವಿಶ್ವದಲ್ಲಿ 45 ಕೋಟಿಗೂ ಹೆಚ್ಚು ಜನರು ವಾಟ್ಸಪ್ ಸೇವೆ ಬಳಸುತ್ತಿದ್ದಾರೆ. ಮೊಬೈಲ್ ಇಂಟರ್ನೆಟ್ ಮೆಸೇಜಿಂಗ್ ಸರ್ವಿಸ್ ಕ್ಷೇತ್ರದಲ್ಲಿ ವಾಟ್ಸಪ್ ಅಗ್ರಗಣ್ಯ ಸಂಸ್ಥೆ ಎನಿಸಿದೆ. ಈಗ ಮೊಬೈಲ್ ಮೆಸೇಜಿಂಗ್ ಮೇಲೆ ಕಣ್ಣಿಟ್ಟಿರುವ ಫೇಸ್ ಬುಕ್ ಈ ಖರೀದಿಯಿಂದ ಆಗುವ ಲಾಭ ಏನು? ಇಲ್ಲಿ ಓದಿ

ವೆಬ್ ನಿಂದ ವಾಟ್ಸಪ್ ಬಳಸುವುದು ಹೇಗೆ?

* ನಿಮ್ಮ ಕಂಪ್ಯೂಟರ್ ನಲ್ಲಿ ಗೂಗಲ್ ಕ್ರೋಮ್ ಬ್ರೌಸರ್ ಓಪನ್ ಮಾಡಿ
* ನಿಮ್ಮ ಮೊಬೈಲ್ ಫೋನಿನಲ್ಲಿ ಇತ್ತೀಚಿನ ಅಪ್ದೇಟೆಡ್ ವಾಟ್ಸಾಪ್ ಆವೃತ್ತಿ ಇರಲಿ.
* ಮೆನುವಿನಿಂದ ವಾಟ್ಸಪ್ ವೆಬ್ (https://web.whatsapp.com/) ಆಯ್ಕೆ ಮಾಡಿಕೊಳ್ಳಿ
* QR code ಸ್ಕ್ಯಾನ್ ಮಾಡಿ ವೆಬ್ ಹಾಗೂ ಮೊಬೈಲ್ ವಾಟ್ಸಪ್ ಪೇರ್ ಮಾಡಿ
* ಮೊಬೈಲ್ ನಲ್ಲಿ ಬಳಕೆ ಮಾಡಿದಂತೆ ವೆಬ್ ನಿಂದಲೂ ಬಳಕೆ ಸಾಧ್ಯ
* ಸದ್ಯಕ್ಕೆ ಆಂಡ್ರಾಯ್ಡ್, ವಿಂಡೋಸ್, ಬ್ಲಾಕ್ ಬೆರಿ, ನೋಕಿಯಾ ಎಸ್ 60 ಆಧಾರಿತ ಫೋನ್ ಗಳ ಜೊತೆ ಇದು ಲಭ್ಯ

English summary
The popular mobile messaging application WhatsApp, acquired by Facebook last year for nearly USD 22 billion, has unveiled a new service for sending messages from a Web browser. WhatsApp, which claims some 500 million users, said its Web service will be a "mirror" and would require an Internet- connected phone to work.Here are the step How to access Whatsapp in web browser?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X