• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹೊಸ ಕೇಬಲ್ ನೀತಿ ಜಾರಿ, 100 ಚಾನೆಲ್ ಗೆ ಎಷ್ಟು ರೇಟಾಗುತ್ತೆ?

|

ನವದೆಹಲಿ, ಡಿಸೆಂಬರ್ 27: ಸುಪ್ರೀಂಕೋರ್ಟ್ ಆದೇಶದಂತೆ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಹೊಸ ಕೇಬಲ್ ನೀತಿ ಜಾರಿಗೆ ತರುತ್ತಿದೆ. ಡಿಸೆಂಬರ್ 29ರಿಂದ ಅನ್ವಯವಾಗಲಿರುವ ಹೊಸ ನೀತಿ ಗ್ರಾಹಕ ಸ್ನೇಹಿಯಾಗುವುದೇ? ಗ್ರಾಹಕರಿಗೆ ಹೊರೆಯಾಗುವುದೇ? ಮುಂದೆ ಓದಿ...

ಡಿಸೆಂಬರ್ 29 ರಿಂದ ಹೊಸ ಕೇಬಲ್ ನೀತಿ ಜಾರಿಯಾಗಲಿದ್ದು, ಯಾವ ಚಾನೆಲ್ ಬರಲಿದೆ, ಯಾವುದು ಸಿಗುವುದಿಲ್ಲ ಎಂಬ ಗೊಂದಲ ಗ್ರಾಹಕರಲ್ಲಿ ಮೂಡಿದೆ.

ಜನವರಿ 1ರಿಂದ ಕೇಬಲ್, ಡಿಟಿಎಚ್ ಮಾಸಿಕ ದರ ಬದಲಾಗಲಿದೆ

ಈ ಬಗ್ಗೆ ಚಿಂತೆ ಬೇಡ ಹೊಸ ಕೇಬಲ್ ನೀತಿಯಂತೆ ಗ್ರಾಹಕರು ತಮ್ಮ ಆಯ್ಕೆಯ ಚಾನೆಲ್ ಗಳನ್ನು ಸುಲಭವಾಗಿ ಆಯ್ಕೆ ಮಾಡಿಕೊಳ್ಳಬಹುದು. ಗ್ರಾಹಕರ್ಯ್ ಆಯ್ಕೆ ಮಾಡಿದ ಚಾನೆಲ್ ಗಳನ್ನು ಮಾತ್ರ ಕೇಬಲ್, ಡಿ.ಟಿ.ಹೆಚ್. ಆಪರೇಟರ್ ಗಳು ನೀಡಬೇಕಾಗುತ್ತದೆ.

ಗ್ರಾಹಕರಿಗೆ ಅನಗತ್ಯ ಚಾನೆಲ್ ಕಿರಿಕಿರಿಯನ್ನು ತಪ್ಪಿಸಲು ಕೇಂದ್ರ ಸರ್ಕಾರ ಹೊಸ ನೀತಿ ಜಾರಿಗೆ ತರುತ್ತಿದೆ. ಇದರ ಅನ್ವಯ ಚಾನೆಲ್‌ಗಳ ಆಯ್ಕೆ ಗ್ರಾಹಕದ್ದೇ ಆಗಿರುತ್ತದೆ. ಎಷ್ಟು ಚಾನೆಲ್ ಆಯ್ಕೆ ಮಾಡುತ್ತೀರೋ? ಅಷ್ಟಕ್ಕೆ ಮಾತ್ರ ಹಣ ಪಾವತಿ ಮಾಡಿದರೆ ಸಾಕು.

100ಕ್ಕೂ ಅಧಿಕ ಚಾನೆಲ್ ಉಚಿತವಾಗಿ ಸಿಗಲಿದೆ

100ಕ್ಕೂ ಅಧಿಕ ಚಾನೆಲ್ ಉಚಿತವಾಗಿ ಸಿಗಲಿದೆ

ನೂರಾರು ಚಾನೆಲ್ ಉಚಿತವಿದೆ: ದೂರದರ್ಶನದ ಉಚಿತ 26 ಚಾನೆಲ್ ಸೇರಿದಂತೆ 100 ಚಾನೆಲ್(74 Free to Air) ಗಳನ್ನು ವೀಕ್ಷಿಸಬಹುದು. ಇದಕ್ಕಾಗಿ 130 ರೂ. ಶುಲ್ಕ ನಿಗದಿಪಡಿಸಲಾಗಿದ್ದು, ಇದರೊಂದಿಗೆ ಶೇ. 18 ರಷ್ಟು ಜಿ.ಎಸ್.ಟಿ. ಪಾವತಿಸಿ 154 ರೂ.ಗೆ 100 ಚಾನಲ್ ಗಳನ್ನು ಗ್ರಾಹಕರು ವೀಕ್ಷಿಸಬಹುದಾಗಿದೆ. HD ಚಾನೆಲ್ ಹೊರತು ಪಡಿಸಿ ಎಸ್ ಡಿ ಚಾನೆಲ್ ಗಳ 100ರ ಪ್ಯಾಕ್ ಗೆ 184ರು ಗಿಂತ ಅಧಿಕ ನೀಡಬೇಡಿ ಎಂದು ಟ್ರಾಯ್ ಸೂಚಿಸಿದೆ.

