• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಉಕ್ರೇನ್ ಯುದ್ಧದಿಂದ ರಿಲಾಯನ್ಸ್‌ಗೆ ಲಾಭ; ಅದು ಹೇಗೆ?

|
Google Oneindia Kannada News

ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ನೇರ ಮತ್ತು ಪರೋಕ್ಷ ಪರಿಣಾಮವಾಗಿ ವಿಶ್ವದ ಅನೇಕ ಆರ್ಥಿಕತೆಗಳು ನಲುಗಿಹೋಗುತ್ತಿವೆ. ಇದೇ ಹೊತ್ತಲ್ಲಿ ಮುಕೇಶ್ ಅಂಬಾನಿ ಮಾಲೀಕತ್ವದ ದೈತ್ಯ ರಿಲಾಯನ್ಸ್ ಸಂಸ್ಥೆ ಒಳ್ಳೆಯ ಲಾಭ ಮಾಡಿಕೊಳ್ಳುತ್ತಿದೆ.

ಕೆಲ ವರದಿಗಳನ್ನು ನಂಬುವುದಾದರೆ ಯುದ್ಧದಿಂದಾಗಿ ವಿಶ್ವ ತೈಲ ಮಾರುಕಟ್ಟೆ ಸಡಿಲಗೊಂಡಿರುವುದನ್ನು ರಿಲಾಯನ್ಸ್ ತನ್ನ ಅನುಕೂಲಕ್ಕೆ ಪರಿವರ್ತಿಸಿಕೊಳ್ಳುತ್ತಿದೆ. ಎಷ್ಟರಮಟ್ಟಿಗೆ ಎಂದರೆ ತನ್ನ ಅತಿದೊಡ್ಡ ತೈಲ ಸಂಸ್ಕರಣಾ ಘಟಕಗಳ ನಿರ್ವಹಣಾ ಕಾರ್ಯಗಳನ್ನು (Maintenance Work) ತಾತ್ಕಾಲಿಕವಾಗಿ ಮುಂದೂಡಿಕೆ ಮಾಡಿದೆ.

ಉಕ್ರೇನ್‌ನಲ್ಲಿ ಯುದ್ಧ ಅಪರಾಧಗಳಿಗೆ ಪುಟಿನ್ ಜವಾಬ್ದಾರಿ ಎಂದ ಕೆನಡಾ ಉಕ್ರೇನ್‌ನಲ್ಲಿ ಯುದ್ಧ ಅಪರಾಧಗಳಿಗೆ ಪುಟಿನ್ ಜವಾಬ್ದಾರಿ ಎಂದ ಕೆನಡಾ

 ತೈಲ ಸಂಸ್ಕರಣಾ ಘಟಕಗಳ ನಿರ್ವಹಣೆ ಕೆಲಸ ಮುಂದಕ್ಕೆ ಯಾಕೆ?

ತೈಲ ಸಂಸ್ಕರಣಾ ಘಟಕಗಳ ನಿರ್ವಹಣೆ ಕೆಲಸ ಮುಂದಕ್ಕೆ ಯಾಕೆ?

ತೈಲ ಸಂಸ್ಕರಣಾ ಘಟಕದ ನಿರ್ವಹಣಾ ಕೆಲಸ ಮುಂದೂಡಿಕೆಯಾದರೆ ರಿಲಾಯನ್ಸ್‌ಗೆ ಏನು ಲಾಭ ಎನಿಸಬಹುದು?. ಇಲ್ಲಿಯೇ ಇರುವುದು ಕುತೂಹಲಕಾರಿ ಸಂಗತಿ. ರಷ್ಯಾ ಉಕ್ರೇನ್ ಯುದ್ಧದ ಪರಿಣಾಮವಾಗಿ ಜಾಗತಿಕ ತೈಲ ಮಾರುಕಟ್ಟೆ ಸಡಿಲಗೊಂಡಿದೆ. ಎಲ್ಲಿ ಬೇಕಾದರೂ ತೈಲ ಖರೀದಿಸಿ ಬೇರೆಲ್ಲಿ ಬೇಕಾದರೂ ಅದನ್ನು ಮಾರುವ ಅವಕಾಶ ಸದ್ಯಕ್ಕಂತೂ ಇದೆ. ಇದು ಅಂಬಾನಿ ಮಾಲೀಕತ್ವದ ರಿಲಾಯನ್ಸ್‌ಗೆ ಸುಗ್ಗಿಯ ಕಾಲವನ್ನು ಸೃಷ್ಟಿಸಿದೆ.

