ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

20 ವರ್ಷಕ್ಕೆ ಗೃಹಸಾಲ ಪಡೆದು 24 ವರ್ಷ ಇಎಂಐ ಕಟ್ಟುವ ದೌರ್ಭಾಗ್ಯ..!

|
Google Oneindia Kannada News

ಬೆಂಗಳೂರು, ಅಕ್ಟೋಬರ್‌ 6: 20 ವರ್ಷಗಳ ಗೃಹ ಸಾಲ ತೆಗೆದುಕೊಂಡು ಅದರ ಇಎಂಐಗಳನ್ನು 24 ವರ್ಷಗಳ ಕಾಲ ಪಾವತಿಸುವುದನ್ನು ಕಲ್ಪಿಸಿಕೊಳ್ಳಿ. 2ರಿಂದ 3 ವರ್ಷಗಳ ಹಿಂದೆ ದೀರ್ಘಾವಧಿಯ ಗೃಹ ಸಾಲಗಳನ್ನು ತೆಗೆದುಕೊಂಡಿರುವ ಸಾಲಗಾರರು ತಮ್ಮ ಮೂಲ ಅವಧಿಗಿಂತ ಹೆಚ್ಚಿನ ಅವಧಿಯನ್ನು ಕಟ್ಟಬೇಕಾಗುತ್ತದೆ. ಇದು ಹೆಚ್ಚುತ್ತಿರುವ ಗೃಹ ಸಾಲ ದರಗಳ ಪರಿಣಾಮ.

ಕಳೆದ ಐದು ತಿಂಗಳುಗಳಲ್ಲಿ ಗೃಹ ಸಾಲದ ದರಗಳು 6.5% ರಿಂದ 8.25% ಕ್ಕೆ ತೀವ್ರವಾಗಿ ಏರಿಕೆಯಾಗಿದೆ. 6.7% ದರದಲ್ಲಿ 2019 ರಲ್ಲಿ ತೆಗೆದುಕೊಂಡ 20 ವರ್ಷಗಳ ಗೃಹ ಸಾಲವನ್ನು ಮೂರು ವರ್ಷಗಳವರೆಗೆ ಇಎಂಐಗಳನ್ನು ಪಾವತಿಸಿದ್ದರೂ ಸಹ 21 ವರ್ಷಗಳ ಕಾಲ ಮರುಪಾವತಿ ಮಾಡಬೇಕಾಗುತ್ತದೆ.

ಇದನ್ನು ಸ್ವಲ್ವ ವಿವರವಾಗಿ ನೋಡುವುದಾದರೆ ಏಪ್ರಿಲ್‌ ತಿಂಗಳಲ್ಲಿ ರೇಪೊ ದರ 4% ಇತ್ತು. ಇದಕ್ಕೆ ಗೃಹ ಸಾಲ ಬಡ್ಡಿದರ 6.7ರಂತೆ ಪ್ರತಿ 10 ಲಕ್ಷಕ್ಕೆ 20 ವರ್ಷದ ಅವಧಿಗೆ ಇಎಂಐ 7,574 ರುಪಾಯಿ ಇತ್ತು. ಇದು ಮೇ ನಲ್ಲಿ ರೇಪೊ ದರ 4.4 ಇತ್ತು. ಇದಕ್ಕೆ ಗೃಹ ಸಾಲ ಬಡ್ಡಿದರ 7.1ರಂತೆ ಪ್ರತಿ 10 ಲಕ್ಷಕ್ಕೆ 20 ವರ್ಷದ ಅವಧಿಗೆ 7,813 ರುಪಾಯಿ ಆಯಿತು. ಇದು ಜೂನ್‌ನಲ್ಲಿ ರೇಪೊ ದರ 4.9 ಆದಾಗ ಇದಕ್ಕೆ ಗೃಹ ಸಾಲ ಬಡ್ಡಿದರ 7.6ರಂತೆ ಪ್ರತಿ 10 ಲಕ್ಷಕ್ಕೆ 20 ವರ್ಷದ ಅವಧಿಗೆ 8,117 ರುಪಾಯಿ ಇತ್ತು. ಇದು ಆಗಸ್ಟ್‌ನಲ್ಲಿ ರೇಪೊ ದರ 5.4 ಆದಾಗ ಇದಕ್ಕೆ ಗೃಹ ಸಾಲ ಬಡ್ಡಿದರ 8.1ರಂತೆ ಪ್ರತಿ 10 ಲಕ್ಷಕ್ಕೆ 20 ವರ್ಷದ ಅವಧಿಗೆ 8,427 ರುಪಾಯಿ ಆಯಿತು. ಇದೇ ಸೆಪ್ಟೆಂಬರ್‌ನಲ್ಲಿ ರೇಪೊ ದರ 5.9 ಆದಾಗ ಇದಕ್ಕೆ ಗೃಹ ಸಾಲ ಬಡ್ಡಿದರ 8.6ರಂತೆ ಪ್ರತಿ 10 ಲಕ್ಷಕ್ಕೆ 20 ವರ್ಷದ ಅವಧಿಗೆ 8,741 ರುಪಾಯಿ ಆಗಿದೆ.

How Home loans Of 20 years Becomes 24 years Long

ಇಎಂಐ ಹೆಚ್ಚಾಗಿದ್ದು

ಇದೇ 20 ವರ್ಷದ ಗೃಹ ಸಾಲ ಇಎಂಐ 25 ವರ್ಷದ ಅವಧಿಗೆ ಹೇಗೆ ಹೆಚ್ಚಾಗಿದೆ ಎಂಬುದನ್ನು ಇಲ್ಲಿ ಗಮನಿಸಬಹುದು.

