ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಸಂಪೂರ್ಣ ಸಾಲ ಮುಕ್ತವಾಗಿದ್ದು ಹೇಗೆ ?

|
Google Oneindia Kannada News

ಏಷ್ಯಾದ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ("ರಿಲಯನ್ಸ್ ಇಂಡಸ್ಟ್ರೀಸ್") ಹಾಗೂ ಡಿಜಿಟಲ್ ಸೇವೆಗಳ ವೇದಿಕೆ ಜಿಯೋ ಪ್ಲಾಟ್‌ಫಾರ್ಮ್ ಲಿಮಿಟೆಡ್ ("ಜಿಯೋ ಪ್ಲಾಟ್‌ಫಾರ್ಮ್ಸ್") ಸಂಪೂರ್ಣ ಸಾಲಮುಕ್ತ ಸಂಸ್ಥೆ ಎನಿಸಿಕೊಂಡಿದೆ. ಜೂನ್ 19 ರಂದು ನಿವ್ವಳ ಸಾಲ ಮುಕ್ತವಾಗಿ ಮಾರ್ಪಟ್ಟಿದೆ ಎಂದು ಹೇಳಿದೆ.

ಆಗಸ್ಟ್ 12, 2019 ರಂದು ಆರ್‌ಐಎಲ್‌ನ 42 ನೇ ವಾರ್ಷಿಕ ಮಹಾಸಭೆಯಲ್ಲಿ ತೈಲ ಮತ್ತು ಟೆಲಿಕಾಂ ಬೆಹೆಮೊಥ್ ಅನ್ನು ಮುಕ್ತವಾಗಿ ಮಾಡುವ ಗುರಿಯನ್ನು ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಈ ಹಿಂದೆಯೇ ವಿವರಿಸಿದ್ದರು.

ರಿಲಯನ್ಸ್ ಜಿಯೋದಲ್ಲಿ 11,367 ಕೋಟಿ ಹೂಡಿಕೆ ಮಾಡಿದ ಸೌದಿ ಅರೇಬಿಯಾ ಪಿಐಎಫ್ರಿಲಯನ್ಸ್ ಜಿಯೋದಲ್ಲಿ 11,367 ಕೋಟಿ ಹೂಡಿಕೆ ಮಾಡಿದ ಸೌದಿ ಅರೇಬಿಯಾ ಪಿಐಎಫ್

ಕಳೆದ ವರ್ಷವೇ ತನ್ನ ಟಾರ್ಗೆಟ್ ನೀಡಿದ್ದ ಮುಕೇಶ್ ಅಂಬಾನಿ

ಕಳೆದ ವರ್ಷವೇ ತನ್ನ ಟಾರ್ಗೆಟ್ ನೀಡಿದ್ದ ಮುಕೇಶ್ ಅಂಬಾನಿ

ಹೌದು , ಮುಕೇಶ್ ಅಂಬಾನಿ ಕಳೆದ ವರ್ಷವೇ ಆರ್ಐಎಲ್ ಸಾಲ ಮುಕ್ತವಾಗುವುದನ್ನು ಘೋಷಿಸಿದ್ದರು.

"ಮುಂದಿನ 18 ತಿಂಗಳಲ್ಲಿ ಶೂನ್ಯ ನಿವ್ವಳ-ಸಾಲ ಕಂಪನಿಯಾಗಲು ನಮಗೆ ಸ್ಪಷ್ಟವಾದ ಮಾರ್ಗಸೂಚಿ ಇದೆ, ಅಂದರೆ 2021 ಮಾರ್ಚ್ 31 ರ ಹೊತ್ತಿಗೆ" ಎಂದು ಅಂಬಾನಿ ಹೇಳಿದರು. "ನಮ್ಮ ಗ್ರಾಹಕ ವ್ಯವಹಾರಗಳಲ್ಲಿ ಜಿಯೋ ಮತ್ತು ಕಾರ್ಯತಂತ್ರದ ಮತ್ತು ಹಣಕಾಸು ಹೂಡಿಕೆದಾರರಿಂದ ನಾವು ಬಲವಾದ ಆಸಕ್ತಿಯನ್ನು ಪಡೆದುಕೊಂಡಿದ್ದೇವೆ.