ಪ್ರತಿ 25 ಉಚಿತ ಚಾನೆಲ್ ಗಳಿಗೆ ಜಿ.ಎಸ್.ಟಿ. ಸೇರಿ 25 ರೂ.ಪಾವತಿಸಬೇಕಿದೆ. ಪ್ರತಿಯೊಂದು ಚಾನೆಲ್ ಗೂ 1 ಪೈಸೆಯಿಂದ 19 ರೂ.ರವರೆಗೆ ದರ ನಿಗದಿಯಾಗಿದೆ ಎಂದು ಎಂದು ಭಾರತೀಯ ಟೆಲಿಕಾಂ ನಿಯಂತ್ರಣ ಸಂಸ್ಥೆ(ಟ್ರಾಯ್) ತಿಳಿಸಿದೆ.

ಚಾನೆಲ್ ಗಳ ಆಯ್ಕೆ ಹೇಗೆ?

ಚಾನೆಲ್ ಗಳ ಆಯ್ಕೆ ಹೇಗೆ?

ಆಯ್ಕೆ ಹೇಗೆ? : ಒಂದು ಚಾನೆಲ್ ಅಥವಾ ಚಾನೆಲ್ ಗಳ ಸಮೂಹಗಳಿರುವ ಪ್ಯಾಕೆಜ್ ಹಾಕಿಸಿಕೊಳ್ಳಬಹುದು. ಜೀ, ಸೋನಿ, ಸ್ಟಾರ್, ಕಲರ್ಸ್ ವಾಹಿನಿ ಹೀಗೆ ಪ್ಯಾಕೆಜ್ ಗಳು ಸಿದ್ಧವಾಗಿವೆ. ಕೇಬಲ್/ ಡಿಟಿಎಚ್ ಅಪರೇಟರ್ ಸಂಪರ್ಕಿಸಿ, ಬೇಕಾದ ಪ್ಯಾಕೇಜ್ ಪಡೆಯಿರಿ

* ಜೀ ಫ್ಯಾಮಿಲಿ ಪ್ಯಾಕೇಜ್ (68 ಚಾನೆಲ್ 45 ರುಗೆ ಲಭ್ಯ)

* ಸ್ಟಾರ್ ಇಂಡಿಯಾ ಪ್ಯಾಕೇಜ್ (ಹಿಂದಿಗೆ 49 ರು)

* ಸ್ಟಾರ್ ಸುವರ್ಣ 30ರು

* ಸೋನಿ ಪಿಕ್ಚರ್ಸ್ 32 ಚಾನೆಲ್ ಗೆ 90ರು

* ಕಲರ್ಸ್ ಕನ್ನಡ ವಾಹಿನಿ ಕೇವಲ 1 ರು ನ ಪ್ಯಾಕೇಜ್ ಘೋಷಿಸಿದೆ.

ಗ್ರಾಹಕರಿಗೆ ಹೊರೆಯಾಗಲಿದೆಯೇ, ಕೇಬಲ್, ಡಿಟಿಎಚ್ ಹೊಸ ದರ?

ಕೇಬಲ್ ಆಪರೇಟರ್ಸ್ ವಿರೋಧ

ಕೇಬಲ್ ಆಪರೇಟರ್ಸ್ ವಿರೋಧ

ಟ್ರಾಯ್ ಈ ಕ್ರಮದಿಂದ ಗ್ರಾಹಕರಿಗೆ ಹೆಚ್ಚು ಹೊರೆ ಬೀಳಲಿದೆ. ಉದಾಹರಣೆಗೆ 10 ಚಾನೆಲ್ ಗಳನ್ನು ಗ್ರಾಹಕ ಖರೀದಿಸದರೆ 19 ರೂಗಳಂತೆ 190 ಹೆಚ್ಚುವರಿ ಹೊರೆ ಬೀಳಲಿದೆ.ಇದರಿಂದ ಈ ಹಿಂದೆ ಆಪರೇಟರ್ಸ್‌ಗಳು ನಗರದ ಭಾಗದಲ್ಲಿ 300 ರೂಗಳಿಗೆ 400 ಚಾನೆಲ್‌ ನೀಡುತ್ತಿದ್ದರು, ಇದಕ್ಕೆ ಹೋಲಿಸಿದರೆ ಹೊಸ ದರ ನಿಗದಿ ಗ್ರಾಹಕರಿಗೆ ಸಂಕಷ್ಟ ಎಂಬುದು ಕೇಬಲ್ ಆಪರೇಟರ್ಸ್‌ಗಳ ವಾದವಾಗಿದೆ.