 ರಿಲಾಯನ್ಸ್‌ಗೆ ಪರಿಸ್ಥಿತಿ ಹೇಗೆ ಲಾಭ?

ರಿಲಾಯನ್ಸ್‌ಗೆ ಪರಿಸ್ಥಿತಿ ಹೇಗೆ ಲಾಭ?

ಉಕ್ರೇನ್ ಮೇಲೆ ಯುದ್ಧ ಮಾಡುತ್ತಿರುವ ರಷ್ಯಾಗೆ ಹಲವು ದೇಶಗಳು ಆರ್ಥಿಕ ದಿಗ್ಬಂಧನ ಹಾಕಿವೆ. ಅದರ ಭಾಗವಾಗಿ ರಷ್ಯಾದಿಂದ ತೈಲ ಆಮದನ್ನೂ ಅನೇಕ ದೇಶಗಳು ನಿಲ್ಲಿಸಿವೆ. ಹೀಗಾಗಿ, ರಷ್ಯಾದ ತೈಲ ಅತಿ ಕಡಿಮೆ ಬೆಲೆಗೆ ಬಿಕರಿಯಾಗುತ್ತಿವೆ. ಅದೃಷ್ಟಕ್ಕೆ ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳಲು ಅಮೆರಿಕ ಮೊದಲಾದ ದೇಶಗಳು ಭಾರತವನ್ನು ನಿರ್ಬಂಧಿಸಿಲ್ಲ.

ಹೀಗಾಗಿ, ರಿಲಾಯನ್ಸ್ ಸಂಸ್ಥೆ ರಷ್ಯಾದಿಂದ ಅಗ್ಗದ ದರದಲ್ಲಿ ಕಚ್ಛಾ ತೈಲ ಖರೀದಿಸಿ ತನ್ನ ಘಟಕಗಳಲ್ಲಿ ಸಂಸ್ಕರಿಸಿ ಅದನ್ನು ಬೇರೆ ಮಾರುಕಟ್ಟೆಗಳಿಗೆ ಒಳ್ಳೆಯ ಲಾಭಕ್ಕೆ ಮಾರುತ್ತಿದೆ. ರಿಲಾಯನ್ಸ್ ಸಂಸ್ಥೆ ಬಳಿ ಎರಡು ಬೃಹತ್ ತೈಲ ಸಂಸ್ಕರಣಾ ಘಟಕಗಳಿವೆ. ಇಲ್ಲಿ ದಿನಕ್ಕೆ 14 ಲಕ್ಷ ಬ್ಯಾರಲ್ ತೈಲವನ್ನು ಸಂಸ್ಕರಿಸುವ ಸಾಮರ್ಥ್ಯ ಇದೆ. ಎಲ್ಲಾ ರೀತಿಯ ಕಚ್ಛಾ ತೈಲವನ್ನು ಇಲ್ಲಿ ಸಂಸ್ಕರಿಸುವ ವ್ಯವಸ್ಥೆ ಇದೆ. ಹೀಗಾಗಿ, ಯುದ್ಧದಿಂದ ಆಗಿರುವ ತೈಲ ಸುಗ್ಗಿಯನ್ನು ರಿಲಾಯನ್ಸ್ ಚೆನ್ನಾಗಿ ಬಳಸಿಕೊಳ್ಳುತ್ತಿದೆ. ಈ ಸಂದರ್ಭದಲ್ಲಿ ಘಟಕಗಳ ನಿರ್ವಹಣೆ ಕಾರಣಕ್ಕೆ ಕೆಲಸ ನಿಂತುಹೋದರೆ ರಿಲಾಯನ್ಸ್‌ಗೆ ಒಳ್ಳೆಯ ಆದಾಯ ಕೈತಪ್ಪಿಹೋಗಿಬಿಡುತ್ತದೆ.

 ಹಣದುಬ್ಬರ ನಿಯಂತ್ರಣಕ್ಕೆ ಸಹಾಯ

ಹಣದುಬ್ಬರ ನಿಯಂತ್ರಣಕ್ಕೆ ಸಹಾಯ

ರಷ್ಯಾದ ಅಗ್ಗದ ತೈಲ ರಿಲಾಯನ್ಸ್ ಮಾತ್ರವಲ್ಲ, ಭಾರತದ ಇತರ ತೈಲ ಸಂಸ್ಕರಣಾ ಕಂಪನಿಗಳಿಗೂ ಲಾಭ ಮಾಡಿದೆ. ಭಾರತದ ನೆರೆ ದೇಶಗಳನ್ನು ಬಾಧಿಸುತ್ತಿರುವ ಹಣದುಬ್ಬರ ಭಾರತದಲ್ಲಿ ತುಸು ನಿಯಂತ್ರಣದಲ್ಲಿರಲು ಈ ಅಗ್ಗದ ತೈಲವೇ ಪ್ರಮುಖ ಕಾರಣ ಎನ್ನಲಾಗುತ್ತಿದೆ.