ರಿಲಯನ್ಸ್ ರಿಟೇಲ್, ಮುಂದಿನ ಕೆಲವು ತ್ರೈಮಾಸಿಕಗಳಲ್ಲಿ ನಾವು ಈ ವ್ಯವಹಾರಗಳಲ್ಲಿ ಪ್ರಮುಖ ಜಾಗತಿಕ ಪಾಲುದಾರರನ್ನು ಸೇರಿಸಿಕೊಳ್ಳುತ್ತೇವೆ ಮತ್ತು ಮುಂದಿನ ಐದು ವರ್ಷಗಳಲ್ಲಿ ಈ ಎರಡೂ ಕಂಪನಿಗಳ ಪಟ್ಟಿಯತ್ತ ಸಾಗುತ್ತೇವೆ. ಈ ಉಪಕ್ರಮಗಳೊಂದಿಗೆ, ನಮ್ಮ ಕಂಪನಿಯು ಜಗತ್ತಿನಲ್ಲಿ ಪ್ರಬಲ ಬ್ಯಾಲೆನ್ಸ್ ಶೀಟ್‌ಗಳಲ್ಲಿ ಒಂದನ್ನು ಹೊಂದಿರುತ್ತದೆ ಎಂಬುದರಲ್ಲಿ ನನಗೆ ಸಂದೇಹವಿಲ್ಲ'' ಎಂದು ಘೋಷಿಸಿದ್ದರು.

ಕಳೆದ 9 ವಾರಗಳಲ್ಲಿ 10 ಡೀಲ್

ಕಳೆದ 9 ವಾರಗಳಲ್ಲಿ 10 ಡೀಲ್

ರಿಲಯನ್ಸ್ ಇಂಡಸ್ಟ್ರೀಸ್ ಕಳೆದ 9 ವಾರಗಳಲ್ಲಿ 10 ಹೂಡಿಕೆಗಳನ್ನು ಸೆಳೆಯು ವಲ್ಲಿ ಯಶಸ್ವಿಯಾಗಿದೆ. ರಿಲಯನ್ಸ್ ಇಂಡಸ್ಟ್ರೀಸ್ ತನ್ನ ಡಿಜಿಟಲ್ ಘಟಕವಾದ ಜಿಯೋ ಪ್ಲಾಟ್‌ಫಾರ್ಮ್‌ಗಳಿಗಾಗಿ 11 ಒಪ್ಪಂದಗಳಿಂದ ಉಂಟಾದ ಸಂಚಿತ ಹೂಡಿಕೆ 1,15,693.95 ಕೋಟಿ ರುಪಾಯಿ. ಇತ್ತೀಚಿನ ಆರ್‌ಐಎಲ್ ಹಕ್ಕುಗಳ ಸಂಚಿಕೆ 53,124.20 ಕೋಟಿ ರುಪಾಯಿ.

ಈ ಹೂಡಿಕೆಗಳು ಒಟ್ಟಾಗಿ, ಆರ್ಐಎಲ್ ನಿವ್ವಳ ಸಾಲ ಮುಕ್ತವಾಗಲು ಸಹಾಯ ಮಾಡಿತು.