2019 ಏಪ್ರಿಲ್‌ನಲ್ಲಿ 6.7% ಬಡ್ಡಿದರದಲ್ಲಿ 50 ಲಕ್ಷಕ್ಕೆ ಗೃಹ ಸಾಲ ಪಡೆದುಕೊಂಡಿದ್ದೀರಿ. ಮೂರು ವರ್ಷಗಳ ಬಳಿಕ 36 ಕಂತುಗಳನ್ನು ಕಟ್ಟಿರುತ್ತೀರಿ. ಆಗಲೂ ಬಡ್ಡಿ ದರ ಶೇ. 6.7 ಇರುತ್ತದೆ. ಆಗ ಬಾಕಿ ಪಾವತಿಸಬೇಕಾದ ಹಣ 46.04 ಲಕ್ಷ ಇರುತ್ತದೆ. ಇನ್ನೂ 17 ವರ್ಷ ಇಎಂಐ ಕಟ್ಟಬೇಕಾಗುತ್ತದೆ. ಇದು ಸಹಜ ಸ್ಥಿತಿ.

ಆದರೆ, ಬಡ್ಡಿದರ ಹೆಚ್ಚಾದ ಬಳಿಕ ಹೇಗೆ ಕಂತುಗಳ ಸಂಖ್ಯೆ ಹೆಚ್ಚಾಗುತ್ತದೆ ನೋಡಿ...

ಮೇ 2022ರಲ್ಲಿ ಬಡ್ಡಿದರ 7.1 ಅಗುತ್ತದೆ. ನೀವು 37 ಕಂತು ಕಟ್ಟಿರುತ್ತೀರಿ. ಪಾವತಿಸಬೇಕಾದ ಉಳಿಕೆ ಹಣ 45.93 ಲಕ್ಷ ಇರುತ್ತದೆ. ಆದರೆ, ಪರಿಷ್ಕೃತ ದರದಪ್ರಕಾರ ಪಾವತಿಸಬೇಕಾದ ಕಂತುಗಳ ಸಂಖ್ಯೆ 17 ವರ್ಷ 11 ತಿಂಗಳಿಗೆ ಏರಿರುತ್ತದೆ. ಅಂದರೆ ಒಂದೇ ತಿಂಗಳ ಅವಧಿಯಲ್ಲಿ ಏಕಾಏಕಿ 12 ಹೆಚ್ಚುವರಿ ಕಂತುಗಳು ಸೇರ್ಪಡೆಯಾಗುತ್ತದೆ.

ಹಾಗೆ ಹಂತ ಹಂತವಾಗಿ ಬಡ್ಡಿ ದರ 7.6, 8.1 ಮತ್ತು ಈ ಅಕ್ಟೋಬರ್ ತಿಂಗಳಲ್ಲಿ 8.6%ಗೆ ಏರಿಕೆಯಾಗಿದೆ. ಅಕ್ಟೋಬರ್ ತಿಂಗಳಿನಷ್ಟರಲ್ಲಿ ನೀವು 42ಕಂತುಗಳನ್ನು ಪಾವತಿಸಿರುತ್ತೀರಿ. ಆದರೆ, ಬಾಕಿ ಉಳಿದ ಹಣ 45.46ಲಕ್ಷ ರೂ ಇರುತ್ತದೆ. ಪರಿಷ್ಕೃತ ಕಂತುಗಳ ಪ್ರಕಾರ ಇನ್ನಷ್ಟು 22 ವರ್ಷ 10 ತಿಂಗಳವರೆಗೂ ನೀವು ಇಎಂಐ ಕಟ್ಟಿಕೊಂಡು ಹೋಗಬೇಕು. ಅಂದರೆ, ಮೂಲ ಕಂತುಗಳ ಸಂಖ್ಯೆಯಿಂದ 60 ಹೆಚ್ವುವರಿ ಕಂತುಗಳನ್ನು ಕಟ್ಟುವ ಹೊರೆ ನಿಮಗೆ ಸಿಗುತ್ತದೆ.

How Home loans Of 20 years Becomes 24 years Long

ಕಂತುಗಳ ಸಂಖ್ಯೆ ಹೆಚ್ಚಾಗದಂತೆ ಏನು ಮಾಡಬೇಕು?

ಒಬ್ಬ ವ್ಯಕ್ತಿ 20 ವರ್ಷಗಳಿಗೆ ಗೃಹ ಸಾಲ ಪಡೆಯುತ್ತಾನೆ ಎಂದರೆ ಅವರಿಗೆ 20 ವರ್ಷ ಅವಧಿಯವರೆಗೆ ಮಾತ್ರ ಕಟ್ಟಲು ಸಾಧ್ಯವಿರುತ್ತದೆ ಎಂಬುದು ಸಾಮಾನ್ಯ ತಿಳಿವಳಿಕೆ. ಈಗ ಸಾಲ ಪಡೆದವರು ಸಾಲದ ಕಂತುಗಳ ಸಂಖ್ಯೆ ಹೆಚ್ಚಾಗದಂತೆ ಮಾಡಲು ಎರಡು ಅವಕಾಶಗಳನ್ನು ಹೊಂದಿರಬೇಕು. ಒಂದು, ಪ್ರತೀ ಕಂತಿನಲ್ಲಿ ಕಟ್ಟುವ ಹಣದ ಪ್ರಮಾಣವನ್ನು ಹೆಚ್ಚಿಸಬೇಕು. ಇನ್ನೊಂದು, ಹೆಚ್ಚುವರಿ ಹಣವನ್ನು ಒಟ್ಟುಗೆ ಪಾವತಿಸುವ ಅವಕಾಶ ಹೊಂದಿರಬೇಕು.

English summary
Because of Rising home loan rates Borrowers who have taken long term home loans 2 to 3 years back will get a longer tenure than their original tenure.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X