ಅತಿ ಹೆಚ್ಚು ತೈಲ ಆಮದು ಮಾಡಿಕೊಳ್ಳುವ ದೇಶಗಳಲ್ಲಿ ಭಾರತ ಮೂರನೇ ಸ್ಥಾನ ಇದೆ. ಉಕ್ರೇನ್ ಮೇಲೆ ರಷ್ಯಾ ಯುದ್ಧ ಆರಂಭಿಸಿದಾಗಿನಿಂದ ಭಾರತದ ಸರಕಾರಿ ಸ್ವಾಮ್ಯದ ಮತ್ತು ಖಾಸಗಿ ಒಡೆತನದ ತೈಲ ಸಂಸ್ಕರಣಾ ಸಂಸ್ಥೆಗಳು ರಷ್ಯಾದಿಂದ 4 ಕೋಟಿ ಬ್ಯಾರಲ್ ಕಚ್ಛಾ ತೈಲವನ್ನು ಆಮದು ಮಾಡಿಕೊಂಡಿವೆ.

 ಬೇರೆಡೆ ನಷ್ಟವಾದರೂ ಕೈಹಿಡಿದ ತೈಲ

ಬೇರೆಡೆ ನಷ್ಟವಾದರೂ ಕೈಹಿಡಿದ ತೈಲ

ರಿಲಾಯನ್ಸ್ ಸಂಸ್ಥೆಯ ಒಟ್ಟಾರೆ ಆಧಾಯದಲ್ಲಿ ಶೇ. 60ರಷ್ಟು ಭಾಗ ತೈಲದಿಂದಲೇ ಬರುತ್ತದೆ. ಈಗ ರಷ್ಯಾದಿಂದ ಅಗ್ಗದ ತೈಲ ಪಡೆದು ಒಳ್ಳೆಯ ಲಾಭಾಂಶಕ್ಕೆ ಮಾರುತ್ತಿದ್ದರೂ ರಿಲಾಯನ್ಸ್ ಸಂಸ್ಥೆಯ ಆದಾಯ ನಿರೀಕ್ಷಿತ ಮಟ್ಟ ತಲುಪಲು ವಿಫಲವಾಗಿದೆ ಬ್ಲೂಮ್‌ಬರ್ಗ್ ಸಂಸ್ಥೆ ಈ ಮುಂಚೆ ಮಾಡಿದ ಅಂದಾಜು ಪ್ರಕಾರ ಜನವರಿಯಿಂದ ಮಾರ್ಚ್‌ವರೆಗಿನ ತ್ರೈಮಾಸಿಕ ಅವಧಿಯಲ್ಲಿ ರಿಲಾಯನ್ಸ್‌ನ ನಿವ್ವಳ ಆದಾಯ 16,880 ಕೋಟಿ ರೂ ಇರಬಹುದು ಎಂಬ ನಿರೀಕ್ಷೆ ಇತ್ತು.

ಆದರೆ ರಿಲಾಯನ್ಸ್ ಪ್ರಕಟಿಸಿದ ಮಾಹಿತಿ ಪ್ರಕಾರ ನಿವ್ವಳ ಆದಾಯ 16,200 ರೂ ತಲುಪಿದೆ. ನಿರೀಕ್ಷಿತ ಆದಾಯ ದಕ್ಕದೇ ಹೋಗಿರುವುದಕ್ಕೆ ಅಧಿಕ ತೆರಿಗೆ ಹೊರೆ ಹಾಗು ಸಂಸ್ಥೆಯ ಇತರ ವ್ಯವಹಾರಗಳಲ್ಲಿ ಆಗಿರುವ ಹಿನ್ನಡೆ ಕಾರಣ ಎಂದು ವಿಶ್ಲೇಷಿಸಲಾಗಿದೆ.

English summary
The Reliance is buying discounted cargoes of crude after self-sanctions on Russian fuels by some European Union companies pushed up margins on some oil products to three-year highs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X