ಜಿಯೋದಲ್ಲಿ ಒಟ್ಟಾರೆ 104,326.95 ಕೋಟಿ ರೂ. ಹೂಡಿಕೆಜಿಯೋದಲ್ಲಿ ಒಟ್ಟಾರೆ 104,326.95 ಕೋಟಿ ರೂ. ಹೂಡಿಕೆ

ಯಾವ ಕಂಪನಿಗಳು ಎಷ್ಟು ಹಣ ಹೂಡಿಕೆ ಮಾಡಿವೆ

ಯಾವ ಕಂಪನಿಗಳು ಎಷ್ಟು ಹಣ ಹೂಡಿಕೆ ಮಾಡಿವೆ

1 ಫೇಸ್‌ಬುಕ್ 43,573.62 ಕೋಟಿ ರು. (9.99% ಪಾಲು)
2 ಸಿಲ್ವರ್ ಲೇಕ್ 5,655.75 ಕೋಟಿ ರು. (1.15% ಪಾಲು))
3 ವಿಸ್ಟಾ ಈಕ್ವಿಟಿ ಪಾರ್ಟ್ನರ್ 11,367 ಕೋಟಿ ರು. (2.32% ಪಾಲು)
4 ಜನರಲ್ ಅಟ್ಲಾಂಟಿಕ್ 6,598.38 ಕೋಟಿ ರು. (1.34% ಪಾಲು)
5 ಕೆಕೆಆರ್ 11,367 ಕೋಟಿ ರು. (2.32% ಪಾಲು)
6 ಮುಬದಾಲ 9,093.60 ಕೋಟಿ ರು. (1.85% ಪಾಲು)
7 ಸಿಲ್ವರ್ ಲೇಕ್ (ಹೆಚ್ಚುವರಿ) 4,546.80 ಕೋಟಿ ರು. (0.93% ಪಾಲು)
8 ಅಬುದಾಬಿ ಇನ್ವೆಸ್ಟ್‌ಮೆಂಟ್ ಅಥಾರಿಟಿ 5,683.50 ಕೋಟಿ ರು. (1.16% ಪಾಲು)
9 ಟಿಪಿಜಿ 4,546.80 ಕೋಟಿ ರು(0.93% ಪಾಲು)
10 ಎಲ್ ಕ್ಯಾಟರ್ಟನ್ 1,894.50 ಕೋಟಿ ರು. (0.39% ಪಾಲು)
11 ಪಿಐಎಫ್ 11,397 ಕೋಟಿ ರು. (2.32% ಪಾಲು)
ಭಾರತದಲ್ಲಿ ಡಿಜಿಟಲ್ ಕ್ರಾಂತಿಯನ್ನೇ ಮಾಡಲು ಮುಕೇಶ್ ಪಣ

ಭಾರತದಲ್ಲಿ ಡಿಜಿಟಲ್ ಕ್ರಾಂತಿಯನ್ನೇ ಮಾಡಲು ಮುಕೇಶ್ ಪಣ

ಸಣ್ಣ ವರ್ತಕರು, ಅತಿಸಣ್ಣ ಉದ್ಯಮಗಳು ಹಾಗೂ ರೈತರೂ ಸೇರಿದಂತೆ ಭಾರತದಾದ್ಯಂತ 1.3 ಶತಕೋಟಿ ಜನರು ಹಾಗೂ ಉದ್ಯಮಗಳಿಗೆ ಡಿಜಿಟಲ್ ಇಂಡಿಯಾವನ್ನು ಸಾಧ್ಯವಾಗಿಸುವುದು ಜಿಯೋದ ದೂರದೃಷ್ಟಿಯಾಗಿದೆ.

ಕಿರಾಣಿ ಅಂಗಳಿಗಳಿಂದ ಹಿಡಿದು ಎಲ್ಲಾ ವಿಭಾಗದ ವರ್ತಕರನ್ನು ತಲುಪುವ ಗುರಿಯನ್ನು ಜಿಯೋ ಹೊಂದಿದೆ.

ಜಿಯೋ ವೇದಿಕೆಯಲ್ಲಿ 4,546.80 ಕೋಟಿ ರೂ ಹೂಡಿಕೆ ಟಿಪಿಜಿಜಿಯೋ ವೇದಿಕೆಯಲ್ಲಿ 4,546.80 ಕೋಟಿ ರೂ ಹೂಡಿಕೆ ಟಿಪಿಜಿ

English summary
RIL Said on June 19 it had become net debt-free eight months ahead of March 2021 deadline it had set for itself.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X