ಪ್ರೀಪೇಯ್ಡ್ ಗೊಂದಲ

ಪ್ರೀಪೇಯ್ಡ್ ಗೊಂದಲ

ಕೇಬಲ್ ಆಪರೇಟರ್‌ಗಳಿಗೂ ಹೊಸ ವ್ಯವಸ್ಥೆ ಬಗ್ಗೆ ಇನ್ನು ಸ್ಪಷ್ಟವಾದ ಮಾಹಿತಿ ಸಿಕ್ಕಿಲ್ಲ. ಆದರೆ, ಯಾವುದೇ ಕಾರಣಕ್ಕೂ ಸೆಟ್‌ ಆಪ್ ಬಾಕ್ಸ್ ಬದಲಾವಣೆ ಮಾಡುವುದು ಬೇಡ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ. ಒಂದೆರಡು ತಿಂಗಳು ಗ್ರಾಹಕರಿಗೆ ಗೊಂದಲ ಉಂಟಾಗಬಹುದು ಬಳಿಕ ಎಲ್ಲವೂ ಸರಿಯಾಗಲಿದೆ ಎನ್ನುವುದು ಕೇಬಲ್ ಆಪರೇಟರ್‌ಗಳ ಮಾತು.

ಗ್ರಾಮೀಣ ಭಾಗದ ಗ್ರಾಹಕರಿಗೂ ಇದರಿಂದ ಹೆಚ್ಚಿನ ಸಂಕಷ್ಟ ಉಂಟಾಗಲಿದೆ. ಪ್ರೀಪೇಯ್ಡ್ ಪ್ಯಾಕೇಜ್ ನಲ್ಲಿ ಮುಂಚಿತವಾಗಿ ಹಣ ಕಟ್ಟಿ ಎಂದು ಅವರಿಗೆ ವಿವರಿಸಿ ಹೇಳುವುದು ಕಷ್ಟ ಎಂದು ಕೇಬಲ್ ಆಪರೇಟರ್ಸ್ ಗೊಣಗುತ್ತಿದ್ದಾರೆ.

ಡಿಸೆಂಬರ್ 29ರ ನಂತರ ಕೇಬಲ್ ಟಿವಿ ಆಫ್ ಆಗಲ್ಲ,ಮುಂದುವರೆಯುತ್ತೆ

250 ಚಾನೆಲ್ ಉಚಿತವಾಗಿ ಸಿಗಲಿದೆಯಂತೆ

250 ಚಾನೆಲ್ ಉಚಿತವಾಗಿ ಸಿಗಲಿದೆಯಂತೆ

ಈಗ ಇರುವ ವಾಹಿನಿಗಳ ಸಂಖ್ಯೆ(26)ಗೆ ಮತ್ತೆ 40 ವಾಹಿನಿಗಳನ್ನು ಸೇರಿಸುವುದು ಈಗಿನ ಗುರಿ. ಅದು ಪೂರ್ಣಗೊಂಡ ಬಳಿಕ 250 ವಾಹಿನಿಗಳನ್ನು ನೀಡುವುದು ಮುಂದಿನ ಗುರಿ. ಇದಕ್ಕೆ ಹೆಚ್ಚುವರಿ ಟ್ರಾನ್ಸ್‌ಪಾಂಡರ್‌ಗಳ (ಸಂಕೇತಗಳನ್ನು ಬಿತ್ತರಿಸುವ ವ್ಯವಸ್ಥೆ) ಅಗತ್ಯ ಇದೆ.

ವಾಹಿನಿಗಳನ್ನು ಹೆಚ್ಚಿಸುವುದಕ್ಕೆ ಬೇಕಾದ ತಾಂತ್ರಿಕ ನೆರವಿಗೆ ಇಸ್ರೊ ಸಹಾಯ ಪಡೆದುಕೊಳ್ಳಲಾಗುವುದು' ಎಂದು ಪ್ರಸಾರ ಭಾರತಿ ಪ್ರಕಟಿಸಿದೆ.

ಆದರೆ, ಕಳೆದ ಮುರ್ನಾಲ್ಕು ವರ್ಷಗಳಿಂದ ಪ್ರಸಾರ ಭಾರತಿ, ಇದೇ ರಾಗ ಹಾಡುತ್ತಿದೆ. 250ಕ್ಕೂ ಅಧಿಕ ವಾಹಿನಿಗಳು ಉಚಿತವಾಗಿ ನೀಡಲಾಗುವುದು, ಎರಡನೇ ಹಾಗೂ ಮೂರನೇ ಸ್ತರಗಳ ನಗರಗಳಿಗೆ ಫ್ರೀಡಿಶ್ ಡಿಟಿಎಚ್ ವಿಸ್ತರಣೆ ಮಾಡಲಾಗುವುದು

English summary
How Much One has to Pay for Cable TV and DTH from 29th December?. Consumer viewers can now select the television channels they want to watch and pay the maximum retail price (MRP) set by the respective broadcasters for the channel or channels.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X